ಶ್ರೀರಂಗಪಟ್ಟಣ ಪುರಸಭೆ: ದೋಸ್ತಿಗಳ ಫೈಟ್

Srirangapatna Municipality: Fight of the Das

Team Udayavani, May 14, 2019, 1:13 PM IST

ಶ್ರೀರಂಗಪಟ್ಟಣ: ಲೋಕಸಭಾ ಚುನಾವಣೆ ಕಾವು ಇಳಿಯುವ ಮುನ್ನವೇ ಪುರಸಭೆಗೆ ಚುನಾವಣೆ ಪ್ರಕಟಗೊಂಡಿಚದ್ದು ರಾಜಕೀಯ ಪಕ್ಷಗಳ ಮುಖಂಡರಿಗೆ ಮತ್ತೂಂದು ಸವಾಲು ಎದುರಾಗಿ ರಾಜಕೀಯ ಚುಟುವಟಿಕೆಗಳು ಬಿರುಸು ಗೊಂಡಿದೆೆ. ರಾಜ್ಯದಲ್ಲಿ ದೋಸ್ತಿ ಸರ್ಕಾರ ನಡೆಸುತ್ತಿರುವವರು ಲೋಕಲ್ ಚುನಾವಣೆಯಲ್ಲಿ ರಿಯಲ್ ಫೈಟ್‌ಗೆ ಸಜ್ಜಾಗುತ್ತಿದ್ದಾರೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಮೇ 29ಕ್ಕೆ ನಡೆಯಲಿರುವ ಚುನಾವಣೆಗೆ ವಿವಿಧ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿತರು ಈಗಾಗಲೇ ನಾಯಕರ ಬೆನ್ನತ್ತಿ ಪಕ್ಷದ ಟಿಕೆಟ್ ಪಡೆಯಲು ಪೈಪೋಟಿಗಿಳಿದಿದ್ದಾರೆ.

ಈಗಾಗಲೇ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ಸಭೆಗಳೂ ನಡೆದಿವೆ. ಆಕಾಂಕ್ಷಿರಿಂದ ಅರ್ಜಿ ಸ್ವೀಕರಿಸಿ ಗೆಲ್ಲುವ ಕುದುರೆಗಳ ಪಟ್ಟಿಯೂ ತಯಾರಿಸಲಾಗಿದೆ. ಮಂಗಳವಾರ ಜೆಡಿಎಸ್‌ ಆಕಾಂಕ್ಷಿತರ ಸಭೆ ನಡೆಯಲಿದ್ದು, ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ತಂತ್ರ ಹೆಣೆಯಲಾಗಿದೆ ಎನ್ನಲಾಗುತ್ತಿದೆ.

ಗೆಲುವಿನ ತಂತ್ರ: ಎಲ್ಲಾ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಗೆಲುವಿಗೆ ಅವರವರ ಮಟ್ಟದಲ್ಲಿ ತಂತ್ರ ರೂಪಿಸಿಕೊಳ್ಳುತ್ತಿದ್ದಾರೆ. ಆಕಾಂಕ್ಷಿಗಳ ನಡುವೆ ವಿವಿಧ ಪಕ್ಷಗಳ ಬಿ ಫಾರಂಗೆ ವಾರ್ಡ್‌ಗಳಲ್ಲಿ ಪೈಪೋಟಿ ನಡೆಯುತ್ತಿದೆ. ಈ ಭಾರಿಯ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ‘ಬಿ’ ಗೆ ಮೀಸಲಾಗಿವೆ. ಈ ಬಾರಿಯ ಸ್ಥಳೀಯ ಪುರಸಭೆ ಚುನಾವಣೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ರಿಯಲಿ ಫೈಟ್ ನಡೆಯಲಿದೆ.

ಆಡಳಿತಕ್ಕಾಗಿ ಹೋರಾಟ: ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಆಕಾಂಕ್ಷಿಗಳ ಅರ್ಜಿ ಸ್ವೀಕರಿಸಿ 23 ವಾರ್ಡ್‌ಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಮಾಡಿ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಬಿಜೆಪಿಯವರು ಜಿಲ್ಲಾಧ್ಯಕ್ಷ ನಾಗಣ್ಣ ನೇತೃತ್ವದಲ್ಲಿ ಸಭೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಶತಾಯ, ಗತಾಯ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂಬುದು ಮೂರೂ ಪಕ್ಷಗಳ ನಾಯಕರಿಗೆ ಸವಾಲಾಗಿದೆ.

ಮೇ 29ಕ್ಕೆ ಚುನಾವಣೆ ದಿನಾಂಕ ನಿಗದಿಗೊಳಿಸಿದೆ. ಮೇ9 ರಿಂದ 16ರವರೆಗೆ ಉಮೇದುವಾರಿಕೆ ಸಲ್ಲಿಕೆಯಾಗಲಿದೆ. ಮೇ 17ಕ್ಕೆ ನಾಮಪತ್ರ ಪರಿಶೀಲನೆ, ಮೇ 20ಕ್ಕೆ ಉಮೇದುವಾರಿಕೆ ವಾಪಸ್‌ ಪಡೆಯಲು ಕೊನೆಯ ದಿನಾಂಕವಾಗಿದೆ. ಮೇ 29ರಂದು ಬೆಳಿಗ್ಗೆ 5 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮೇ 31ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆದು ಅಂದೆ ಫ‌ಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.

● ಗಂಜಾಂ ಮಂಜು


ಈ ವಿಭಾಗದಿಂದ ಇನ್ನಷ್ಟು

  • ಮಂಡ್ಯ: ನಗರಸಭಾ ವ್ಯಾಪ್ತಿಯಲ್ಲಿ ಅಮೃತ್‌ ಯೋಜನೆಯಡಿ ಅನುಷ್ಠಾನವಾಗುತ್ತಿರುವ ಕುಡಿಯುವ ನೀರು ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಅಧಿಕಾರಿಗಳು...

  • ಶ್ರೀರಂಗಪಟ್ಟಣ: ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ದೋಸ್ತಿಗಳಾಗಿದ್ದರೂ ಪಟ್ಟಣ ಪುರಸಭೆ ಚುನಾವಣೆಯಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಿದ್ದು, ಮಾಜಿ ಶಾಸಕ...

  • ಮಂಡ್ಯ: ಲೋಕಸಭಾ ಕ್ಷೇತ್ರಗಳಲ್ಲೇ ಹೈವೋಲೆrೕಜ್‌ ಕ್ಷೇತ್ರವೆಂದು ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಫ‌ಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ತೀವ್ರ...

  • ಮಂಡ್ಯ: ಕಾನೂನು ಬಾಹಿರವಾಗಿ ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿರುವುದನ್ನು ವಿರೋಧಿಸಿ ಮತ್ತು ಹೈಕೋರ್ಟ್‌ ತೀರ್ಪಿನನ್ವಯ ಕನಿಷ್ಠ ವೇತನ ಜಾರಿಗೆ ಅಗ್ರಹಿಸಿ...

  • ಕೆ.ಆರ್‌.ಪೇಟೆ: 29ರಂದು ಪುರಸಭೆಯ 23 ವಾರ್ಡುಗಳಿಗೆ ಚುನಾವಣೆಗೆ ಸ್ಪರ್ಧಿಸಲು 72 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಆದರೆ ರಾಜಕೀಯ ಮುಖಂಡರ ಹಾಗೂ ಹಿತೈಷಿಗಳ ಒತ್ತಡಕ್ಕೆ...

ಹೊಸ ಸೇರ್ಪಡೆ