Udayavni Special

ಮುಲ್ಲಾಮಾರಿ-ಚಂದ್ರಂಪಳ್ಳಿ ಒಳಹರಿವು ಹೆಚ್ಚಳ


Team Udayavani, Jul 14, 2021, 7:31 PM IST

fಸಗ್ಗ್ಗ್ಗ್ದಗ್ದಹಗ್ಹಗಹ್ಹಗಗಹ

ಚಿಂಚೋಳಿ: ತಾಲೂಕಿನಲ್ಲಿ ಕಳೆದ ಮೂರು ದಿವಸದಿಂದ ಎಡೆಬಿಡದೇ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.

ಕೆಳದಂಡೆ ಮುಲ್ಲಾಮಾರಿ ಜಲಾಶಯ ಮತ್ತು ಚಂದ್ರಂಪಳ್ಳಿ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗುತ್ತಿದ್ದು, ಮುಲ್ಲಾಮಾರಿ ನದಿಗೆ ಹೆಚ್ಚುವರಿ ಹರಿ ಬಿಡಲಾಗುತ್ತಿದೆ. ಕೆಳದಂಡೆ ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಚೆನ್ನೂರ, ಗಡಿಲಿಂಗದಳ್ಳಿ, ಐನಾಪುರ, ಕೊಟಗಾ, ಭೂಯ್ನಾರ, ಚೆಂಗಟಾ ಗ್ರಾಮಗಳ ಸುತ್ತಮುತ್ತಲಿನ ತಾಂಡಾಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಜಲಾಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಒಳ ಹರಿವು 359ಕ್ಯೂಸೆಕ್‌ ಇದ್ದು, ಹೊರ ಹರಿವು 900 ಕ್ಯೂಸೆಕ್‌ ಇದೆ.

ಮಂಗಳವಾರ ದಿನವಿಡಿ ಮಳೆ ಆಗುತ್ತಿರುವುದರಿಂದ ಮಳೆ ನೀರಿನ ಸಂಗ್ರಹ ನೋಡಿ ಮುಲ್ಲಾಮಾರಿ ನದಿಗೆ ರಾತ್ರಿ 9ಗಂಟೆ ನಂತರ ನೀರು ಹರಿ ಬಿಡಲಾಗುವುದು ಎಂದು ಯೋಜನೆ ಎಇಇ ಹಣಮಂತರಾವ್‌ ಪೂಜಾರಿ ತಿಳಿಸಿದ್ದಾರೆ. ಚಂದ್ರಂಪಳ್ಳಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಕುಂಚಾವರಂ ವನ್ಯಜೀವಿ ಧಾಮದ ಸಂಗಾಪುರ, ಗೊಟಗೇರಪಳ್ಳಿ, ಕುಸರಂಪಳ್ಳಿ, ಗೌಸಾಬಾದ್‌, ವೆಂಕಟಾಪುರ, ಮಾಣಿಕಪುರ ಗ್ರಾಮಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಂದ್ರಂಪಳ್ಳಿ ಜಲಾಶಯದಲ್ಲಿ ಒಟ್ಟು 1.208 ಟಿಎಂಸಿ ಅಡಿ ಪೈಕಿ 0.662 ಟಿಎಂಸಿ ಅಡಿ (ಶೇ.54.80) ನೀರು ಸಂಗ್ರಹವಾಗಿದೆ. ಶೇ. 80ರಷ್ಟು ನೀರು ಸಂಗ್ರಹವಾದರೆ ಗೇಟಿನ ಮೂಲಕ ಹರಿ ಬಿಡಲಾಗುವುದು ಎಂದು ಎಇಇ ವೈಜನಾಥ ಅಲ್ಲೂರೆ ತಿಳಿಸಿದ್ದಾರೆ.

ಕುಂಚಾವರಂ ಗಡಿಪ್ರದೇಶದ ಧರ್ಮಸಾಗರ ತಾಂಡಾದ ಬಳಿ ನಾಲಾ ತುಂಬಿ ಹರಿಯುತ್ತಿರುವುದರಿಂದ ಕುರಿಗಾಹಿ ತುಂಬಿ ಹರಿಯುವ ನಾಲಾ ನೀರು ನೋಡಿ ಭಯಗೊಂಡು ದಡದಲ್ಲಿಯೇ ಕುಳಿತಿದ್ದಾಗ ತಾಂಡಾದ ಜನರು 50 ಕುರಿಗಳು ಮತ್ತು ಇಬ್ಬರು ಕುರಿಗಾಹಿಗಳ ಕೈ ಹಿಡಿದು ದಾಟಿಸಿದ್ದಾರೆ ಎಂದು ತಾಂಡಾದ ಸಂತೋಷ ಚವ್ಹಾಣ ತಿಳಿಸಿದ್ದಾರೆ. ಗುಡುಗು ಮಿಂಚಿನ ಆರ್ಭಟದಿಂದ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಸಣ್ಣ ನೀರಾವರಿ ಕೆರೆಗಳಿಗೆ ನೀರು ಹರಿದು ಬರುತ್ತಿದೆ.

ಒಟ್ಟು 17 ಕೆರೆಗಳಲ್ಲಿ ಎರಡರಿಂದ ಮೂರು ಅಡಿ ನೀರು ಹರಿದು ಬರುತ್ತಿದೆ. ಸಾಲೇಬೀರನಳ್ಳಿ, ತುಮಕುಂಟಾ, ಹಸರಗುಂಡಗಿ, ಕೋಡ್ಲಿ, ಐನಾಪುರ, ಮುಕರಂಬಾ, ಹುಲಸಗೂಡ, ಚಂದನಕೇರಾ, ಧರ್ಮಸಾಗರ, ಅಂತಾವರಂ ಕೆರೆಗಳಿಗೆ ಮಳೆ ನೀರು ಹರಿದು ಬಂದಿದೆ.

ಕಳೆದ ವರ್ಷ ಹೆಚ್ಚಿನ ಮಳೆ ಆಗಿದ್ದರಿಂದ ನಾಗಾಇದಲಾಯಿ, ಹೂಡದಳ್ಳಿ ಕೆರೆಗಳು ಸಂಪೂರ್ಣ ಒಡೆದಿವೆ. ದೊಟಿಕೋಳ ಕೆರೆಗೆ ಹಾನಿ ಆಗಿರುವುದರಿಂದ ಕೆರೆಯಲ್ಲಿ ನೀರಿನ ಸಂಗ್ರಹಣೆ ಮಾಡುತ್ತಿಲ್ಲ ಎಂದು ಎಇಇ ಶಿವಶರಣಪ್ಪ ಕೇಶ್ವಾರ ತಿಳಿಸಿದ್ದಾರೆ. ತಾಲೂಕಿನ ಸುಲೇಪೇಟ, ಕೋಡ್ಲಿ, ಐನಾಪುರ, ಚಿಮ್ಮನಚೋಡ, ನಿಡಗುಂದಾ, ಕುಂಚಾವರಂ, ಮಿರಿಯಾಣ, ಮೋಘಾ, ಕೊಡ್ಲಿ, ಚಂದನಕೇರಾ, ಚಿಂಚೋಳಿಯಲ್ಲಿ ಮಂಗಳವಾರ ದಿನವಿಡಿ ಮಳೆ ಆಗಿದ್ದರಿಂದ ಸಣ್ಣ ನಾಲಾಗಳು ತುಂಬಿ ಹರಿಯುತ್ತಿವೆ.

 

ಟಾಪ್ ನ್ಯೂಸ್

hjtyt6uty6u

ಉದ್ಯಮಿ ಅಪಹರಣ : 4 ಗಂಟೆಯಲ್ಲಿ ಪತ್ತೆ ಹಚ್ಚಿದ ಧಾರವಾಡ ಪೊಲೀಸ್

fdtetertre

ಹಾಸನದಲ್ಲಿ ಮಂಗಗಳ ಮಾರಣಹೋಮ: ವರದಿ ಕೇಳಿದ ಹೈಕೋರ್ಟ್

gkhyutyuty

ಸಿಎಂ ಬೊಮ್ಮಾಯಿ ರಬ್ಬರ್ ಸ್ಟಾೃಂಪೋ, ಐರನ್ ಸ್ಟಾೃಂಪೋ ಗೊತ್ತಿಲ್ಲ !

ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : 6 ಕೋಟಿ ಮೌಲ್ಯದ ರಕ್ತಚಂದನ ವಶ

ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : 6 ಕೋಟಿ ಮೌಲ್ಯದ ರಕ್ತಚಂದನ ವಶ

ghnfttryutr

ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

ಶ್ರೀರಂಗಪಟ್ಟಣ : ರಂಗನಾಥ ಹಾಗೂ ನಿಮಿಷಾಂಭ ದೇಗುಲಕ್ಕೆ ಭಕ್ತರ ನಿರ್ಬಂಧ

ಶ್ರೀರಂಗಪಟ್ಟಣ : ರಂಗನಾಥ ಹಾಗೂ ನಿಮಿಷಾಂಭ ದೇಗುಲಕ್ಕೆ ಭಕ್ತರ ನಿರ್ಬಂಧ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anga

ಸತ್ತ ಮೇಲೆ ಸೌಲಭ್ಯ ಕೊಡ್ತೀರಾ?: ಅಂಗವಿಕಲನ ಅಳಲು

ಶಾಸಕ ಮತ್ತಿಮಡುಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಮೆರವಣಿಗೆ, ದೀರ್ಘದಂಡ ನಮಸ್ಕಾರ

ಶಾಸಕ ಮತ್ತಿಮಡುಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಮೆರವಣಿಗೆ, ದೀರ್ಘದಂಡ ನಮಸ್ಕಾರ

gfdggree

ನೂತನ ಸಿಎಂರಿಂದ ಹೊಸ ಅಧ್ಯಕ್ಷರ  ನೇಮಕ ಮಾಡಬಹುದು: ಅಪ್ಪುಗೌಡ

ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ

ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ

ಬೊಮ್ಮಾಯಿ ಸಿಎಂ; ಜಿಲ್ಲೆ ನಿರೀಕ್ಷೆ ಬೆಟ್ಟದಷ್ಟು

ಬೊಮ್ಮಾಯಿ ಸಿಎಂ; ಜಿಲ್ಲೆ ನಿರೀಕ್ಷೆ ಬೆಟ್ಟದಷ್ಟು

MUST WATCH

udayavani youtube

ಬೀಜವಿಲ್ಲದ ಲಿಂಬೆ ಹಣ್ಣಿನ ಕುರಿತ ಸಂಕ್ಷಿಪ್ತ ಮಾಹಿತಿ

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

ಹೊಸ ಸೇರ್ಪಡೆ

hjtyt6uty6u

ಉದ್ಯಮಿ ಅಪಹರಣ : 4 ಗಂಟೆಯಲ್ಲಿ ಪತ್ತೆ ಹಚ್ಚಿದ ಧಾರವಾಡ ಪೊಲೀಸ್

fdtetertre

ಹಾಸನದಲ್ಲಿ ಮಂಗಗಳ ಮಾರಣಹೋಮ: ವರದಿ ಕೇಳಿದ ಹೈಕೋರ್ಟ್

gkhyutyuty

ಸಿಎಂ ಬೊಮ್ಮಾಯಿ ರಬ್ಬರ್ ಸ್ಟಾೃಂಪೋ, ಐರನ್ ಸ್ಟಾೃಂಪೋ ಗೊತ್ತಿಲ್ಲ !

tytrytr

ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಜೆರಾಕ್ಸ್ ಅಂಗಡಿಯ ಲತಾ

gffdgr

ಚಿಂತಾಮಣಿ ನಗರಸಭೆ ಅಧಿಕಾರಿಗಳ ವಿರುದ್ದ ಸದಸ್ಯ ಶಪೀಕ್ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.