ಬಮೂಲ್ ಚುನಾವಣೆ: ಜೆಡಿಎಸ್‌ನಿಂದ ನಾಗರಾಜ್‌ ಕಣಕ್ಕೆ

ಬಮೂಲ್ ನಿರ್ದೇಶಕ ಸ್ಥಾನಕ್ಕೆ ಮೇ 12ರಂದು ನಡೆಯುವ ಚುನಾವಣೆ

Team Udayavani, Apr 30, 2019, 3:52 PM IST

ramanagar-2-tdy..

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌ ಮಾತನಾಡಿದರು.

ರಾಮನಗರ: ಮೇ 12ರಂದು ನಡೆಯುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ನಿರ್ದೇಶಕ ಸ್ಥಾನ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಪಿ.ನಾಗರಾಜು ಅವರನ್ನು ಕಣಕ್ಕಿಳಿಸಿದ್ದು, ಎಂಪಿಸಿಎಸ್‌ ಅಧ್ಯಕ್ಷರು ಅವರಿಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ಮನವಿ ಮಾಡಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ, ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಈಗಾಗಲೇ ಪಿ.ನಾಗರಾಜು ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಎಂದರು.

2 ಬಾರಿ ಅವಿರೋಧ ಆಯ್ಕೆ: ಪಿ.ನಾಗರಾಜು ಅವರು ಇದು 5ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಎರಡು ಬಾರಿ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ. ಕಳೆದ ನಾಲ್ಕು ಅವಧಿಯಲ್ಲಿ ಹೈನುಗಾ ರಿಕೆಯ ಅಭಿವೃದ್ಧಿಗೆ ಮತ್ತು ಹೈನುಗಾರ ಕುಟುಂ ಬಗಳಿಗೆ ಆರ್ಥಿಕವಾಗಿ ಸಬಲರಾಗುವಲ್ಲಿ ಶ್ರಮಿಸಿದ್ದಾರೆ. ಅವರ ಕಾರ್ಯ ವೈಖರಿ, ಕ್ರಿಯಾ ಶೀಲತೆಯನ್ನು ಜನಸಾಮಾನ್ಯರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮೆಚ್ಚಿಕೊಂಡಿದ್ದಾರೆ ಎಂದರು. ಹಾಲು ಸಹಕಾರ ಕ್ಷೇತ್ರಕ್ಕೆ ಅವರ ಸೇವೆ ಇನ್ನೂ ಅಗತ್ಯವಿದೆ. ಹೀಗಾಗಿ ಎಲ್ಲಾ ಡೇರಿಗಳ ಅಧ್ಯಕ್ಷರು ಪಿ.ನಾಗರಾಜು ಅವರನ್ನು ಬಮೂಲ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಆರೋಪ ನಿರಾಧಾರ: ರಾಮನಗರ ಕ್ಷೇತ್ರ ದಿಂದ ನಿರ್ದೇಶಕ ಸ್ಥಾನದ ಚುನಾವಣೆಗೆ ಕರಡು ಮತದಾರರ ಪಟ್ಟಿಯಲ್ಲಿ ವಿವಿಧ ಕಾರಣಗಳಿಗೆ 74 ಎಂಪಿಸಿಎಸ್‌ ಅಧ್ಯಕ್ಷರ ಮತ ದಾನಕ್ಕೆ ಅನರ್ಹರು ಎಂದು ಘೋಷಿಸಲಾಗಿತ್ತು. ಮತದಾನದಿಂದ ವಂಚಿತವಾಗಿರುವ ಸಂಘದ ಅಧ್ಯಕ್ಷರಿಗೆ ಆಗಿರುವ ಅನ್ಯಾಯವನ್ನು ನಾಗರಾಜ್‌ ಮಾರ್ಗದರ್ಶನದಲ್ಲಿ ಚಿಕ್ಕಕುಂಟನಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ಮುನಿಸ್ವಾಮಯ್ಯ ಸೇರಿದಂತೆ 58 ಸಂಘಗಳ‌ ಅಧ್ಯಕ್ಷರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ನ್ಯಾಯಾಧೀಶ ಎಸ್‌.ಎನ್‌.ಸತ್ಯನಾರಾಯಣ ಅರ್ಜಿ ವಿಚಾರಣೆ ನಡೆಸಿ ಮಧ್ಯಂತರ ಆದೇಶದ ಮೂಲಕ ಎಲ್ಲಾ 58 ಸಂಘಗಳ ಅಧ್ಯಕ್ಷರಿಗೂ ಮತದಾನಕ್ಕೆ ಅವಕಾಶ ನೀಡಿದ್ದಾರೆ.

159 ಸಂಘದ ಅಧ್ಯಕ್ಷರಿಗೆ ಅವಕಾಶ: ಆದರೆ ಈ ವಿಚಾರದಲ್ಲಿ ಬಿಡದಿ ಹೋಬಳಿ ರಾಮನಹಳ್ಳಿ ಎಂಪಿಸಿಎಸ್‌ನ ಅಧ್ಯಕ್ಷ ಆರ್‌.ಎ. ಗೋಪಾಲ್ ಹಾಗೂ ಇಟ್ಟಮಡು ಎಂಪಿಸಿಎಸ್‌ನ ಮಾಜಿ ಕಾರ್ಯದರ್ಶಿ ಎನ್‌.ಪುಟ್ಟಪ್ಪ ಅವರು ಪಿ.ನಾಗರಾಜು ಅವರ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಸಂಘಗಳ ಅಧ್ಯಕ್ಷರ ವಕಾಲತ್ತಿಗೆ ಸಹಿ ಹಾಕಿಸಿಕೊಂಡಿದ್ದರು, ನ್ಯಾಯಾ ಲಯಕ್ಕೆ ಕೊಡಲಿಲ್ಲ ಎಂಬಿತ್ಯಾದಿ ಆರೋಪ ಗಳೆಲ್ಲ ನಿರಾಧಾರ. ಅಸಲಿಗೆ ಪಿ.ನಾಗರಾಜ್‌ ಅವರ ಮಾರ್ಗದರ್ಶನದಂತೆ 58 ಅಧ್ಯಕ್ಷರ ರಿಟ್ ಅರ್ಜಿ ಏ.15ರಂದೇ ಹೈಕೋರ್ಟಿಗೆ ಸಲ್ಲಿಕೆಯಾಗಿತ್ತು ಎಂದು ಪಿ.ನಾಗರಾಜ್‌ರನ್ನು ಸಮರ್ಥಿಸಿ ಕೊಂ ಡರು. ಇದೀಗ ರಾಮನಗರ ತಾಲೂಕಿನ 159 ಸಂಘಗಳ ಅಧ್ಯಕ್ಷರಿಗೆ ಮತದಾನಕ್ಕೆ ಅವಕಾಶ ಸಿಕ್ಕಂತಾಗಿದ ಎಂದು ಮಾಹಿತಿ ನೀಡಿದರು.

ಅಧ್ಯಕ್ಷರಿಗೆ ಮತದಾನ ಮಾಡಲು ಅವಕಾಶ:

ಮೇ 12ರಂದು ನಡೆಯುವ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ರಾಜ್ಯ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದಲ್ಲಿ ಈ ಎಂ.ಪಿ.ಸಿ.ಎಸ್‌ಗಳ ಅಧ್ಯಕ್ಷರಿಗೆ ಮತಾದನಕ್ಕೆ ಅವಕಾಶ ಸಿಕ್ಕಿದೆ. ಚಿಕ್ಕಕುಂಟನಹಳ್ಳಿ, ಕರಡೀಗೌಡನ ದೊಡ್ಡಿ, ಮೊಟ್ಟೆದೊಡ್ಡಿ, ನಿಜಿಯಪ್ಪನದೊಡ್ಡಿ, ಹೆಗ್ಗಡ ಗೆರೆ, ಅರಳೀಮರದದೊಡ್ಡಿ, ಬಿಲ್ಲಕೆಂಪನ ಹಳ್ಳಿ, ಐಜೂರು, ಬಿ.ಗೊಲ್ಲಳ್ಳಿ, ಅರಳಾಳು ಸಂದ್ರ, ಹರಳೀಮರದದೊಡ್ಡಿ, ಗಾಣಕಲ್, ಮದರ್‌ಸಾಬರದೊಡ್ಡಿ, ಕೊಡಿಯಾಲ, ತಡಿಕವಾಗಿಲು, ಅಂಚೀಪುರ, ಜೆ.ಕುರುಬರಹಳ್ಳಿ, ವೀರೇಗೌಡನ ದೊಡ್ಡಿ, ಅರ್ಚಕರಹಳ್ಳಿ, ಬೋರೇಹಳ್ಳಿ, ಕಲ್ಲುಗೋ ಪಳ್ಳಿ, ಮನಗನಹಳ್ಳಿ, ಅವ್ವೇರಹಳ್ಳಿ, ನಾಗೋ ಹಳ್ಳಿ, ವಾಜರಹಳ್ಳಿ, ತೆಂಗಿನಕಲ್ಲು, ಹುಣಸೆ ದೊಡ್ಡಿ, ಪಾದರಹಳ್ಳಿ, ಮೇಡನಹಳ್ಳಿ, ಗುನ್ನೂರು, ತಿಮ್ಮಸಂದ್ರ, ಲಕ್ಷ್ಮೀಪುರ, ನಂಜೇಗೌಡನದೊಡ್ಡಿ, ಚಾಮುಂಡಿಪುರ, ಪೇಟೆ ಕುರುಬರಹಳ್ಳಿ, ಕೃಷ್ಣಪ್ಪನ ದೊಡ್ಡಿ, ಬಿಳಗುಂಬ, ತುಂಬೇನಹಳ್ಳಿ, ಸಂಜೀವಯ್ಯನದೊಡ್ಡಿ, ಜೋಗನಪಾಳ್ಯ, ಜಿ.ಅಂಕನಹಳ್ಳಿ, ನಾಗರಕಲ್ಲುದೊಡ್ಡಿ, ಎಂ.ಜಿ.ಪಾಳ್ಯ, ಚಿಕ್ಕಬೈರಮಂಗಲ, ಅಂಚೀ ಪುರ ಕಾಲೋನಿ, ಚನ್ನಮಾರೇ ಗೌಡನ ದೊಡ್ಡಿ, ಕದಲೀಗೌಡನದೊಡ್ಡಿ, ಜಡೇನ ಹಳ್ಳಿ, ಶ್ಯಾನುಭೋಗನಹಳ್ಳಿ, ಕಾಂಚೀ ದೊಡ್ಡಿ, ಕೆಂಚನಕುಪ್ಪೆ, ಬಿ.ಬನ್ನಿಕುಪ್ಪೆ, ಹುಣ ಸನಹಳ್ಳಿ, ಕೂಟಗಲ್, ಲಕ್ಕೋಜನಹಳ್ಳಿ, ಕೃಷ್ಣರಾಜಪುರ, ತಾಳವಾಡಿ, ವಡ್ಡರಹಳ್ಳಿ.

ಟಾಪ್ ನ್ಯೂಸ್

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Magadi; Mother-son passed away due to gas leak from geyser

Magadi; ಗೀಸರ್ ನಿಂದ ಅನಿಲ ಸೋರಿಕೆಯಿಂದ ಮೃತಪಟ್ಟ ತಾಯಿ – ಮಗ

Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

1-train

Train;ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲುಗಳು ಸ್ಥಗಿತ: ಪ್ರಯಾಣಿಕರಿಗೆ ಅನಾನುಕೂಲ

HD-Kumaraswamy

Bengaluru South; ನಾನು ಅಧಿಕಾರಕ್ಕೆ ಬಂದಾಗ ಇವರಿಟ್ಟ ಹೆಸರು ಕಿತ್ತೆಸೆಯುವೆ: ಎಚ್‌ಡಿಕೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.