ಮಕ್ಕಳೇ ಶಾಲೆಯಿಂದ ಹೊರಗುಳಿಯಬೇಡಿ


Team Udayavani, Jan 27, 2019, 10:19 AM IST

child.jpg

ಕೆ.ಆರ್‌.ಪೇಟೆ: ಪ್ರತಿಭಾವಂತ ಮಕ್ಕಳ ಕೈಯಲ್ಲಿ ಪೆನ್ಸಿಲ್‌ ಮಸ್ಸಿನಲ್ಲಿ ಕನಸು ಇದ್ದರೆ ಸಾಕು ಅವರು ಏನೂ ಬೇಕಾದರೂ ಸಾಧನೆ ಮಾಡುತ್ತಾರೆ. ನಾವುಗಳು ಅವರಿಗೆ ಸೂಕ್ತ ವೇದಿಕೆ ನಿರ್ಮಾಣ ಮಾಡಿಕೊಡಬೇಕಷ್ಟೇ ಎಂದು ಬೆಂಗಳೂರಿನ ಆರ್‌.ಎಫ್.ಸಿ ಸಂಸ್ಥೆಯ ಸದಸ್ಯ ಆರ್‌. ರಾಖೇಶ್‌ ಹೇಳಿದರು.

ತಾಲೂಕಿನ ಅಂಬಿಗರಹಳ್ಳಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪುರ, ಅಂಬಿಗರಹಳ್ಳಿ, ಸಂಗಾಪುರ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಕಲಿಕಾ ಪರಿಕರಗಳನ್ನು ವಿತರಿಸಿ ಮಾತ ನಾಡಿ, ಸಮಾಜದಲ್ಲಿ ಗೌರವ ಸ್ಥಾನದಲ್ಲಿರುವ ಅತ್ಯಂತ ಪ್ರತಿಭಾವಂತ ವ್ಯಕ್ತಿಗಳು ಹಾಗೂ ಉನ್ನತ ಹುದ್ದೆಯಲ್ಲಿರುವ ಗಣ್ಯ ವ್ಯಕ್ತಿಗಳು ಗ್ರಾಮೀಣಭಾಗದಿಂದ ಬಂದವರೇ ಆಗಿದ್ದಾರೆ ಎಂದರು.

ಈಗಲೂ ಪ್ರತಿಭಾವಂತ ಮಕ್ಕಳು ಗ್ರಾಮೀಣ ಭಾಗದ ಬಡ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದು ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ಸ್ಥಳೀಯ ಸರ್ಕಾರಿ ಶಾಲೆಗೆ ಸೇರಿಕೊಳ್ಳುತ್ತಿದ್ದಾರೆ. ನಾವುಗಳು ಇಂತಹ ಮಕ್ಕಳಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ತಂಡ ರಚನೆ ಮಾಡಿಕೊಂಡು ಅಳಿಲು ಸೇವೆ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಾಲೆಗೆ ಬರಬೇಕು ಎಂಬುದೇ ನಮ್ಮ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಸೋಮನಹಳ್ಳಿ ವ್ಯಾಪ್ತಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್‌.ಐ.ನಾಗೇಂದ್ರ ಮಾತನಾಡಿ, ಆರೋಗ್ಯ, ಐಟಿಬಿಟಿ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಸಮಾನ ಮನಸ್ಸನ್ನು ಹೊಂದಿರುವ ಯುವಕರ ತಂಡ ಆರ್‌.ಎಫ್.ಸಿ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿರುವ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗಲು 170 ಕಿ.ಮೀ ದೂರದ ಊರಿನಿಂದ ಬಂದಿರುವ ಶಿಕ್ಷಣ ಆಶಕ್ತಿರಾಗಿರುವ ಅವರಿಗೆ ನಾನು ಋಣಿಯಾಗಿರುತ್ತೇನೆ. ಇವರಂತೆಯೇ ಎಲ್ಲರೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೊಡಿಸಿದೆ ನಮ್ಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯ ಕೊರತೆಯಾಗುವುದಿಲ್ಲ ಎಂದರು.

ಎಸ್‌.ಡಿ.ಎಂ.ಸಿ ಅಧ್ಯಕ್ಷ ಅಶ್ವಥ್‌, ಆರ್‌.ಎಫ್.ಸಿ ಸಂಸ್ಥೆಯ ಮಧು, ಸಂಜಯ್‌, ಅಂಬಿಗರಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಎಸ್‌.ಐಯ್ಯಣ್ಣ, ಪುರ ಶಾಲೆಯ ಮುಖ್ಯ ಶಿಕ್ಷಕ ರಾಜಣ್ಣ, ಸಂಗಾಪುರ ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ್‌ಮೂರ್ತಿ, ಶಿಕ್ಷಕರಾದ ಪಿ.ಎನ್‌.ರಾಜಶೇಖರ್‌, ಸುಶೀಲಮ್ಮ, ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆರ್‌.ಎಫ್.ಸಿ ಸಂಸ್ಥೆಯ ಪದಾಧಿಕಾರಿಗಳು ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿದರು.

ಟಾಪ್ ನ್ಯೂಸ್

ಸೈನಿಕನ ಮಗಳ ಹೆಸರೇ “ಸೈನ್ಯ’!

ಸೈನಿಕನ ಮಗಳ ಹೆಸರೇ “ಸೈನ್ಯ’!

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

ಭದ್ರಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆ?

ಭದ್ರಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆ?

ಕಣಕ್ಕಿಳಿದ ನಾಯಕರು; ರಂಗೇರುತ್ತಿದೆ ಪರಿಷತ್‌ ಚುನಾವಣ ಕಣ

ಕಣಕ್ಕಿಳಿದ ನಾಯಕರು; ರಂಗೇರುತ್ತಿದೆ ಪರಿಷತ್‌ ಚುನಾವಣ ಕಣ

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

ಒಮಿಕ್ರಾನ್‌ ನಿಗ್ರಹಕ್ಕೆ ಸಿದ್ಧತೆ; ತಪಾಸಣೆ, ಸೋಂಕು ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

ಒಮಿಕ್ರಾನ್‌ ನಿಗ್ರಹಕ್ಕೆ ಸಿದ್ಧತೆ; ತಪಾಸಣೆ, ಸೋಂಕು ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

ಕೋವಿಡ್‌ ನಡುವೆ ಸಿನೆಮಾ ಬಿಡುಗಡೆ ಸವಾಲು

ಕೋವಿಡ್‌ ನಡುವೆ ಸಿನೆಮಾ ಬಿಡುಗಡೆ ಸವಾಲು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀರಂಗಪಟ್ಟಣ: ಪ್ರತ್ಯೇಕ ಘಟನೆಯಲ್ಲಿ 3 ಸಾವು

ಶ್ರೀರಂಗಪಟ್ಟಣ: ಪ್ರತ್ಯೇಕ ಘಟನೆಯಲ್ಲಿ 3 ಸಾವು

ಪರಿಷತ್‌ ಫೈಟ್‌: ದಳದಲ್ಲಿ ಭಿನ್ನಮತ

ಪರಿಷತ್‌ ಫೈಟ್‌: ದಳದಲ್ಲಿ ಭಿನ್ನಮತ

1-fds

ಹಕ್ಕುಗಳಿಗೆ ತೊಂದರೆಯದಾಗ ರಕ್ಷಣೆಗೆ ನಿಲ್ಲುವುದು ಪ್ರತಿಯೊಬ್ಬನ ಕರ್ತವ್ಯ: ಕೆ.ಸಿ.ಎನ್.ಸುರೇಶ್

ದುಷ್ಕರ್ಮಿಗಳಿಂದ ಬೆಳೆ ನಾಶ

ದುಷ್ಕರ್ಮಿಗಳಿಂದ ಬೆಳೆ ನಾಶ

ಜಿಲ್ಲಾ ಪಂಚಾಯತ್‌ ಸಮೀಕ್ಷೆ

ಮಾನ್ಯುಯಲ್‌ ಸ್ಕ್ಯಾವೆಂಜರ್‌ ಸಮೀಕ್ಷೆ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಸೈನಿಕನ ಮಗಳ ಹೆಸರೇ “ಸೈನ್ಯ’!

ಸೈನಿಕನ ಮಗಳ ಹೆಸರೇ “ಸೈನ್ಯ’!

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

ಭದ್ರಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆ?

ಭದ್ರಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆ?

ಕಣಕ್ಕಿಳಿದ ನಾಯಕರು; ರಂಗೇರುತ್ತಿದೆ ಪರಿಷತ್‌ ಚುನಾವಣ ಕಣ

ಕಣಕ್ಕಿಳಿದ ನಾಯಕರು; ರಂಗೇರುತ್ತಿದೆ ಪರಿಷತ್‌ ಚುನಾವಣ ಕಣ

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.