Ramanagara: ವಿರೋಧಿ ಹಣಿಯಲು ದಾಳ ಉರುಳಿಸಿದ ದಳಪತಿ!


Team Udayavani, Feb 3, 2024, 3:18 PM IST

11

ರಾಮನಗರ: ಒಕ್ಕಲಿಗರ ಕೋಟೆಯಲ್ಲಿ ತನ್ನ ವೇಗಕ್ಕೆ ಅಡ್ಡಗಾಲಾಗಿರುವ ಕಾಂಗ್ರೆಸ್‌ನ ಒಕ್ಕಲಿಗ ಮುಖಂಡರನ್ನು ಹಣಿಯಲು ಅವರ ಹೇಳಿಕೆಗಳನ್ನೇ ದಾಳವಾಗಿ ಬಳಸುತ್ತಿದ್ದಾರಾ ದಳಪತಿ?.. ಕೆಲದಿನಗಳಿಂದ ರಾಮನಗರ ಮತ್ತು ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂತಹುದೊಂದು ಪ್ರಶ್ನೆ ಮೂಡುವಂತಾಗಿದೆ.

ಒಕ್ಕಲಿಗರ ಶಕ್ತಿಕೇಂದ್ರ, ಜೆಡಿಎಸ್‌ ಭದ್ರಕೋಟೆ ಎನಿಸಿರುವ ರಾಮನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಡ್ಯಾಮೇಜ್‌ ಆಗಲು ಅಂದಿನ ಆಪ್ತಮಿತ್ರರು, ಇಂದಿನ ಬದ್ಧ ದ್ವೇಷಿಗಳು ಆಗಿರುವ ಚಲುವರಾಯಸ್ವಾಮಿ, ಎಚ್‌.ಸಿ.ಬಾಲಕೃಷ್ಣ ಮತ್ತು ಸಂಸದ ಡಿ.ಕೆ.ಸುರೇಶ್‌ ಕಾರಣ ಎಂಬುದು ಗುಟ್ಟಾಗಿ ಉಳಿದಿರುವ ಸಂಗತಿಯೇನಲ್ಲ. ಇದೀಗ ಈ ಮೂರು ಮಂದಿಯನ್ನು ಒಮ್ಮೆಲೆ ಹಣಿಯಲು ಎಚ್‌ಡಿಕೆ ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದೆಡೆ ಸಂಸದ ಡಿ.ಕೆ.ಸುರೇಶ್‌, ಮತ್ತೂಂದೆಡೆ ಚಲುವರಾಯಸ್ವಾಮಿ ಹಾಗೂ ಎಚ್‌.ಸಿ.ಬಾಲಕೃಷ್ಣ ವಿರುದ್ಧ ಮುಗಿ ಬಿದಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈ ಮೂರು ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ತಂತ್ರ ಹಣೆದಿದ್ದು, ಅದರ ಮೊದಲ ಹಂತವೇ ಈ ಪ್ರಯತ್ನಗಳು ಎಂದು ಹೇಳಲಾಗುತ್ತಿದೆ.

ದಳಪತಿಗೆ ಅಸ್ತ್ರವಾದ ಹೇಳಿಕೆ: ಒಕ್ಕಲಿಗರ ಭದ್ರಕೋಟೆಯಲ್ಲಿ ತನಗೆ ಅಡ್ಡಗಾಲಿರುವ ಈ ಮೂರು ಮುಖಂಡರನ್ನು ಮಣಿಸಲು ಕಾಯ್ದು ಕುಳಿತಿದ್ದ ಕುಮಾರಸ್ವಾಮಿಗೆ ಇದೀಗ ಮೂರು ಮಂದಿಯ ವರ್ತನೆಯೇ ಅಸ್ತ್ರ ನೀಡಿದೆ. ಅದನ್ನೇ ಲಾಭವಾಗಿಸಿಕೊಂಡು ಅವರ ಮಾತನ್ನು ಅವರಿಗೆ ತಿರುಗು ಬಾಣವಾಗಿಸಿ ಪೇಚಿಗೆ ಸಿಲುಕುವಂತೆ ಮಾಡುವ ತಂತ್ರವನ್ನು ಕುಮಾರಸ್ವಾಮಿ ಹಣೆದಿದ್ದು, ಈ ತಂತ್ರವನ್ನು ವ್ಯವಸ್ಥಿತವಾಗಿ ಜಾರಿಗೆ ತರಲಾರಂಭಿಸಿದ್ದಾರೆ. ಡಿ.ಕೆ.ಸುರೇಶ್‌ ಪ್ರತ್ಯೇಕ ದೇಶದ ಕೂಗು ಎಬ್ಬಿಸಿರುವುದನ್ನು ದೊಡ್ಡದು ಮಾಡಿ ಒಂದೆಡೆ ತನ್ನ ಎದುರಾಳಿಯಾಗಿರುವ ಡಿಕೆಎಸ್‌ ಸಹೋದರರಿಗೆ ಪಟ್ಟು ಹಾಕುವ ಜೊತೆಗೆ ಬಿಜೆಪಿ ದೆಹಲಿ ನಾಯಕರ ಮೆಚ್ಚುಗೆಯನ್ನು ಪಡೆದುಕೊಳ್ಳುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ಎಚ್‌ ಡಿಕೆಯದ್ದು, ಮತ್ತೂಂದೆಡೆ ತನ್ನ ವಿರುದ್ಧ ಪದೇ ಪದೆ ವಾಗ್ಧಾಳಿ ಮಾಡುತ್ತಲೇ ಇರುವ ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಸಹ ಅವರ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡು ಪೇಚಿಗೆ ಸಿಲುಕಿಸಿ ಎದುರಾಳಿಗೆ ಪಾಠ ಕಲಿಸುವುದು.

ಒಕ್ಕಲಿಗರ ಕೋಟೆಯಲ್ಲಿ ಪಾರಮಾಧಿಪತ್ಯ: ಇನ್ನು ಕೆರಗೋಡು ಪ್ರಕರಣವನ್ನು ದಾಳವಾಗಿಸಿಕೊಂಡು ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಪ್ರಭಾವ ಕುಗ್ಗಿಸಿ ಮೂರು ಮಂದಿಗೆ ಟಾಂಗ್‌ ನೀಡಿ ಒಕ್ಕಲಿಗರ ಕೋಟೆಯಲ್ಲಿ ತನ್ನ ಪಾರಮಾಧಿಪತ್ಯವನ್ನು ಮುಂದುವರಿಸಲು ದಳಪತಿ ಮುಂದಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಜಿಲ್ಲೆಗಳಲ್ಲಿ ತನಗಾಗಿದ್ದ ಗಾಯವನ್ನು ಆರಿಸಿಕೊಳ್ಳುತ್ತಿದ್ದ ದಳಪತಿಗೆ ಈ ಮೂರು ಮಂದಿಯ ಹೇಳಿಕೆ ಅಸ್ತ್ರವಾಗಿ ಸಿಕ್ಕಿದ್ದು, ಇದನ್ನು ಚೆನ್ನಾಗಿ ಬಳಸಿಕೊಂಡು ಮತ್ತೆ ಒಕ್ಕಲಿಗರ ಕೋಟೆಯನ್ನು ಭದ್ರಗೊಳಿಸಲು ಕುಮಾರಸ್ವಾಮಿ ಮುಂದಾಗಿದ್ದು, ಈ ಬೆಳವಣಿಗೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಕಾಯ್ದು ನೋಡಬೇಕಿದೆ.

ಮಗನ ಸೋಲಿನ ಸೇಡು ತೀರಿಸಲು ಎಚ್‌ಡಿಕೆ ಪಣ: ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ನಿಖೀಲ್‌ ಕುಮಾರಸ್ವಾಮಿ ಸೋಲಿನ ಹಿಂದೆ ಸಂಸದ ಡಿ.ಕೆ.ಸುರೇಶ್‌ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ನಿಖೀಲ್‌ ವಿರುದ್ಧ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಜೊತೆಗೆ ಮುಸ್ಲಿಂ ಮತಗಳು ಕ್ರೋಢೀಕರಣವಾಗುವಂತೆ ನೋಡಿಕೊಂಡಿದ್ದು, ಮತದಾನದ ದಿನದಂದು ಮತದಾರನ್ನು ಸೆಳೆಯಲು ಸಂಸದ ಡಿ.ಕೆ.ಸುರೇಶ್‌ ಸ್ಮಾರ್ಟ್‌ಕಾರ್ಡ್‌ ಹಂಚಿಕೆ ಮಾಡುವ ಮೂಲಕ ಕೊನೆ ಕ್ಷಣದಲ್ಲಿ ಮತದಾರರ ಮನೆ ಗೆಲ್ಲುವಲ್ಲಿ ಸಫಲಗೊಂಡರು. ರಾಮನಗರದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಕೈವಾಡವನ್ನು ಅಲ್ಲಗಳೆಯು ವಂತಿರಲಿಲ್ಲ. ರಾಮನಗರದಲ್ಲಿ ನಿಖೀಲ್‌ ಕುಮಾರ ಸ್ವಾಮಿ ಸೋಲಿನ ಹಿಂದೆ ಡಿ.ಕೆ.ಸುರೇಶ್‌ ಪಾತ್ರ ಸಾಕಷ್ಟಿತ್ತು. ಇದು ದಳಪತಿ ಕಣ್ಣು ಕೆಂಪಗಾಗಿಸಿದೆ. ಈ ಹಿಂದೆ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನಿಖೀಲ್‌ ಸೋಲಿನಲ್ಲಿ ಚಲುವರಾಯಸ್ವಾಮಿ ಹಸ್ತಕ್ಷೇಪ ಇತ್ತು ಎಂಬುದು ಕುಮಾರಸ್ವಾಮಿಗೆ ಮನದಟ್ಟಾಗಿದ್ದು ತನ್ನ ಮಗ ಎರಡು ಬಾರಿ ಸೋಲಲು ಕಾರಣವಾಗಿರುವ ಮುಖಂಡರ ವಿರುದ್ಧ ಈಬಾರಿ ಸೇಡು ತೀರಿಸಿಕೊಳ್ಳುವ ಹವಣಿಗೆ ದಳಪತಿಯದ್ದಾಗಿದೆ.

ಸು.ನಾ. ನಂದಕುಮಾರ್‌

 

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.