Junior ಇಂಡಿಯಾ ಹಾಕಿ ಕ್ಯಾಂಪ್ಗೆ ಕೊಡಗಿನ ವಚನ್
ದಕ್ಷಿಣ ಭಾರತದಿಂದ ಈರ್ವರಿಗೆ ಮಾತ್ರ ಸ್ಥಾನ
Team Udayavani, Jan 28, 2024, 12:01 AM IST
ಸೋಮವಾರಪೇಟೆ: ಕೊಡಗು ಜಿಲ್ಲೆಯ ಹಾಕಿ ಯುವ ಕ್ರೀಡಾಪಟು ವಚನ್, ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್ಗೆ ಆಯ್ಕೆಯಾಗುವ ಮೂಲಕ ಹಾಕಿ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಸೋಮವಾರಪೇಟೆಯ ಕ್ಲಬ್ ರಸ್ತೆ ನಿವಾಸಿ ಎಚ್.ಎನ್. ಅಶೋಕ್ ಹಾಗೂ ಎಚ್.ಎ. ಸುಜಿನಿ ದಂಪತಿ ಪುತ್ರ, ಎಚ್.ಎ. ವಚನ್ ಈ ಸಾಧಕ.
ನಗರದ ಒಎಲ್ವಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಚನ್, ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯಲ್ಲಿದ್ದುಕೊಂಡು ಸೆಂಟ್ ಅಂತೋಣಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಡಿವೈಇಎಸ್ ಕ್ರೀಡಾ ಹಾಸ್ಟೆಲ್ನಲ್ಲಿದ್ದು ಜೈನ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಾರೆ.
2019-20, 2021-2023ರ ವರೆಗೆ ಹಾಕಿ ಇಂಡಿಯಾದಿಂದ ಆಯೋಜನೆಗೊಂಡಿದ್ದ ಜೂನಿ ಯರ್ ರಾಷ್ಟ್ರೀಯ ಪಂದ್ಯಾ ವಳಿಯಲ್ಲಿ ಭಾಗಿಯಾಗಿ ರುವ ವಚನ್, ರಾಜ್ಯಮಟ್ಟದ ಅನೇಕ ಪಂದ್ಯಾವಳಿಯಲ್ಲಿ ಆಡಿದ್ದಾರೆ.