Dotihal; ಶಿಥಿಲಗೊಂಡ ವಿದ್ಯುತ್ ಕಂಬಗಳು: ಅಪಾಯದ ಅಂಚಿನಲ್ಲಿ ಗ್ರಾಮಸ್ಥರು

ಜೀವ ಭಯದಲ್ಲಿ ಗ್ರಾಮಸ್ಥರ ಪ್ರತಿ ನಿತ್ಯ ಸಂಚಾರ

Team Udayavani, Jan 1, 2024, 5:33 PM IST

Dotihal; ಶಿಥಿಲಗೊಂಡ ವಿದ್ಯುತ್ ಕಂಬಗಳು: ಅಪಾಯದ ಅಂಚಿನಲ್ಲಿ ಗ್ರಾಮಸ್ಥರು

ದೋಟಿಹಾಳ: ಗುಮಗೇರಾ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಅಪಾಯ ಸ್ಥಿತಿಯಲ್ಲಿದೆ. ಆದ್ದರಿಂದ ಕಂಬ ಬದಲಾಯಿಸುವಂತೆ ಗ್ರಾಮಸ್ಥರು ಕಳೆದ 3-4 ವರ್ಷಗಳಿಂದ ಒತ್ತಾಯಿಸಿದ್ದಾರೆ. ಆದರೆ ಅವುಗಳನ್ನು ಬದಲಾಯಿಸುವ ಕೆಲಸ ಜೆಸ್ಕಾಂ ಮಾಡುತ್ತಿಲ್ಲ. ಇದರಿಂದ ಅಪಾಯ ಸ್ಥಿತಿಯಲ್ಲಿ ಇರುವ ಅಕ್ಕ ಪಕ್ಕದ ಗ್ರಾಮಸ್ಥರು ನಿತ್ಯ ಅಪಾಯದಲ್ಲಿ ಹಾಗೂ ಭಯದ ನಡುವೆ ಜೀವನ ಸಾಗಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕಳೆದ 2-3ವರ್ಷಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ವಿದ್ಯುತ್ ಹವಗಡದಿಂದ ಮರಣ ಹೊಂದಿದ್ದು. ಇಂತಹ ಅನಾಹುತಗಳನ್ನು ತಡೆಯಬೇಕಾದ ಜೆಸ್ಕಾಂ ಇಲಾಖೆಯವರು ಕಂಡು ಕಾಣ್ಣದಂತಿದ್ದಾರೆ. ಇದಕ್ಕೆ ತಾಜಾ ಉದಾರಣೆ ಇತ್ತೀಚೆಗೆ ಗುಮಾರೇರಾ ಗ್ರಾಮದಲ್ಲಿ ಸುಮಾರು 40-45 ವರ್ಷಗಳ ಹಿಂದೆ ಗ್ರಾಮದಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ಇದುವರೆಗೂ ಬದಲಾಯಿಸಿಲ್ಲ. ಸದ್ಯ ವಿದ್ಯುತ್ ಕಂಬಗಳು ಜೋರಾಗಿ ಗಾಳಿ ಬೀಸಿದರೆ ಕಂಬಗಳು ಬೀಳುವ ಸಾಧ್ಯತೆಗಳು ಇವೆ. ಗ್ರಾಮದ ಒಂದನೇ ವಾರ್ಡನಲ್ಲಿ ಸುಮಾರು 10ಕ್ಕೂ ಹೆಚ್ಚು ಕಂಬಗಳ ತಳಭಾಗದಲ್ಲಿನ ಸಿಮೆಂಟ್ ಉದುರಿದೆ. ಒಳಗಿನ ಕಬ್ಬಿಣ ಕಾಣಿಸುತ್ತಿದೆ. ಮುರಿದು ಬೀಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬಗಳು ಇವೆ. ಇಷ್ಟಾದರೂ ಜೆಸ್ಕಾಂ ಇಲಾಖೆಯವರು ಯಾವುದೆ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದು ಈ ಗ್ರಾಮದಲ್ಲಿ ಕಂಡುಬರುತ್ತಿದೆ.

ಸುಮಾರು 35-40 ವರ್ಷಗಳ ಹಿಂದೆ ಗ್ರಾಮದಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಸದ್ಯ ಅವುಗಳು ಹಳೇಯ ಕಂಬಗಳಾಗಿದ್ದು. 10ಕ್ಕೂ ಹೆಚ್ಚು ಕಂಬಗಳ ನೆಲಮಟ್ಟದ ಭಾಗದಲ್ಲಿ ಸಿಮೆಂಟ್ ಕಳಚಿ ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಕಣ್ಣಿಗೆ ಕಾಣಿಸುವಂತಿವೆ. ಇಂಥಹ ಕಂಬಗಳ ಹತ್ತಿರ ಹತ್ತಿರ ಅಪಾಯ ಗ್ಯಾರಂಟಿ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಣ್ಣ ಸಣ್ಣ ರಸ್ತೆ(ಸಂದಿ)ಗಳು ಇರುತ್ತವೆ. ಇದರ ಮಧ್ಯ ರಸ್ತೆ ಅಕ್ಕ ಪಕ್ಕದಲ್ಲಿ ವಿದ್ಯುತ್ ಕಂಬಗಳು ಹಾಕಲಾಗಿರುತ್ತದೆ. ಇಂತಹ ಸಣ್ಣ ದಾರಿಯಲ್ಲಿ ಗ್ರಾಮಸ್ಥರು ಸಂಚರಿಸುತ್ತಾರೆ. ಗ್ರಾಮಸ್ಥರು ನಿತ್ಯ ಅಪಾಯ ಮತ್ತು ಮಳೆ ಬಂದಾಗ ವಿದ್ಯುತ್ ಸ್ಪರ್ಶ ಆಗುವುದೆಂಬ ಭಯದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಮಳೆಗಾಲದಲ್ಲಿ ಕಂಬದ ಬಳಿ ದನಕರುಗಳು, ಮಕ್ಕಳು ಸಂಚರಿಸುವಾಗ ವಿದ್ಯುತ್ ಅರ್ಥಿಂಗ್ ಆದರೆ ಅಪಾಯ ಉಂಟಾಗುವುದು ಹೆಚ್ಚು. ಗ್ರಾಮಸ್ಥರು ಹೇಳುವ ಪ್ರಕಾರ ಹೀಗಾಗಲೇ 2-3 ಬಾರಿ ಜಾನುವಾರುಗಳಿಗೆ ಮಳೆ ಬರುವ ವೇಳೆ ವಿದ್ಯುತ್ ಅರ್ಥಿಂಗ್ ಆಗಿದೆ. ಅದರೇ ಯಾವುದೆ ಜೀವಪಾಯವಾಗಿಲ್ಲ.

ಮಳೆಗಾಲದಲ್ಲಿ ಇಲ್ಲಿಯ ಜನರು ಜೀವ ಭಯದಲ್ಲಿ ಸಣ್ಣ ಸಂದಿ ರಸ್ತೆಗಳಲ್ಲಿ ಸಂಚರಿಸುತ್ತಾರೆ. ಇನ್ನೂ ಕೆಲವು ಮಳೆ ಬರುವ ವೇಳೆ ಮನೆಗಳಿಂದ ಯಾರು ಹೊರಗೆ ಬರುವುದಿಲ್ಲ ಎಂದು ಗ್ರಾಮಸ್ಥರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡರು.

ಅಪಾಯದ ಸ್ಥಿತಿಯಲ್ಲಿ ಇರುವು ಕಂಬಗಳು ಯಾವ ಸಂದರ್ಭದಲ್ಲಾದರೂ ಮುರಿದು ಬೀಳವ ಸಾಧ್ಯತೆ ಇದೆ. ಇದರಿಂದ ದೊಡ್ಡ ಅವಘಡವೇ ಸಂಭವಿಸಿ ಜೀವ ಹಾನಿಯಾಗುತ್ತದೆ ಎಂಬ ಭಯ ಕಾಡುತ್ತಿದೆ ಎಂದು ಗ್ರಾಮಸ್ಥರು ವ್ಯಕ್ತಪಡಿಸಿದರು.

ಕಣ್ಣು ಮುಚ್ಚಿ ಕುಳಿತ ಜೆಸ್ಕಾಂ: ವಿದ್ಯುತ್ ಭಯದಲ್ಲಿ ಸಿಲುಕಿದ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ದೂರು ನೀಡಿದರೂ ಕ್ಯಾರೆ ಎನ್ನುತ್ತಿಲ್ಲ. ಇನ್ನೂ ತಾಲೂಕ ಜೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದರು.

ಗುಮಗೇರಾ ಗ್ರಾಮದಲ್ಲಿ ಶಿಥಿಲಗೊಳಪಟ್ಟ ಹಳೇ ವಿದ್ಯುತ್ ಕಂಬಗಳನ್ನು ಬದಲಾಯಿಸಿ ಹೊಸ ಕಂಬಗಳನ್ನು ಹಾಕಲು ಜೆಸ್ಕಾಂ ಇಲಾಖೆಗೆ ಹೀಗಾಗಲೇ 2-3ಪತ್ರಗಳನ್ನು ಬರೆಯಲಾಗಿದೆ ಹಾಗೂ ಗ್ರಾಪಂ ಸದಸ್ಯರು ಕಚೇರಿಗೆ ಭೇಟಿ ನೀಡಿ ಮೌಖಿಕವಾಗಿ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿದರು. ಯಾವುದೇ ಪ್ರಯೋಜನವಾಗಿಲ್ಲ.
-ಮಲ್ಲಪ್ಪ ಕುಂಬಾರ
ಗ್ರಾಪಂ ಪಿಡಿಒ ಗುಮಗೇರಾ.

ಗುಮರೇಗಾ ಗ್ರಾಮದ ಶಿಥಿಲಗೊಂಡಿರುವ ಹಳೇ ಕಂಬಗಳು ಬಗ್ಗೆ ಮಾಹಿತಿ ಇದೆ. ಹಾಗೂ ಹೀಗಾಗಲೇ ಕಂಬಗಳನ್ನು ಬದಲಾಯಿಸಲು ಎಸ್ಟಿಮೇಂಟ್ ಆಗಿದೆ. ಸ್ಥಳೀಯ ಗುತ್ತಿಗೆದಾರನಿಗೆ ಕಂಬ ಬದಲಾಯಿಸಲು ತಿಳಿಸಿದೇವೆ. ಆದರೂ ಇನ್ನೂ ಕಂಬಗಳನ್ನು ಬದಲಾಯಿಸಿಲ್ಲ. ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
-ದವಲಸಾಬ್ ನಧಾಫ್
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಜಿಸ್ಕಾಂ ಇಲಾಖೆ ಕುಷ್ಟಗಿ.

-ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ

ಟಾಪ್ ನ್ಯೂಸ್

IMD

ಮತದಾನಕ್ಕೆ ಬಿಸಿಲು ಅಡ್ಡಿಯಾಗದಿರಲಿ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

1-ewewewqewe

Karkare ಯನ್ನು ಕೊಂದಿದ್ದು ಕಸಬ್‌ ಅಲ್ಲ,RSS ನಂಟಿದ್ದ ಪೊಲೀಸ್‌: ಕಾಂಗ್ರೆಸ್‌ ನಾಯಕ

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

1-KL-S

Amethi;ನಾನು ಗಾಂಧಿ ಕುಟುಂಬದ ಸೇವಕನಲ್ಲ: ಕಾಂಗ್ರೆಸ್‌ ಅಭ್ಯರ್ಥಿ

1-qweqeq

Bihar;10 ವರ್ಷ ಜೈಲು ಶಿಕ್ಷೆ: ಪರೋಲ್‌ ಮೇಲೆ ಬಂದು ಚುನಾವಣ ಪ್ರಚಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

IMD

ಮತದಾನಕ್ಕೆ ಬಿಸಿಲು ಅಡ್ಡಿಯಾಗದಿರಲಿ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

1-ewewewqewe

Karkare ಯನ್ನು ಕೊಂದಿದ್ದು ಕಸಬ್‌ ಅಲ್ಲ,RSS ನಂಟಿದ್ದ ಪೊಲೀಸ್‌: ಕಾಂಗ್ರೆಸ್‌ ನಾಯಕ

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.