ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಸ್ವಾವಲಂಬಿಗಳಾಗಿ; ಬಿ.ಸಿ. ಪಾಟೀಲ್‌

ಕೊಟ್ಟಿಗೆ ಗೊಬ್ಬರ ಬಳಸುವ ಜತೆಗೆ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಿದ್ದೇವೆ

Team Udayavani, Apr 23, 2022, 5:11 PM IST

ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಸ್ವಾವಲಂಬಿಗಳಾಗಿ; ಬಿ.ಸಿ. ಪಾಟೀಲ್‌

ಮೈಸೂರು: ದೇಶಕ್ಕೆ ಅನ್ನ ನೀಡುವ ಶಕ್ತಿ ರೈತರಿಗೆ ಇದೆ ಹೊರತು ಟಾಟಾ, ಬಿರ್ಲಾ, ಅಂಬಾನಿಯಂತವರಿಗಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು. ಕೃಷಿ ಇಲಾಖೆ ವತಿಯಿಂದ ಮೈಸೂರು ತಾಲೂಕಿನ ತಳೂರು ಗ್ರಾಮದಲ್ಲಿ ಏರ್ಪಡಿಸಿದ್ದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ನಾಶವಾದರೆ ದೇಶ ದುರ್ಬಿಕ್ಷವಾಗುತ್ತದೆ ಎಂದು ಹಿರಿಯರು ಹೇಳಿದ್ದಾರೆ.

ಕೃಷಿ ಉಳಿಯ ಬೇಕೆಂದರೆ ರೈತನಿರಬೇಕು. ಭೂಮಿಯಲ್ಲಿ ಬಿತ್ತು ಬೆಳೆ ತೆಗೆಯುವ ರೈತ ದೇಶಕ್ಕೆ ಅನ್ನ ಕೊಡಬಲ್ಲ. ಇದಕ್ಕೆ ರೈತ ನನ್ನು ಸ್ವಾವಲಂಬಿಯನ್ನಾಗಿ ಮಾಡಲು ಕೃಷಿ ಇಲಾಖೆ ಹತ್ತು ಹಲವು ಯೋಜನೆ ಹಾಗೂ ಸಹಾಯಧನ ನೀಡುತ್ತಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಮಗ್ರ ಕೃಷಿ ಪದ್ಧತಿ ಅನುಸರಿಸಿ: ತಳೂರಿನ ಸೋಮಶೇಖರ್‌ ಅವರು ಮೂರೂವರೆ ಎಕರೆ ಜಾಗದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಪ್ರತಿ ತಿಂಗಳು 5ರಿಂದ 6 ಲಕ್ಷ ಆದಾಯ ಮಾಡುತ್ತಿದ್ದಾರೆ. ಹೂ, ಹಣ್ಣು, ತರಕಾರಿ, ಬಾಳೆಯ ಜತೆಗೆ ಕುರಿ, ಹಸು ಮತ್ತು ಮೀನು ಸಾಕಣಿಕೆ ಮಾಡುತ್ತಿದ್ದಾರೆ. ಈ ರೀತಿಯ ಸಮಗ್ರ ಕೃಷಿ ಪದ್ಧತಿಯಿಂದ ಯಾವ ರೈತನಿಗೂ ನಷ್ಟವಾಗುವುದಿಲ್ಲ. ಇದೇ ರೀತಿ ಬೇರೆ ರೈತರು ಪ್ರಗತಿಪರ ರೈತ ರಿಂದ, ಕೃಷಿ ಇಲಾಖೆಯಿಂದ ಮಾರ್ಗದರ್ಶನ ಪಡೆದು ಸ್ವಾವಲಂಬನೆ ಹೊಂದುವಂತೆ ಕರೆ ನೀಡಿದರು.

ಒಂದೇ ಬೆಳೆ ನೆಚ್ಚಿಕೊಳ್ಳದಿರಿ: ಕೃಷಿ ಸಚಿವನಾದ ಬಳಿಕ ರೈತರ ಆತ್ಮಹತ್ಯೆ ಬಗ್ಗೆ ಮಾಹಿತಿ ಕೇಳಿದಾಗ ಮಂಡ್ಯದಲ್ಲಿ 2018-19ರಲ್ಲಿ 95 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮಳೆ ಆಶ್ರಿತ ಕೋಲಾರದಲ್ಲಿ 15 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪರಿಶೀಲಿಸಿ ದಾಗ ಮಂಡ್ಯದಲ್ಲಿ ಕಬ್ಬು, ಭತ್ತ ಬಿಟ್ಟರೆ ಮತ್ಯಾವ ಬೆಳೆ ಯನ್ನು ಅಲ್ಲಿನ ರೈತರು ಬೆಳೆಯುವುದಿಲ್ಲ. ಇದರಿಂದ ಹೆಚ್ಚು ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಅದೇ ಕೋಲಾರದಲ್ಲಿ ಪ್ರತಿ ರೈತನು ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಕೊಂಡು ಉತ್ತಮ ಬದುಕು ನಡೆಸುತ್ತಿದ್ದಾನೆ ಎಂದರು.

ರೈತರು ಕೃಷಿಯೊಂದಿಗೆ ಜೇನು, ಕುರಿ, ಕೋಳಿ, ಜಾನುವಾರು, ಮೀನು ಸಾಕಣಿಕೆ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ರೈತರಿಗೆ ಕರೆ ನೀಡಿದರು. ಪ್ರಗತಿಪರ ರೈತ ಟಿ.ಎಸ್‌. ಸೋಮಶೇಖರ್‌ ಮಾತ ನಾಡಿ, ನಾನು ರೈತನಾಗಿ ಈ ಮಟ್ಟಕ್ಕೆ ಬರಲು ಸಮಗ್ರ ಕೃಷಿ ಪದ್ಧತಿಯಿಂದ. ಈ ಹಿಂದೆ ಹುರುಳಿ, ರಾಗಿ, ತೊಗರಿ, ಹಲಸಂದೆ ಬೆಳೆಯುತ್ತಾ ಇ¨ªೆವು. ಇದರಿಂದ ಲಾಭ ಬರುತ್ತಿರಲಿಲ್ಲ. ಜತೆಗೆ ನಾನು ಕಾರ್ಖಾನೆಯೊಂದ ರಲ್ಲಿ ಕೆಲಸ ಮಾಡುತ್ತಿದ್ದೆ. ಅದು ಮುಚ್ಚಿದ ಬಳಿಕ ನನ್ನ ಕೈ ಹಿಡಿದಿದ್ದು ಕೃಷಿ. ತೋಟಗಾರಿಗೆ ಬೆಳೆಗೆ ಒತ್ತು ನೀಡಿ ಇಲಾಖೆಯ ಹಲವು ಸೌಲಭ್ಯ ಪಡೆದುಕೊಂಡು ಹೆಚ್ಚು ಆದಾಯ ಗಳಿಸುತ್ತೇವೆ. ವರ್ಷದ ಮುನ್ನೂರ ಐವತ್ತು ದಿನವೂ ಐದಾರು ಜನರಿಗೆ ಕೆಲಸ ನೀಡುತ್ತಿರುವುದು ನಮಗೆ ಹೆಮ್ಮೆ ಎನಿಸಿದೆ ಎಂದರು.

ನಮ್ಮ ಕೃಷಿ ಭೂಮಿಯಲ್ಲಿ ಕಲರ್‌ ಕ್ಯಾಪ್ಸಿಕಮ್, ಪಾಲಿಹೌಸಲ್ಲಿ ಜರ್ಬೆರಾ ಹೂ ಬೆಳೆಯುತ್ತಿದ್ದೇವೆ. ಬಾಳೆ, ಅರಣ್ಯ ಕೃಷಿ ಸೇರಿದಂತೆ ಹಲವು ಬೆಳೆ ಬೆಳೆದಿದ್ದೇನೆ. ಕೊಟ್ಟಿಗೆ ಗೊಬ್ಬರ ಬಳಸುವ ಜತೆಗೆ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಇದರಿಂದ ತಿಂಗಳಿಗೆ ಆರೇಳು ಲಕ್ಷ ಸಂಪಾದನೆಯಾಗುತ್ತಿದೆ ಎಂದರು. ಬಳಿಕ ಕೃಷಿ ಪಂಡಿತ, ಉದಯೋನ್ಮುಖ ಪ್ರಶಸ್ತಿಗೆ ಆಯ್ಕೆಯಾದ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮ ಶೇಖರ್‌, ಶಾಸಕ ಜಿ.ಟಿ. ದೇವೇಗೌಡ, ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್‌, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್‌.ಆರ್‌. ಕೃಷ್ಣಪ್ಪಗೌಡ, ಕಾಡಾ ಅಧ್ಯಕ್ಷ ಎನ್‌. ಶಿವಲಿಂಗಯ್ಯ, ಕೃಷಿ ಇಲಾಖೆ ನಿರ್ದೇಶಕಿ ಡಾ.ಸಿ.ಎನ್‌. ನಂದಿನಿಕುಮಾರಿ, ಜಲಾನಯನ ಅಭಿ ವೃದ್ಧಿ ಇಲಾಖೆ ನಿರ್ದೇಶಕ ಡಾ.ಬಿ.ವೈ. ಶ್ರೀನಿವಾಸ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಂತೇಶಪ್ಪ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರುದ್ರೇಶ್‌, ರಾಜು ಇದ್ದರು.

ಕೃಷಿ ಇಲಾಖೆ ಬೇಕು ಎಂದು ಕೇಳಿ ಈ ಖಾತೆ ಪಡೆದುಕೊಂಡಿದ್ದೇನೆ. ಇದು ಸುಖದ ಸುಪ್ಪತ್ತಿಗೆಯಲ್ಲ. ಮುಳ್ಳಿನ ಹಾಸಿಗೆ ಇದ್ದಂತೆ. ಇಲಾಖೆಯಲ್ಲಿ ಎಷ್ಟೇ ಕೆಲಸ ಮಾಡಿದರೂ ರೈತರಿಂದ ಬೈಗುಳ ತಿನ್ನುವುದು ತಪ್ಪಲ್ಲ. ರೈತರ ಸಮಸ್ಯೆ ಆಲಿಸಲು, ವಲಯವಾರು ಕೃಷಿ ಪದ್ಧತಿಯ ಬಗ್ಗೆ ತಿಳಿಯಲು ಎಲ್ಲಾ ಜಿಲ್ಲೆಗಳಲ್ಲೂ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ
ಆಯೋಜಿಸಿಸುತ್ತಿದ್ದೇವೆ.
● ಬಿ.ಸಿ. ಪಾಟೀಲ್‌, ಕೃಷಿ ಸಚಿವ

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.