ಬೆಳೆಗಾರರ ಪಾಲಿಗೆ ಮಾವು ಬೆಳೆ ಬಂಗಾರ

ಮಾಗಡಿ ತಾಲೂಕಿನ 5,200 ಹೆಕ್ಟರ್‌ನಲ್ಲಿ ಮಾವು ಬೆಳೆ • ಲಾಭಗಳಿಸುವ ನಿರೀಕ್ಷೆಯಲ್ಲಿ ಬೆಳೆಗಾರರು

Team Udayavani, May 5, 2019, 12:58 PM IST

ramanagar-tdy-2..

ಮಾಗಡಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತಾಜಾ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದಾರೆ.

ಮಾಗಡಿ: ಹಣ್ಣುಗಳ ರಾಜ ಮಾವು ಈ ಬಾರಿ ರೈತರ ಪಾಲಿಗೆ ಬಂಗಾರವಾಗಲಿದೆ. ಮಾವು ಬೆಳೆಗಾರರ ಬದುಕಿಗೆ ವರದಾನವಾಗಲಿದೆ. ಗುಣಮಟ್ಟದ ಮಾವು ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ತಾಲೂಕಿನಲ್ಲಿ ಸುಮಾರು 5,200 ಹೆಕ್ಟರ್‌ನಲ್ಲಿ ರೈತರು ಮಾವು ಬೆಳೆದಿದ್ದಾರೆ. ಈ ಬಾರಿ ಮಾವಿನ ಮರಗಳಲ್ಲಿ ಸಾಧಾರಣ ಹೂ ಬಿಟ್ಟಿದೆ. ಮಲಗೋಬ, ರಸಪೂರಿ, ಸೇಂದೂರ, ಬಾದಾಮಿ, ರಾಮಗೋಲ್r ಸೇರಿದಂತೆ ವಿವಿಧ ತಳಿಯ ಮಾವು ಬೆಳೆಯನ್ನು ರೈತರು ಬೆಳೆದಿದ್ದಾರೆ. ಮಾಗಡಿ ತಾಲೂಕು ರಸಭರಿತ ಮಾವು ಬೆಳೆಗೆ ಹೇಳಿ ಮಾಡಿಸಿದ ಭೂಮಿ. ಕಡಿಮೆ ನೀರಿದ್ದರೂ ಸಹ, ಮಾವಿನ ಗಿಡಬೆಳೆಸಲು ಉತ್ತಮ ಭೂಮಿಯಾಗಿದೆ.

ಬೆಳೆಯಿಂದ ರೈತರಿಗೆ ಸಮಾಧಾನ: ಕಳೆದ ವರ್ಷಕ್ಕಿಂತ ಈ ವರ್ಷವೂ ಸಾಧಾರಣವಾಗಿ ಮಾವು ಬೆಳೆ ಬಂದಿದೆ. ಮಳೆ ಕೊರತೆಯ ನಡುವೆಯೂ ಮಾವು ಬೆಳೆ ಬಂದಿದ್ದು, ರೈತರಿಗೆ ಸಮಾಧಾನವನ್ನು ತಂದಿದೆ. ಈಗ ಮಾವಿನ ಹಣ್ಣಿಗೆ ಸಕಾಲ, ರೈತರ ತೋಟಗಳತ್ತ ಕಣ್ಣಾಯಿಸಿದರೆ ಸಾಕು, ಗಿಡದಲ್ಲಿ ಮಾವಿನ ಕಾಯಿಗಳು ಜೋತು ಬಿದ್ದಿವೆ. ಮಾವಿನ ಹಣ್ಣು ಗಮಗಮಿಸುತ್ತಿದ. ಸಾಧಾರಣ ವಾಗಿದ್ದರೂ ತಾಜಾ ಹಣ್ಣುಗಳ ಮಾರಾಟದಲ್ಲಿ ಲಾಭಗಳಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಬರಗಾಲದಲ್ಲಿ ಮಾವು ಬೆಳೆ ರೈತರ ಕೈ ಹಿಡಿಬಹುದು ಎಂಬ ನಿರೀಕ್ಷೆಯಲ್ಲಿದ್ದರೂ ಸಹ, ರೈತರಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಸಲಹೆಗಳನ್ನು ನೀಡಿದರೆ, ಮಾವಿನ ಹಣ್ಣಿನ ಮಾರಾಟದಿಂದ ರೈತರ ಕೈ ಹಿಡಿಲಿದೆ ಎಂಬ ವಿಶ್ವಾಸವಿದೆ.

ಮಾರುಕಟ್ಟೆಯಲ್ಲಿ ತಾಜಾ ಹಣ್ಣು: ಮಾಗಡಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಲಗ್ಗೆಯಿಟ್ಟಿದೆ. ಕೆ.ಜಿ ಮಾವಿನ ಹಣ್ಣು 100ರಿಂದ 120 ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ 70ರಿಂದ 80 ರೂ.ಗೂ ಮಾರಾಟ ಮಾಡಲಾಗುತ್ತಿದೆ. ಈ ವಾರ ಕಳೆದರೆ ಇನ್ನೂ ಹೆಚ್ಚಿನ ಮಾವಿನ ಹಣ್ಣು ಮಾರುಕಟ್ಟೆಗೆ ಬರಲಿದೆ. ಆ ವೇಳೆಗೆ ಮಾವಿನ ಬೆಲೆ ಕಡಿಮೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ರೋಗ ಬಾಧೆ ಭೀತಿ ಇಲ್ಲ: ಹಿಂಗಾರು ಮಳೆ ಬಿದ್ದ ಪರಿಣಾಮ ಸಾಧಾರಣವಾಗಿ ಮಾವಿನ ಬೆಳೆ ಬಂದಿದೆ. ಹೆಚ್ಚು ಬಿಸಿಲಿನ ತಾಪಮಾನಕ್ಕೆ ಬೇಗ ಹಣ್ಣಾಗುತ್ತಿವೆ. ರೋಗದ ಬಾಧೆ ಇಲ್ಲದೇ ಇರುವುದರಿಂದ ತಾಜಾ ಹಣ್ಣುಗಳು ಬೆಳೆಗಾರರ ಬದುಕಿಗೆ ನೆರವಾಗುತ್ತದೆ ಎಂದು ರೈತರು ನಂಬಿಕೊಂಡಿದ್ದಾರೆ. ಮಾವಿನ ಮರದಲ್ಲಿ ಮಾವಿನ ಕಾಯಿಗಳ ಜೋತು ಬಿದ್ದಿದ್ದು ಕಾಯಿ, ಹಣ್ಣುಗಳು ಕಂಗೊಳಿಸುತ್ತಿದೆ.

ರೈತರಿಗೆ ಮಾರ್ಗದರ್ಶ ಅಗತ್ಯ: ಮಾವು ಬೆಳೆಗಾರರ ತೋಟಗಳಿಗೆ ತೋಟಗಾರಿಕಾ ಅಧಿಕಾರಿಗಳು ಮತ್ತು ಸಂಬಂಧಪಟ್ಟ ವಿಜ್ಞಾನಿಗಳು ಭೇಟಿ ನೀಡಿ, ಮಾವಿನ ಗಿಡ, ಹೂ, ಹಣ್ಣುಗಳ ರಕ್ಷಣೆ, ರೋಗ ಬಾಧೆ ತಡೆಗೆ ಸೂಕ್ತ ಔಷಧ ವಿತರಣೆ, ಕಾಲಕಾಲಕ್ಕೆ ಸಿಂಪಡಣೆ ಮಾಡಿಸುವುದು, ತಾಂತ್ರಿಕವಾದ ಬೇಸಾಯ ಪದ್ಧತಿ ಹೀಗೆ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ.

ವರ್ಷಕ್ಕೊಮ್ಮೆ ಮಾತ್ರ ಮಾವು ಬೆಳೆ: ವರ್ಷಕ್ಕೊಮ್ಮೆ ಮಾತ್ರ ಮಾವು ಬೆಳೆ ಬರುವುದು. ಆದರೆ, ಆಕಾಲಿಕ ಮಳೆ ಅಥವಾ ಹೊಸ ಪ್ರಯೋಗದಿಂದ ಹೈಬ್ರಿಡ್‌ ತಳಿಗಳು ಕೆಲವೊಮ್ಮೆ ಎರಡು ಬೆಳೆಗಳನ್ನು ನೀಡುತ್ತವೆ. ಆದರೂ ವಸಂತಕಾಲದಲ್ಲಿ ಮಾತ್ರ ಮಾವು ಸಮೃದ್ಧ ಬೆಳೆ ಬರುವುದು. ಹೈಬ್ರಿಡ್‌ ತಳಿ ಮಾವು ಬೆಳೆಗಾರರು ಕಾಲಕಾಲಕ್ಕೆ ಗೊಬ್ಬರ, ಔಷಧ ಸಿಂಪಡಣೆ, ನೀರು ಹಾಕಿ ಮಾವಿನ ಮರಗಳನ್ನು ತಮ್ಮ ಮಕ್ಕಳಂತೆ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಮಾವು ಬೆಳೆಯೇ ಬಹುತೇಕ ರೈತರ ಜೀವನಾಧಾರವಾಗಿದೆ.

ರಾಮಗೋಲ್ ಮಾವಿಗೆ ಬೇಡಿಕೆ: ರಾಮನಗರ ಜಿಲ್ಲೆಯಲ್ಲಿ ರಾಮಗೋಲ್ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಮಾವಿನ ಹಣ್ಣಿನ ಕಾಲ ಆರಂಭಗೊಂಡಂತೆ ರಾಮನಗರದಲ್ಲಿ ಮಾವಿನ ಮೇಳವನ್ನು ಸಹ ಏರ್ಪಡಿಸಲಾಗುತ್ತದೆ. ರಾಮಗೋಲ್ ಮತ್ತು ಬಾದಾಮಿ ಹಣ್ಣಿಗೆ ಬೇಡಿಕೆಯಿದ್ದು, ಗ್ರಾಹಕರು ದೂರದ ಊರುಗಳಿಂದ ಆಗಮಿಸಿ, ಮಾವು ಖರೀದಿಯಲ್ಲಿ ತೊಡಗುತ್ತಾರೆ. ಸುಮಾರು ಒಂದು ವಾರಗಳ ಕಾಲ ನಡೆಯುವ ಈ ಮೇಳದಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳ ಮಾರಾಟ ಮಾಡಲಾಗುತ್ತದೆ. ರೈತರು ನೇರ ಮಾರಾಟಕ್ಕೆ ಸರ್ಕಾರ ಸಹಕಾರ ನೀಡುತ್ತದೆ. ಆದ್ದರಿಂದಲೇ ರಾಮನಗರ ಜಿಲ್ಲೆಯಲ್ಲಿ ಮಾವಿನ ಬೆಳೆ ಬೆಳೆಯಲು ರೈತರು ಹೆಚ್ಚು ಆಸಕ್ತಿ ತೋರುತ್ತಿರುವುದು.

ಜೀವನಕ್ಕೆ ಮಾವು ಬೆಳೆ ಆಧಾರ: ಮಾಗಡಿಯ ಬಹುತೇಕ ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಇರುವ ಭೂಮಿಯಲ್ಲಿಯೇ ಸಣ್ಣ, ಅತಿ ಸಣ್ಣ ರೈತರು ಜೀವನಕ್ಕಾಗಿ ರಾಗಿ ಬೆಳೆಯುತ್ತಿದ್ದರು. ಬರಗಾಲದಲ್ಲಿ ರಾಗಿ ಬೆಳೆಯುವುದು ಕಷ್ಟ. ಹೀಗಾಗಿ ಹೆಚ್ಚಿನ ರೈತರು ಫ‌ಲವತ್ತಾದ ಭೂಮಿಗೆ ಮಾವಿನ ಗಿಡ ನೆಟ್ಟಿದ್ದಾರೆ. ಒಂದೆರಡು ವರ್ಷ ಗಿಡ ನಾಶವಾಗದಂತೆ ರಕ್ಷಣೆ ಮಾಡುತ್ತಿದ್ದಾರೆ. ಪ್ರತಿವರ್ಷ ತಮ್ಮ ಜೀವನಕ್ಕೆ ಮಾವು ಆಧಾರವಾಗುತ್ತದೆ ಎಂಬ ನಂಬಿಕೆಯಿಂದ ರೈತರು ಮಾವು ಫ‌ಸಲಿನತ್ತ ಮುಖ ಮಾಡಿದ್ದಾರೆ. ಸರ್ಕಾರವೂ ಸಹ ತೋಟಗಾರಿಕೆ ಬೆಳೆಗಳಿಗೆ ರೈತರನ್ನು ಪ್ರೋತ್ಸಾಹಿಸುತ್ತಿದೆ. ಇದರಿಂದ ಬಹುತೇಕ ರೈತರು ತೋಟಗಾರಿಕೆ, ಹೈನುಗಾರಿಕೆಯನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

● ತಿರುಮಲೆ ಶ್ರೀನಿವಾಸ್‌

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.