ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಬಿಎಸ್‌ವೈ

Team Udayavani, May 13, 2019, 4:36 PM IST

ಹುಬ್ಬಳ್ಳಿ: ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ರೈತರ ಪರ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಕುಂದಗೋಳ ವಿಧಾನಸಭಾ ಕ್ಷೇತ್ರ ಹಿರೇಹರಕುಣಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ಪರ ರೋಡ್‌ ಶೋ ನಡೆಸಿ ನಂತರ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಇದ್ದಾಗ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌, ರೈತರ ಸಾಲ ಮನ್ನಾ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವುದು, ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು. ನನ್ನ ರಾಜಕೀಯ ಜೀವನದಲ್ಲಿ ಎಂದು ಕೂಡಾ ಜಾತಿ, ಕುಲ, ಗೋತ್ರ ನೋಡಿ ರಾಜಕಾರಣ ಮಾಡಿಲ್ಲ. ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಿದ್ದೇನೆ. ಕಾಗಿನೆಲೆಯಲ್ಲಿ 50 ಕೋಟಿ ರೂ.ಗಳ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಯಿತು. ವಾಲ್ಷ್ಮೀಕಿ ಜಯಂತಿ ಆಚರಿಸಲಾಯಿತು ಎಂದರಲ್ಲದೇ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ಅವರನ್ನು 25 ಸಾವಿರ ಮತಗಳಿಂದ ಗೆಲ್ಲಿಸಬೇಕೆಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕುಂದಗೋಳ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ ಹಣದ ಚೀಲ ಹಿಡಿದುಕೊಂಡು ಜನರನ್ನು ಖರೀದಿಸುವ ದುರಹಂಕಾರದಿಂದ ಕ್ಷೇತ್ರಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ, ಮುಖ್ಯಮಂತ್ರಿ ರೆಸಾರ್ಟ್‌ನಲ್ಲಿ ಹೋಗಿ ಕುಳಿತಿದ್ದಾರೆ. ಅಂತಹವರೆಲ್ಲರನ್ನು ಮನೆಗೆ ಕಳುಹಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಚಿಕ್ಕನಗೌಡರ ಅವರನ್ನು ಆರಿಸಿ ಕಳುಹಿಸಿ ಎಂದರು.

ಕಾಂಗ್ರೆಸ್‌ ಆಮಿಷಗಳಿಗೆ ಬಿಜೆಪಿ ಕಾರ್ಯಕರ್ತರು ಬಲಿಯಾಗಲ್ಲ: ಬಿ.ಎಸ್‌. ಯಡಿಯೂರಪ್ಪ

ಹುಬ್ಬಳ್ಳಿ: ಕಾಂಗ್ರೆಸ್‌ ನಾಯಕರಾದ ವೇಣುಗೋಪಾಲ, ಡಿ.ಕೆ.ಶಿವಕುಮಾರ ಯಾರೇ ಆಗಲಿ, ಕುಂದಗೋಳ ಕ್ಷೇತ್ರದಲ್ಲಿ ಆಮಿಷಗಳ ಮೂಲಕ ನಮ್ಮ ಯಾವುದೇ ಕಾರ್ಯಕರ್ತರು, ಮುಖಂಡರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿದ್ದೇವೆ. ಸಂಘಟಿತವಾಗಿ ಉಪ ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್‌ ನಾಯಕರು ಏನೇ ಸರ್ಕಸ್‌ ಮಾಡಿದರೂ ನಮ್ಮ ಕಾರ್ಯಕರ್ತರನ್ನು ಮುಟ್ಟಲು ಸಾಧ್ಯವಿಲ್ಲ. ಹಣ ಬಲಕ್ಕೆ ನಮ್ಮ ಕಾರ್ಯಕರ್ತರು ಬಲಿಯಾಗಲ್ಲ ಎಂದರು. ಕುಂದಗೋಳ ಕ್ಷೇತ್ರದಲ್ಲಿ ಯಾವುದೇ ಗ್ರಾಮದಲ್ಲಿ ನಮಗೆ ಹಿನ್ನಡೆ ಆಗಿಲ್ಲ. ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ್ರ ಅವರಿಗೆ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಸುಮಾರು 25 ಸಾವಿರ ಮತಗಳ ಅಂತರದಿಂದ ಅವರು ಗೆಲುವು ಸಾಧಿಸಲಿದ್ದಾರೆ. ಹಣ ಬಲದಿಂದ ಗೆಲುವು ಸಾಧಿಸುತ್ತೇವೆಂಬುದು ಕಾಂಗ್ರೆಸ್‌-ಜೆಡಿಎಸ್‌ನವರ ಭ್ರಮೆ. ಎರಡೂ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು. ಮೇ 23ರ ನಂತರ ಸಮ್ಮಿಶ್ರ ಸರಕಾರದ ಮೈತ್ರಿಕೂಟದಲ್ಲಿ ಭಿನ್ನಮತ ಉಲ್ಬಣಗೊಳ್ಳಲಿದ್ದು, ಹಲವು ಅತೃಪ್ತ ಶಾಸಕರು ತಮ್ಮದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ರಾಜಕೀಯ ಬದಲಾವಣೆ ಹಾಗೂ ನೂತನ ಸರಕಾರ ರಚನೆಗೆ ಎರಡೂ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫ‌ಲಿತಾಂಶ ಮಹತ್ವದ ಪ್ರಭಾವ ಬೀರಲಿದೆ ಎಂದರು.

ಈ ವಿಭಾಗದಿಂದ ಇನ್ನಷ್ಟು

  • ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಣ ಕ್ರೋಢೀಕರಣ ಘಟಕವನ್ನು (ಕರೆನ್ಸಿ ಚಸ್ಟ್‌) ಸೇವೆ ಇದೇ ಡಿ....

  • ಗಂಗಾವತಿ: ನಗರದ ಮಹಾತ್ಮ ಗಾಂಧಿ  ವೃತ್ತ ಸೇರಿ ಪ್ರಮುಖ ವೃತ್ತಗಳಲ್ಲಿ ನಗರಸಭೆಯ ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ)...

  • ಕೊಪ್ಪಳ: 2017-18ನೇ ಸಾಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಡಿಸೆಂಬರ್‌-2019ರ ಅಂತ್ಯದವರೆಗೆ ಕಾಲಮಿತಿ ನಿಗದಿ ಪಡಿಸಲಾಗಿತ್ತು. ಆದರೆ ಇಲ್ಲಿವರೆಗೂ ಬಹುತೇಕ ಕಾಮಗಾರಿಗಳು...

  • „ಕೆ.ನಿಂಗಜ್ಜ ಗಂಗಾವತಿ: ತುಂಗಭದ್ರಾ ಡ್ಯಾಂ ಎಡದಂಡೆ ಕಾಲುವೆ 27ನೇ ವಿತರಣಾ ಕಾಲುವೆ ವ್ಯಾಪ್ತಿಯ ಭತ್ತದ ಗದ್ದೆ ಕಟಾವು ಕಾರ್ಯ ನಡೆಯುತ್ತಿದ್ದರೂ,ಕಾಲುವೆ ಮೂಲಕ...

  • ತಾವರಗೇರಾ: ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಸ್ಥಳಿಯ ಪಪಂ ಸಹಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಗಳನ್ನು ಸಾರುವುದಕ್ಕೆ...

ಹೊಸ ಸೇರ್ಪಡೆ