ಶೀಘ್ರ ಕಸ ವಿಲೇವಾರಿಗೆ ಗ್ರಾಮಸ್ಥರ ಮನವಿ

ಬೆಳಗುಂಬ ಗ್ರಾಮ ಪಂಚಾಯ್ತಿ ಗಮನಕ್ಕೆ

Team Udayavani, May 13, 2019, 3:47 PM IST

ಮಾಗಡಿ: ತಾಲೂಕಿನ ಕಸಬಾ ಹೋಬಳಿ ಪಣಕನಕಲ್ಲು ಗ್ರಾಮದ ಶಾಲೆ ಸಮೀಪದ ಸಣ್ಣ ನೀರಿನ ಟ್ಯಾಂಕ್‌ ಬಳಿ ರಾಶಿ ಕಸದಿಂದಾಗಿ ದುರ್ನಾತ ಬರುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ್ದು, ಶೀಘ್ರ ಕಸ ವಿಲೇವಾರಿ ಮಾಡಬೇಕೆಂದು ಗ್ರಾಮದ ನಿವಾಸಿಗಳು ಮನವಿ ಮಾಡಿದ್ದಾರೆ. ಬೆಳಗುಂಬ ಗ್ರಾಪಂ ಪಿಡಿಒ ನಿರ್ಲಕ್ಷ್ಯ ಧೋರಣೆ ವ್ಯಕ್ತಿಯಾಗಿದ್ದಾರೆ. ನೀರು ಪೂರೈಕೆ ಯಾಗುತ್ತಿರುವ ಕುಡಿಯುವ ನೀರಿನ ಸಣ್ಣ ಟ್ಯಾಂಕ್‌ ಬಳಿ ಕಸ ಸುರಿಯುತ್ತಿದ್ದರೂ ಪಿಡಿಒ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಣ್ಣ ಟ್ಯಾಂಕ್‌ ಮತ್ತು ಶಾಲೆ ಬಳಿಯೇ ಕಸರಾಶಿ ರಾಶಿ ಬೀಳುತ್ತಿದ್ದರೂ ಪಿಡಿಒ ಎಚ್ಚೆತ್ತುಕೊಂಡಿಲ್ಲ. ಅಲ್ಲದೆ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯ ಒದಗಿಸು ವಲ್ಲಿ ವಿಫ‌ಲರಾಗಿ ದ್ದಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಗ್ರಾಮದ ಅಭಿವೃದ್ಧಿಯನ್ನು ಹೇಗೆ ನಿರೀಕ್ಷಿಸುವುದು? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಸಂಬಂಧಪಟ್ಟ ತಾಪಂ ಇಒ ಹಾಗೂ ಜಿಪಂ ಸಿಇಒ ಸ್ಥಳಕ್ಕೆ ಭೇಟಿ ನೀಡಿ, ಕಸ ವಿಲೇವಾರಿ ಮಾಡಿಸಿ, ಕುಡಿಯುವ ನೀರಿನ ವ್ಯವಸ್ಥಿತ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಪಿಡಿಒ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

● ರಾಜಣ್ಣ, ಗಿರೀಶ್‌, ನಾಗರಾಜು, ಪಣಕನಕಲ್ಲು ನಿವಾಸಿಗಳು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ