Udayavni Special

ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ ಬಳಸಿ


Team Udayavani, Oct 26, 2019, 3:00 AM IST

parisara-sne

ನಂಜನಗೂಡು: ಕಾಲ ಬದಲಾದಂತೆ ಸಮಾಜವೂ ಬದಲಾಗಬೇಕು. ಮಹಿಳೆಯರು ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ ಬಳಸಬೇಕು ಎಂದು ಹಸಿರು ದಳ ಸಂಸ್ಥೆಯ ಸಚಿತ ಶರ್ಮಿಳಾ ಡಿಸೋಜಾ ಮನವಿ ಮಾಡಿದರು.

ನಗರದ ಜ್ಯುಬಲಿಯೇಂಟ್ಸ್‌ ಭಾರತೀಯ ಫೌಂಡೇಷ‌ನ್‌ ಆವರಣದಲ್ಲಿ ನಂಜನಗೂಡು ನಗರಸಭೆ, ಜ್ಯುಬಿಲಿಯಂಟ್‌ ಭಾರತೀಯ ಫೌಂಡೇಷನ್‌ ಹಾಗೂ ಹಸಿರು ದಳ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸದ್ದ ಆಧುನಿಕ ಯುಗದಲ್ಲಿ ಮುಟ್ಟಿನ ಆಯ್ಕೆ ಹಾಗೂ ಮರುಬಳಕೆಗೆ ಅವಕಾಶವಿಲ್ಲದ ಪ್ಯಾಡ್‌ನಿಂದಾಗುವ ಸಮಸ್ಯೆಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಾವು ಉಪಯೋಗಿಸಿ ಬಿಸಾಡುವ ಪ್ಯಾಡ್‌ಗಳು ಪರಿಸರ ಹಾಗೂ ನಮ್ಮ ಆರೋಗ್ಯಕ್ಕೆ ಮಾರಕವಾಗಿವೆ. ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಾಗಿದೆ. ಪರಿಸರಕ್ಕೆ ಮಾರಕವಾಗುವ ರಾಸಾಯನಿಕ ಯುಕ್ತ ಸ್ಯಾನಿಟರಿ ಪ್ಯಾಡ್‌ ಬದಲು ಹೊಸದಾಗಿ ಅವಿಷ್ಕರಿಸಿರುವ ಸಿಲಿಕಾನ್‌ ಕಫ್ ಉಪಯೋಗಿಸಿ. ಇದರಿಂದ ಸುಸ್ಥಿರ ಪರಿಸರಕ್ಕೂ ನೆರವಾಗಲಿದೆ ಎಂದರು.

ಮುಟ್ಟಿನ ಸಮಯದಲ್ಲಿ ಈ ಹಿಂದೆ ಮಹಿಳೆಯರು ಹತ್ತಿ ಬಟ್ಟೆ ಬಳಸಲಾಗುತ್ತಿತ್ತು. ಬದಲಾದ ಕಾಲದಲ್ಲಿ ರಾಸಾಯನಿಕ ಯುಕ್ತ ಪ್ಯಾಡ್‌ ಬಂತು. ಈಗ ಅದರ ಬದಲಾಗಿ ಹತ್ತು ವರ್ಷಗಳ ಕಾಲ ಬಳಸಬಹುದಾದ ( ಒಂದೇ ಕಪ್‌) ಸಿಲಿಕಾನ್‌ ಕಫ್ ಆವಿಷ್ಕಾರವಾಗಿದೆ. ಇದು ಪರಿಸರ ಹಾಗೂ ಮಹಿಳೆಯರ ಆರೋಗ್ಯ ಹಾಗೂ ಪರಿಸರದ ಮೇಲೆ ಯಾವುದೇ ಹಾನಿಯಾಗುವುದಿಲ್ಲ. ಇಂತಹ ಪರಿಸರ ಸ್ನೇಹಿ ವಸ್ತುಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಮುಟ್ಟಿನ ಸಮಸ್ಯೆಗೆ ಸ್ಯಾನಿಟರಿ ಪ್ಯಾಡ್‌ ಖರೀದಿಗೆ ಪ್ರತಿಯೊಬ್ಬರೂ ಸಹಸ್ರಾರು ರೂ. ವ್ಯಯಿಸುತ್ತಾರೆ. ಬಳಸಿ ಬಿಸಾಡುವ ಈ ಸ್ಯಾನಿಟರ್‌ ಪ್ಯಾಡ್‌ ಭೂಮಿಯಲ್ಲಿ ಬೇಗ ಕರಗುವುದಿಲ್ಲ. ಇದರ ಬದಲು ಕೇವಲ ನಾಲ್ಕು ಸಾವಿರ ರೂ. ನೀಡಿದರೆ ಮರು ಬಳಕೆಯ ಸಿಲಿಕಾನ್‌ ಕಪ್‌ ದೊರೆಯಲಿದೆ. ಜೀವತಾವಧಿ ಇದನ್ನು ಉಪಯೋಗಿಸಬಹುದು. ಜೊತೆಗೆ ಪರಿಸರ ಹಾಗೂ ಆರೋಗ್ಯಕ್ಕೂ ಸಹಕಾರಿಯಾಗಿರಲಿದೆ ಎಂದು ಹೇಳಿದರು.

ನಂಜನಗೂಡು ನಗರದಲ್ಲಿ ಸುಮಾರು 18 ಸಾವಿರ ಸ್ಯಾನಿಟರ್‌ ಪ್ಯಾಡ್‌ಗಳನ್ನು ಬಳಸಿ ಬಿಸಾಡಲಾಗುತ್ತಿದೆ. ಇದು ನಗರ ಸ್ವತ್ಛತೆ ಹಾಗೂ ನಗರಸಭೆಗೂ ತೊಂದರೆಯಾಗಲಿದೆ. ಪ್ರತಿಯೊಬ್ಬರೂ ಸ್ವತ್ಛ ನಂಜನಗೂಡು ಅಭಿಯಾನದಲ್ಲಿ ಪಾಲ್ಗೊಂಡು ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ, ಸಹಾಯಕ ಅಧಿಕಾರಿ ಬಸಂತ್‌ ಕುಮಾರ್‌, ಜ್ಯುಬಿಲಿಯಂಟ್‌ ಭಾರತೀಯ ಫೌಂಡೇಷ‌ನ್‌ನ ದೀಪಕ್‌, ರವಿ, ಹಸಿರು ದಳದ ಕಾವ್ಯಾ, ನಟರಾಜ ಇತರರಿದ್ದರು.

ಟಾಪ್ ನ್ಯೂಸ್

ಅಕ್ಟೋಬರ್‌ನಲ್ಲಿ ಹೊಸ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿ

ಅಕ್ಟೋಬರ್‌ನಲ್ಲಿ ಹೊಸ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿ

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

Untitled-1

ಜುಲೈ 31ವರೆಗೂ ವ್ಯಾಪಕ ಮಳೆ

ಗಂಗಾವಳಿ ಪ್ರವಾಹ: ಕೊಚ್ಚಿಹೋದ ನೆರೆ ಪೀಡಿತ ಜನರ ಬದುಕು

ಗಂಗಾವಳಿ ಪ್ರವಾಹ: ಕೊಚ್ಚಿ ಹೋದ ನೆರೆ ಪೀಡಿತ ಜನರ ಬದುಕು

ghtryrtyr

ಬೊಮ್ಮಾಯಿ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳು ; ಯಾರಿಗೆ ಒಲಿದಿದೆ ಡಿಸಿಎಂ ಪಟ್ಟ ?

hrtyrtyrtr

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬೊಮ್ಮಾಯಿ : ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ

fgdfgretgre

ಬಸವರಾಜ್ ಬೊಮ್ಮಾಯಿ ನೂತನ ಸಿಎಂ: ಶಾಸಕ ಯತ್ನಾಳ ಪ್ರತಿಕ್ರಿಯೆ ಏನು ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

mysore news

ಕಾಯಕ ವರ್ಗಗಳಿಗೆ ನೆರವು ನೀಡಿ

mysore news

ಮನೆಯಲ್ಲೇ ಹಸಿ, ಒಣ ಕಸ ಬೇರ್ಪಡಿಸಿ

mysore news

ಕಪಿಲೆ ಹರಿವು ಏರಿಕೆ: ಸ್ನಾನ, ಮುಡಿ ಸೇವೆ ಸ್ಥಗಿತ

guru poonima festival

ಗುರು ಸೇವೆ ಸ್ಮರಿಸಿ, ಸನ್ಮಾನಿಸಿ ಗುರು ಪೂರ್ಣಿಮೆ ಆಚರಣೆ

MUST WATCH

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

udayavani youtube

ಮಳೆಯ ಆರ್ಭಟಕ್ಕೆ ಯಾಣದ ಶ್ರೀ ಭೈರವೇಶ್ವರ ದೇವಾಲಯದ ರಸ್ತೆಯ ಸ್ಥಿತಿ

udayavani youtube

ಎರಡೇ ದಿನದಲ್ಲಿ closeಆಗಿ ನಿಮ್ಮನ್ನು ಯಾಮಾರಿಸ್ತಾರೆ..ಜಾಗ್ರತೆ !!

ಹೊಸ ಸೇರ್ಪಡೆ

ಅಕ್ಟೋಬರ್‌ನಲ್ಲಿ ಹೊಸ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿ

ಅಕ್ಟೋಬರ್‌ನಲ್ಲಿ ಹೊಸ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

Untitled-1

ರ್ಯಾಗಿಂಗ್‌ ಪಿಡುಗು: 7 ತಿಂಗಳುಗಳಲ್ಲಿ 40 ಮಂದಿ ವಿದ್ಯಾರ್ಥಿಗಳ ಬಂಧನ

ಗೋಶಾಲೆಗಳು ಭರ್ತಿ; ಶೀಘ್ರ ಜಿಲ್ಲಾ ಗೋಶಾಲೆ 

ಗೋಶಾಲೆಗಳು ಭರ್ತಿ; ಶೀಘ್ರ ಜಿಲ್ಲಾ ಗೋಶಾಲೆ 

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.