Kodagu: ಶಾಲೆಗಳಿಗೆ ಅ. 10-25 ದಸರಾ ರಜೆ
Team Udayavani, Oct 6, 2023, 9:38 PM IST
ಮಡಿಕೇರಿ: ಕೊಡಗು ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅ.10 ರಿಂದ 25ರ ವರೆಗೆ ದಸರಾ ರಜೆ ಘೋಷಿಸಲಾಗಿದೆ.
ಈ ಹಿಂದೆ ಅ. 9ರಿಂದ 24ರ ವರೆಗೆ ರಜೆ ನೀಡಲಾಗಿತ್ತು. ಆದರೆ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಮೆರಗು ಅ. 24ರ ರಾತ್ರಿಯೂ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಅಡಚಣೆಯಾಗಬಾರದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಲಹೆಯಂತೆ ಶಿಕ್ಷಣ ಇಲಾಖೆ ಈ ಮಾರ್ಪಾಡು ಮಾಡಿ ಆದೇಶಿಸಿದೆ.