13 ವರ್ಷಗಳ ಭೂ ವಿವಾದ ಸುಖಾಂತ್ಯ

ತಲಗುಂದದಲ್ಲಿ ಶಾಲೆಯ 34 ಗುಂಟೆ ಜಾಗ, ಕಟ್ಟಡದ ಕೀ ಶಿಕ್ಷಣ ಇಲಾಖೆಗೆ ಹಸ್ತಾಂತರ

Team Udayavani, Jun 30, 2019, 1:15 PM IST

kolar-tdy-5..

ಕೋಲಾರ ತಾಲೂಕಿನ ತಲಗುಂದದಲ್ಲಿ ಸರ್ಕಾರಿ ಶಾಲೆ ಜಾಗ ಒತ್ತುವರಿ ತೆರವುಗೊಳಿಸಿ ಕಟ್ಟಡದ ಕೀಯನ್ನು ಬಿಇಒ ನಾಗರಾಜಗೌಡರಿಗೆ ಹಸ್ತಾಂತರಿಸಿದ ಕಂದಾಯ ನಿರೀಕ್ಷಕ ಮಂಜುನಾಥ್‌.

ಕೋಲಾರ: ಸುಪ್ರೀಂಕೋರ್ಟ್‌ ತೀರ್ಪಿನ ನಂತರವೂ ಒತ್ತುವರಿದಾರರ ವಶದಲ್ಲಿದ್ದ ಸರ್ಕಾರಿ ಶಾಲೆಯ ಜಾಗ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರ ಕಟ್ಟುನಿಟ್ಟಿನ ಆದೇಶ ಹಾಗೂ ಡಿಡಿಪಿಐ ಕೆ.ರತ್ನಯ್ಯ ಅವರ ಸತತ ಪ್ರಯತ್ನದಿಂದಾಗಿ ಮತ್ತೆ ಶಿಕ್ಷಣ ಇಲಾಖೆಯ ಕೈಸೇರಿದೆ.

ತಾಲೂಕಿನ ತಲಗುಂದದಲ್ಲಿನ 34 ಗುಂಟೆ ಜಾಗ ಹಾಗೂ ಸರ್ವಶಿಕ್ಷಣ ಅಭಿಯಾನದಡಿ ಕಟ್ಟಲಾದ ಕಟ್ಟಡವನ್ನು ಒತ್ತುವರಿದಾರರಿಂದ ಬಿಡಿಸಿಕೊಂಡಿದ್ದು, ತಹಶೀಲ್ದಾರ್‌ ಸೂಚನೆಯಂತೆ ಆರ್‌.ಐ ಮಂಜುನಾಥ್‌ ಶನಿವಾರ ಕಟ್ಟಡದ ಕೀ ಅನ್ನು ಬಿಇಒ ನಾಗರಾಜಗೌಡರಿಗೆ ಹಸ್ತಾಂತರಿಸಿದರು.

ಸುಪ್ರೀಂ ಕೋರ್ಟ್‌ವರೆಗೂ ಸಾಗಿದ್ದ ಈ ಪ್ರಕರಣದಲ್ಲಿ ನ್ಯಾಯಾಲಯ ಶಾಲೆಯ ಪರ ತೀರ್ಪು ನೀಡಿರುವುದು ಮತ್ತು ಜಿಲ್ಲಾಧಿಕಾರಿಯವರ ಕಟ್ಟಪ್ಪಣೆಯಂತೆ ಒತ್ತುವರಿ ತೆರವುಗೊಳಿಸಿರುವುದು, ಇತರೆ ಕಡೆಗಳಲ್ಲಿ ಸರ್ಕಾರಿ ಶಾಲೆಗಳ ಜಾಗ ಒತ್ತುವರಿ ಮಾಡಿಕೊಂಡಿರುವವರಿಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿದಂತಿದೆ.

ಭೂ ವಿವಾದಕ್ಕೆ ಕಾರಣ: ಕೋಲಾರ ತಾಲೂಕಿನ ತಲಗುಂದ ಗ್ರಾಮದ ಸರ್ವೇ ನಂ.164ರಲ್ಲಿನ 34 ಗುಂಟೆ ಜಮೀನನ್ನು ಸರ್ಕಾರಿ ಶಾಲೆಗೆ ಕಳೆದ 15 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದು, ಅದರಂತೆ ಅಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆದರೆ, ಗ್ರಾಮದ ಶೇಕ್‌ ಫೈಜುವುಲ್ಲಾ ಬಿನ್‌ ಹೈದರ್‌ ಸಾಬ್‌ ಅವರು ಜಾಗವನ್ನು ಅತಿಕ್ರಮಿಸಿ ಇದು ನಮಗೆ ಸೇರುತ್ತದೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ನಡುವೆ ಸತತ 13 ವರ್ಷಗಳ ಕಾಲ ವಿವಿಧ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿದ್ದು, ಕೊನೆಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೂ ಏರಿತ್ತು. ಇತ್ತೀಚೆಗೆ ಸುಪ್ರೀಮ್‌ಕೋರ್ಟ್‌ ತೀರ್ಪು ನೀಡಿ ಈ ಜಾಗ ಸರ್ಕಾರಿ ಶಾಲೆಗೆ ಸೇರಿದೆ ಎಂದು ಹೇಳುವ ಮೂಲಕ ನಿರಂತರ 13 ಹೋರಾಟದಲ್ಲಿ ಶಿಕ್ಷಣ ಇಲಾಖೆಗೆ ಜಯವಾಯಿತು.

ತೀರ್ಪುಬಂದೊಡನೆ ಡಿ.ಸಿ.ಗೆ ಮನವಿ: ತೀರ್ಪು ಬರುತ್ತಿದ್ದಂತೆ ಡಿಡಿಪಿಐ ಕೆ.ರತ್ನಯ್ಯ ಈ ಸಂಬಂಧ ತೀರ್ಪಿನ ಪ್ರತಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜಾಗವನ್ನು ಶಿಕ್ಷಣ ಇಲಾಖೆ ವಶಕ್ಕೆ ನೀಡಲು ಮನವಿ ಮಾಡಿದ್ದರು. ಮನವಿ ನೀಡಿದ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ರಿಗೆ ನಿರ್ದೇಶನ ನೀಡಿ ಶಾಲೆ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಕಟ್ಟಪ್ಪಣೆ ನೀಡಿದರು.

ಅದರಂತೆ ತಹಶೀಲ್ದಾರ್‌ ಸೂಚನೆಯಂತೆ ಕಂದಾಯ ನಿರೀಕ್ಷಕ ಮಂಜುನಾಥ್‌ ಶನಿವಾರ ಗ್ರಾಮಸ್ಥರ ಸಮ್ಮುಖದಲ್ಲಿ ಕಟ್ಟಡ ತೆರವುಗೊಳಿಸಿ ಒತ್ತುವರಿದಾರ ಷೇಕ್‌ ಫೈಜಾವುಲ್ಲಾರಿಂದ ಬೀಗದ ಕೈಯನ್ನು ಪಡೆದುಕೊಂಡು ಬಿಇಒ ಕೆ.ಎಸ್‌.ನಾಗರಾಜಗೌಡರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ನಿರೀಕ್ಷಕ ಮಂಜುನಾಥ್‌, ಈ ಜಾಗವನ್ನು ಕೂಡಲೇ ಸರ್ವೇ ಮಾಡಿಸಿ ಚೆಕ್‌ಬಂದಿ ಹಾಕಿ ಶಿಕ್ಷಣ ಇಲಾಖೆಗೆ ನೀಡುವುದಾಗಿ ತಿಳಿಸಿದರು.

ನಾಗರಾಜಗೌಡ ಕೀ ಪಡೆದುಕೊಂಡು, ಜ್ಞಾನದೇಗುಲಗಳಾದ ಶಾಲೆಗಳಿಗೆ ಹೆಚ್ಚಿನ ನೆರವು ನೀಡಿ, ಈ ದೇಗುಲಗಳ ಜಾಗದ ಮೇಲೆ ಕಣ್ಣು ಹಾಕದಿರಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಶಿವಕುಮಾರ್‌, ಸದಸ್ಯರಾದ ಉಮಾ, ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಶ್ರೀರಾಮಪ್ಪ, ಶಿಕ್ಷಣ ಸಂಯೋಜಕ ಆರ್‌.ಶ್ರೀನಿವಾಸನ್‌, ಸಿಆರ್‌ಪಿ ಗೋವಿಂದ್‌, ಅಂಗವಿಕಲ ಮಕ್ಕಳ ಸಂಘದ ರಾಜೇಶ್‌, ಶಂಕರಪ್ಪ, ಸವಿತಮ್ಮ ಜಗದೀಶ್‌, ಶಬಿನಾ,ಶಿವಪ್ಪ, ಟಿ.ಎಸ್‌.ಸುರೇಶ್‌, ಉಲ್ಲೂರಪ್ಪ, ತಬರ್‌ ಪಾಷ, ಟಿ.ಆರ್‌.ವೆಂಕಟರೆಡ್ಡಿ, ಶಾಶಲಾ ಮುಖ್ಯ ಶಿಕ್ಷಕ ವೆಂಕಟೇಶಪ್ಪ, ಶಿಕ್ಷಕರು ಹಾಜರಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.