ವೃದ್ಧರೋಗಿಯ ಹೊರಹಾಕಿದ ವೈದ್ಯ ಸಿಬ್ಬಂದಿ

Team Udayavani, Feb 19, 2023, 3:42 PM IST

tdy-20

ಕೋಲಾರ: ಅಸ್ತಮಾ ಸಮಸ್ಯೆಯಿಂದ ನರಳುತ್ತಿದ್ದ ವೃದ್ಧರನ್ನು ಜಿಲ್ಲಾ ಸರ್ಕಾರಿ ಎಸ್‌.ಎನ್‌.ಆರ್‌ ಆಸ್ಪತ್ರೆ ಸಿಬ್ಬಂದಿ ವಾರ್ಡ್‌ನಿಂದ ಹೊರ ಹಾಕಿದ ಅಮಾನವೀಯ ಘಟನೆ ಜರುಗಿದೆ.

ಶ್ರೀನಿವಾಸಪುರ ತಾಲೂಕಿನ ಪಾತೂರು ಗ್ರಾಮದ ಪಿ.ಎಸ್‌.ಬಯ್ಯಾರೆಡ್ಡಿ ಮತ್ತು ಪಾರ್ವತಮ್ಮ ದಂಪತಿಗಳ ಮೇಲೆ ಎಸ್‌.ಎನ್‌.ಆರ್‌ ಆಸ್ಪತ್ರೆಯ ಸಿಬ್ಬಂದಿ ದಬ್ಟಾಳಿಕೆ ನಡೆಸಿ ವಾರ್ಡ್‌ನಿಂದ ಹೊರಕ್ಕೆ ಕಳುಹಿಸಿದ್ದು, ದಂಪತಿಗಳು ದಿಕ್ಕು ತೋಚದೆ ಆಸ್ಪತ್ರೆ ವಾರ್ಡ್‌ನ ಹೊರ ಕುಳಿತು ಕಣ್ಣೀರು ಹಾಕಿದರು.

ಶ್ರೀನಿವಾಸಪುರ ತಾಲೂಕಿನ ಪಾತೂರು ಗ್ರಾಮದ ವೃದ್ಧ ಬಯ್ಯಾರೆಡ್ಡಿ ಅಸ್ತಮಾ ರೋಗದಿಂದ ನರಳುತ್ತಿದ್ದು, ಒಂದು ವಾರದ ಹಿಂದೆ ತನ್ನ ಪತ್ನಿ ಪಾರ್ವತಮ್ಮರ ಜತೆಗೆ ಬಂದು ಎಸ್‌ಎನ್‌ಆರ್‌ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ದಾಖಲಾಗಿದ್ದರು. ಆರಂಭದಲ್ಲಿ ಆಸ್ಪತ್ರೆಯಲ್ಲಿ ಒಂದಷ್ಟು ಚಿಕಿತ್ಸೆ ದೊರೆಯಿತಾದರೂ, ನಾಲ್ಕೈದು ವಾರ್ಡ್‌ಗಳನ್ನು ಬದಲಾಯಿಸುವಂತೆ ಸಿಬ್ಬಂದಿ ಹೇಳುತ್ತಲೇ ಇದ್ದರು. ಒಂದೇ ವಾರ್ಡ್‌ನಲ್ಲಿ ಇರದ ಕಾರಣದಿಂದ ಅಸ್ತಮಾ ರೋಗಿ ಬಯ್ನಾರೆಡ್ಡಿಗೆ ಸೂಕ್ತ ಚಿಕಿತ್ಸೆಯೂ ಸಿಕ್ಕಿರಲಿಲ್ಲ. ದಿನಕ್ಕೊಂದು ಸೂಜಿಮದ್ದು ಚುಚ್ಚಿ ಹೋಗುತ್ತಿದ್ದ ಸಿಬ್ಬಂದಿ ಆನಂತರ ನಿಮ್ಮ ಪಾಡೇನು ಎಂದು ವಿಚಾರಿಸುತ್ತಿರಲಿಲ್ಲ ಎಂದು ವಾರ್ಡ್‌ ಬದಿ ಕುಳಿತ ವೃದ್ಧರು ವಿವರಿಸಿದರು. ಇದೇ ಅವಧಿಗೆ ಖಾಲಿ ಹುದ್ದೆ ತುಂಬಬೇಕು, ಸೇವಾ ಕಾಯಂಮಾತಿ, ವೇತನ ಹೆಚ್ಚಳ ಮತ್ತಿತರ ಬೇಡಿಕೆ ಇಟ್ಟುಕೊಂಡು ಆಸ್ಪತ್ರೆಯ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿದ್ದರು.

ಆಸ್ಪತ್ರೆಯ ವಾರ್ಡ್‌ ಗಳಲ್ಲಿ ರೋಗಿಗಳಿದ್ದರೆ ಚಿಕಿತ್ಸೆ ಮಾಡಬೇಕಾಗುತ್ತದೆ, ಅನಾಹುತವಾದರೆ ಕಷ್ಟ ಎಂದು ಒಳರೋಗಿಗಳನ್ನು ಆಸ್ಪತ್ರೆ ಬಿಟ್ಟು ಹೋಗುವಂತೆ ನಾಲ್ಕೈದು ದಿನ ಗಳಿಂದಲೂ ತಾಕೀತು ಮಾಡಿದ್ದರು. ಉಬ್ಬಸದಿಂದ ನರಳುತ್ತಿದ್ದ ಬಯ್ನಾರೆಡ್ಡಿ ಬೇರೆ ಆಸ್ಪತ್ರೆಗೆ ಆರ್ಥಿಕ ಸೌಕರ್ಯವಿಲ್ಲದೆ ಆಸ್ಪತ್ರೆಯಲ್ಲಿಯೇ ಉಳಿದು ಕೊಂಡಿದ್ದರು. ಶನಿವಾರ ಬೆಳಗ್ಗೆ ಬಂದ ಸಿಬ್ಬಂದಿ ಎಸ್‌ಎನ್‌ಆರ್‌ ಆಸ್ಪತ್ರೆಯ ಹಳೇ ಕಟ್ಟಡದ 40ನೇ ವಾರ್ಡ್‌ನಲ್ಲಿದ್ದ ಬಯ್ಯಾರೆಡ್ಡಿ, ಪಾರ್ವತಮ್ಮರನ್ನು ವಾರ್ಡ್‌ ಸ್ವತ್ಛ ಗೊಳಿಸಬೇಕು ಹೊರ ಹೋಗುವಂತೆ ಸೂಚಿಸಿದ್ದಾರೆ. ಯಾವ ವಾರ್ಡಿಗೆ ಹೋಗಬೇಕೆಂದು ತಿಳಿಸಿಲ್ಲ. ಹೀಗಾಗಿ ವಾರ್ಡ್‌ ಖಾಲಿ ಮಾಡಿದರೂ ವಾರ್ಡ್‌ ಮುಂಭಾಗ ಕುಳಿತರು. ಆಸ್ಪತ್ರೆಸಿಬ್ಬಂದಿಯನ್ನು ಬಗೆಬಗೆಯಾಗಿ ಬೇಡಿಕೊಂಡರೂ ಯಾರೂ ವಾರ್ಡ್‌ ಮತ್ತು ಬೆಡ್‌ ತೋರಿಸಲಿಲ್ಲ. ತಮ್ಮ ಪುತ್ರ ಶನಿವಾರ ಅಥವಾ ಭಾನುವಾರ ಮಧ್ಯಾಹ್ನ ಬರುತ್ತಾನೆ ಆನಂತರ ನಿರ್ಧಾರ ತೆಗೆದುಕೊಂಡು ಆಸ್ಪತ್ರೆಯಿಂದ ಹೋಗುತ್ತೇವೆ ಅಲ್ಲಿಯವರೆಗಾದರೂ ಆಸ್ಪತ್ರೆಯಲ್ಲಿರಲು ಅವಕಾಶ ನೀಡಿ ಎಂದು ಬೇಡಿಕೊಂಡರು.

ಬೇಡಿದರೆ ಜೋರಾಗಿ ಮಾತನಾಡಬೇಡ ಎಂದು ಬಯ್ನಾರೆಡ್ಡಿಯನ್ನು ಆಸ್ಪತ್ರೆ ಸಿಬ್ಬಂದಿ ಗದರಿಸಿದ್ದರು ಎಂದರು. ಅಲ್ಲಿನ ಒಳರೋಗಿಗಳು ಮತ್ತವರ ಸಂಬಂಧಿಕರು ಆಸ್ಪತ್ರೆಯ ರೋಗಿಗಳ ಸ್ಥಿತಿಗತಿ, ಸಿಬ್ಬಂದಿಯ ನಿರ್ಲಕ್ಷ್ಯ ಕುರಿತಂತೆ ದೊಡ್ಡ ಮಟ್ಟದ ಆರೋಪಗಳನ್ನೇ ಮಾಡುತ್ತಲೇ ಇದ್ದರು.  ಹಿರಿಯ ವೈದ್ಯಾಧಿಕಾರಿಗಳು ಹಬ್ಬದ ಕಾರಣ ಆಸ್ಪತ್ರೆಯಲ್ಲಿರಲಿಲ್ಲ.

ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿದರೆ ರೋಗಿಗಳು ಇಲ್ಲಿಯೇ ಠಿಕಾಣಿ ಹೂಡಿಬಿಡುತ್ತಾರೆಂದು ಸಿಬ್ಬಂದಿ ರೋಗಿಗಳನ್ನು ಇನ್ನಿಲ್ಲದಂತೆ ಕಾಡುವುದು ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಮಾಮೂಲಾಗಿದೆ. ಈಗ ಮುಷ್ಕರ ಕಾರಣ ರೋಗಿಗಳನ್ನು ಆಸ್ಪತ್ರೆ ಬಿಟ್ಟು ಹೋಗುವಂತೆ ತಾಕೀತುಮಾಡುತ್ತಿರುವ ಬಗ್ಗೆ ವೈದ್ಯಾಧಿಕಾರಿಗಳು, ಜಿಲ್ಲಾಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ರೋಗಿಗಳ ನೆರವಿಗೆ ಬರಬೇಕು. -ಮುನಿಯಪ್ಪ, ಸಾರ್ವಜನಿಕ, ಕೋಲಾರ

ಆಸ್ಪತ್ರೆ ಸಿಬ್ಬಂದಿ ಮುಷ್ಕರಿಂದ ಸಮಸ್ಯೆಗಳು ಉದ್ಭವವಾಗುತ್ತಿದೆ. ಮುಷ್ಕರದಿಂದಾಗಿ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರು ತ್ತಿದ್ದಾರೆ. ಇಂಥ ಘಟನೆಗಳು ಆಗದಂತೆ ಎಚ್ಚರವಹಿಸಲು ಪ್ರಯತ್ನಿಸುತ್ತೇವೆ. ಆಸ್ಪತ್ರೆಗೆ ಬಂದ ಮೇಲೆ ವೃದ್ಧ ದಂಪತಿಗಳ ಸಮಸ್ಯೆಯನ್ನು ಬಗೆಹರಿಸುತ್ತೇನೆ. -ಡಾ.ಎಸ್‌.ಎನ್‌.ವಿಜಯಕುಮಾರ್‌, ಎಸ್‌ಎನ್‌ಆರ್‌ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕರು

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.