ಕೋಚಿಮುಲ್‌ ಹಗರಣ ಸಿಬಿಐಗೊಪ್ಪಿಸಲು ರೈತ ಸಂಘ ಆಗ್ರಹ


Team Udayavani, Feb 22, 2019, 7:25 AM IST

kochi.jpg

ಕೋಲಾರ: ಕೋಚಿಮುಲ್‌ ಭ್ರಷ್ಟಚಾರ ಹಾಗೂ ನೇಮಕಾತಿ ಹಗರಣ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಕಚೇರಿ ಮುಂದೆ ಪ್ರತಿಭಟಿಲಾಯಿತು. ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಒಂದು ಕಡೆ ಭೀಕರ ಬರಗಾಲ ಮತ್ತೂಂದು ಕಡೆ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರು ಸ್ವಾಭಿಮಾನದ ಬದುಕಿಗಾಗಿ ಹೈನೋದ್ಯಮವನ್ನು ಅವಲಂಬಿಸಿದ್ದಾರೆ ಎಂದು ಹೇಳಿದರು.

ಖಾಸಗಿ ಪಶು ಆಹಾರದಲ್ಲಿ ಕಲಬೆರಕೆ, ಪಶು ಇಲಾಖೆಯ ಬೇಜವಾಬ್ದಾರಿ ಮಧ್ಯೆ ಡೇರಿಗಳಲ್ಲಿನ ಹಗಲು ದರೋಡೆಯ ಮಧ್ಯದಲ್ಲಿಯೂ ಸವಾಲುಗಳ ಸಮಸ್ಯೆಗಳ ನಡುವೆ ಒದ್ದಾಡುತ್ತಿರುವ ಹೈನುಗಾರಿಕೆ ನಂಬಿರುವ ಲಕ್ಷಾಂತರ ಕುಟುಂಬಗಳ ಮೇಲೆ ಬ್ರಹ್ಮಾಸ್ತ್ರವೆಂಬಂತೆ ಹಾಲು ಒಕ್ಕೂಟದ ಆಡಳಿತ ಮಂಡಳಿ ಹಾಲಿನ ದರ ಕಡಿಮೆ ಮಾಡುವ ಜೊತೆಗೆ ಏಕಾಏಕಿ ಪಶು ಆಹಾರದ ಬೆಲೆ 180 ರೂ. ಏರಿಕೆ ಮಾಡಿರುವುದು ಬರಗಾಲದಲ್ಲಿ ರೈತರ ಮೇಲೆ ಬ್ರಹ್ಮಾಸ್ತ್ರವೆಂಬಂತಾಗಿದೆ ಎಂದು ಟೀಕಿಸಿದರು.

ರೈತರ ಶೋಷಣೆ: ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌ ಮಾತನಾಡಿ, ಲಕ್ಷಾಂತರ ಕುಟುಂಬಗಳ ಜೀವನಾಧಾರವಾದ ಒಕ್ಕೂಟ ಭ್ರಷ್ಟಾಚಾರದಲ್ಲಿ ಮುಳುಗಿದೆ. ನೇಮಕಾತಿಯಲ್ಲಿ ಕೋಟಿ ಕೋಟಿ ಹಗರಣ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಚರಂಡಿ ಸೇರುತ್ತಿರುವ ಲಕ್ಷಾಂತರ ಲೀಟರ್‌ ಹಾಲು ಹಾಗೂ ಗುಣಮಟ್ಟವಿಲ್ಲದ ಪಶುಲಸಿಕೆ, ಗ್ರಾಮೀಣ ಪ್ರದೇಶದ ಹಾಲು ಒಕ್ಕೂಟಗಳಲ್ಲಿನ ಹಗಲು ದರೋಡೆಗೆ ಕಡಿವಾಣವಿಲ್ಲವಂತಾಗಿ ನೋ ಪೇಮೆಂಟ್‌, ಎಲ್‌ಎಲ್‌ಆರ್‌ ಹೆಸರಿನಲ್ಲಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದರು.

ಕ್ರಮಕೈಗೊಳ್ಳುತ್ತೇನೆ: ಮನವಿ ಸ್ವೀಕರಿಸಿದ ವ್ಯವಸ್ಥಾಪಕ ನಿರ್ದೇಶಕ ಸ್ವಾಮಿ ಮಾತನಾಡಿ, ಇಲಾಖೆಯಿಂದ ಪಶು ಆಹಾರ ಮೇವು ವಿತರಣೆ ಮಾಡಲು ಸಂಬಂಧಪಟ್ಟ ಅಧ್ಯಕ್ಷರೊಡನೆ ಮಾತನಾಡುತ್ತೇನೆ. ನೇಮಕಾತಿ, ಚರಂಡಿಗೆ ಹಾಲು ಬಿಟ್ಟಿರುವ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಗುಣಮಟ್ಟದ ಕಡಿಮೆ ಇರುವ ಹಾಲಿಗೆ ನೋ ಪೇಮೆಂಟ್‌, ಎಲ್‌ಎಲ್‌ಆರ್‌ ನೀಡುತ್ತಿದ್ದೇವೆ. ಡೇರಿ ಹಗರಣಗಳ ತನಿಖೆ ಮಾಡಲು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಉಳಿದಂತೆ ಕ್ರಮಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಹುಲ್ಕೂರ್‌ ಹರೀಕುಮಾರ್‌, ವಿಜಯ್‌ಪಾಲ್‌, ಮೇಲುಗಾಣಿ ದೇವರಾಜ್‌, ಮೀಸೆ ವೆಂಕಟೇಶಪ್ಪ, ಕ್ಯಾಸಂಬಳ್ಳಿ ಪ್ರತಾಪ್‌, ವಡ್ಡಹಳ್ಳಿ ಮಂಜುನಾಥ್‌, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ರೆಹಮಾನ್‌, ಮಂಜುನಾಥ್‌ರೆಡ್ಡಿ, ತೆರ್ನಹಳ್ಳಿ ಆಂಜಿನಪ್ಪ, ವೆಂಕಿ, ಯಲುವಳ್ಳಿ ಪ್ರಭಾಕರ್‌, ಆನಂದರೆಡ್ಡಿ, ಗಣೇಶ್‌, ಮಾಲೂರು ತಾಲೂಕು ಅಧ್ಯಕ್ಷ ವೆಂಕಟೇಶ್‌, ಮುಳಬಾಗಿಲು ತಾಲೂಕು ಅಧ್ಯಕ್ಷ ಫಾರುಕ್‌ಪಾಷ, ಬಂಗಾರಪೇಟೆ ತಾಲೂಕು ಅಧ್ಯಕ್ಷ  ಐತಾಂಡಹಳ್ಳಿ ಅಂಬರೀಶ್‌, ಆಂಚಂಪಲ್ಲಿ ಗಂಗಾಧರ್‌, ಸುಪ್ರೀಂಚಲ, ಸಾಗರ್‌, ಚಂದ್ರಪ್ಪ, ಪುತ್ತೇರಿ ರಾಜು, ಪುರುಷೋತ್ತಮ್‌, ಗೋಪಾಲ್‌, ಬಾಲು ಇದ್ದರು.

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಿ

ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಿ

ನಕಲಿ food inspector

ಫುಡ್‌ ಇನ್ಸ್‌ಪೆಕ್ಷರ್‌ ಎಂದು ನಂಬಿಸಿ ಮೋಸ

chinthamani news

ನಗರಸಭೆ ಜೆ.ಇ ಪ್ರಸಾದ್ ವಿರುದ್ಧ ಗರಂ ಆದ ಸದಸ್ಯ ಜೈ ಭೀಮ್ ಮುರಳಿ

Protest against cancellation of BPL card

ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದ್ದಕ್ಕೆ  ಪ್ರತಿಭಟನೆ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.