ಕೋವಿಡ್‌ 19 ಲ್ಯಾಬ್‌ಗೆ 2.62 ಕೋಟಿ!


Team Udayavani, Jun 4, 2020, 7:40 AM IST

amount lab

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ಪತ್ತೆ ಪ್ರಯೋಗಾಲಯಕ್ಕೆ 2.62 ಕೋಟಿ ರೂ, ಕ್ವಾರಂಟೈನ್‌ ವ್ಯವಸ್ಥೆಗೆ 50 ಲಕ್ಷ ರೂ, ವಲಸೆ ಕಾರ್ಮಿಕರಿಗೆ ತತ್ಕಾಲಿಕ ವಸತಿ ಕಲ್ಪಿಸಲು 30 ಲಕ್ಷ ರೂ ಬಿಡುಗಡೆ ಮಾಡಲಾ ಗಿದೆ ಎಂದು  ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು. ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀ ರ್ಣದಲ್ಲಿ ಅಧಿಕಾರಿಗಳ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಿಪತ್ತು ನಿರ್ವಹಣಾ ನಿಧಿಯಿಂದ ಈ ಅನು ದಾನ  ಬಿಡುಗಡೆಯಾಗಿದೆ. ವಿಪತ್ತು ನಿರ್ವಹಣಾ ಮಂಡಳಿಯ ಉಪಾಧ್ಯಕ್ಷರಾಗಿ ತಾವು ಈ ನಿರ್ಧಾರ ಪ್ರಕಟಿಸಿರುವುದಾಗಿ ತಿಳಿಸಿದರು. ರಾಮನಗರ ಜಿಲ್ಲೆಯಲ್ಲಿ ಕನಕಪುರ ಮತ್ತು ರಾಮನಗರ ತಾಲೂಕುಗಳನ್ನು ಬರ ಪೀಡಿತ ಎಂದು  ಘೋಷಿಸಲಾಗಿದೆ. ಕನಕಪುರಕ್ಕೆ 153 ಲಕ್ಷ ಮತ್ತು 117.85 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್‌-19 ಸೋಂಕು ಸಂದರ್ಭದ ಬಳಕೆಗೆಂದು ಜಿಲ್ಲಾಧಿಕಾರಿಗಳ ಅಕೌಂಟ್‌ನಲ್ಲಿ  13.05 ಕೋಟಿ ರೂ.  ಇದೆ ಎಂದರು. ಜಿಲ್ಲೆಯ ಕನಕಪುರ, ರಾಮನಗರ ಮತ್ತು ಮಾಗಡಿಗಳಲ್ಲಿ ಹೊಸ ನಾಡ ಕಚೇರಿ ಕಟ್ಟಡ ಗಳ ನಿರ್ಮಾಣಕ್ಕೆ 56.56 ಲಕ್ಷ ರೂ. ಅನು ದಾನ ಬಿಡುಗಡೆಯಾಗಿದೆ. ಮಾಗಡಿಯಲ್ಲಿ ನಾಡ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ  ಇನ್ನಷ್ಟೆ ಪೂರ್ಣಗೊಳ್ಳಬೇಕಾಗಿದೆ ಎಂದರು. ಬರ, ಪ್ರವಾಹ, ಕೋವಿಡ್‌-19 ಸೋಂಕು ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ನೀಡಿರುವ ಅನುದಾನದ ಅಂಕಿ ಅಂಶಗಳನ್ನು ಸಚಿವರು ನೀಡಿದರು.

ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌.ಡಿ.ಆರ್‌.ಎಫ್)  ರಾಜ್ಯದಲ್ಲಿ ಒಟ್ಟು 284 ಕೋಟಿ ರೂ. ಬಿಡುಗಡೆ ಯಾಗಿದೆ ಎಂದರು. ಕೋವಿಡ್‌-19 ಸೋಂಕಿನ ನಿಯಂತ್ರಣದ ಜೊತೆಗೆ ರಾಜ್ಯದ ಅಭಿವೃದಿಟಛಿಗೂ ಸರ್ಕಾರ ಮುಂದಾಗಿದೆ ಎಂದರು. ಜಿಲ್ಲಾಧಿಕಾರಿ  ಎಂ.ಎಸ್‌.ಅರ್ಚನಾ, ಜಿಪಂ ಸಿಇಒ ಇಕ್ರಂ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌, ಉಪವಿಭಾಗಾಧಿಕಾರಿ ದ್ರಾಕ್ಷಾಯಿಣಿ, ಜಿಲ್ಲೆಯ ನಾಲ್ವರೂ ತಹಸೀಲಾ ªರರು ಹಾಜರಿದ್ದರು.

27 ಎಕರೆ ಭೂಮಿ ಮಂಜೂರು: ರಾಮನಗರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಬೇಡಿಕೆಗಳಿಗೆ ಅನುಗುಣ ವಾಗಿ 27 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಮಾಗಡಿ ಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆ ನಿರ್ಮಾಣಕ್ಕೆ  6 ಎಕರೆ, ರಾಮನಗರ ತಾಲೂಕು ಶೇಷಗಿರಿಹಳ್ಳಿಯಲ್ಲಿ ಕಸ ವಿಲೇವಾರಿಗೆ 3.5 ಎಕರೆ ನೀಡಲಾಗಿದೆ ಎಂದು ಉದಾಹರಣೆ ನೀಡಿದರು.

ಟಾಪ್ ನ್ಯೂಸ್

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

1-gg

CM ವಿರುದ್ಧ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಟೀಕೆ: ಕಾಂಗ್ರೆಸ್‌ ಬಣಗಳ ಪ್ರತಿಭಟನೆ

1

Renuka Swamy Case: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

1-vj

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

1-v-dsadsa-d

Hooch tragedy ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿ: ಅಣ್ಣಾಮಲೈ

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

Tamil-nadu-Kallakuruchi

TamilNadu: ಅಕ್ರಮ ಮದ್ಯ ಸೇವನೆ, ಮೃತರ ಸಂಖ್ಯೆ 34ಕ್ಕೆ ಏರಿಕೆ-ಸಿಐಡಿ ತನಿಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

ರಾಮನಗರ: ರಸ್ತೆ ಬದಿಯಲ್ಲೇ ಅಂತ್ಯಕ್ರಿಯೆ

Ramanagara: ರಸ್ತೆ ಬದಿಯಲ್ಲೇ ಅಂತ್ಯಕ್ರಿಯೆ

Road Mishap; ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯುRoad Mishap; ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

Road Mishap; ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

8

ಚನ್ನಪಟ್ಟಣ ಟಿಕೆಟ್‌: ಮೈತ್ರಿಪಕ್ಷದಲ್ಲಿ ಪೈಪೋಟಿ?

CP Yogeshwar ಸ್ಫೋಟಕ ಹೇಳಿಕೆ ಬೆನ್ನಲ್ಲೇ ದರ್ಶನ ಜೊತೆಗಿನ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್

CP Yogeshwar ಸ್ಫೋಟಕ ಹೇಳಿಕೆ ಬೆನ್ನಿಗೆ ದರ್ಶನ್ ಜೊತೆಗಿನ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್

MUST WATCH

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

udayavani youtube

ರಿವರ್ಸ್‌ ಅವಾಂತರ-ಗೆಳೆಯನ ಕಣ್ಣೆದುರೇ ಕಾರು ಕಂದಕಕ್ಕೆ ಬಿದ್ದು ಗೆಳತಿ ಸಾವು

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

ಹೊಸ ಸೇರ್ಪಡೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

1-gg

CM ವಿರುದ್ಧ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಟೀಕೆ: ಕಾಂಗ್ರೆಸ್‌ ಬಣಗಳ ಪ್ರತಿಭಟನೆ

1-ml

Ullal; ಯುವಮೋರ್ಚ ಮಂಡಲ ಅಧ್ಯಕ್ಷನ ಎಳೆದಾಡಿದ ಠಾಣಾಧಿಕಾರಿ: ಕಾರ್ಯಕರ್ತರ ಆಕ್ರೋಶ

1

Renuka Swamy Case: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

1-vj

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.