Udayavni Special

ಕೊರೊನಾ-2; ಕಟ್ಟೆಚ್ಚರ ವಹಿಸಲು ನಿರ್ದೇಶನ


Team Udayavani, Mar 17, 2021, 7:20 PM IST

ವಬ್ಗಗಹ್ಗಹ್

ರಾಯಚೂರು : ದೇಶದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗುತ್ತಿದ್ದು, ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಸೂಚಿಸಿದರು.

ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ವಿಡಿಯೋ ಸಂವಾದ ಕೊಠಡಿಯಲ್ಲಿ ಕೊರೊನಾ ವ್ಯಾಕ್ಸಿನ್‌ಗೆ ಸಂಬಂ ಧಿಸಿದಂತೆ ತಾಲೂಕು ಮಟ್ಟದ ಅಧಿ ಕಾರಿಗಳು ಹಾಗೂ ತಹಶೀಲ್ದಾರ್‌ ಜತೆ ವಿಡಿಯೋ ಕಾನ #ರೆನ್ಸ್‌ ಮೂಲಕ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳ ತಡೆಗೆ ಇಂದಿನಿಂದಲೇ ಎಲ್ಲ ಅಗತ್ಯ ಕ್ರಮ ಕೈಗೊಳ್ಳಿ ಎಂದರು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೋವಿಡ್‌ ಬಗ್ಗೆ ಧ್ವನಿವರ್ಧಕ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ವಾಹನಗಳ ವ್ಯವಸ್ಥೆ ಮಾಡಬೇಕು.

ರಾಯಚೂರು ನಗರಸಭೆಯಲ್ಲಿ ನಾಲ್ಕು ವಾಹನ, ಸಿಂಧನೂರು ನಗರಸಭೆ-2, ಮಾನ್ವಿ ಪುರಸಭೆ-2, ಲಿಂಗಸುಗೂರು ಪುರಸಭೆ-2, ದೇವದುರ್ಗ ಪುರಸಭೆ-2 ಮತ್ತು ಸಿರವಾರ, ತುರ್ವಿಹಾಳ, ಬಳಗಾನೂರು, ಮುದಗಲ್‌ ಪಪಂಗಳಿಗೆ ತಲಾ ಒಂದು ವಾಹನದ ವ್ಯವಸ್ಥೆ ಮಾಡಬೇಕು ಎಂದರು.

ಸಾಮಾಜಿಕ ಅಂತರ ಕಾಪಾಡಬೇಕು. ಸ್ಯಾನಿಟೈಜೇಷನ್‌ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿ ಧಿಸಬೇಕು. ಸಂತೆ, ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇದನ್ನು ಮೇಲ್ವಿಚರಣೆ ಮಾಡಲು ನಗರಸಭೆ ಸಿಬ್ಬಂದಿ ನಿಯೋಜಿಸಬೇಕು ಎಂದು ಸೂಚಿಸಿದರು.

ಮದುವೆಗಳಿಗೆ ತೆರೆದ ಪ್ರದೇಶಗಳಲ್ಲಿ 500 ಹಾಗೂ ಕಲ್ಯಾಣ ಮಂಟಪದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಬೇಕು. ಜನ್ಮ ದಿನ ಹಾಗೂ ಇತರೆ ಆಚರಣೆಗಳಿಗೆ 100 ಜನಕ್ಕಿಂತ ಹೆಚ್ಚು ಜನರು ಭಾಗವಹಿಸಬಾರದು. ನಿಧನ, ಶವ ಸಂಸ್ಕಾರಕ್ಕೆ 100 ಜನರು, ಧಾರ್ಮಿಕ ಸಭೆ-ಸಮಾರಂಭಗಳಲ್ಲಿ 500, ರಾಜಕೀಯ ಸಮಾರಂಭಗಳಲ್ಲಿ 500 ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪ್ರತಿ ನಿತ್ಯ ಸಾವಿರ ಜನರಿಗೆ ಕೊರೊನಾ ತಪಾಸಣೆ ನಡೆಸಬೇಕು. ರಾಜ್ಯ ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಭವನ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಮಾಡಬೇಕು. ಜಿಲ್ಲಾ-ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ 7 ಚೆಕ್‌ಪೋಸ್ಟ್‌ ಪ್ರಾರಂಭಿಸಿದ್ದು, ಸಂಬಂಧಿ ಸಿದ ತಹಶೀಲ್ದಾರರು ಅಲ್ಲಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು ಎಂದರು.

ಈ ವೇಳೆ ಎಡಿಸಿ ಕೆ.ಆರ್‌. ದುರಗೇಶ, ಎಸಿ ಸಂತೋಷ ಕಾಮಗೌಡ, ಡಿಎಚ್‌ಒ ಡಾ| ರಾಮಕೃಷ್ಣ, ಡಾ| ಸುರೇಂದ್ರಬಾಬು, ಆರ್‌ಸಿಎಚ್‌ಒ ಅ ಧಿಕಾರಿ ಡಾ| ವಿಜಯಾ ಕೆ., ಡಾ| ಕೆ. ನಾಗರಾಜ ಇತರರಿದ್ದರು.

ಟಾಪ್ ನ್ಯೂಸ್

ಜನಹಗ್ದಸ಻

ಮಾಜಿ ಶಾಸಕ ವಸಂತ ಅಸ್ನೋಟಿಕರ್ ಕೊಲೆ ಪ್ರಕರಣ: ಗುಂಡಿಟ್ಟಿದ್ದ ಮೊಹಿತೆಗೆ ಜೀವಾವಧಿ ಶಿಕ್ಷೆ

ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆಗೆ 5-6 ದಿನಗಳಲ್ಲಿ ಅನುಮತಿ: ಸಚಿವ ಜಗದೀಶ ಶೆಟ್ಟರ್‌

ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆಗೆ 5-6 ದಿನಗಳಲ್ಲಿ ಅನುಮತಿ: ಸಚಿವ ಜಗದೀಶ್ ಶೆಟ್ಟರ್

gdfgdsg

ಮೂತ್ರಪಿಂಡ ಕಸಿಗೆ ಕಿಮ್ಸ್‌ ಸಿದ್ಧ; ಒಪ್ಪಿಗೆಯಷ್ಟೇ ಬಾಕಿ ­

Migrants fear 2020 replay, say may run out of work and resources if lockdown extended

ಲಾಕ್ ಡೌನ್ ಭೀತಿ : ರಾಷ್ಟ್ರ ರಾಜಧಾನಿಯಿಂದ ಮತ್ತೆ ಗುಳೆ ಹೊರಟ ವಲಸೆ ಕಾರ್ಮಿಕರು..!?

ಮಂಡ್ಯ:  413 ಮಂದಿಗೆ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ:  413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

ಕಲಬುರಗಿ : ಅಪಘಾತದಲ್ಲಿ ಗಂಭೀರ ಗಾಯಗೊಂಡ 6 ವರ್ಷದ ಬಾಲಕನಿಗೆ ವೆಂಟಿಲೇಟರ್ ಸಿಗದೆ ಸಾವು

ಕಲಬುರಗಿ : ಅಪಘಾತದಲ್ಲಿ ಗಂಭೀರ ಗಾಯಗೊಂಡ 6 ವರ್ಷದ ಬಾಲಕನಿಗೆ ವೆಂಟಿಲೇಟರ್ ಸಿಗದೆ ಸಾವು

hjkhku

‘ಸಂಪೂರ್ಣ ಲಾಕ್‍ಡೌನ್‍’ ಹೇರುವಂತೆ ಸಿಎಂಗೆ ಸಚಿವರುಗಳಿಂದ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Niru

ಕುಡಿವ ನೀರು ನೀಡುವುದು ಪುಣ್ಯ ಕಾರ್ಯ

Cov-19

“ಕಲ್ಯಾಣ’ಗಳಿಗೆ ಮತ್ತೆ ಕಂಟಕವಾದ ಕೋವಿಡ್

ಗಹ್ಗ್ಸದಸ

ರಾಯಚೂರು : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬಲಿ

Poll

ಸ್ಟ್ರಾಂಗ್‌ ರೂಂ ಸೇರಿದ ಮತಯಂತ್ರ-ಭದ್ರತೆ

Ganekal

ಗಣೇಕಲ್‌ ಜಲಾಶಯಕ್ಕೆ ನೀರು ಹರಿಸಲು ಆಗ್ರಹಿಸಿ ರಸ್ತೆತಡೆ

MUST WATCH

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

udayavani youtube

ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ನೀಡಿದ ಮೆಡಿಕಲ್ ಸ್ಟೋರ್; ಕಂಗಾಲಾದ ಗ್ರಾಹಕ !

ಹೊಸ ಸೇರ್ಪಡೆ

ಜನಹಗ್ದಸ಻

ಮಾಜಿ ಶಾಸಕ ವಸಂತ ಅಸ್ನೋಟಿಕರ್ ಕೊಲೆ ಪ್ರಕರಣ: ಗುಂಡಿಟ್ಟಿದ್ದ ಮೊಹಿತೆಗೆ ಜೀವಾವಧಿ ಶಿಕ್ಷೆ

ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆಗೆ 5-6 ದಿನಗಳಲ್ಲಿ ಅನುಮತಿ: ಸಚಿವ ಜಗದೀಶ ಶೆಟ್ಟರ್‌

ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆಗೆ 5-6 ದಿನಗಳಲ್ಲಿ ಅನುಮತಿ: ಸಚಿವ ಜಗದೀಶ್ ಶೆಟ್ಟರ್

ಛತ್ರ, ಹೋಟೆಲ್‌, ಟಾಕೀಸ್‌ಗಳಲ್ಲಿ ನಿಯಮ ಪಾಲಿಸಿ

ಛತ್ರ, ಹೋಟೆಲ್‌, ಟಾಕೀಸ್‌ಗಳಲ್ಲಿ ನಿಯಮ ಪಾಲಿಸಿ

vghfghtfy

ಮಕ್ಕಳ ಮನದೊಳಗೆ ವಿವೇಕದ ಬೆಳಕು ವಿವೇಕಾನಂದ

gbdfgdsg

ನಮ್ಮೂರ ಸಂಸ್ಕೃತಿಗೆ ಮರಳಿದ ಆಕಾಶವಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.