ಗಾಂಧಿ ಕನಸಿನಿಂದ ಹಿಂದಿ ದೇಶಭಾಷೆಯಾಯಿತು


Team Udayavani, Sep 17, 2018, 11:24 AM IST

m4-gandhi.jpg

ಮೈಸೂರು: ಭಾರತೀಯರ ಏಕತೆಗೆ ಹಿಂದಿ ಭಾಷೆಯೇ ಉತ್ತಮ ಮಾರ್ಗ ಎಂದು ಗಾಂಧೀಜಿ ಅರಿತಿದ್ದರು. ಅದಕ್ಕೆಂದೇ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲೂ ಹಿಂದಿಯನ್ನೇ ಬಳಸಿಕೊಂಡರು. ಭಾರತದ ಎಲ್ಲಾ ವ್ಯವಹಾರವೂ ರಾಷ್ಟ್ರ ಭಾಷೆಯಾದ ಹಿಂದಿಯಲ್ಲಿರಬೇಕೆಂದು ಅವರು ಬಯಸಿದ್ದರು ಎಂದು ವಿಶ್ರಾಂತ ಹಿಂದಿ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ಹೇಳಿದರು. 

ನಗರದ ಬಿ.ಎನ್‌.ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಆಯೋಜಿಸಿದ್ದ ಹಿಂದಿ ದಿನಾಚರಣೆಯ ಸಮಾರಂಭದಲ್ಲಿ ‘ಗಾಂಧೀಜಿ ಮತ್ತು ರಾಷ್ಟ್ರಭಾಷೆ ಹಿಂದಿ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಗಾಂಧೀಜಿಯ ಮಾತೃ ಭಾಷೆ ಗುಜರಾತಿಯಾದರೂ ಹಿಂದಿ ಭಾಷೆಯ ಮೇಲೆ ಅಪಾರ ಪ್ರಭುತ್ವ ಸಾಧಿಸಿದ್ದರು. ಜನತೆಯನ್ನು ಸ್ವಾತಂತ್ರ ಹೋರಾಟಕ್ಕೆ ಅಣಿಗೊಳಿಸಲು ಹಿಂದಿಯನ್ನು ಸಮರ್ಥವಾಗಿ ಬಳಸಿಕೊಂಡರು. ಇಂದು ಹಿಂದಿ ರಾಷ್ಟ್ರ ಭಾಷೆಯಾದರೂ ಸರ್ಕಾರಿ ಆಡಳಿತ ಹಿಂದಿಯಲ್ಲಿ ನಿರ್ವಹಣೆಯಾಗುತ್ತಿಲ್ಲ.

ಆ ದಿಸೆಯಲ್ಲಿ ಆಡಳಿತ ವ್ಯವಸ್ಥೆ ಗಮನಹರಿಸಬೇಕಿದೆ. ಭಾಷೆಯ ಬೆಳವಣಿಗೆಗೆ ಅನುವಾದ ಕಾರ್ಯ ಬಹಳ ಮುಖ್ಯವಾದುದು. ಹೀಗಾಗಿ ಹಿಂದಿ ಸಾಹಿತ್ಯವನ್ನು ಪ್ರಾದೇಶಿಕ ಮತ್ತು ಜಾಗತಿಕ ಭಾಷೆಗಳಿಗೆ ಅನುವಾದಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಭಾಷೆಯು ಧ್ವನಿ-ಸಂಕೇತಗಳ ಮೂಲಕ ವಿಚಾರಗಳ ವಿನಿಮಯಕ್ಕೆ ನೆರವಾಗುವ ಒಂದು ಮಾಧ್ಯಮವಾಗಿದೆ. ಆಯಾ ನೆಲದ ಸಂಸ್ಕೃತಿಯನ್ನು ಗುರುತಿಸಲು ಭಾಷೆ ಬಹು ಮುಖ್ಯ ಆಯಾಮವಾಗಿದೆ.

ಅಂತೆಯೇ ಬೆಳವಣಿಗೆ, ಅಭಿರುಚಿ, ಆರ್ಥಿಕತೆಗೂ ಭಾಷೆ ಅಗತ್ಯವಾಗಿದೆ. ಭಾರತದಲ್ಲಿ 780 ಭಾಷೆಗಳಿದ್ದರೂ 66 ಭಾಷೆಗಳು ಮಾತ್ರ ಲಿಪಿ ಹೊಂದಿವೆ. ಅವುಗಳಲ್ಲಿ ಹಿಂದಿಯೂ ಒಂದಾಗಿದ್ದು ವಿಶ್ವದ ತೃತೀಯ ಭಾಷೆಯಾಗಿದೆ. 9ನೇ ಶತಮಾನದಲ್ಲಿಯೇ ಹಿಂದಿ, ಅತೀ ಹೆಚ್ಚು ಮಾತನಾಡುವ ಭಾಷೆಯಾಗಿತ್ತು. ಮುಂದೆ ಬ್ರಿಟೀಷರ ವಿರುದ್ಧ ಹೋರಾಡುವಾಗ ಭಾರತದ ಸ್ವಾತಂತ್ರ ಚಳವಳಿಯ ಭಾಷೆಯಾಗಿಯೂ ಬಳಕೆಯಾಯಿತು.

ಇಂದು ವಿಶ್ವದಲ್ಲಿ 2500 ಭಾಷೆಗಳು ಅಳಿನಂಚಿನಲ್ಲಿವೆ. ಪ್ರತಿಯೊಂದು ಭಾಷೆಯು ವೈಶಿಷ್ಟ್ಯವೂ ಭಿನ್ನವೂ ಆಗಿರುವುದರಿಂದ ಅವುಗಳನ್ನು ಬಳಸುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು. ಪಿ.ಯು ಕಾಲೇಜು ಪ್ರಾಂಶುಪಾಲ ಎಸ್‌.ಸೋಮಶೇಖರ ಮಾತನಾಡಿದರು. ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಮಹದೇವಪ್ಪ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.