Udayavni Special

ಚಿನ್ನದ ಅದಿರು ಸಂಸ್ಕರಣೆಗೆ ಅಡ್ಡಿ

Team Udayavani, Aug 23, 2018, 6:10 AM IST

gold-mine-company.jpg

ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿ ಕಂಪನಿಯಲ್ಲಿ ಅದಿರು ಸಂಸ್ಕರಿಸಿ ಚಿನ್ನ ಉತ್ಪಾದಿಸುವ ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ನ ಪ್ರಮುಖ ಸಲಕರಣೆಗಳಾದ ಲೈನರ್‌ಗಳು ವಿಫಲವಾಗುತ್ತಿರುವುದರಿಂದ ವಾರದಿಂದ ಅದಿರು ಸಂಸ್ಕರಣೆ ಪದೇ ಪದೆ ಸ್ಥಗಿತಗೊಳ್ಳುತ್ತಿದೆ.

ಭೂ ಕೆಳಮೈಯಿಂದ ಚಿನ್ನದ ಅದಿರು ಹೊರತಂದರೂ ಅದನ್ನು ಮಿಲ್‌ನಲ್ಲಿ ಸಂಸ್ಕರಿಸಿದಾಗ ಮಾತ್ರ ಚಿನ್ನ ಉತ್ಪಾದನೆಯಾಗುತ್ತದೆ. ಅದಿರು ಸಂಸ್ಕರಣೆಗಾಗಿ ದಶಕದ ಹಿಂದೆ ಗಣಿ ಆಡಳಿತ ವರ್ಗ 68 ಕೋಟಿ ರೂ. ವೆಚ್ಚದಲ್ಲಿ ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ ನಿರ್ಮಿಸಿದೆ. ಪ್ರತಿ ಗಂಟೆಗೆ 100 ಟನ್‌ ಅದಿರು ಸಂಸ್ಕರಿಸುವ ಸಾಮರ್ಥ್ಯದ ಮಿಲ್‌ 24 ಗಂಟೆ ಕಾರ್ಯ ನಿರ್ವ ಹಿಸುತ್ತದೆ. ಕಾಲಕಾಲಕ್ಕೆ ಕೆಲವು ಸಲಕರಣೆ ಬದಲಾಯಿಸುವುದು ಸಹಜ. ಹೀಗೆ ಸಲಕರಣೆ ಗಳನ್ನು ಬದಲಾಯಿಸುವಾಗ ಹೊಸದಾಗಿ ತಂದಿರುವ ಸಲಕರಣೆಗಳು ಕಳಪೆ ಮಟ್ಟದ್ದಾಗಿವೆ ಎಂಬ ದೂರುಗಳು ಕಾರ್ಮಿಕರಿಂದ ಕೇಳಿ ಬಂದಿವೆ.

ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ ಕಾರ್ಯನಿರ್ವಹಿಸಲು ಲೈನರ್‌ಗಳು ಅಗತ್ಯ. ಅವುಗಳು ಸವೆದಾಗ ಬದಲಾಯಿಸುವುದು ಸಾಮಾನ್ಯ. ಒಂದು ಬಾರಿ ಅಳವಡಿಸಿದಾಗ ಅವುಗಳು ಕನಿಷ್ಠ ಒಂದು ವರ್ಷದವರೆಗೆ ಬಾಳಿಕೆ ಬರಬೇಕು. ಆದರೆ, ಇತ್ತೀಚೆಗೆ ತರಿಸಲಾದ ಲೈನರ್‌ಗಳು ಅಳವಡಿಸಿದ ವಾರದಲ್ಲೇ ವಿಫಲವಾಗುತ್ತಿವೆ ಎನ್ನಲಾಗಿದೆ. ಕಂಪನಿ ಮೂಲಗಳ ಪ್ರಕಾರ ಆ.5ರಂದು 300 ಹೊಸ ಲೈನರ್‌ ಅಳವಡಿಸಿ ಪ್ರಾರಂಭಿಸಲಾಗಿತ್ತು. 

ಆ.17ರ ನಂತರ ಆ ಹೊಸ ಲೈನರ್‌ಗಳು ವಿಫಲಗೊಂಡು ಕಳಚಿ ಬೀಳುತ್ತಿವೆ. ಪರಿಣಾಮ ಅದಿರು ಸಂಸ್ಕರಣೆ ಸ್ಥಗಿತಗೊಳ್ಳುತ್ತಿದೆ. ಹಳೆ ಲೈನರ್‌ಗಳ ಬಳಕೆ: ಲೈನರ್‌ಗಳ ವಿಫಲತೆಯಿಂದ ಮಿಲ್‌ ಡೆಯದಂತಾಗಿದೆ. ಸವೆದಿವೆ ಎಂದು ಬಿಸಾಡಿದ್ದ ಹಳೆಯ ಲೈನರ್‌ಗಳನ್ನೇ ಮರು ಜೋಡಿಸಿ ಅದಿರು ಸಂಸ್ಕರಣೆ ಪ್ರಯತ್ನ ನಡೆಸಲಾಗಿದೆ. 

ಕಮಿಷನ್‌ ಆಸೆಗಾಗಿ ಕಳಪೆ ಮಟ್ಟದ ಲೈನರ್‌ ತರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ಗೆ ಒಂದು ಬಾರಿ ಎಲ್ಲ ವಿಭಾಗಗಳು ಸೇರಿದಂತೆ ಒಟ್ಟು 300ಕ್ಕೂ ಅಧಿಕ ಲೈನರ್‌ಗಳನ್ನು ಅಳವಡಿಸಲು ಅದರ ಖರೀದಿ,ಜೋಡಣೆ ವೆಚ್ಚ ಸೇರಿ 2 ಕೋಟಿಗೂ ಅಧಿಕ ವೆಚ್ಚ ತಗಲುತ್ತದೆ ಎನ್ನಲಾಗಿದೆ. ಕಳಪೆ ಮಟ್ಟದ ಸಲಕರಣೆ ಖರೀದಿಸಿ ಗಣಿ ಕಂಪನಿಗೆ ನಷ್ಟ ಉಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

arjkala

ಕಾರ್ಕಳ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

smith

ಪಂಜಾಬ್–ರಾಜಸ್ಥಾನ್ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಮಿತ್ ಪಡೆ

ಇಲ್ಲಿ ರಾತ್ರಿ ಚಿರತೆ ಸಂಚಾರ ! ಹಟ್ಟಿಯಲ್ಲಿದ್ದ ಕರು ಸಾವು, ಆತಂಕದಲ್ಲಿ ಗ್ರಾಮಸ್ಥರು

ರಾತ್ರಿ ವೇಳೆ ಚಿರತೆ ಸಂಚಾರ! ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು

rock-1

ಮಾನವ ನಿರ್ಮಿತ ರಾಕ್ ಗಾರ್ಡನ್: ಇದರ ಸೌಂದರ್ಯಕ್ಕೆ ಮನಸೋಲದವರಿಲ್ಲ !

riga-1

ಮನಮೋಹಕ ಪ್ರವಾಸಿ ತಾಣ: ಚಿಕ್ಕದಾದರೂ ಚೊಕ್ಕದಾದ ದೇಶ ರೀಗಾ ಲಾಟ್ಟಿಯಾ !

ಸಾಲಭಾದೆ ತಾಳಲಾರದೆ ನೊಂದ ರೈತ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ನೊಂದ ರೈತ ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಲ್ಲಿ ರಾತ್ರಿ ಚಿರತೆ ಸಂಚಾರ ! ಹಟ್ಟಿಯಲ್ಲಿದ್ದ ಕರು ಸಾವು, ಆತಂಕದಲ್ಲಿ ಗ್ರಾಮಸ್ಥರು

ರಾತ್ರಿ ವೇಳೆ ಚಿರತೆ ಸಂಚಾರ! ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು

ಸಾಲಭಾದೆ ತಾಳಲಾರದೆ ನೊಂದ ರೈತ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ನೊಂದ ರೈತ ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಮಂಡ್ಯ ಕೋವಿಡ್ ಸೋಂಕಿಗೆ ಓರ್ವ ಸಾವು, 274 ಹೊಸ ಪ್ರಕರಣ ದೃಢ, 64 ಮಂದಿ ಗುಣಮುಖ

ಮಂಡ್ಯ ಕೋವಿಡ್ ಸೋಂಕಿಗೆ ಓರ್ವ ಸಾವು, 274 ಹೊಸ ಪ್ರಕರಣ ದೃಢ, 64 ಮಂದಿ ಗುಣಮುಖ

ವಿಜಯಪುರ ಬಾರಿ ಮಳೆಗೆ ಮನೆ ಕುಸಿದು ಬಾಲಕಿ ಸಾವು: ಕೃಷ್ಣಾ ನದಿಯಲ್ಲಿ ತೇಲಿಬಂತು ವ್ಯಕ್ತಿಯ ಶವ

ವಿಜಯಪುರ ಭಾರಿ ಮಳೆಗೆ ಮನೆ ಕುಸಿದು ಬಾಲಕಿ ಸಾವು: ಕೃಷ್ಣಾ ನದಿಯಲ್ಲಿ ತೇಲಿಬಂತು ವ್ಯಕ್ತಿಯ ಶವ

ಕರ್ನಾಟಕ ಬಂದ್ ಇದ್ದರೂ ಬಸ್ ವ್ಯವಸ್ಥೆ ಎಂದಿನಂತೆ ಇರಲಿದೆ: ಡಿಸಿಎಂ ಸವದಿ

ಕರ್ನಾಟಕ ಬಂದ್ ಇದ್ದರೂ ಬಸ್ ವ್ಯವಸ್ಥೆ ಎಂದಿನಂತೆ ಇರಲಿದೆ: ಡಿಸಿಎಂ ಸವದಿ

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

kund-tdy-1

ಚರಂಡಿ ಅವ್ಯವಸ್ಥೆ, ಸಂಚಾರ ಸಂಕಷ್ಟ; ದುರಸ್ತಿಗೆ ಆಗ್ರಹ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

arjkala

ಕಾರ್ಕಳ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

“ಕೋವಿಡ್‌ ರೋಗಿಗಳ ಖಾಸಗಿ ಆಸ್ಪತ್ರೆ ದಾಖಲು ಬಗ್ಗೆ ಮಾಹಿತಿ ಅಗತ್ಯ’

“ಕೋವಿಡ್‌ ರೋಗಿಗಳ ಖಾಸಗಿ ಆಸ್ಪತ್ರೆ ದಾಖಲು ಬಗ್ಗೆ ಮಾಹಿತಿ ಅಗತ್ಯ’

smith

ಪಂಜಾಬ್–ರಾಜಸ್ಥಾನ್ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಮಿತ್ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.