ಕೆಂಪೇಗೌಡರ 108 ಅಡಿ ಪ್ರತಿಮೆ ನಿರ್ಮಾಣ


Team Udayavani, May 23, 2020, 6:10 AM IST

pratime

ಮಾಗಡಿ: ಬೆಂಗಳೂರು ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಬೃಹತ್‌ ಕೆಂಪೇಗೌಡ ಪ್ರತಿಮೆ ನಿರ್ಮಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲನೆ ಹಾಗೂ ಜೀವನೋಪಾಯ ಇಲಾಖೆ ಹಾಗೂ  ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು. ತಾಲೂಕಿನ ಕೆಂಪಾಪುರದ ಹಿರಿಯ ಕೆಂಪೇಗೌಡರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

23 ಎಕರೆ ಪ್ರದೇಶದಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ಜೂನ್‌ 27ರಂದು ನಡೆಯಲಿರುವ ನಾಡಪ್ರಭು ಕೆಂಪೇಗೌಡರ ಜಯಂತಿ ದಿನದಂದೇ ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ ಅತ್ಯಾಕರ್ಷಕ, ಅದ್ಭುತ ನಾಡಪ್ರಭು ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.  ಮಾಗಡಿಯ ಕೆಂಪಾಪುರ ಬಂಗಾರದ ನಾಡಾಗಲಿದೆ.

ಈಗಾಗಲೇ ಐಡೆಕ್ಸ್‌ ಸಂಸ್ಥೆ ನೀಲಿ ನಕ್ಷೆ ತಯಾರಿಸಿದೆ. ಸುಮಾರು 8 ಎಕರೆ ಪ್ರದೇಶದಲ್ಲಿ ಇಲ್ಲಿ ಹಿರಿಯ ಕೆಂಪೇಗೌಡರ ಸಮಾಧಿಯನ್ನು ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. 12 ಕೋಟಿ ರೂ. ವೆಚ್ಚದಲ್ಲಿ ಕೆಂಪಾಪುರದ ಕೆರೆ ಜೀರ್ಣೋದ್ಧಾರ ಸೇರಿದಂತೆ ಕೋಟೆ, ದುರ್ಗಾ, ಗುಡಿ ಗೋಪುರ ಅಭಿವೃದ್ಧಿ ಪಡಿಸಿ ಅಂತರಾಷ್ಟ್ರೀಯ ಸ್ಮಾರಕ ಮಾಡಲಾಗುವುದು ಎಂದರು.

ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈ ಜೋಡಿಸಿ: ತಾಲೂಕಿನಲ್ಲಿ ಹಿರಿಯ ಕೆಂಪೇ ಗೌಡರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕೆಂಪೇಗೌಡರ ಸಮಾಧಿ ಅಭಿ ವೃದ್ಧಿಪಡಿಸಲು ಭೂ ಸ್ವಾಧೀನಪಡಿಸಿಕೊಳುವುದು ಸೇರಿದಂತೆ  ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರವನ್ನು ಗ್ರಾಮಸ್ಥರು ನೀಡ ಬೇಕು. ಶುದಟಛಿ ಕುಡಿಯುವ ನೀರಿನ ಘಟಕ, ಗುಣಮಟ್ಟದ ರಸ್ತೆ, ಸರ್ಕ್ನೂಟ್‌ ನೆಟ್‌ವರ್ಕ್‌ ಅಳವಡಿಸಲಾಗುವುದು ಎಂದು ತಿಳಿಸಿದರು.

ಶಾಸಕ ಎ.ಮಂಜುನಾಥ್‌  ಮಾತನಾಡಿ, ತಾಲೂಕಿನ ಕೆಂಪಾಪುರದಲ್ಲಿರುವ ಜಾನಿಗೆರೆ ಗ್ರಾಮಕ್ಕೆ ಸೇರಿರುವ ಸರ್ವೇ ನಂ. 91ರ 29 ಎಕರೆ ಪ್ರದೇಶದ ಕೆರೆಯನ್ನು ನರೇಗಾದಲ್ಲಿ ಹೂಳೆತ್ತಲು ಕಾಮಗಾರಿ ಕೈಗೊಳ್ಳಲಾಗಿದೆ. ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಹೂಳೆ ತ್ತುವ ಕಾರ್ಯಕ್ಕೆ ಡಿಸಿಎಂ ಚಾಲನೆ ನೀಡಿ ದ್ದಾರೆ. ಸರ್ಕಾರ ಕೈಗೊಳ್ಳುವ ಎಲ್ಲ ಕೆಲಸಗಳಿಗೆ ಸಮರ್ಪಕವಾಗಿ ಸ್ಪಂದಿಸುವು ದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಆ.ದೇವೇಗೌಡ ಮಾತನಾಡಿದರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಚ್‌.ಎಂ.ಕೃಷ್ಣ ಮೂರ್ತಿ, ಜೆಡಿಎಸ್‌ ಉಪಾಧ್ಯಕ್ಷ ಕೆ.ಕೃಷ್ಣ ಮೂರ್ತಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ಪೊಲೀಸ್‌ ರಾಮಣ್ಣ, ತಾಲೂಕು ಜೆಡಿಎಸ್‌ ಮಹಿಳಾಧ್ಯಕ್ಷೆ ಶೈಲಜಾ, ಸರ್ಕಾರದ ಕಾರ್ಯ ದರ್ಶಿ ಪ್ರದೀಪ್‌, ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ, ಸಿಇಓ ಇಕ್ರಾಂ,

ತಹಶೀಲ್ದಾರ್‌ ಶ್ರೀನಿವಾಸ ಪ್ರಸಾದ್‌, ತಾಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯ, ತಾಪಂ ಸದಸ್ಯ ಕೆ.ಎಚ್‌.ಶಿವರಾಜು, ತಾಪಂ ಇಓ ಟಿ. ಪ್ರದೀಪ್‌, ಮುಖಂಡ ಸಿಂಗ್ರೀಗೌಡ, ಚಿಕ್ಕ ಮುದಿಗೆರೆ ಗ್ರಾಮ ಪಂಚಾಯ್ತಿ  ಅಧ್ಯಕ್ಷೆ ಮೀಳಾ ರಾಜಣ್ಣ, ಸದಸ್ಯ ರವೀಶ್‌,ಪಿಡಿಓ ನರಸಿಂಹಯ್ಯ,ಪಾಪಣ್ಣ, ಹನುಮಂತಪ್ಪ, ಹರೀಶ್‌ ಕುಮಾರ್‌ ಇತರರು ಇದ್ದರು.

ಟಾಪ್ ನ್ಯೂಸ್

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

ಚನ್ನಪಟ್ಟಣ ಟಿಕೆಟ್‌: ಮೈತ್ರಿಪಕ್ಷದಲ್ಲಿ ಪೈಪೋಟಿ?

CP Yogeshwar ಸ್ಫೋಟಕ ಹೇಳಿಕೆ ಬೆನ್ನಲ್ಲೇ ದರ್ಶನ ಜೊತೆಗಿನ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್

CP Yogeshwar ಸ್ಫೋಟಕ ಹೇಳಿಕೆ ಬೆನ್ನಿಗೆ ದರ್ಶನ್ ಜೊತೆಗಿನ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್

Tragedy: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಅಪಘಾತ: ಇಬ್ಬರು ವಿದ್ಯಾರ್ಥಿಗಳ ದುರ್ಮರಣ

Tragedy: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಅಪಘಾತ: ಇಬ್ಬರು ವಿದ್ಯಾರ್ಥಿಗಳ ದುರ್ಮರಣ

Did the Congress offer a by-election ticket to Darshan? What did CP Yogeshwar say?

ದರ್ಶನ್ ಗೆ ಉಪಚುನಾವಣೆ ಟಿಕೆಟ್ ನೀಡಲು ಮುಂದಾಗಿತ್ತಾ ಕಾಂಗ್ರೆಸ್.? ಸಿಪಿವೈ ಹೇಳಿದ್ದೇನು?

ಚನ್ನಪಟ್ಟಣದಿಂದ ನನ್ನ ಸ್ಪರ್ಧೆ ಇಲ್ಲ: ಡಿ.ಕೆ. ಸುರೇಶ್‌

Congress ಚನ್ನಪಟ್ಟಣದಿಂದ ನನ್ನ ಸ್ಪರ್ಧೆ ಇಲ್ಲ: ಡಿ.ಕೆ. ಸುರೇಶ್‌

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

udupi

Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.