ಎರಡು ದಿನ ರಾಜ್ಯಮಟ್ಟದ ವಿದ್ಯಾರ್ಥಿ ಸಂಸ್ಕೃತಿ ಚಳವಳಿ

Team Udayavani, Jan 8, 2020, 2:31 PM IST

mysuru-tdy-1

ಮೈಸೂರು: ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌-ಕರ್ನಾಟಕ ವತಿಯಿಂದ ಜ.18 ಹಾಗೂ 19ರಂದು ಎರಡನೇ ಬಾರಿಗೆ ಮೈಸೂರಿ ನಲ್ಲಿ ರಾಜ್ಯಮಟ್ಟದ ವಿದ್ಯಾರ್ಥಿ ಸಂಸ್ಕೃತಿ ಚಳವಳಿ ಆಯೋಜಿಸಲಾಗಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ-ಸಂಸ್ಕೃತಿ ಒಂದು ದಿನದ ಹಬ್ಬವಲ್ಲ. ಜೀವನವನ್ನು ರೂಪಿಸುವ ಜೀವನದಿ, ಆದ್ದರಿಂದ ಎಬಿವಿಪಿ ರಾಜ್ಯದ ಎಲ್ಲಾ ಸೃಜನಶೀಲ ಕಾಲೇಜುಗಳ ಸೃಜನಶೀಲ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ರಾಜ್ಯದಲ್ಲಿ ಒಂದು ವಿನೂತನ ವಿದ್ಯಾರ್ಥಿ ಸಂಸ್ಕೃತಿ ಚಳವಳಿ ಕಟ್ಟಲು ಮುಂದಾಗಿದೆ.

ಕಳೆದ ವರ್ಷ ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿ ಸಂಸ್ಕೃತಿ ಚಳವಳಿ ಆಯೋಜಿಸಿದಾಗರಾಜ್ಯದೆಲ್ಲೆಡೆಯಿಂದ ಒಟ್ಟು 1230 ಸ್ಪರ್ಧಾಳು ಗಳು ಪಾಲ್ಗೊಂಡಿದ್ದರು. ಈ ವರ್ಷವು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ವಿದ್ಯಾರ್ಥಿ ಸಂಸ್ಕೃತಿ ಚಳವಳಿ ಆಯೋಜಿಸಿದ್ದು, ಸಮೂಹ ಸ್ಪರ್ಧೆ, ವೈಯಕ್ತಿಕ ಸ್ಪರ್ಧೆಯಲ್ಲಿ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಛಾಯಾಗ್ರಹಣ ಸ್ಪರ್ಧೆಗಳ ಜೊತೆಗೆ ವಿದ್ಯಾರ್ಥಿ ಚಳವಳಿ ಒಂದು ಅವಲೋಕನ ಕುರಿತು ವಿಚಾರಸಂಕಿರಣ, ವಿದ್ಯಾರ್ಥಿ ಸಂಸ್ಕೃತಿ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ, ದಿವ್ಯಾಂಗಪ್ರತಿಭೆಗಳಿಗೆ, ಸಾಮಾಜಿಕ ನೇತೃತ್ವದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿದೆ. ಈಗಾಗಲೇ ಸುಮಾರು 1ಸಾವಿರ ಮಂದಿ ಹೆಸರು ನೋಂದಾಯಿಸಿ ಕೊಂಡಿದ್ದು, ಇನ್ನೂ 500 ಮಂದಿ ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ವಿವಿಧ ಸ್ಪರ್ಧೆಗಳ ವಿಜೇತರಿಗೆ ಸುಮಾರು 1.5ಲಕ್ಷ ರೂ. ಗಳಷ್ಟು ನಗದು ಬಹುಮಾನ ನೀಡಲಾಗುತ್ತಿದೆ. ಎರಡು ದಿನಗಳ ವಿದ್ಯಾರ್ಥಿ ಸಂಸ್ಕೃತಿ ಚಳವಳಿಯನ್ನು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಕೆ.ಕಲ್ಯಾಣ್‌ ಭಾಗವಹಿ ಸಲಿದ್ದಾರೆ ಎಂದು ವಿವರಿಸಿದರು.

ಎಬಿವಿಪಿ ವಿಭಾಗ ಸಂಚಾಲಕ ರಾಕೇಶ್‌, ಜಿಲ್ಲಾ ಸಂಚಾಲಕ ಗೌತಮ್‌, ನಗರ ಸಂಘಟನಾ ಕಾರ್ಯದರ್ಶಿ ಶರತ್‌, ನಗರ ಸಹ ಕಾರ್ಯದರ್ಶಿ ಪ್ರಜ್ಞಾ ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

6-hunsur’

Hunsur: ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರೈತ ಆತ್ಮಹತ್ಯೆಗೆ ಶರಣು

Renukaswamy Case: ದರ್ಶನ್‌ ಆಪ್ತ, ಬಂಧಿತ ನಾಗರಾಜು ಮೈಸೂರು ಪಾಲಿಕೆಗೆ ಸ್ಪರ್ಧಿಸುವವನಿದ್ದ!

Renukaswamy Case: ದರ್ಶನ್‌ ಆಪ್ತ, ಬಂಧಿತ ನಾಗರಾಜು ಮೈಸೂರು ಪಾಲಿಕೆಗೆ ಸ್ಪರ್ಧಿಸುವವನಿದ್ದ!

Mysore ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ: ಸಂಸದರಾದ ಬಳಿಕ ಯದುವೀರ್ ಮೊದಲ ಸುದ್ದಿಗೋಷ್ಠಿ

Mysore ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ: ಸಂಸದರಾದ ಬಳಿಕ ಯದುವೀರ್ ಮೊದಲ ಸುದ್ದಿಗೋಷ್ಠಿ

Hunasur: ನಾಗರಹೊಳೆ ಉದ್ಯಾನದಲ್ಲಿ ಐದು ವರ್ಷದ ಹುಲಿ ಕಳೆ‌ಬರ ಪತ್ತೆ

Hunasur: ನಾಗರಹೊಳೆ ಉದ್ಯಾನದಲ್ಲಿ ಐದು ವರ್ಷದ ಹುಲಿ ಕಳೆ‌ಬರ ಪತ್ತೆ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

udupi

Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.