ಜೀವನ ಸಂದೇಶ ಶ್ರವಣಕ್ಕೆ ಜನಸಾಗರ


Team Udayavani, Feb 5, 2018, 10:27 AM IST

gul-3.jpg

ಕಲಬುರಗಿ: ನಡುಗುವ ಚಳಿ ನಡುವೆ ಬೆಳಗಿನ ಜಾವ 5.30ರ ಸುಮಾರಿಗೆ ಬಹುತೇಕ ಎಲ್ಲ ರಸ್ತೆಗಳು ಕಳೆದ ಜ. 16ರಿಂದ ನೂತನ ವಿದ್ಯಾಲಯಕ್ಕೆ ಬಂದು ಸೇರುತ್ತಿವೆ. ಇಷ್ಟು ಬೆಳಗಿನ ಜಾವ ಅದು ನಡುಗುವ ಚಳಿ ನಡುವೆ ಜನರು ನಗರದ ಬಹುತೇಕ ಎಲ್ಲ ರಸ್ತೆಗಳ ಮೂಲಕ ಆಗಮಿಸಿ ಬಂದು ಸೇರುತ್ತಿದ್ದಾರೆ.

ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಾತ್ಮಿಕ ಗುರು ಸಿದ್ದೇಶ್ವರ ಸ್ವಾಮೀಜಿ ಅವರಿಂದ ಪ್ರತಿದಿನ ಬೆಳಗ್ಗೆ 6:00ಕ್ಕೆ ಆಧ್ಯಾತ್ಮಿಕ ಚಿಂತನ, ಬದುಕಿನ ಮೌಲ್ಯಗಳ ಕುರಿತು ಪ್ರವಚನ ನಡೆಯುತ್ತಿರುವುದರಿಂದ ಜನರು ಅತ್ಯಂತ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿರುವುದು ಕಂಡು ಬರುತ್ತಿದೆ. 10-15ನೇ ನಿಮಿಷದ ಅವಧಿಯಲ್ಲಿ ಮೈದಾನ ತುಂಬುವಷ್ಟು ಜನರು ಬಂದು ಪೂಜ್ಯರ ಸಂದೇಶ ಆಲಿಸುತ್ತಿದ್ದಾರೆ. ಸಿದ್ದೇಶ್ವರ ಪೂಜ್ಯರ ಪ್ರವಚನ ಜನರಲ್ಲಿ ಬಾರಿ ಪರಿಣಾಮ ಬೀರಿದೆ.

ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ, ಸಮಾಜ ಸೇವಕ ಉಮೇಶ ಶೆಟ್ಟಿ ಅವರ ಆಸಕ್ತಿ ಹಾಗೂ ಆಧ್ಯಾತ್ಮಿಕ ಪ್ರವಚನಾ ಸೇವಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಆರ್‌. ಗರೂರ, ಸದಸ್ಯರಾದ ಜಂಬನಗೌಡ ಶೀಲವಂತರ, ಶಿವಾನಂದ ಪಾಟೀಲ ಅಷ್ಠಗಿ, ಅಪ್ಪು ಕಣಕಿ, ಈರಣ್ಣ ಗೋಳೆದ, ಅಂಬಾರಾಯ ಡಿಗ್ಗಿಕರ್‌, ಪೂಜಾರಿ ಸೇರಿದಂತೆ ಮುಂತಾದವರ ಸತತ ಪ್ರಯತ್ನ ಮೇರೆಗೆ ಈಗ ಮೂರನೇ ಬಾರಿಗೆ ಕಲಬುರಗಿ ಮಹಾನಗರದಲ್ಲಿ ಜ್ಞಾನಯೋಗಿಗಳ ಪ್ರವಚನ ನಡೆಯುತ್ತಿದೆ. ಈ ಹಿಂದೆ 2008ರ ಅಕ್ಕೋಬರ್‌ನಲ್ಲಿ ಮೊದಲ ಬಾರಿಗೆ ಹಾಗೂ 2010 ಡಿಸೆಂಬರ್‌ರಲ್ಲಿ ಎರಡನೇ ಸಲವೂ ಇದೇ ನೂತನ ವಿದ್ಯಾಲಯ ಮೈದಾನದಲ್ಲಿ ಪ್ರವಚನ ನಡೆದಿತ್ತು. ಈಗ ಜನವರಿ ತಿಂಗಳಿನಿಂದ ನಡೆದು ಬರುತ್ತಿದೆ.

ಬದುಕಿನ ಮೌಲ್ಯ: ಸಿದ್ದೇಶ್ವರ ಶ್ರೀಗಳ ಪ್ರವಚನ ವಿಷಯ ಬಹುತೇಕವಾಗಿ ಪರಿಸರ ಹಾಗೂ ಬದುಕಿಗೆ ಸಂಬಂಧಿಸಿರುತ್ತದೆ. ನೆಮ್ಮದಿಯಿಂದ ಬದುಕು ಸಾಗಿಸಲು ಅನುಸರಿಸಬೇಕಾದ ಸರಳ ಗುಣತ್ವವನ್ನು ಒತ್ತಿ ಹೇಳುತ್ತಿರುವುದು ಹಾಗೂ ನೆಮ್ಮದಿ ಜೀವನ ಸಾಗಿಸುವ ನಿಟ್ಟಿನ ವಾಸ್ತವಾಂಶಗಳನ್ನು ಮನಸ್ಸಿಗೆ ನಾಟುವಂತೆ ಹೇಳುವುದು ಸಹಸ್ರಾರು ಮನ ಸೆಳೆಯಲು ಪ್ರಮುಖ ಕಾರಣವಾಗಿದೆ. ಸಿದ್ದೇಶ್ವರ ಪ್ರವಚನ ಆಲಿಸಲು ಜಿಲ್ಲೆಯ ವಿವಿಧ ಮಠಾಧೀಶರು ಸಹ ನಿತ್ಯ ಆಗಮಿಸುತ್ತಿದ್ದಾರೆ.

ರವಿವಾರ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಸಹ ಪ್ರವಚನ ಶ್ರವಣಕ್ಕೆ ಆಗಮಿಸಿದ್ದರು.
ಇದಲ್ಲದೇ ಜನಪ್ರತಿನಿಧಿಗಳು, ವೈದ್ಯರು, ನ್ಯಾಯವಾದಿಗಳು ಸೇರಿದಂತೆ ಸಮಾಜದ ಇತರ ವಿವಿಧ ಕ್ಷೇತ್ರಗಳ ಗಣ್ಯರು ಪ್ರವಚನಕ್ಕೆ ತಪ್ಪದೇ ಆಗಮಿಸುತ್ತಿದ್ದು, ದಿನೇ-ದಿನೇ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿರುವುದು ಆಯೋಜಕರ ಉತ್ಸಾಹ ಇಮ್ಮಡಿಗೊಳಿಸುವಂತಾಗಿದೆ.

ಬೆಳಗ್ಗೆ ನೂತನ ವಿದ್ಯಾಲಯದಲ್ಲಿ ಪ್ರವಚನವಲ್ಲದೇ ಗುಲಬರ್ಗಾ ವಿವಿ ಕೈಲಾಸ ಅತಿಥಿಗೃಹದ ಹೊರಾಂಗಣದಲ್ಲಿ
ಪ್ರತಿದಿನ ಸಂಜೆ 6:00ಕ್ಕೆ ವಿಷಯವೊಂದರಕ್ಕೆ ಸಂಬಂಧಿಸಿದಂತೆ ಚರ್ಚೆಯೂ ನಡೆಯುತ್ತದೆ. ಇದಕ್ಕೂ ಮಹಾನಗರ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದೆ. ಪ್ರತಿ ರವಿವಾರವಂತೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಆಂಗ್ಲ ಭಾಷೆಯಲ್ಲಿ ಪ್ರವಚನ ಮಂಡಿಸುತ್ತಾರೆ.

ಒಟ್ಟಾರೆ ಸಿದ್ದೇಶ್ವರ ಪ್ರವಚನ ಕಲಬುರಗಿ ಮಹಾನಗರದಲ್ಲಿ ಸಂಚಲನ ಮೂಡಿಸಿದ್ದು, ಜನ ಜೀವನದಲ್ಲಿ ಬದಲಾವಣೆಯಾದರೆ ಪ್ರವಚನ ಮತ್ತಷ್ಟು ಸಾರ್ಥಕತೆ ಪಡೆದಂತಾಗುತ್ತದೆ. ಫೆ. 16ರವರೆಗೆ ಮಾತ್ರ ಪ್ರವಚನ ನಡೆಯಲಿದ್ದು, ಇನ್ನುಳಿದ ನಾಗರಿಕರು ಆಧ್ಯಾತ್ಮಿಕ ಪ್ರವಚನ ಶ್ರವಣ ಮಾಡಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ
ಅದರಕ್ಕಿಂತ ದೊಡ್ಡದು ಮತ್ತೂಂದಿಲ್ಲ ಏನಿಸುತ್ತದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.