ದುಬಾರಿ ಮೊಬೈಲ್‌ಗ‌ಳಿಗೆ ಖದೀಮರ ಗಾಳ!

ಹಳ್ಳಿಗಾಡಿನಿಂದ ಬಂದವರಂತೆ ಆಸುಪಾಸು ಓಡಾಡುತ್ತಿದ್ದರು.

Team Udayavani, Sep 2, 2021, 6:21 PM IST

ದುಬಾರಿ ಮೊಬೈಲ್‌ಗ‌ಳಿಗೆ ಖದೀಮರ ಗಾಳ!

ಯಚೂರು: ಕಳೆದ ಕೆಲ ದಿನಗಳಿಂದ ನಗರದಲ್ಲಿ ಮೊಬೈಲ್‌ ಕಳವು ಹೆಚ್ಚಾಗುತ್ತಿದ್ದು, ಕದೀಮರು ದುಬಾರಿ ಫೋನ್‌ಗಳಿಗೆ ಗಾಳ ಹಾಕುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಅದರಲ್ಲೂ ನಗರದ ಡಿಸಿ ಗೃಹ ಕಚೇರಿ ಪಕ್ಕದಲ್ಲೇ ಈ ಘಟನೆಗಳು ನಡೆಯುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಡಿಸಿ ಗೃಹ ಕಚೇರಿ ಪಕ್ಕದಲ್ಲಿರುವ ಬಸ್‌ ನಿಲ್ದಾಣದಲ್ಲಿ ಕೆಲವರು ದುಬಾರಿ ಮೊಬೈಲ್‌ ಫೋನ್‌ಗಳನ್ನು ಕಳೆದುಕೊಂಡಿದ್ದಾರೆ. ಬಸ್‌ ಇಳಿಯುವಾಗಲೋ,ಆಟೋ ಹತ್ತುವಾಗಲೋ ಸಾರ್ವಜನಿಕರ ಕಣ್ತಪ್ಪಿಸಿ ಮೊಬೈಲ್‌ ಕಳವು ಮಾಡಲಾಗುತ್ತಿದೆ. ಆದರೆ, ಈ ಕಳ್ಳರು ಬಹಳ ಚಾಣಕ್ಯತನದಿಂದ ಕೆಲಸ ಮಾಡುತ್ತಿದ್ದು, ಒಂದೆರಡು ನಿಮಿಷಗಳಲ್ಲೇ ಕಣ್ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ನಗರದಲ್ಲಿ ಚಡ್ಡಿ ಗ್ಯಾಂಗ್‌ ಬೀಡು ಬಿಟ್ಟು ಸರಣಿ ಕಳ್ಳತನ ಮಾಡಿತ್ತು. ಪೊಲೀಸರಿಗೂ ಈ ಕಳ್ಳರ ಜಾಡು ಹಿಡಿಯುವುದು ಕಷ್ಟ ಸಾಧ್ಯವಾಗಿತ್ತು. ದೊಡ್ಡ-ದೊಡ್ಡಕೈಗಾರಿಕೆಗಳು,ಮನೆಗಳಿಗೆ ಕನ್ನ ಹಾಕಿ ಜನರ ನಿದ್ದೆಗೆಡಿಸಿತ್ತು.

ನಿತ್ಯ ಒಂದೊಂದು ಏರಿಯಾದಲ್ಲಿ ಕಳ್ಳತನ ಮಾಡಿ ದೊಡ್ಡ ಸುದ್ದಿ ಮಾಡಿತ್ತು. ಈಗ ಮೊಬೈಲ್‌ ಕಳ್ಳರ ಗ್ಯಾಂಗ್‌ಕೂಡ ಅದೇ ಹಾದಿಯಲ್ಲಿ ಸಾಗಿದೆಯಾ ಎಂಬುದು ಅನುಮಾನಕ್ಕೆಡೆ ಮಾಡಿದೆ.

ಸಿಸಿ ಕ್ಯಾಮರಾಗಳಿಲ್ಲ: ಬಸ್‌ ನಿಲ್ದಾಣದ ಆಸುಪಾಸು ಡಿಸಿ ಗೃಹ ಕಚೇರಿ ಬಿಟ್ಟರೆ ದೊಡ್ಡ ಮಳಿಗೆಗಳಾಗಲಿ,ಕಟ್ಟಡಗಳಾಗಲಿ ಇಲ್ಲ. ದೂರದಲ್ಲಿ ಆಸ ³ತ್ರೆ, ಪದವಿ ಕಾಲೇಜುಗಳಿವೆ. ಆಸು ಪಾಸು ಎಲ್ಲಿಯೂ ಸಿಸಿ ಕ್ಯಾಮರಾ ಕಣ್ಗಾವಲಿಲ್ಲ. ಇದರಿಂದ ಕದೀಮರು ಈ ಸ್ಥಳದಲ್ಲಿ ಹೆಚ್ಚಾಗಿ ಕೃತ್ಯ ಎಸಗುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈಗ ದುಬಾರಿ ಬೆಲೆಯ ಸ್ಮಾರ್ಟ್‌ ಫೋನ್‌ಗಳನ್ನು ಕಳೆದುಕೊಂಡವರು ಪಶ್ಚಿಮ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ. ಕದೀಮರು ಈವರೆಗೂ ಮೊಬೈಲ್‌ ಗಳನ್ನು ಆನ್‌ ಮಾಡಿಲ್ಲ. ಬಹುಶಃ ಸ್ಥಳೀಯರಾಗಿದ್ದಾರೆ. ಇಲ್ಲಿಗಾಗಲೇ ಪತ್ತೆ ಹಚ್ಚಬಹುದಿತ್ತು. ಇದು ಬೇರೆ ಕಡೆಯಿಂದ ಬಂದಿರುವ ತಂಡವಾಗಿರಬಹುದು ಎಂಬುದು ಪೊಲೀಸರ ಶಂಕೆಯಾಗಿದೆ.

ಬಸ್‌ ನಿಲ್ದಾಣದಲ್ಲೂ ಕೈ ಚಳಕ: ಇಲ್ಲಿ ಮಾತ್ರವಲ್ಲ ಬಸ್‌ ನಿಲ್ದಾಣದಲ್ಲೂಕೆಲವರು ಮೊಬೈಲ್‌ ಕಳೆದುಕೊಂಡಿದ್ದಾರೆ. ಪಾಕೆಟ್‌ನಲ್ಲಿ ಇಡುವಾಗ, ಮೇಲೆ ಜೇಬಿನಲ್ಲಿ ಇಟ್ಟಿರುವ ಮೊಬೈಲ್‌ಗ‌ಳನ್ನು ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲೇ ಕದಿಯಲಾಗುತ್ತಿದೆ. ಫೋನ್‌ ಕಳೆದಿರುವ ಬಗ್ಗೆ ಖಚಿತಗೊಳ್ಳುವುದರೊಳಗೆ ಸ್ಥಳ ಬದಲಾಯಿಸಿ ಹೋಗಿರುತ್ತಾರೆ. ಹಳ್ಳಿಗಾಡಿನಿಂದ ಬಂದವರಂತೆ ಆಸುಪಾಸು ಓಡಾಡುತ್ತಿದ್ದರು. ನನ್ನ ಮೊಬೈಲ್‌ ಕಳೆದಿದೆ ಎಂದು ತಿಳಿಯುವಷ್ಟರಲ್ಲಿ ಅಲ್ಲಿ ಅವರು ಕಾಣಿಸಲಿಲ್ಲ ಎನ್ನುತ್ತಾರೆ ಮೊಬೈಲ್‌ ಕಳೆದುಕೊಂಡ ವ್ಯಕ್ತಿ.

ಮೊಬೈಲ್‌ ಕಳ್ಳತನ ಮುಂಚೆಯಿಂದಲೂ ನಡೆಯುತ್ತಿವೆ. ಡಿಸಿ ಗೃಹಕಚೇರಿ ಪಕ್ಕದಲ್ಲೇ ಹೆಚ್ಚು ನಡೆದಿರುವ ಶಂಕೆ ಇರುವಕಾರಣಆ ಭಾಗದ ಆಸುಪಾಸು ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇದಕ್ಕೆ ವಿಶೇಷ ತಂಡ ನಿಯೋಜಿಸಿ ಕೆಲಸ ಮಾಡಲಾಗುತ್ತಿದೆ. ಬಹುಶಃ ಈ ಕೃತ್ಯ ಎಸಗುತ್ತಿರುವುದು ಹೊಸ ತಂಡವಿರಬಹುದು ಎಂಬ ಶಂಕೆ ಇದೆ.
ಮಂಜುನಾಥ, ಪಿಎಸ್‌ಐ, ಪಶ್ಚಿಮ ಠಾಣೆ

ನಾನು ಆ.19ರಂದು ಡಿಸಿ ಗೃಹಕಚೇರಿ ಬಳಿ 40 ಸಾವಿರ ರೂ. ಮೊಬೈಲ್‌ ಕಳೆದುಕೊಂಡಿದ್ದೇನೆ. ಜೇಬಲಿದ್ದ ಮೊಬೈಲ್‌ ಕೆಲ ಹೊತ್ತಿನಲ್ಲಿ ಕಾಣಿಸಲಿಲ್ಲ. ಬುಧವಾರ ನನಗೆ ಗೊತ್ತಿರುವ ಸ್ನೇಹಿತರೊಬ್ಬರು ಅದೇ ಸ್ಥಳದಲ್ಲಿ ಬುಧವಾರ ಮೊಬೈಲ್‌ಕಳೆದುಕೊಂಡಿದ್ದಾರೆ. ಅದೇ ಸ್ಥಳದಲ್ಲಿಘಟನೆ ನಡೆದಿರುವುದು ಅನುಮಾನಕ್ಕೆಡೆ ಮಾಡಿದೆ. ಪೊಲೀಸರು ಈವರೆಗೂ ಮೊಬೈಲ್‌ ಸುಳಿವು ಸಿಕ್ಕಿಲ್ಲ ಎನ್ನುತ್ತಿದ್ದಾರೆ.

ಮೊಬೈಲ್‌ ಕಳೆದುಕೊಂಡ ವ್ಯಕ್ತಿ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.