ಏಳನೇ ಆರ್ಥಿಕ ಗಣತಿ ಕಾರ್ಯ ಪಾರದರ್ಶಕವಾಗಿರಲಿ


Team Udayavani, Jan 10, 2020, 2:39 PM IST

kolar-tdy-1

ಕೋಲಾರ: ಗುರುವಾರ (ಜ.11) ದಿಂದ ಮಾರ್ಚ್‌, 2020ರ ವರೆಗೆ 7ನೇ ಆರ್ಥಿಕ ಗಣತಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಪಾರದರ್ಶಕ ಮಾಹಿತಿ ನೀಡುವ ಮೂಲಕ ಗಣತಿ ಕಾರ್ಯದ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದರು.

ಗುರು ವಾರ ತಮ್ಮ ಕಚೇರಿಯಲ್ಲಿ 7ನೇ ಆರ್ಥಿಕ ಗಣತಿ ಕಾರ್ಯ ಕುರಿತು ಹಮ್ಮಿಕೊಂಡಿದ್ದ, ಪತ್ರಿಕಾ ಗೋಷ್ಠಿಯಲ್ಲಿ ಗಣತಿ ಕಾರ್ಯದ ಮೊಬೆ„ಲ್‌ ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿದರು. ಆರ್ಥಿಕ ಗಣತಿ ಕಾರ್ಯವು ಪ್ರತಿ 5 ವರ್ಷ ಗಳಿಗೊಮ್ಮೆ ಭಾರತದಾದ್ಯಂತ ನಡೆಯುತ್ತದೆ. ಮೊದಲ ಆರ್ಥಿಕ ಗಣತಿಯು 1977ರಲ್ಲಿ ನಡೆದಿತ್ತು. ಇದುವರೆಗೂ 6 ಆರ್ಥಿಕ ಗಣತಿ ಕಾರ್ಯಗಳು ನಡೆದಿವೆ. ಪ್ರಸ್ತುತ 7ನೇ ಗಣತಿ ಕಾರ್ಯ ಚಾಲನೆಯಲ್ಲಿದೆ ಎಂದು ಮಾಹಿತಿ ನೀಡಿದರು.

ಆರ್ಥಿಕ ಗಣತಿ ಕಾರ್ಯದಲ್ಲಿ ಗ್ರಾಮೀಣ ಹಾಗೂ ಖಾಸಗಿ ವಲಯಗಳಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಪರಿಗಣಿಸಲಾಗುತ್ತದೆ. ಈ ಕಾರ್ಯದಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಗಣತಿ ಮಾಡಲಾಗುತ್ತದೆ. ಗಣತಿದಾರರು ತಮಗೆ ನಿರ್ದಿಷ್ಟ ಪಡಿಸಿದ ಗಡಿಯೊಳಗೆ ಬರುವ ಪ್ರತಿ ಮನೆ ಕಟ್ಟಡಗಳಿಗೂ ಭೇಟಿ ನೀಡಿ, ಅಲ್ಲಿ ನಡೆಯುವ ಉದ್ಯಮ, ವ್ಯಾಪಾರ, ಕೆಲಸಗಾರರ ಮಾಹಿತಿ, ಹಣಕಾಸಿನ ಮೂಲ ಇತ್ಯಾದಿ ಮಾಹಿತಿ ಕಲೆ ಹಾಕುತ್ತಾರೆ. ಸಂಗ್ರಹಿಸಿದ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಮತ್ತು ಯೋಜನೆ ಗಳನ್ನು ರೂಪಿಸಲು ಮಾತ್ರ ಉಪಯೋಗಿಸಲಾಗುತ್ತಿದೆ. ಸಂಪೂರ್ಣ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಮಾಹಿತಿ ಸಂಗ್ರಹಣೆಯಿಂದ ಜನರ ತಲಾದಾಯ ಹಾಗೂ ರಾಷ್ಟ್ರೀಯ ಆದಾಯವನ್ನು ಲೆಕ್ಕಚಾರಕ್ಕೆ ಬಳಸಲಾಗುವುದು ಎಂದು ತಿಳಿಸಿದರು. ಈ ವರ್ಷ ವಿಶೇಷವಾಗಿ ಕಾಗದ ರಹಿತವಾಗಿ ಮೊಬೈಲ್‌ ಆ್ಯಪ್‌ನಿಂದ ಮಾಹಿತಿ ಸಂಗ್ರಹಿಸ ಲಾಗುತ್ತದೆ. ಗಣತಿದಾರರು ಮಾಹಿತಿ ಯನ್ನು ಸಂಗ್ರಹಿಸಲು ಬಂದಾಗ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು. ಯಾವುದೇ ಗೊಂದಲಗಳಿಗೆ ಒಳಗಾಗದೇ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಪಂ ಸಿಇಒ ಎಚ್‌.ವಿ ದರ್ಶನ್‌, ಮುಖ್ಯ ಯೋಜನಾ ಕಾರಿ ಎಂ.ಮಾದೇಶ್‌, ಜಿಲ್ಲಾ ಸಂಖ್ಯಾ ಸಂಗ್ರಹಣಾ ಕಾರಿ ಎಸ್‌.ಧನುಂಜಯ, ಸಹಾಯಕ ನಿರ್ದೇಶಕ ವೆಂಕಟರವಣಪ್ಪ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

14-uv-fusion

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ

R B Thimmapur reacts to Revanna family case

Revanna Case; ಮಾನಗೇಡಿ ಕೆಲಸ ಮಾಡಿ ಅಂತ ನಾವು ಹೇಳಿದ್ವಾ?: ಸಚಿವ ತಿಮ್ಮಾಪುರ ಪ್ರಶ್ನೆ

13-uv-fusion

Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?

12-uv-fusion

Fusion: Cinema; ಪೋಸ್ಟ್‌ ಮ್ಯಾನ್‌ಇನ್‌ ದಿ ಮೌಂಟೇನ್ಸ್‌, ಡ್ಯುಯಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

KGF Gold: ಮತ್ತೆ ಚಿನ್ನ ಕೊಡಲಿದೆ ಕೋಲಾರದ ಕೆಜಿಎಫ್!

Tomato-Price

Kolara: ಗಗನಕ್ಕೇರುತ್ತಿರುವ ಟೊಮೆಟೋ ಬೆಲೆ

ಸರಕಾರದ ವಿರುದ್ಧ ಇಂದು ಬಿಜೆಪಿ ಬೃಹತ್‌ ಪ್ರತಿಭಟನೆ: ಅಶ್ವತ್ಥನಾರಾಯಣ

ಸರಕಾರದ ವಿರುದ್ಧ ಇಂದು ಬಿಜೆಪಿ ಬೃಹತ್‌ ಪ್ರತಿಭಟನೆ: ಅಶ್ವತ್ಥನಾರಾಯಣ

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

ಲೂಟಿ ಸರಕಾರ ಅಂದ್ರೆ ದಾಖಲೆ ಕೇಳುತ್ತಿದ್ದ ಸಿದ್ದು ಈಗ ಏನು ಮಾಡುತ್ತಾರೆ?: ಅಶೋಕ್‌

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆSiddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

Siddaramaiah ಪುತ್ರ ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ: ಕುಮಾರಸ್ವಾಮಿ ಪ್ರಶ್ನೆ

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

praveen tej’s jigar movie

Praveen Tej; ಭೂಗತ ಲೋಕದಲ್ಲಿ ‘ಜಿಗರ್‌’

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

14-uv-fusion

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.