ಕೋವಿಡ್ ಜೊತೆ ಬಾಳುವುದು ಅನಿವಾರ್ಯ
Team Udayavani, Jun 28, 2020, 3:56 PM IST
ತಾವರಗೇರಾ: ತಜ್ಞರ ಪ್ರಕಾರ ಕೋವಿಡ್ ವೈರಸ್ ದೀರ್ಘಕಾಲ ಇರುತ್ತದೆ. ಆದ್ದರಿಂದ ಅದರ ಜೊತೆಗೆ ಬಾಳುವುದು ಅನಿವಾರ್ಯವಾಗಿದೆ. ವೈರಸ್ ಬಗ್ಗೆ ಸಾರ್ವಜನಿಕರು ಯಾವುದೇ ಭಯಪಡದೇ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಗಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ನಾಪೂರ ಹೇಳಿದರು.
ಪಟ್ಟಣದ ಸಮುದಾಯ ಆರೊಗ್ಯ ಕೇಂದ್ರದ ಐವರು ಸಿಬ್ಬಂದಿಗೆ ಶುಕ್ರವಾರ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದ ಸೀಲ್ ಡೌನ್ ಪ್ರದೇಶದಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮ ಕೈಗೊಂಡಿದೆ. ಇಲಾಖೆ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು. ಮದುವೆ ಹಾಗು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸರ್ಕಾರವು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿರುವುದು ಸ್ವಾಗತಾರ್ಹ ನಿಲುವಾಗಿದೆ, ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಒಳ್ಳೆಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು. ನಂತರ ಇಲ್ಲಿಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್‌ಐ ಗೀತಾಂಜಲಿ ಶಿಂಧೆ, ಪಪಂ ಮುಖ್ಯಾ ಧಿಕಾರಿ ಶಂಕರ್ ಕಾಳೆ, ಪಪಂ ಆರೋಗ್ಯಾಧಿಕಾರಿ ಪ್ರಾಣೇಶ ಬಳ್ಳಾರಿ, ಪಪಂ ಸದಸ್ಯರಾದ ನಾರಾಯಣಗೌಡ ಮೆದಿಕೇರಿ, ಚಂದ್ರಶೇಖರ ನಾಲತವಾಡ, ಅಮರೇಶ ಗಾಂಜಿ, ವಿಕ್ರಮ್ ರಾಯ್ಕರ್, ವೀರನಗೌಡ ಪಾಟೀಲ್, ಅಯೂಬ್ ಖಾನ್, ನಿವೃತ್ತ ಸೈನಿಕ ಹಂಪನಗೌಡ ಬಳೂಟಗಿ, ರುದ್ರಗೌಡ ಕುಲಕರ್ಣಿ, ಯಂಕನಗೌಡ ವಿಠಲಾಪೂರ ಹಾಗೂ ಪಪಂ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳವು
ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರಿಗೆ ಬ್ಯಾಂಕ್ ಸಿಬ್ಬಂದಿಗಳಿಂದ ಕಿರುಕುಳ, ಪ್ರತಿಭಟನೆ
ಕುಕನೂರು: ಸೌಕರ್ಯವಿಲ್ಲದೇ ಹಮಾಲರ ಕಾಲೋನಿ ಅನಾಥ!
3ನೇ ಸೆಮಿಸ್ಟರ್ ಸಮಾಜಶಾಸ್ತ್ರ ಪರೀಕ್ಷೆಗೆ 1ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ವಿತರಣೆ
Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ತಮಿಳುನಾಡಿನಲ್ಲಿ ಖಾಸಗಿ ಬಸ್ ಅಪಘಾತ: ನಾಲ್ವರು ಮೃತ್ಯು, 20 ಕ್ಕೂ ಹೆಚ್ಚು ಮಂದಿ ಗಾಯ
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Manipal: ಕೆಎಂಸಿಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಕ್ರಮ
Sandalwood: ‘ಇದು ನಮ್ ಶಾಲೆ’ಯ ಹಾಡುಗಳು ಬಂತು
Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ