ನೀರಿನ ಕೊರತೆ ನಿವಾರಣೆಗೆ ಹನಿ ನೀರಾವರಿ ಬಳಸಿ

ಶೇ.50ರಿಂದ 80ರಷ್ಟು ನೀರು ಉಳಿತಾಯ: ಜೋಷಿ • ಹನಿ ನೀರಾವರಿಯಲ್ಲಿ ಕ್ಯಾರೆಟ್, ಮೂಲಂಗಿ ಬೆಳೆಯ ಪ್ರಾತ್ಯಕ್ಷಿಕೆ

Team Udayavani, May 12, 2019, 12:24 PM IST

mandya-tdy-4..

ಮಳವಳ್ಳಿ: ಕಾಲುವೆಗಳ ಮೂಲಕ ಬರುವ ನೀರನ್ನು ಭೂಮಿಗೆ ಹಾಯಿಸಿ ಕೃಷಿ ಮಾಡುವ ವಿಧಾನದ ಬದಲು ಹನಿ ನೀರಾವರಿಯನ್ನು ಆಳವಡಿಸಿ ಕೊಂಡರೇ ಹೆಚ್ಚು ಇಳುವರಿಯ ಜೊತೆಗೆ ನೀರಿನ ಕೊರತೆಯೂ ಕಡಿಮೆ ಮಾಡಿ ಮತ್ತಷ್ಟು ರೈತರಿಗೆ ಅನುಕೂಲವಾಗಲಿದೆ ಎಂದು ಬೇಸಾಯ ತಜ್ಞ ಪಿ.ವಿ.ಜೋಷಿ ತಿಳಿಸಿದರು.

ತಾಲೂಕಿನ ಉಢಪೆಬೂವಳ್ಳಿ(ಕಣಿಕಹಳ್ಳಿ)ಯಲ್ಲಿ ಪೂರಿಗಾಲಿ ಸಂಪೂರ್ಣ ಸ್ವಯಂ ಚಾಲಿತ ಹನಿ ಹಾಗೂ ತುಂತುರು ನೀರಾವರಿ ಯೋಜನೆಯಲ್ಲಿ ಬೆಳೆದಿರುವ ಕ್ಯಾರೆಟ್ ಹಾಗೂ ಮೂಲಂಗಿ ವಿಶೇಷ ಹೈಬ್ರಿಡ್‌ ತಳಿಯ ಮಾದರಿ ಪ್ರಾತ್ಯಕ್ಷತೆಯಲ್ಲಿ ರೈತರಿಗೆ ಮಾಹಿತಿ ನೀಡುತ್ತಾ ಮಾತನಾಡಿ, ಈ ಬೆಳೆಗಳಿಗೆ ಸೂಕ್ತ ಕೃಷಿ ಪದ್ದತಿ ಅನುಸಾರವಾಗಿ ಮಣಿನ ಪರೀಕ್ಷೆ ನೀರಿನ ಪರೀಕ್ಷೆ, ಸೂಕ್ತ ರಸಾವರಿ ಗೊಬ್ಬರಗಳ ಬಳಕೆ. ಎತ್ತರದ ಮಡಿ ಕಟ್ಟುವಿಕೆ, ಹಾಗೂ ತುಂತುರು ನೀರಾವರಿ ಬಳಕೆಯಿಂದ ಉತ್ತಮವಾದ ಬೆಳೆಯನ್ನು ಬೆಳೆಯಬಹುದಾಗಿದೆ ಎಂದರು.

ಪ್ರಾತ್ಯಕ್ಷತೆಗೆ ಪೂರಿಗಾಲಿ ಹನಿ ನೀರಾವರಿ ಯೋಜನೆಯಡಿಯಲ್ಲಿರವ ಎಲ್ಲಾ 50 ಗ್ರಾಮಗಳ ರೈತ ಪಲಾನುಭವಿಗಳಿಗೆ ಭೇಟಿಯಾಗುವಂತೆ ವ್ಯವಸ್ಥೆ ಮಾಡಿ ಪ್ರಾತ್ಯಕ್ಷತೆ ಬಗ್ಗೆ ವಿವರಣೆ ನೀಡಲಾಗಿದೆ. ಹತ್ತು ದಿನಗಳ ಕಾಲ ರೈತರಿಗೆ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿಯವರೆಗೂ ಸುಮಾರು 500ಕ್ಕೂ ಹೆಚ್ಚು ರೈತರನ್ನು ಕರೆತಂದು ಹನಿ ನೀರಾವರಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹನಿ ನೀರಾವರಿ ಯೋಜನೆಯಿಂದ ನೀರಿನ ಸದ್ಬಳಕೆ ಹಾಗೂ ಬೆಳೆ ಉತ್ಪಾದನೆಯಲ್ಲಿ ಹೆಚ್ಚಳ ಕಾಣಬಹುದು. ಈ ಪದ್ಧತಿಯಿಂದ ಬೆಳೆಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ನೀಡಬಹುದು. ಶೇ.50ರಿಂದ 80ರಷ್ಟು ನೀರಿನ ಉಳಿತಾಯವಾಗಲಿದೆ ಎಂದರು.

ಸಾಂಪ್ರದಾಯಿಕ ವಿಧಾನದಲ್ಲಿ ನೀರನ್ನು ಸಮಾನ್ಯವಾಗಿ ಮಣ್ಣಿನ ಕಾಲುವೆಯಲ್ಲಿ ಹಾಯಿಸುವುದರಿಂದ ಶೇ.30ರಿಂದ 40 ರಷ್ಟು ನೀರು ಪೋಲಾಗುತ್ತದೆ, ಜೊತೆಗೆ ಜಮೀನಿನ ಗುಣಮಟ್ಟವೂ ಕಡಿಮೆಯಾಗುತ್ತದೆ. ಆದರೆ, ಸೂಕ್ಷ್ಮ ನೀರಾವರಿ ಪದ್ದತಿಯಿಂದ ನೀರನ್ನು ಕೊಳವೆ ಮೂಲಕ ನೇರವಾಗಿ ಗಿಡಗಳ ಬುಡಕ್ಕೆ ಸಾಗಿಸಿ ಬೇರಿನ ವಲಯದ ಭಾಗ ನೆನೆಯುವಂತೆ ಮಾಡಿ ಗಿಡದ ಬೆಳವಣಿಗೆಗೆ ಅಗತ್ಯ ಇರುವಷ್ಟು ನೀರನ್ನು ಕೊಡುವುದರಿಂದ ಕಳೆಯೂ ಕಡಿಮೆಯಾಗಿ ಬೆಳೆ ಚನ್ನಾಗಿ ಬೆಳೆಯುತ್ತದೆ ಎಂದರು.

ಹನಿ ನೀರಾವರಿಯಿಂದ ಕೂಲಿಯ ಖರ್ಚು ಮಾಡಿಮೆಯಾಗುತ್ತದೆ, ಹೆಚ್ಚು ಲಾಭದ ಬೆಳೆಯನ್ನು ಬೆಳೆಯಬಹುದಾಗಿದೆ, ಪೂರಿಗಾಲಿ ಹನಿ ನೀರಾವರಿ ಯೋಜನೆ ಸಮರ್ಪಕವಾಗಿ ಬಳಕೆ ಮಾಡಿಕೊಂಡರೇ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ನಡೆದು ರೈತರು ಹೆಚ್ಚು ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಜೈನ್‌ ಇರಿಗೇಷನ್‌ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಅಮರಾವತಿ? ಧರೆಗಿಳಿಯುತ್ತಾ; ಚಂದ್ರಬಾಬು ನಾಯ್ಡು ಕನಸಿನ ಆಂಧ್ರ ರಾಜಧಾನಿಗೆ ಮತ್ತೆ ಚಾಲನೆ

ಅಮರಾವತಿ? ಧರೆಗಿಳಿಯುತ್ತಾ; ಚಂದ್ರಬಾಬು ನಾಯ್ಡು ಕನಸಿನ ಆಂಧ್ರ ರಾಜಧಾನಿಗೆ ಮತ್ತೆ ಚಾಲನೆ

Google Cloud ಉಪಾಧ್ಯಕ್ಷರಾಗಿ ಮಣಿಪಾಲ ಮೂಲದ ರಾಜ್‌ ಪೈ

Google Cloud ಉಪಾಧ್ಯಕ್ಷರಾಗಿ ಮಣಿಪಾಲ ಮೂಲದ ರಾಜ್‌ ಪೈ

Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2

Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2

ನಕಲಿ ಕಾರ್ಡ್‌ ರದ್ದು? ಅರ್ಹ ಬಿಪಿಎಲ್‌ ಅರ್ಜಿದಾರರಿಗೆ ಅವಕಾಶ

ನಕಲಿ ಕಾರ್ಡ್‌ ರದ್ದು? ಅರ್ಹ ಬಿಪಿಎಲ್‌ ಅರ್ಜಿದಾರರಿಗೆ ಅವಕಾಶ

ಮದುವೆ ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

Marriage ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

ವಕೀಲರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು!

ವಕೀಲರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು!

Udupi ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ: ಅತುಲ್‌ ಆರೋಪಮುಕ್ತ

Udupi ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ: ಅತುಲ್‌ ಆರೋಪಮುಕ್ತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: Theft of sandal trees from school premises after threatening security guards

Mandya: ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಶಾಲಾ ಆವರಣದ ಗಂಧದ ಮರಗಳ ಕಳವು

ಮಂಡ್ಯದಲ್ಲಿ ಅಂಬರೀಷ್‌ ದಾಖಲೆ ಮುರಿದ ಎಚ್‌.ಡಿ.ಕುಮಾರಸ್ವಾಮಿ

ಮಂಡ್ಯದಲ್ಲಿ ಅಂಬರೀಷ್‌ ದಾಖಲೆ ಮುರಿದ ಎಚ್‌.ಡಿ.ಕುಮಾರಸ್ವಾಮಿ

police crime

Srirangapatna; ಕಾರಿನಲ್ಲಿ ಜಾನುವಾರು ಸಾಗಾಟ:ಉಸಿರುಗಟ್ಟಿ 6 ಕರುಗಳು ಸಾವು

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

Fraud Case: ಸಾಲ ಮಂಜೂರಾತಿ ಹೆಸರಲ್ಲಿ ಯುವಕನಿಗೆ 75 ಸಾವಿರ ರೂ. ವಂಚನೆ

Fraud Case: ಸಾಲ ಮಂಜೂರಾತಿ ಹೆಸರಲ್ಲಿ ಯುವಕನಿಗೆ 75 ಸಾವಿರ ರೂ. ವಂಚನೆ

MUST WATCH

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

udayavani youtube

ಪ್ರಮಾಣವಚನ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ

udayavani youtube

ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಮೋ

ಹೊಸ ಸೇರ್ಪಡೆ

ಅಮರಾವತಿ? ಧರೆಗಿಳಿಯುತ್ತಾ; ಚಂದ್ರಬಾಬು ನಾಯ್ಡು ಕನಸಿನ ಆಂಧ್ರ ರಾಜಧಾನಿಗೆ ಮತ್ತೆ ಚಾಲನೆ

ಅಮರಾವತಿ? ಧರೆಗಿಳಿಯುತ್ತಾ; ಚಂದ್ರಬಾಬು ನಾಯ್ಡು ಕನಸಿನ ಆಂಧ್ರ ರಾಜಧಾನಿಗೆ ಮತ್ತೆ ಚಾಲನೆ

Google Cloud ಉಪಾಧ್ಯಕ್ಷರಾಗಿ ಮಣಿಪಾಲ ಮೂಲದ ರಾಜ್‌ ಪೈ

Google Cloud ಉಪಾಧ್ಯಕ್ಷರಾಗಿ ಮಣಿಪಾಲ ಮೂಲದ ರಾಜ್‌ ಪೈ

Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2

Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2

ನಕಲಿ ಕಾರ್ಡ್‌ ರದ್ದು? ಅರ್ಹ ಬಿಪಿಎಲ್‌ ಅರ್ಜಿದಾರರಿಗೆ ಅವಕಾಶ

ನಕಲಿ ಕಾರ್ಡ್‌ ರದ್ದು? ಅರ್ಹ ಬಿಪಿಎಲ್‌ ಅರ್ಜಿದಾರರಿಗೆ ಅವಕಾಶ

ಮದುವೆ ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

Marriage ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.