ಪಡಿತರ ವಿತರಣೆಗೆ ಸರ್ವರ್‌ ಸಮಸ್ಯೆ!

ಹಳ್ಳ ಹಿಡಿದ ಪಡಿತರ ವಿತರಣೆ ಅಂತರ್ಜಾಲ „ ಪಡಿತರದಾರರಿಗೆ ನಾಳೆ ಬಾ ಎನ್ನುವ ಸ್ಥಿತಿ

Team Udayavani, Jan 23, 2020, 5:30 PM IST

ಮಂಡ್ಯ: ಪಡಿತರ ವಿತರಣೆ ವ್ಯವಸ್ಥೆಗೆ ಸರ್ವರ್‌ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದಿನವಿಡೀ ಸರ್ವರ್‌ ಸಂಪರ್ಕ ದೊರೆಯದೆ ಪಡಿತರದಾರರು ಪರದಾಡುವಂತಾಗಿದೆ. ಆಹಾರ ಪದಾರ್ಥಗಳಿಗೆ ದಿನವಿಡೀ ಕಾದು ಕುಳಿತರೂ ಸಿಗುತ್ತಿಲ್ಲ. ಸರ್ವರ್‌ ಸಮಸ್ಯೆಯಿಂದ ಪಡಿತರ ವಿತರಣೆ ಜಾಲ ಹಳ್ಳ ಹಿಡಿಯುಂತಾಗಿದೆ. ಪಡಿತರ ಪಡೆಯಲು ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ದಾರರು ದಿನವಿಡೀ ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುತ್ತಿದ್ದಾರೆ.

ಅಂಗಡಿಯೇನೋ ತೆರೆದಿರುತ್ತದೆ. ಆದರೆ, ಸರ್ವರ್‌ ಮಾತ್ರ ಇರುವುದಿಲ್ಲ. ಪಡಿತರದಾರರು ಹೆಬ್ಬೆಟ್ಟು (ಥಂಬ್‌ ಇಂಪ್ರಶನ್‌) ಕೊಟ್ಟರಷ್ಟೇ ಪಡಿತರ ಆಹಾರ ಧಾನ್ಯ ವಿತರಣೆ ಕೊಡಲು ಸಾಧ್ಯ. ಸರ್ವರ್‌ ಸಮಸ್ಯೆಯಿಂದ ಫ‌ಲಾನುಭವಿಗಳಿಂದ ಹೆಬ್ಬೆಟ್ಟು ತೆಗೆದು ಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪಡಿತರ ಅಂಗಡಿ ಮಾಲೀಕರು, ಪಡಿತರದಾರರು ತ್ರಿಶಂಕು ಪರಿಸ್ಥಿತಿ ಎದುರಿಸು ವಂತಾಗಿದೆ. ಪಡಿತರ ಪಡೆಯಲು ಚೀಲ ಹಿಡಿದು ಬರುವ ಕಾರ್ಡ್‌ ದಾರರು ದಿನವಿಡೀ ಕಾದರೂ ಪಡಿತರ ಪದಾರ್ಥಗಳು ಸಿಗುತ್ತಿಲ್ಲ.
ಕೂಲಿಕಾರರ ಪರಿಸ್ಥಿತಿ ಇನ್ನಷ್ಟು ಶೋಚನೀಯ ವಾಗಿದೆ. ಪಡಿತರ ಕ್ಕಾಗಿ ಕಾದು ಕೂರುವ ಅವರು ಇತ್ತ ಪಡಿತರವೂ ಇಲ್ಲ, ಮತ್ತೂಂದೆಡೆ ಕೂಲಿಯೂ ಸಿಗದೆ ಒ¨ªಾಡುವಂತಾಗಿದೆ. ತನ್ಮಧ್ಯೆ ಬೆಳಗ್ಗೆಯಿಂದ ಕಂಪ್ಯೂಟರ್‌ ಎದುರು ಕುಳಿತರೂ “ದಿಸ್‌ ಸೈಟ್‌ ಕಾಂಟ್‌ ಬೀ ರೀಚ್‌x’
ಎಂದು ಪರದೆ ಮೇಲೆ ಕಾಣಿಸಿಕೊಳ್ಳುವ ಮೆಸೆಜ್‌ ಓದಿ ಓದಿ ಸುಸ್ತಾಗಿದೆ ಎನ್ನುತ್ತಾರೆ ಪಡಿತರ ವಿತರಕರು. ಇದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸರ್ವರ್‌ ಅವಾಂತರದ ವಾಸ್ತವದ ಸ್ಥಿತಿ. ಕಳೆದ 15-20 ದಿನಗಳಿಂದ ಸರ್ವರ್‌ ನರ್ವಸ್‌ ಆಗಿದ್ದು, ಫ‌ಲಾನುಭವಿಗಳು ಪಡಿತರ ಅಂಗಡಿ ಗಳ ಮುಂದೆ ನಿಂತು ನಿಂತು ಸೋತು “ನಾಳೆ ಬಾ’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಪಡಿತರ ಕಾರ್ಡ್‌ ಇರುವ ಎಲ್ಲ ಸದಸ್ಯರ ಬೆರಳಚ್ಚು ಪಡೆಯಲು (ಕೆವೈಸಿ) ಪ್ರತ್ಯೇಕ ಸರ್ವರ್‌ ಲೈನ್‌ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಇಲಾಖೆ, ಈವರೆಗೂ ಯಾವುದೇ ಬೆಳವಣಿಗೆಗಳು ಕಾಣದೆ, ಹಳೆಯ ಸರ್ವರ್‌ ಕೂಡ ಡೌನ್‌ ಎಂದು ಕಾಣಿಸಿಕೊಂಡು ವಿತರಣೆ ವ್ಯವಸ್ಥೆಗೆ ಲಕ್ವಾ ಹೊಡೆದಂತಿದೆ. ಇಷ್ಟೊತ್ತಿಗೆ ಶೇ.70-75 ರಷ್ಟು ಆಹಾರ ಧಾನ್ಯ ವಿತರಣೆಯಾಗ ಬೇಕಿತ್ತು. ಆದರೆ, 30 ರಿಂದ 35ರಷ್ಟು ಮಾತ್ರ ವಿತರಣೆಯಾಗಿರುವು ದನ್ನು ಇಲಾಖೆ ವೆಬ್‌ಸೈಟ್‌ನ ಅಂಕಿ-ಅಂಶಗಳೇ ಸಾಕ್ಷೀಕರಿಸುತ್ತಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ