ಮೈಸೂರು ದಸರಾ; 90 ದಿನಗಳ ಕಾಲ ನಡೆಯಲಿರುವ ವಸ್ತುಪ್ರದರ್ಶನ

ಈ ಬಾರಿಯ ವಸ್ತು ಪ್ರದರ್ಶನ ಹಲವಾರು ವಿಶೇಷತೆಗಳಿಂದ ಕೂಡಿರುವಂತೆ ಮಾಡಲಿದೆ

Team Udayavani, Sep 27, 2022, 1:32 PM IST

ಮೈಸೂರು ದಸರಾ; 90 ದಿನಗಳ ಕಾಲ ನಡೆಯಲಿರುವ ವಸ್ತುಪ್ರದರ್ಶನ

ಮೈಸೂರು: ಸ್ಥಳೀಯ ಹಾಗೂ ಹೊರ ರಾಜ್ಯ, ದೇಶಗಳ ಪ್ರೇಕ್ಷಕರನ್ನು ಕೈ ಬೀಸಿ ಕರೆಯುವ ದಸರಾ ವಸ್ತು ಪ್ರದರ್ಶನ ಈ ಬಾರಿಯ ದಸರೆಯಲ್ಲೂ ಅರೆಬರೆಯಲ್ಲಿ ಚಾಲನೆ ಪಡೆದುಕೊಂಡಿತು.

ಶೇ.80 ರಷ್ಟು ಮಳಿಗೆಗಳು ಭರ್ತಿ ಆಗುವ ಜತೆಗೆ ಎಲ್ಲಾ ಜಿಲ್ಲೆಗಳ ಜಿಪಂ ಮಳಿಗೆಗಳು ಭರ್ತಿಗಳು ತೆರೆದಿವೆ ಎನ್ನುವ ಮಾತನ್ನೂ ಹೇಳಿಕೊಂಡು ಬಂದಿದ್ದರೂ ಅರ್ಧಕ್ಕೆ ಅರ್ಧ ಮಳಿಗೆಗಳು ಖಾಲಿಯಾಗಿತ್ತು. ಮೇಲೆ ಥಳಕು-ಒಳಗೆ ಹುಳುಕು ಎನ್ನುವ ಗಾದೆ ಮಾತಿನಂತೆ ವಸ್ತುಪ್ರದರ್ಶನದ ಆವರಣದಲ್ಲಿ ವಿದ್ಯುತ್‌ ದೀಪಾಲಂಕಾರ, ತಳಿರು-ತೋರಣಗಳನ್ನು ಕಟ್ಟಿ ಸಿಂಗಾರ ಮಾಡಿದ್ದರೂ ಒಳಗೆ ಮಾತ್ರ ನೀರಸವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರನ್ನು ಬರಮಾಡಿಕೊಂಡರಲ್ಲದೆ, ಟೇಪು ಕತ್ತರಿಸಿ ಉದ್ಘಾಟಿಸಿದರು. ನಂತರ, ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ 90 ದಿನಗಳ ಕಾಲ ನಡೆಯಲಿರುವ ವಸ್ತು ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬೇಕು. ಈ ಬಾರಿಯ ವಸ್ತು ಪ್ರದರ್ಶನ ಹಲವಾರು ವಿಶೇಷತೆಗಳಿಂದ ಕೂಡಿರುವಂತೆ ಮಾಡಲಿದೆ ಎಂದರು.

ವಸ್ತು ಪ್ರದರ್ಶನದಲ್ಲಿ ಮಕ್ಕಳ ಬಟ್ಟೆ ಮಳಿಗೆಗಳು, ಮಕ್ಕಳ ಆಟಿಕೆ ವಸ್ತುಗಳ ಮಳಿಗೆಗಳಲ್ಲಿ ಅರ್ಧ ಭರ್ತಿಯಾಗಿದ್ದರೆ, ಹಲವರು ಈಗ ಜೋಡಿಸುವ ಕೆಲಸ ಮಾಡುತ್ತಿದ್ದರು. ಮತ್ತೂಂದೆಡೆ ವಾಹನ ಪಾರ್ಕಿಂಗ್‌ ಗೇಟಿನ ಕಡೆ ಬರುವ ಇರುವ ಆಹಾರ ಮಳಿಗೆಗಳಲ್ಲಿ ಶೇ.20ರಷ್ಟು ಭರ್ತಿಯಾಗಿದ್ದರೆ, ಈಗ ತಮ್ಮ ಅಂಗಡಿಗಳಿಗೆ ಸಾಮಗ್ರಿಗಳನ್ನು ತುಂಬುತ್ತಿದ್ದರೆ, ನಾಮಫ‌ಲಕಗಳನ್ನು ಅಳವಡಿಸುತ್ತಿದ್ದು ಕಂಡುಬಂದಿತು. ಮತ್ತೊಂದೆಡೆ ಶೇ.80ರಷ್ಟು ಸರ್ಕಾರಿ ಮಳಿಗೆಗಳು ಭರ್ತಿಯಾಗಿ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿದೆ ಎನ್ನುವ ಮಾತನ್ನು ಹೇಳಿದ್ದರೂ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಹತ್ತು ಮಳಿಗೆಗಳು ಮಾತ್ರ ವೀಕ್ಷಣೆ ಮಾಡಬಹುದು ಎನ್ನುವಂತಿದ್ದವು. ಕೆಲವು ಮಳಿಗೆಗಳ ಕಾರ್ಯದಲ್ಲಿ ಕಲಾವಿದರು ಕಾರ್ಯೋನ್ಮುಖವಾಗಿದ್ದರು.

ಪಿ.ಕಾಳಿಂಗರಾವ್‌ ಕಲಾಮಂಟಪದ ಸಮೀಪ ವಿದ್ಯುತ್‌ ದೀಪಾಲಂಕಾರ ಮಾಡಿದ್ದರೆ, ಮತ್ತೂಂದು ಕಡೆ ಪ್ರವಾಸಿಗರು ವಿಹರಿಸಲು ಹಾಕಿರುವ ಕುರ್ಚಿಗಳಿಗೆ ಸಿಂಗಾರ ಮಾಡಿದ್ದರಿಂದ ಗಮನ ಸೆಳೆಯುತ್ತಿದ್ದವು. ಎಂ.ಜಿ.ರಸ್ತೆಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್ ಗಳಲ್ಲಿ ಕೆಲವು ಸಜ್ಜಾಗಿದ್ದರೆ, ಹಲವು ಜೋಡಿಸಲಾಗುತ್ತಿದ್ದು ಕಾಣಿಸಿತು.

ವಸ್ತು ಪ್ರದರ್ಶನದಲ್ಲಿ ಒಂದು ಸುತ್ತು ಹಾಕಿ ಬರುವುದಕ್ಕೆ ಎರಡು-ಮೂರು ಗಂಟೆಗಳ ಕಾಲ ಸಮಯ ಕಳೆಯಬಹುದೆಂದು ಸಾರ್ವಜನಿಕರಿಗೆ ಅರ್ಧಕ್ಕೆ ಅರ್ಧ ಖಾಲಿ ಖಾಲಿ ಕಾಣಿಸುತ್ತಿದ್ದರಿಂದ ಬಹುಬೇಗನೆ ನಿರ್ಮಿಸಿದರು. ಮೊದಲ ದಿನವಾಗಿದ್ದರಿಂದ ಉಚಿತ ಪ್ರವೇಶ ಆಗಿದ್ದರಿಂದ ಬಂದವರೆಲ್ಲರೂ ಒಳಗೆ ಒಂದು ಸುತ್ತು ಹಾಕಿಕೊಂಡು ಇರುವಷ್ಟು ನೋಡಿ ಖುಷಿಪಟ್ಟರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಉಪ ಮಹಾಪೌರ ಡಾ.ಜಿ.ರೂಪಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್‌, ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಎಚ್‌ .ಜಿ.ಗಿರಿಧರ್‌, ನಗರಪಾಲಿಕೆ ಸದಸ್ಯರಾದ ಕೆ.ಜೆ.
ರಮೇಶ್‌, ಜಗದೀಶ್‌ ಹಾಜರಿದ್ದರು.

ಹದಿನೈದು ದಿನಗಳು ಮುಂಚಿತವಾಗಿ ವಸ್ತು ಪ್ರದರ್ಶನ ಆರಂಭಿಸಬೇಕಿತ್ತಾದರೂ ಮಳೆಯ ಕಾರಣದಿಂದ ವಿಳಂಬವಾಯಿತು. ಈ ಬಾರಿ ತ್ರೀಡಿ ಮ್ಯಾಪಿಂಗ್‌, ವಿಡಿಯೋ ಮ್ಯಾಪಿಂಗ್‌, ನಟ ಪುನೀತ್‌ ರಾಜ್‌ಕುಮಾರ್‌ ,ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳ ಸ್ಯಾಂಡ್‌ ಮ್ಯೂಸಿಯಂ ಆಕರ್ಷಿಸಲಿದೆ.
ಮಿರ್ಲೆ ಶ್ರೀನಿವಾಸಗೌಡ,
ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ.

ಟಾಪ್ ನ್ಯೂಸ್

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.