ಕುಷ್ಟಗಿ: ಪ್ರಜಾಪ್ರಭುತ್ವ ಉಳಿವಿಗೆ ಮತ, ಪರಿಸರಕ್ಕಾಗಿ ಮರ

ಲೋಕಸಭೆ ಚುನಾವಣೆ ಪ್ರಜಾಭುತ್ವದ ಹಬ್ಬವಾಗಿದೆ

Team Udayavani, May 6, 2024, 5:17 PM IST

ಕುಷ್ಟಗಿ: ಪ್ರಜಾಪ್ರಭುತ್ವ ಉಳಿವಿಗೆ ಮತ, ಪರಿಸರಕ್ಕಾಗಿ ಮರ

ಉದಯವಾಣಿ ಸಮಾಚಾರ
ಕುಷ್ಟಗಿ:ಪ್ರಜಾಪ್ರಭುತ್ವ ಉಳಿಯಲು ಮತ ನೀಡಿ..ಪರಿಸರ ಉಳಿಯಲು ಸಸಿ ನೆಡಿ ಎನ್ನುವ ಘೋಷ ವಾಕ್ಯದ ಜಾಗೃತ ಸಂದೇಶದೊಂದಿಗೆ ಕುಷ್ಟಗಿಯ ದಾನಿ ಕ್ಲಿನಿಕ್‌ನ ಡಾ|ರವಿಕುಮಾರ ಅವರು, ತಮ್ಮ ಕ್ಲಿನಿಕ್‌ಗೆ ಆಗಮಿಸಿದ ರೋಗಿಗಳಿಗೆ ಸಸಿ ನೀಡಿ ಮೇ 7ರಂದು ಲೋಕಸಭೆ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ವಿಭಿನ್ನವಾಗಿ ಜಾಗೃತಿ ಮೂಡಿಸಿದರು.

ಪಟ್ಟಣದ ಕನಕದಾಸ ವೃತ್ತದ ಬಳಿ ಇರುವ ದಾನಿ ಕ್ಲಿನಿಕ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ರವಿ ಅಂಗಡಿ, ಸ್ವೀಪ್‌ ಸಮಿತಿ ಅಧ್ಯಕ್ಷ, ತಾಪಂ ಇಒ ನಿಂಗಪ್ಪ ಮಸಳಿ ಅವರು ಭೇಟಿ ನೀಡಿ ಡಾ| ದಾನಿ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರೋತ್ಸಾಹಿಸಿದರು.

ಇದೇ ವೇಳೆ ಮಾತನಾಡಿದ ತಹಶೀಲ್ದಾರ್‌ ರವಿ ಅಂಗಡಿ ಅವರು, ಇಂತಹ ಕಾರ್ಯಕ್ರಮಗಳಿಂದಲೇ ಉತ್ತಮ ಮತದಾನ ಗುರಿ ಮುಟ್ಟಲು ಸಾಧ್ಯವಿದೆ. ಎಲ್ಲ ಕ್ಷೇತ್ರದ ಜನರು ಸಾಮಾಜಿಕ ಬದ್ಧತೆಯೊಂದಿಗೆ ಪ್ರಜಾಭುತ್ವದ ಮತದಾನ ಹಕ್ಕು ಚಲಾಯಿಸುವುದು ಸಂವಿಧಾನದ ವಿಶೇಷ ಕೊಡುಗೆಯಾಗಿದೆ. ಈ ಜಾಗೃತಿಗೆ ತಾಲ್ಲೂಕು ಆಡಳಿತ ಧನ್ಯವಾದ ತಿಳಿಸುತ್ತದೆ ಎಂದರು. ಸ್ವೀಪ್‌ ಸಮಿತಿ ಅಧ್ಯಕ್ಷ, ತಾಪಂ ಇಒ ನಿಂಗಪ್ಪ ಮಸಳಿ ಅವರು, ಲೋಕಸಭೆ ಚುನಾವಣೆ ಪ್ರಜಾಭುತ್ವದ ಹಬ್ಬವಾಗಿದೆ. ಹಬ್ಬದ ಸಡಗರದಲ್ಲಿ ನಾವೆಲ್ಲರೂ ಭಾಗವಹಿಸಬೇಕಿದೆ. ಡಾ| ರವಿಕುಮಾರ ಮತದಾನ ವಿಭಿನ್ನ ಜಾಗೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ| ರವಿಕುಮಾರ ದಾನಿ ಮಾತನಾಡಿ, ಬಿಸಿಲಿಗೆ ನಿಡುಸುಯ್ಯುವ ಬದಲಾಗಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಕಾಳಜಿ ಅಗತ್ಯವಾಗಿದೆ. ಅದೇ ರೀತಿ ಸುಭದ್ರ ಪ್ರಜಾಪ್ರಭುತ್ವಕ್ಕೆ ಮತದಾನ ಅಗತ್ಯವಾಗಿದೆ ಎಂದರು. ಸಸಿಗಳನ್ನು ನೀಡಿದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ (ಪ್ರಭಾರಿ) ರಿಯಾಜ್‌ ಗಣಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಗ್ರೆಡ್‌-2 ತಹಶೀಲ್ದಾರ್‌ ಮುರಳೀಧರ ಮೊಕ್ತೆದಾರ, ಪ್ರಗತಿ ಪರ ಕೃಷಿಕ ರಮೇಶ ಬಳೂಟಗಿ, ಡಾ| ಬಸವರಾಜ್‌ ವಸ್ತ್ರದ್‌, ಪಿಎಸ್‌ಐ ಮುದ್ದುರಂಗಸ್ವಾಮಿ, ಡಾ| ಕುಶಾಲ ರಾಯಬಾಗಿ, ಇನ್ನರ್‌ ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಶಾರದಾ ಶೆಟ್ಟರ್‌, ವಿಠಲ್‌ ಸಾ ಮಿಸ್ಕೀನ್‌, ಬಿಆರ್‌ಪಿ ಡಾ| ಜೀವನಸಾಬ್‌ ಬಿನ್ನಾಳ, ಮಲ್ಲಿಕಾರ್ಜುನ ಬಳಿಗಾರ, ಕಿರಣ್‌ ಬಳೂಟಗಿ, ಬಸವರಾಜ ಬಳೂಟಗಿ ಇತರರಿದ್ದರು.

ಟಾಪ್ ನ್ಯೂಸ್

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

1-qeewqewqewe

Naxal ಬೆದರಿಕೆ; ಪದ್ಮಶ್ರೀ ವಾಪಸ್‌: ನಾಟಿ ವೈದ್ಯ ಹೇಳಿಕೆ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

1-reaa

I.N.D.I.A. ಸಭೆ; ಜೂ.1ರಂದು ಫ‌ಲಿತಾಂಶ ಬಳಿಕದ ಕಾರ್ಯತಂತ್ರ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಇಂದಿನಿಂದ ಎರಡು ದಿನ ಮೇ ಸಾಹಿತ್ಯ ಮೇಳ

Koppala; ಇಂದಿನಿಂದ ಎರಡು ದಿನ ಮೇ ಸಾಹಿತ್ಯ ಮೇಳ

Koppala; ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆ

Koppala; ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆ

13

Politics: ಕಾಂಗ್ರೆಸ್ ಗ್ಯಾರಂಟಿಗಳಲ್ಲಿಯೇ ಕಾಲಹರಣ ಮಾಡುತ್ತಿದೆ: ಎನ್ ರವಿಕುಮಾರ್ ವಾಗ್ದಾಳಿ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

1-qweqwe

Kushtagi: ಸಿಡಿಲಿಗೆ ಬಿತ್ತನೆ ಕಾರ್ಯ ನಿರತ ರೈತ ಬಲಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

sensex

76,000 ಅಂಕ ತಲುಪಿದ್ದ ಬಿಎಸ್‌ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ

arrested

Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.