ದ್ವಿಚಕ್ರ ವಾಹನ ಡಿಕ್ಕಿ: ಇಬ್ಬರ ಸಾವು
Team Udayavani, Apr 3, 2021, 7:12 PM IST
ಮದ್ದೂರು: ರಸ್ತೆ ಬದಿ ಅಳವಡಿಸಿದ್ದ ತಡೆ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಯುವಕರಿಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲ ನಾಯಕನಹಳ್ಳಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಜರುಗಿದೆ.
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಅಮಿರ್‌ಖಾನ್ ಅವರ ಪುತ್ರ ಸಾದಿಕ್ (29) ಹಾಗೂ ನಜೀರ್‌ಪಾಷಾ ಅವರ ಪುತ್ರ ಶಬೀರ್ (27) ಮೃತಪಟ್ಟ ಯುವಕ ರಾಗಿದ್ದಾರೆ. ಕರ್ತವ್ಯ ನಿಮಿತ್ತ ಮದ್ದೂರು ಪಟ್ಟಣಕ್ಕೆ ಆಗಮಿಸಿ ವಾಪಸ್ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ತಾಲೂಕಿನ ಮಲ್ಲ ನಾಯಕನಹಳ್ಳಿ ಹಾಗೂ ಛತ್ರಲಿಂಗನದೊಡ್ಡಿ ಗ್ರಾಮಗಳ ಮಧ್ಯೆ ಇರುವ ರಸ್ತೆಬದಿಯ ತಡೆಗೋಡೆ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಶಬೀರ್ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯ ಗೊಂಡ ಸಾದಿಕ್ ಅವರನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಮೃತರ ಸಂಬಂಧಿ ಅಲ್ಲಾಬಕ್ಷ ನೀಡಿದ ದೂರಿನ ಮೇರೆಗೆ ಕೆಸ್ತೂರು ಪೊಲೀಸರು ಪ್ರಕ ರಣ ದಾಖಲಿಸಿಕೊಂಡು ತಾಲೂಕು ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ವಾರಸು ದಾರರಿಗೆ ಒಪ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆ.11-17ರ ವರೆಗೆ ಎಲ್ಲ ಸಿಬಂದಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ
ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ತತ್ವಪದದಲ್ಲಿ ಶರೀಫರು ಜೀವಂತ: ಸಚಿವ ಸುನಿಲ್ ಕುಮಾರ್
ಮಂಕುಬೂದಿ ಎರಚಿ…; ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಹೆಚ್ ಡಿಕೆ ಕಿಡಿ
ಹೆದ್ದಾರಿ ಅತಿಕ್ರಮಣಕ್ಕಿಲ್ಲಿ ರಹದಾರಿ ನೀಡಿದವರ್ಯಾರು : ಹೆದ್ದಾರಿ ಸವಾರಿ ಆಯೋಮಯ..