ಡ್ರಾಪ್‌ ನೆಪದಲ್ಲಿ ಪ್ರಯಾಣಿಕರ ದರೋಡೆ

ಪ್ರಯಾಣಿಕರ ಅಡ್ಡಗಟ್ಟಿ ಕಾರಿಗೆ ಹತ್ತಿಸಿಕೊಂಡು ದರೋಡೆ ಮಾಡುತ್ತಿದ್ದವನ ಬಂಧನ

Team Udayavani, May 12, 2019, 1:06 PM IST

ನಾಗಮಂಗಲ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ವೃತ್ತ ನಿರೀಕ್ಷಕ ನಂಜಪ್ಪ ನೇತೃತ್ವದ ನಾಗಮಂಗಲ ಪೊಲೀಸರು.

ನಾಗಮಂಗಲ: ಡ್ರಾಪ್‌ ಕೊಡುವ ನೆಪದಲ್ಲಿ ಪ್ರಯಾಣಿಕರನ್ನು ಕಾರಿಗೆ ಹತ್ತಿಸಿ ಕೊಂಡು ಚಾಕು ತೋರಿಸಿ ದರೋಡೆ ಮಾಡುತ್ತಿದ್ದವರ ಪೈಕಿ ಒಬ್ಬನನ್ನು ನಾಗಮಂಗಲ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ವೆಂಕಟೇಶ ಬಂಧಿತ. ಈತ ತನ್ನ ಸಹಚರ ರೊಂದಿಗೆ ಹೆದ್ದಾರಿಯಲ್ಲಿ ದರೋಡೆ ನಡೆಸುತ್ತಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀ ಯ ಹೆದ್ದಾರಿಯಲ್ಲಿ ನಿಂತಿದ್ದ ಪ್ರಯಾ ಣಿಕರನ್ನು ಡ್ರಾಪ್‌ ನೀಡುತ್ತೇವೆಂದು ಕಾರಿನಲ್ಲಿ ಹತ್ತಿಸಿಕೊಂಡು ಮಧ್ಯ ದಾರಿ ಯಲ್ಲಿ ಚಾಕು ತೋರಿಸಿ ಅವರನ್ನು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ಪ್ರಯಾ ಣಿಕರ ಬಳಿಯಲ್ಲಿದ್ದ ಮೊಬೈಲ್, ಆಭರಣ, ಹಣ ದರೋಡೆ ಮಾಡುತ್ತಿದ್ದವರೆ ನ್ನಲಾ ಗಿದೆ. ಕುಣಿಗಲ್ ಮತ್ತು ನಾಗಮಂಗಲ ತಾಲೂಕಿನ ಬೆಳ್ಳೂರು ಠಾಣೆಯಲ್ಲಿ 2 ಪ್ರಕರಣ ದಾಖಲಾಗಿತ್ತು. ಆರೋಪಿಯ ಜಾಡು ಹಿಡಿದ ಪೊಲೀಸರು ಡಿವೈಎಸ್‌ಪಿ ಮೋಹನ್‌ಕುಮಾರ್‌ ಮಾರ್ಗದರ್ಶ ನದಲ್ಲಿ, ಸಿಪಿಐ ನಂಜಪ್ಪ ನೇತೃತ್ವದ ತಂಡ ಮತ್ತು ನಾಗಮಂಗಲ ಗ್ರಾಮಾಂತರ ಪೊಲೀಸ್‌ ಠಾಣಾ ಸಿಬ್ಬಂದಿ ಆರೋಪಿ ವೆಂಕಟೇಶ್‌ನನ್ನು ಬಂಧಿಸಿ ಒಂದು ಕಾರು, ಮೊಬೈಲ್, ಒಂದು ಚಾಕು, 135 ಗ್ರಾಂ ಚಿನ್ನ್ನ ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳಿಗೆ ಶೋಧ ನಡೆಸಿದ್ದಾರೆ. ದಾಳಿಯಲ್ಲಿ ಗ್ರಾಮಾಂತರ ಪೊಲೀಸ್‌ ಠಾಣಾ ಪಿಎಸ್‌ಐ ಅಜರುದ್ದೀನ್‌, ಸಿಬ್ಬಂದಿ ಹನೀಫ್, ಇಂದ್ರಕುಮಾರ್‌, ರಮೇಶ್‌, ಸಿದ್ದರಾಜು, ಶಿವಲೀಲಾ ಕರೀಗಾರ್‌ ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ