ತುಂಗಭದ್ರಾ ಒಡಲಲ್ಲಿ ಮರಳು ಅಕ್ರಮ ಸಾಗಾಟ


Team Udayavani, Mar 21, 2020, 3:52 PM IST

ತುಂಗಭದ್ರಾ ಒಡಲಲ್ಲಿ  ಮರಳು ಅಕ್ರಮ ಸಾಗಾಟ

ಸಾಂದರ್ಭಿಕ ಚಿತ್ರ

ಸಿದ್ದಾಪುರ: ಸಮೀಪದ ಕಕ್ಕರಗೋಳ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಾಟ ನಿರಾತಂಕವಾಗಿ ನಡೆಯುತ್ತಿದ್ದು, ಈ ಅಕ್ರಮ ಮರಳು ಸಾಗಾಟ ತಡೆಯಲು ರಚಿಸಿರುವ ಜಾಗೃತ ದಳ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದರಿಂದ ಸರಕಾರದ ಖಜಾನೆ ಸೇರಬೇಕಾದ ಕೋಟ್ಯಂತರ ರೂ. ಮರಳು ಕಳ್ಳರ ಪಾಲಾಗುತ್ತಿದೆ.

ಮರಳು ಸಾಗಾಟ ಮಾಡಲು ಯಾವುದೇ ಪರವಾನಗಿ ಇಲ್ಲದೇ ಕಕ್ಕರಗೋಳ ಬಳಿಯ ತುಂಗಭದ್ರಾ ನದಿಯಲ್ಲಿ ನೂರಾರು ಕೂಲಿ ಕಾರ್ಮಿಕರ ಮೂಲಕ ನಿತ್ಯ 400ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳ ಮೂಲಕ ಅಕ್ರಮ ಮರಳು ಸಾಗಾಟ ಜಿಲ್ಲೆ ಸೇರಿದಂತೆ ಹೊರಜಿಲ್ಲೆಗಳಿಗೂ ಸಾಗಾಟ ನಡೆದಿದೆ. ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕಾದ ಸ್ಥಳೀಯ ಪೊಲೀಸ್‌, ಗ್ರಾಪಂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿ ಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಇನ್ನೂ ಸ್ಥಳೀಯ ಕೆಲವರು ದೇವಸ್ಥಾನದ ಜೀರ್ಣೋದ್ಧಾರದ ಹೆಸರಲ್ಲಿ ಕಾನೂನು ಬಾಹಿರವಾಗಿ ಟ್ರ್ಯಾಕ್ಟರ್‌ ಒಂದಕ್ಕೆ 200 ರೂ. ವಸೂಲಿ ಮಾಡುತ್ತಿದ್ದು, ಮತ್ತು ಟ್ರ್ಯಾಕ್ಟರ್‌ಗೆ ಮರಳು ತುಂಬಿಸಿಕೊಡಲು 800 ರೂ. ಒಟ್ಟು 1,000 ರೂ. ಹಣ ವಸೂಲಿ ಮಾಡುತ್ತಿದ್ದಾರೆ. ದಿನವೊಂದಕ್ಕೆ 300ರಿಂದ 400 ಟ್ರ್ಯಾಕ್ಟರ್‌ ಗಳ ಮರಳು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.

ಹದಗೆಟ್ಟ ರಸ್ತೆ: ಈ ಅಕ್ರಮ ಮರಳು ಸಾಗಾಟದಿಂದಾಗಿ ಬೆನ್ನೂರು, ಉಳೇನೂರು ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು, ಎಲ್ಲೆಂದರಲ್ಲಿ ಬೃಹತ್‌ ಗುಂಡಿಗಳು ಬಿದ್ದಿವೆ. ಅಲ್ಲದೇ ನಿತ್ಯ ಹಗಲು-ರಾತ್ರಿ ಎನ್ನದೇ ಮರಳು ಸಾಗಾಟದಿಂದಾಗಿ ರಸ್ತೆ ಪಕ್ಕಪಕ್ಕದವರಿಗೆ ಟ್ರ್ಯಾಕ್ಟರ್‌ ಶಬ್ಧದಿಂದ ನೆಮ್ಮದಿ ಇಲ್ಲದಂತಾಗಿದೆ. ಅತಿಯಾಗಿ ವೇಗ (ಓವರ್‌ ಸ್ಪಿಡ್‌)ನಿಂದ ಚಲಿಸುತ್ತಿರುವ ಟ್ರ್ಯಾಕ್ಟರ್‌ಗಳಿಂದಾಗಿ ಸಾರ್ವಜನಿಕರು ರಸ್ತೆಮೇಲೆ ಓಡಾಡೋದಕ್ಕೂ ಭಯ ಪಡುತ್ತಿದ್ದಾರೆ. ಈ ಹಿಂದೆ ಅಕ್ರಮ ಮರಳು ಟಿಪ್ಪರ್‌ ಹರಿದು ಉಳೇನೂರ ಕ್ಯಾಂಪ್‌ನ ವ್ಯಕ್ತಿ ಮೃತಪಟ್ಟಿದ್ದರು. ಇತ್ತೀಚೆಗೆ ಅದೇ ಕ್ಯಾಂಪ್‌ನ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆಗಳು ನಡೆದರು ಪೊಲೀಸ್‌ ಇಲಾಖೆ ಮತ್ತು ವಿವಿಧ ಇಲಾಖೆಯವರು ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ಸಾರ್ವಜನಿಕರು ಅಧಿ ಕಾರಿಗಳ ಮೇಲೆ ಆರೋಪಿಸಿತ್ತಾರೆ.

ನಿರಂತರ ಮರಳು ಸಾಗಾಟದಿಂದಾಗಿ ಜಲಚರ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅಲ್ಲದೇ ಇದೆ ತುಂಗಭದ್ರಾ ನದಿಯ ನೀರು ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಅನೇಕ ಹಳ್ಳಿ ಮತ್ತು ಪಟ್ಟಣಗಳಿಗೆ ಕುಡಿಯುವ ನೀರಿನ ಮೂಲವಾಗಿದೆ. ನಿರಂತರ ಮರಳು ಸಾಗಾಟದಿಂದ ನೀರು ಕಲುಷಿತಗೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

 

ಕಕ್ಕರಗೋಳ ಬಳಿ ಹರಿಯುವ ತುಂಗಭದ್ರಾ ನದಿ ಪಾತ್ರದಿಂದ ಅಕ್ರಮ ಮರಳು ಸಾಗಾಟದ ಬಗ್ಗೆ ಮಾಹಿತಿ ಬಂದಿದ್ದು, ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.– ಸುರೇಶ ತಳವಾರ, ಸಿಪಿಐ

 

-ಸಿದ್ದನಗೌಡ ಹೊಸಮನಿ

ಟಾಪ್ ನ್ಯೂಸ್

2-DKSHI

Subramanya: ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

Lok Sabha Speaker: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ. ಸುರೇಶ್ ನಾಮಪತ್ರ ಸಲ್ಲಿಕೆ

Speaker Election: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ.ಸುರೇಶ್ ನಾಮಪತ್ರ ಸಲ್ಲಿಕೆ

9

ಡಿಸೆಂಬರ್‌ 20, 21 ಹಾಗೂ 22 ರಂದು ಮಂಡ್ಯ ಸಾಹಿತ್ಯ ಸಮ್ಮೇಳನ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

8

Bollywood: ಮದ್ವೆ ದಿನವೇ ಕುಡಿದು ಟೈಟ್‌ ಆದ ಸೋನಾಕ್ಷಿ ಗಂಡ; ಎಣ್ಣೆ ಪಾರ್ಟಿ ಎಂದ ನೆಟ್ಟಿಗರು

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

Udupi: ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಗರುಡ ಗ್ಯಾಂಗ್ ವಾರ್ ಆರೋಪಿಗಳು

Udupi: ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಗರುಡ ಗ್ಯಾಂಗ್ ವಾರ್ ಆರೋಪಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kushtagi

Kushtagi: ವಿದ್ಯುತ್ ಪ್ರವಹಿಸಿದ ಸ್ಟಾರ್ಟರ್ ಬಟನ್ ಸ್ಪರ್ಶಿಸಿ ರೈತ ದುರ್ಮರಣ

Minister Shivraj Thangadagi deeply mourns the demise of Dr. Kamala Hampana

ಡಾ.ಕಮಲಾ ಹಂಪನಾ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ

1-gg

CM ವಿರುದ್ಧ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಟೀಕೆ: ಕಾಂಗ್ರೆಸ್‌ ಬಣಗಳ ಪ್ರತಿಭಟನೆ

16-koppala

ತೈಲ ಬೆಲೆ ಏರಿಕೆ ಖಂಡಿಸಿ ಜೂ.20 ರಂದು ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ: ಗುಳಗಣ್ಣನವರ್

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

ಮುಂಡ್ಕೂರು: ರಸ್ತೆಯಲ್ಲಿ ಬೃಹತ್‌ ಹೊಂಡ- ವಾಹನ ಸಂಚಾರಕ್ಕೆ ಕಿರಿಕಿರಿ

ಮುಂಡ್ಕೂರು: ರಸ್ತೆಯಲ್ಲಿ ಬೃಹತ್‌ ಹೊಂಡ- ವಾಹನ ಸಂಚಾರಕ್ಕೆ ಕಿರಿಕಿರಿ

ಬೈಂದೂರು: ಬಹುಕೋಟಿ ಬಸ್‌ ನಿಲ್ದಾಣ ಜಾನುವಾರು ತಂಗುದಾಣ!

ಬೈಂದೂರು: ಬಹುಕೋಟಿ ಬಸ್‌ ನಿಲ್ದಾಣ ಜಾನುವಾರು ತಂಗುದಾಣ!

Udayavani Campaign: ಕಾರ್ಕಳ-ಮೊದಲು 70, ಈಗ 20!

Udayavani Campaign: ಕಾರ್ಕಳ-ಮೊದಲು 70, ಈಗ 20!

12

Sandalwood: ಒಂದು ಆತ್ಮ ಮೂರು ಜನ್ಮ

2-DKSHI

Subramanya: ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.