Udayavni Special

ಏಕವಚನದಲ್ಲಿ ಸಚಿವ-ಶಾಸಕರ ವಾಗ್ಯುದ್ಧ!


Team Udayavani, May 28, 2020, 5:13 AM IST

jagala mand

ಮಂಡ್ಯ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆದಿದ್ದ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಾಗಮಂಗಲ ಕ್ಷೇತ್ರದ ಶಾಸಕರ ಕಚ್ಚಾಟ ದ ವೇದಿಕೆಯಾಗಿ ಮಾರ್ಪಟ್ಟಿತು. ಸಭೆಯಲ್ಲಿ  ಜನಪ್ರತಿನಿಧಿಗಳು ಪರಸ್ಪರ ಕಚ್ಚಾಡಿ ಕೊಂಡು ಏಕವಚನದಲ್ಲಿ ಬೈದಾಡಿಕೊಂಡರು.

ಇಬ್ಬರು ಕೈ ಕೈ ಮಿಲಾಯಿಸುವ ಹಂತವನ್ನೂ ತಲುಪಿದರು. ಸಚಿವ-ಶಾಸಕರ ನಡುವಿನ ಕಿತ್ತಾ ಟಕ್ಕೆ ಜಿಲ್ಲಾಧಿಕಾರಿಯೂ ಸೇರಿದಂತೆ ಅಧಿಕಾರಿ ವರ್ಗ  ಮೂಕಪ್ರೇಕ್ಷಕವಾಗಿತ್ತು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ  ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಕೋವಿಡ್‌-19 ನಿಯಂತ್ರಣ ಕುರಿತು ಜಿಲ್ಲಾಮ ಟ್ಟದ ಅಧಿಕಾರಿಗಳ ಸಭೆ  ಕರೆಯಲಾಗಿತ್ತು.

ಅಧಿಕಾರಿಗಳಿಗೆ ತರಾಟೆ: ಸಭೆಯಲ್ಲಿ ಕೊರೊನಾ ಸೋಂಕಿತರ ಬಗ್ಗೆ ಸಮರ್ಪಕ ಮಾಹಿತಿ ನೀಡದಿರುವುದು, ಕ್ವಾರಂಟೈನ್‌ ಆದವ ರಿಗೆ ಸಮರ್ಪಕ ಸೌಲಭ್ಯ ಒದಗಿಸದಿರುವು ದು, ಕೊರೊನಾ ಪರೀಕ್ಷಾ ವರದಿಗಳು ಅದಲು- ಬದಲಾಗಿರುವುದು ಸೇರಿದಂತೆ  ಹಲವಾರು ವಿಚಾರಗಳ ಬಗ್ಗೆ ಜೆಡಿಎಸ್‌ ಶಾಸ ಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದು ಕೊಂಡರು.

ತಿರುಗಿ ಬಿದ್ದ ಶಾಸಕರು: ಈ ವೇಳೆ ಅಧಿಕಾರಿಗಳ ನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಚಿವ ನಾರಾ ಯಣಗೌಡರು ಮುಂದಾದರು. ಸಚಿವರ  ಸಮರ್ಥನೆಯನ್ನು ಒಪ್ಪದ ಜೆಡಿಎಸ್‌ ಶಾಸ ಕರು ಸಚಿವರ ವಿರುದ್ಧ ತಿರುಗಿಬಿದ್ದರು. ಈ ಸಮಯದಲ್ಲಿ ಸಚಿವ ನಾರಾಯಣಗೌಡ ಹಾಗೂ ನಾಗಮಂಗಲ ಶಾಸಕ ಸುರೇಶ್‌ಗೌಡರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ತಾಳ್ಮೆ ಕಳೆದುಕೊಂಡ ಸಚಿವರು ಶಾಸಕ ಸುರೇಶ್‌ಗೌಡರನ್ನು ಏಕವಚನದಲ್ಲಿ  ನಿಂದಿಸಿದರು.

ನೀನ್ಯಾವನೋ ನನ್ನ ಕೇಳ್ಳೋಕೆ. ಮುಚ್ಕೊಂಡು ಹೊಗಲೇ.. ಎಂದು ಏರುದನಿ ಯಲ್ಲಿ ಕೂಗಾಡಿದರು. ನೀವು ಹೇಳಿದೆ°ಲ್ಲಾ ಕೇಳ್ಕೊಂಡು ಹೋಗೋಕೆ ನಾವು ಬಂದಿಲ್ಲ ಎಂದು ಕಚ್ಚಾಡಿಕೊಂಡರು. ಈ ಸಮಯದಲ್ಲಿ ಶಾಸಕ ಸುರೇಶ್‌ಗೌಡರ ಬೆಂಬಲಕ್ಕೆ ನಿಂತ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ, ಗೌರವ ಕೊಟ್ಟು ಮಾತನಾಡುವು ದನ್ನು ಕಲಿಯಿರಿ. ಇಂತಹ ಕೀಳುಮಟ್ಟದ ಮಾತುಗಳು ನಿಮಗೆ ಶೋಭೆ ತರುವುದಿಲ್ಲ ಎಂದು  ಸಚಿವರನ್ನು ಖಂಡಿಸಿದರು.

ಪತ್ರಕರ್ತರನ್ನು ಹೊರಗಿಟ್ಟು ಸಭೆ: ಕೋವಿಡ್‌ -19 ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆದ ಸಭೆಗೆ ಪತ್ರಕರ್ತರು ಹಾಗೂ ದೃಶ್ಯ ಮಾಧ್ಯಮದವರನ್ನು ಹೊರಗಿಡಲಾಗಿತ್ತು. ಕಚ್ಚಾಟದ ದೃಶ್ಯವನ್ನು ಸೆರೆಹಿಡಿಯಲು ಮುಂದಾದ ದೃಶ್ಯ ಮಾಧ್ಯಮದವರನ್ನು ಶಾಸ ಕರು ಹಾಗೂ ಅಧಿಕಾರಿಗಳು ತಡೆಹಿಡಿದರು. ಸಭೆಯಲ್ಲಿ ಡೀಸಿ ಡಾ.ವೆಂಕಟೇಶ್‌, ಜಿಪಂ ಸಿಇಒ ಯಾಲಕ್ಕೀಗೌಡ, ಎಸ್ಪಿ ಪರಶುರಾಮ,  ಡಿಎಚ್‌ಒ ಡಾ.ಮಂಚೇಗೌಡ, ಶಾಸಕರಾದ ಪುಟ್ಟರಾಜು,  ಶ್ರೀನಿವಾಸ್‌, ಡಾ.ಅನ್ನದಾನಿ, ಸುರೇಶ್‌ ಗೌಡ, ರವೀಂದ್ರ ಶ್ರೀಕಂಠಯ್ಯ, ಎಂಎಲ್‌ಸಿ ಅಪ್ಪಾಜಿಗೌಡ ಭಾಗವಹಿಸಿದ್ದರು.

ಟಾಪ್ ನ್ಯೂಸ್

ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆShare

ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆ

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

ಜಾನುವಾರುಗಳಿಗೆ ಆಸರೆಯಾಗಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ರಫಿಕ್ ನಿಧನ

ಜಾನುವಾರುಗಳಿಗೆ ಆಸರೆಯಾಗಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ರಫಿಕ್ ನಿಧನ

2020-21ನೇ ಸಾಲಿನ ಐಟಿಆರ್ ಫೈಲಿಂಗ್ :- ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

2020-21ನೇ ಸಾಲಿನ ಐಟಿಆರ್ ಫೈಲಿಂಗ್: ಈ 9 ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಆರ್.ಅಶೋಕ್

ಉತ್ತರಾಖಂಡ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧ: ಸಚಿವ ಆರ್.ಅಶೋಕ್

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೆ ಸಾವು , ನಾಲ್ವರಿಗೆ ಗಾಯ

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು , ನಾಲ್ವರಿಗೆ ಗಾಯ

1-AAA

ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ಫಸಲ್‌ ಬಿಮಾ ಯೋಜನೆ ಅನುಷ್ಠಾನ

4 feet of KRS filling

ಕೆಆರ್‌ಎಸ್‌ ಭರ್ತಿಗೆ 4 ಅಡಿ ಬಾಕಿ

Untitled-1

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವಾಹನ ಢಿಕ್ಕಿ: ಯುವಕ ಸಾವು

madya news

ಪ್ರವಾಸಿ ತಾಣಗಳಿಗೆ ಹರಿದು ಬಂದ ಜನಸಾಗರ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

MUST WATCH

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

udayavani youtube

ಉದಯವಾಣಿ ಕಚೇರಿಯಲ್ಲಿ ‘ಸಲಗ’ !

ಹೊಸ ಸೇರ್ಪಡೆ

ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆShare

ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆ

ಕಟ್ಟಡ ಶಿಥಿಲ

ಶಿಥಿಲ ಕಟ್ಟಡ ಸ್ವಯಂ ಪರೀಕ್ಷೆ ಮಾಡಿಬಿಡಿ

24

30ಕ್ಕೆ ಗಡಿ ಹಳ್ಳಿ ಹಬ್ಬ, ಸಂಗೀತ ಸಂಜೆ ಕಾರ್ಯಕ್ರಮ

chamarajanagara news

ಹಾವು ಕಡಿದು ಯುವಕ ಸಾವು

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.