ಕರ್ನಾಟಕಕ್ಕೆ ನುಸುಳುತಿದೆ ಕೇರಳದ ತ್ಯಾಜ್ಯ!

Team Udayavani, Dec 31, 2019, 3:23 PM IST

mandya-tdy-1

ಶ್ರೀರಂಗಪಟ್ಟಣ: ಕೇರಳದಲ್ಲಿ ನಿಷೇಧಿಸಿರುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಅಕ್ರಮವಾಗಿ ಕರ್ನಾಟಕಕ್ಕೆ ಸಾಗಣೆ ಮಾಡುತ್ತಿದ್ದ ಕೇರಳ ರಾಜ್ಯಕ್ಕೆ ಸೇರಿರುವ ಕೆಎಲ್‌ 19, 2765 ನಂಬರಿನ 10 ಚಕ್ರದ ಲಾರಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಆಲೆಮನೆಗಳಿಗೆ ಪ್ಲಾಸ್ಟಿಕ್‌ ತ್ಯಾಜ್ಯ: ತಾಲೂಕಿನ ಕಿರಂಗೂರು ಗ್ರಾಮದ ಪೆಟ್ರೋಲ್‌ ಬಂಕ್‌ ಬಳಿ ಕೇರಳ ರಾಜ್ಯ ನಿಷೇಧ ಮಾಡಿರುವ ಪ್ಲಾಸ್ಟಿಕ್‌ ಚಪ್ಪಲಿ, ಕವರ್‌, ಮದ್ಯದ ಬಾಟಲ್‌, ನೀರಿನ ಬಾಟಲ್‌, ಬಟ್ಟೆ ಚೂರು ಸೇರಿದಂತೆ ಅನುಪಯುಕ್ತ ತ್ಯಾಜ್ಯ ತುಂಬಿದ ಲಾರಿಯನ್ನು ಜಪ್ತಿ ಮಾಡಿ ಪೊಲೀಸ್‌ ಠಾಣೆ ಎದುರು ನಿಲ್ಲಿಸಿದ್ದಾರೆ. ಕೇರಳ ರಾಜ್ಯದ ಅನುಪಯುಕ್ತ ತ್ಯಾಜ್ಯವನ್ನು ಕರ್ನಾಟಕ್ಕೆ ತಂದು ರಸ್ತೆ ಬದಿಗಳಲ್ಲಿ ಬಿಸಾಡಿ, ಆಲೆ ಮನೆಗಳಿಗೆ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಲೆಮನೆಗಳಲ್ಲಿ ರಚ್ಚಿನ ಬದಲು ತ್ಯಾಜ್ಯ ಬಳಕೆ: ಆಲೆ ಮನೆಗಳಲ್ಲಿ ಬೆಲ್ಲ ತಯಾರಿಸುವ ಒಲೆಗಳಿಗೆ ರಚ್ಚಿನ ಬದಲು ಈ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಲಾಗುತ್ತಿದೆ. ಇದರಿಂದ ಅಧಿಕ ಪ್ರಮಾಣದ ರಾಸಾಯನಿಕ ಮಿಶ್ರಿತ ಕೆಟ್ಟ ಹೊಗೆ ಹೊರಬರುತ್ತಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶ ವಾಯುಮಾಲಿನ್ಯವಾಗುತ್ತಿದ್ದು, ಸಾರ್ವಜ ನಿಕರ ಉಸಿರಾಟಕ್ಕೆ ಹಾಗೂ ಪರಿಸರಕ್ಕೆ ಹಾನಿಕರವಾಗಿದೆ. ನೆರೆ ರಾಜ್ಯದ ತ್ಯಾಜ್ಯಗಳನ್ನು ತಂದು ನಮ್ಮ ರಾಜ್ಯದ ನೈರ್ಮಲ್ಯ ಹಾಳು ಮಾಡುತ್ತಿರುವವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಲಾರಿ ವಶಕ್ಕೆ, ದೂರು ದಾಖಲು: ಅಕ್ರಮವಾಗಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಾಗಣೆ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿ ಕೊಂಡಿದ್ದು, ಶ್ರೀರಂಗಪಟ್ಟಣ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪೊಲೀಸರ ವಶದಲ್ಲಿದ್ದ ಲಾರಿ ಮತ್ತು ಚಾಲಕರಿಂದ ಮಾಹಿತಿ ಪಡೆದು, ಕರ್ನಾಟಕಕ್ಕೆ ತರುತ್ತಿದ್ದ ಪ್ಲಾಸ್ಟಿಕ್‌ ತ್ಯಾಜ್ಯ ಸೇರಿದಂತೆ ಪರಿಶೀಲನೆ ನಡೆಸಿ, ಇಲ್ಲಿನ ಜಿಲ್ಲೆಯ ಆಲೆಮನೆಯೊಂದಿಗೆ ಸಂಪರ್ಕ ವಿಟ್ಟುಕೊಂಡು ತ್ಯಾಜ್ಯ ರವಾನೆ ಹಾಗೂ ತೆಗೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ಪಡೆದುಕೊಂಡು ನಂತರ ಸಾರ್ವಜನಿಕರ ದೂರಿನನ್ವಯ ಪೊಲೀಸರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಗಾವಹಿಸಲು ಅಧಿಕಾರಿಗಳಿಗೆ ಆದೇಶ: ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳಿಗೆ ಇಂತಹ ತ್ಯಾಜ್ಯ ಬಳಸುವ ಪ್ರದೇಶಗಳ ಮೇಲೇ ನಿಗಾ ವಹಿ ಸಲು ಈಗಾಗಲೇ ತಿಳಿಸಲಾಗಿದೆ. ಕಾನೂನು ಬಾಹಿರ ವಾಗಿ ತ್ಯಾಜ್ಯಗಳನ್ನು ಸಾಗಾಟ ಮಾಡುವರ ವಿರುದ್ಧ ಕ್ರಮಕ್ಕೆ ಈಗಾಗಲೇ ಠಾಣೆಗೆ ದೂರು ನೀಡಲಾಗಿದೆ ಎಂದು ಪರಿಸರ ಮಾಲೀನ್ಯ ನಿಯಂತ್ರಣ ಸಹಾಯಕ ಅಧಿಕಾರಿ ಅಶ್ವಿ‌ನಿ ತಿಳಿಸಿದ್ದಾರೆ.

ದಂಧೆ ಮಾಡಿಕೊಂಡಿರುವ ಮಧ್ಯವರ್ತಿಗಳು :  ಪ್ರತಿನಿತ್ಯ ಹತ್ತಾರು ಲಾರಿಗಳ ಮೂಲಕ ಕೇರಳದ ಕಾರ್ಖಾನೆಗಳಲ್ಲಿ ಬಳಸಿ, ಬಿಸಾಡುವ ಅನುಪಯುಕ್ತ ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ ಮಾಡಲು ಹಲವು ಮಧ್ಯವರ್ತಿ ಗಳು ಈ ದಂಧೆಯಲ್ಲಿ ತೊಡಗಿದ್ದಾರೆ. ಮಧ್ಯವರ್ತಿಗಳು ತಮ್ಮ ರಾಜ್ಯದಲ್ಲಿ ನಿಷೇಧವಾಗಿರುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕರ್ನಾಟಕಕ್ಕೆ ಸಾಗಿಸಲು ಲಾರಿಗಳಿಗೆ ದುಪ್ಪಟ್ಟುಬಾಡಿಗೆ ನೀಡಿ ಕಳುಹಿಸುತ್ತಿದ್ದಾರೆ.ಇಲ್ಲಿಗೆ ತಂದ ಲಾರಿ ಮಾಲೀಕರು ಹಾಗೂ ಚಾಲಕರು, ಹೆದ್ದಾರಿ, ರಸ್ತೆಗಳ ಪಕ್ಕ ಹಾಗೂ ಆಲೆ ಮನೆಗಳಿಗೆ ಸಾಗಾಣೆ ಮಾಡಿ ಪರಿಸರ ಹಾಳುಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಹೊರ ರಾಜ್ಯ ಕೇರಳದಿಂದ ಪ್ರತಿ ನಿತ್ಯ ಲಾರಿಗಳ ಮೂಲಕ ತ್ಯಾಜ್ಯ ತಂದು ಸುರಿಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಕಾನೂನು ಬಾಹಿರವಾಗಿದ್ದು, ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಕೃಷ್ಣಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KRS Dam ಭರ್ತಿಗೆ ಒಂದೇ ಅಡಿ! 45 ವರ್ಷಗಳಲ್ಲಿ 32 ಬಾರಿ ಭರ್ತಿ; ಜು. 27ಕ್ಕೆ ಸಿಎಂ ಬಾಗಿನ

KRS Dam ಭರ್ತಿಗೆ ಒಂದೇ ಅಡಿ! 45 ವರ್ಷಗಳಲ್ಲಿ 32 ಬಾರಿ ಭರ್ತಿ; ಜು. 27ಕ್ಕೆ ಸಿಎಂ ಬಾಗಿನ

KRS Dam: ಶೀಘ್ರ ಕೆಆರ್‌ಎಸ್‌ ಡ್ಯಾಂ ಭರ್ತಿ 92 ಗ್ರಾಮಗಳಲ್ಲಿ ಪ್ರವಾಹ ಭೀತಿ

Cheluvaraya-swamy

Cauvery Water: ಎಚ್‌ಡಿಕೆ ಕಾವೇರಿ ಸಮಸ್ಯೆ ಬಗೆಹರಿಸಿದ್ರೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ

HDK

Cauvery Water Problem; ಸಾಯುವುದರೊಳಗೆ ಕಾವೇರಿ ಸಮಸ್ಯೆಗೆ ಮುಕ್ತಿ: ಎಚ್‌ಡಿಕೆ

1-eee

Mandya; ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.