ಸಿಡಿಲಿಗೆ ಕುರಿಗಾಹಿ-ಎರಡು ಎತ್ತು ಸಾವು


Team Udayavani, Oct 17, 2018, 5:33 PM IST

17-october-21.gif

ಕೊಪ್ಪಳ: ಜಿಲ್ಲೆಯ ವಿವಿಧ ಹೋಬಳಿಯಲ್ಲಿ ಮಳೆ ಆರ್ಭಟಿಸಿದ್ದರೆ, ಕೆಲವೆಡೆ ತುಂತುರು ಮಳೆಯಾಗಿದೆ. ಸಿಡಿಲಿನ ಆರ್ಭಟಕ್ಕೆ ಕುರಿಗಾಹಿಯೋರ್ವ ಮೃತಪಟ್ಟಿದ್ದು, ಎರಡು ಎತ್ತು ಸಾವನ್ನಪ್ಪಿದ್ದರೆ, ರೈತನ ಬಣವೆ ಸುಟ್ಟಿದೆ. ಇನ್ನೂ ಕೆಲವು ಹೋಬಳಿಯಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗಿಲ್ಲ.

ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಮಳೆಯ ಸುಳಿವೇ ಇಲ್ಲ. ಬಿತ್ತನೆ ಮಾಡಿದ ಬೆಳೆಯಲ್ಲ ಒಣಗುತ್ತಿವೆ. ಇದರಿಂದ ರೈತರು ದಿಕ್ಕು ತೋಚದಂತಾಗಿ ವರುಣ ದೇವನಲ್ಲಿ ಮೊರೆಯಿಟ್ಟಿದ್ದರು. ಆದರೆ, ಹವಾಮಾನದಲ್ಲಾದ ಏರುಪೇರಿನಿಂದ ಜಿಲ್ಲೆಯ ಕೆಲ ಹೋಬಳಿಯಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ಇನ್ನೂ ಕೆಲವೆಡೆ ಹನಿ ಮಳೆಯೂ ಆಗಿಲ್ಲ. 

ಯಲಬುರ್ಗಾ ತಾಲೂಕಿನಲ್ಲಿ ಮಂಗಳವಾರ ಸಂಜೆ ಮಳೆ ಆರ್ಭಟಿಸಿದೆ. ಇದರಿಂದ ಯರೆ ಭಾಗದ ರೈತರು ಫುಲ್‌ ಖುಷಿಯಲ್ಲಿದ್ದಾರೆ. ಕುಕನೂರು ತಾಲೂಕಿನ ಬಳಗೇರಿಯಲ್ಲಿ ಕುರಿಗಾಹಿ ಕಳಕಪ್ಪ ಚಾಕರಿ (24) ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಕುರಿಗಾಹಿ ಕುಟುಂಬದ ಕಣ್ಣೀರಿನ ಕೂಗು ಎಲ್ಲರ ಮನ ಕರಗುವಂತಿತ್ತು. ಇನ್ನೂ ಶಿರೂರು ಗ್ರಾಮದಲ್ಲಿ ರೈತ ದೇವಪ್ಪ ಕಡಗತ್ತಿ ಅವರು ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿಟ್ಟುಕೊಂಡಿದ್ದ ಮೇವಿನ ಬಣವೆಗೂ ಸಿಡಿಲು ಬಡಿದು ಸುಟ್ಟಿದೆ. ಮಾಹಿತಿ ಅರಿತ ಅಗ್ನಿಶಾಮಕ ದಳವು ತಕ್ಷಣ ಗ್ರಾಮಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತ್ತು. ಬಹುತೇಕ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಯರೆ ಭಾಗದಲ್ಲಿ ಸಿಡಿಲಿನ ಆರ್ಭಟ ಜೋರಾಗಿತ್ತು. ಕೆಲವೆಡೆ ಭರ್ಜರಿ ಮಳೆಯಾಗಿದೆ. ಇನ್ನೂ ಮಸಾರಿ ಭಾಗದಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಕೊಪ್ಪಳ ತಾಲೂಕಿನ ಬಗನಾಳ ಸೇರಿದಂತೆ ಕೆಲವು ಗ್ರಾಮ ವ್ಯಾಪ್ತಿಯಲ್ಲಿ ಮಳೆಯಾಗಿದ್ದರೆ, ಅಳವಂಡಿ ವ್ಯಾಪ್ತಿಯಲ್ಲಿ ಮಳೆಯಿಲ್ಲ.

ಇನ್ನೂ ಕುಷ್ಟಗಿ ತಾಲೂಕಿನಲ್ಲಿ ವಕ್ಕನದುರ್ಗಾ ಗ್ರಾಮ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಸಿಡಿಲಿನ ಆರ್ಭಟ ಜೋರಾಗಿದ್ದರಿಂದ ಹನುಮಪ್ಪ ಪೂಜಾರ ಅವರಿಗೆ ಸೇರಿದ್ದ ಎರಡು ಎತ್ತುಗಳು ಸಿಡಿಲಿಗೆ ಮೃತಪಟ್ಟಿವೆ. ರೈತನು ಜಮೀನಿನ ಕೊಟ್ಟಿಗೆಯಲ್ಲಿ ಎತ್ತುಗಳನ್ನು ಕಟ್ಟಿದ್ದನು. ಆದರೆ ಮಳೆರಾಯ ಆರ್ಭಟಿಸುವ ಜೊತೆಗೆ ಸಿಡಿಲಿನ ಆರ್ಭಟಕ್ಕೆ ಸ್ಥಳದಲ್ಲೇ ರಾಸುಗಳು ಅಸುನೀಗಿವೆ. ಉಳಿದಂತೆ ಗಂಗಾವತಿ ತಾಲೂಕು ವ್ಯಾಪ್ತಿಯಲ್ಲೂ ಮಳೆಯಾಗಿಲ್ಲ. ಕನಕಗಿರಿ ಕಾರಟಗಿ ಸೇರಿದಂತೆ ಸಿದ್ದಾಪುರ ಹೋಬಳಿಯಲ್ಲಿ ತುಂತುರು ಮಳೆಯಾಗಿದ್ದು, ಬಿಟ್ಟರೆ ಅಂತಹ ದೊಡ್ಡ ಮಳೆಯೇನು ಆಗಿಲ್ಲ.

ಒಟ್ಟಾರೆ ಜಿಲ್ಲೆಯ ಯರೆ ಭಾಗದಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ಆದರೆ, ಮಸಾರಿ ಭಾಗದಲ್ಲಿ ವರುಣ ಇನ್ನೂ ಕಣ್ಣು ತೆರೆದಿಲ್ಲ. ಹೀಗಾಗಿ ಕೆಲವು ರೈತರಲ್ಲಿ ಖುಷಿಯಿದ್ದರೆ, ಇನ್ನೂ ಕೆಲವು ರೈತರಲ್ಲಿ ಮಳೆಗಾಗಿ ಜಪ ನಡೆದಿವೆ.

ಹನುಮಸಾಗರ: ಸಿಡಿಲು ಬಡಿದು 2 ಎತ್ತುಗಳು ಸಾವನ್ನಪ್ಪಿದ ಘಟನೆ ಸಮೀಪದ ವಕ್ಕಂದುರ್ಗಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಹನುಮಂತಪ್ಪ ಸತ್ಯಪ್ಪ ಪೂಜಾರ ಎಂಬುವವರಿಗೆ ಸೇರಿದ 2 ಎತ್ತುಗಳನ್ನು ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದು, ಮಧ್ಯಾಹ್ನದ ವೇಳೆ ಗುಡುಗು ಮಿಶ್ರಿತ ಮಳೆ ಪ್ರಾರಂಭವಾಗಿದೆ. ಸಿಡಿಲು ಬಡಿದು ಎತ್ತುಗಳು ಸ್ಥಳದಲ್ಲಿ ಸಾವನ್ನಪ್ಪಿವೆ. ಎತ್ತುಗಳು ಅಂದಾಜು 80 ಸಾವಿರಕ್ಕೂ ಹೆಚ್ಚಿನ ಬೆಲೆ ಬಾಳುತ್ತಿದ್ದವು ಎಂದು ರೈತ ಅಳಲು ತೋಡಿಕೊಂಡಿದ್ದು, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಪಿಎಸ್‌ಐ ನಾಗರಾಜ ಭೇಟಿ ನೀಡಿ ಮಾಹಿತಿ ಪಡೆದು ರೈತನಿಗೆ ಸಾಂತ್ವನ ಹೇಳಿದರು.

ಇದೇ ವೇಳೆ ಮಾಲಗಿತ್ತಿ ಗ್ರಾಮದ ಸಿದ್ದಪ್ಪ ಅಡಿವೆಪ್ಪ ಆಡಿನ್‌ ಅವರ ಹೊಲದಲ್ಲಿ ಕಟ್ಟಿದ್ದ 1 ಎಮ್ಮೆ ಸಿಡಿಲು ಬಡಿದು ಸಾವನ್ನಪ್ಪಿದೆ. ಅಂದಾಜು 30ಸಾವಿರ ಬೆಲೆ ಬಾಳುತ್ತಿತ್ತು ಎಂದು ರೈತ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮಾರುತಿ ಬಂಡಿ, ಗ್ರಾಮ ಲೆಕ್ಕಾಧಿಕಾರಿ ಕೆ.ಆರ್‌. ದೇಸಾಯಿ, ವೈ. ಎನ್‌. ತುಂಬದ, ದೇವೇಂದ್ರಪ್ಪ ಪೂಜಾರ, ನೀಲಪ್ಪ ಕಡಿಯವರ ಸೇರಿದಂತೆ ಗ್ರಾಮಸ್ಥರು ಇದ್ದರು.

ಯಲಬುರ್ಗಾ: ಹಿಂಗಾರು ಮಳೆಗಳು ಇನ್ನೇನು ಮುಗಿದವು ಈ ಬಾರಿ ವರುಣ ಕೈಕೊಟ್ಟು ರೈತನ ಸ್ಥಿತಿ ಚಿಂತಾಜನಕ ಎನ್ನುವಾಗಲೇ ಮಂಗಳವಾರ ಚಿತ್ತಿ ಮಳೆಯೂ ಪಟ್ಟಣ ಸೇರಿದಂತೆ ತಾಲೂಕಿನ ಯರೇಭಾಗದ ಗ್ರಾಮಗಳಲ್ಲಿ ಸ್ವಲ್ಪ ಮಳೆ ಉತ್ತಮವಾಗಿ ಸುರಿದಿದೆ. ಇದು ರೈತರಲ್ಲಿ ಆಶಾ ಭಾವನೆ ಮೂಡಿಸಿದೆ.

ಈ ಹಿಂದೆ ಯಲಬುರ್ಗಾ, ಸಂಗನಾಳ, ಕಲ್ಲೂರು ಹಾಗೂ ಯರೇ ಭಾಗದ ಗ್ರಾಮಗಳಲ್ಲಿ ಕಳೆದ 15 ದಿನಗಳಿಂದ ಬಿತ್ತನೆ ಮಾಡಿದರೂ ಬಿತ್ತನೆ ಬಳಿಕ ಮಳೆಯಾಗಲಿಲ್ಲ. ಮಳೆಯಾಗುವ ಯಾವ ಲಕ್ಷಣಗಳು ಕಾಣುತ್ತಿರಲಿಲ್ಲ. ದಿಢೀರ್‌ ನಗೆ ಮಂಗಳವಾರ ಸುರಿದ ಮಳೆಗೆ ಭೂಮಿ ತಂಪಾಯಿತು. ರೈತರಲ್ಲಿ ಮತ್ತಷ್ಟು ಆಶಾಭಾವನೆ ಚಿಗುರೊಡೆಯಿತು. ಮಳೆಯಾಗುತ್ತಿದ್ದಂತೆ ರೈತ ಸಮೂಹ ರೈತ ಸಂಪರ್ಕ ಕೇಂದ್ರಗಳತ್ತ ಧಾವಿಸಿ ಬೀಜ ಖರೀದಿಗೆ ಮುಂದಾದರು. ಎರಡು ಗಂಟೆಗಳ ಹೆಚ್ಚು ಕಾಲ ಮಳೆ ಸುರಿಯಿತು. ವಿದ್ಯುತ್‌ ಸಂಪರ್ಕದಲ್ಲಿ ವ್ಯತಯ ಉಂಟಾಗಿತ್ತು.

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.