Rice scam: ಅಕ್ಕಿ ಹಗರಣ: 3 ಇಲಾಖೆಯಿಂದ ಪ್ರತ್ಯೇಕ ತನಿಖೆ


Team Udayavani, Nov 28, 2023, 4:00 PM IST

Rice scam: ಅಕ್ಕಿ ಹಗರಣ: 3 ಇಲಾಖೆಯಿಂದ ಪ್ರತ್ಯೇಕ ತನಿಖೆ

ರಾಮನಗರ: ಚನ್ನಪಟ್ಟಣ ಟಿಎಪಿಸಿಎಂಎಸ್‌ ಗೋದಾಮಿನಲ್ಲಿ ನಡೆದಿರುವ 1600 ಕ್ವಿಂಟಲ್‌ ಅಕ್ಕಿ ನಾಪತ್ತೆ ಪ್ರಕರಣ ವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದೆ.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆದಿರುವ ಅನ್ನ ಭಾಗ್ಯ ಅಕ್ಕಿ ಗೋಲ್‌ಮಾಲ್‌ ಪ್ರಕರಣಕ್ಕೆ ಸಂಬಂ ಧಿಸಿ ದಂತೆ 3 ಇಲಾಖೆ ಗಳಿಂದ ಪ್ರತ್ಯೇಕ ವಾಗಿ ತನಿಖೆ ಆರಂಭ ಗೊಂಡಿ ದ್ದು, ಪೊಲೀಸ್‌ ಇಲಾಖೆ, ಆಹಾರ, ನಾಗರೀಕ ಸರಬ ರಾಜು ಇಲಾಖೆ ಮತ್ತು ಸಹಕಾರ ಇಲಾಖೆ ಗಳು ಪ್ರಕರಣಕ್ಕೆ ಸಂಬಂಧಿ ಸಿದಂತೆ ತಮ್ಮದೇ ಆದ ಆಯಾಮ ದಲ್ಲಿ ತನಿಖೆ ಆರಂಭಿಸಿವೆ.

ಮತ್ತೆ ಪೊಲೀಸ್‌ ವಶಕ್ಕೆ ಪಡೆಯಲು ಯತ್ನ: ಅಕ್ಕಿ ಹಗರಣದಲ್ಲಿ ಸಿಕ್ಕಿಬಿದ್ದಿ ರುವ ಪ್ರಮುಖ ಆರೋಪಿ ಚಂದ್ರಶೇಖರ್‌ನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ 3 ದಿನಗಳ ಕಾಲ ಪೊಲೀಸ್‌ ವಶಕ್ಕೆ ಪಡೆದಿದ್ದರು. ಕಳೆದ ಶುಕ್ರವಾರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದ್ದು, ಹೆಚ್ಚಿನ ತನಿಖೆಗಾಗ ಮತ್ತೂಮ್ಮೆ ಪೊಲೀಸ್‌ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಇನ್ನು 3ದಿನ ಪೊಲೀಸ್‌ ವಶದಲ್ಲಿದ್ದ ಆರೋಪಿ ಅಕ್ಕಿ ನಾಪತ್ತೆಗೆ ಸಂಬಂಧಿಸಿದಂತೆ ಕೆಲ ಮಹತ್ವದ ಮಾಹಿತಿ ಯನ್ನು ಪೊಲೀಸರಿಗೆ ತಿಳಿಸಿದ್ದು, ಕೆಲವರ ಹೆಸರನ್ನು ತನಿಖೆ ವೇಳೆ ಬಾಯಿ ಬಿಟ್ಟಿರುವುದಾಗಿ ತಿಳಿದು ಬಂದಿದೆ. ಎಲ್ಲಾ ಮಾಹಿತಿಯನ್ನು ಗೌಪ್ಯವಾಗೇ ಇರಿಸಿ ಕೊಂಡಿರುವ ಪೊಲೀಸರು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಇಡೀ ಪ್ರಕರಣದ ತನಿಖೆಯನ್ನು ಚನ್ನಪಟ್ಟಣ ನಗರ ಪೊಲೀಸ್‌ವೃತ್ತ ನಿರೀಕ್ಷಕಿ ಶೋಭಾ ಅವರಿಗೆ ವಹಿಸಲಾಗಿದೆ. ಆರೋಪಿಯ ಹೇಳಿಕೆಯನ್ನು ಆಧರಿಸಿ ಹಲವು ಮಂದಿಯನ್ನು ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಅಧಿಕಾರಿಗಳಿಗೆ ನೋಟೀಸ್‌: ಹಗರಣಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರೀಕ ಸರಬ ರಾಜು ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಚನ್ನಪಟ್ಟಣ ತಾಲೂಕಿನ ಆಹಾರ ಇಲಾಖೆ ನೌಕರರಿಗೆ ಈ ಸಂಬಂಧ ಜಿಲ್ಲಾ ಉಪನಿರ್ದೇಶಕರು ನೋಟೀಸ್‌ ಜಾರಿ ಮಾಡಿದ್ದಾರೆ. ಹಗರಣಕ್ಕೆ ಕಾರಣವನ್ನು ತಿಳಿಸು ವಂತೆ ನೋಟೀಸ್‌ನಲ್ಲಿ ತಿಳಿಸಿದ್ದು, ಅವರ ಉತ್ತರವನ್ನು ಆದರಿಸಿ ಅವರ ವಿರುದ್ಧ ಕ್ರಮ ಜರುಗಿಸಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಸಹಕಾರ ಇಲಾಖೆಯಿಂದಲೂ ತನಿಖೆ: ಅಕ್ಕಿ ಹಗರಣ ಸಹಕಾರ ಸಂಸ್ಥೆಯ ಗೋದಾಮಿನಲ್ಲಿ ಸಂಭ ವಿಸಿರುವ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಅಧಿ ಕಾರಿಗಳು ಈ ಸಂಬಂಧ ತನಿಖೆಗೆ ಮುಂದಾಗಿದ್ದಾರೆ. ಟಿಎಪಿಸಿಎಂಎಸ್‌ ಕಚೇರಿಗೆ ಸಹಕಾರ ಇಲಾಖೆ ಸಹಾ ಯಕ ನಿಬಂಧಕ ರಘು ಭೇಟಿನೀಡಿ ಆಡಳಿ ತಾತ್ಮವಾಗಿ ನಡೆದಿರುವ ಲೋಪಗಳ ಬಗ್ಗೆ ಮಾಹಿತಿ ಸಂಗ್ರಹಿ ಸಿದ್ದಾರೆ. ಇನ್ನು ಹಗರಣದ ಪ್ರಮುಖ ಆರೋ ಪಿಯಾ ಗಿರುವ ಚಂದ್ರಶೇಖರ್‌ ನನ್ನು ಸೇವೆಯಿಂದ ಅಮಾ ನತ್ತು ಗೊಳಿಸಿ ಸಹಕಾರ ಇಲಾಖೆ ಆದೇಶಿಸಿದೆ.

ಗೋದಾಮಿನ ಪರವಾನಗಿ ರದ್ದು: ಟಿಎಪಿಸಿಎಂಎಸ್‌ ನಲ್ಲಿ ಹಗರಣ ನಡೆದಿರುವ ಬೆನ್ನಲ್ಲೇ ಸಂಸ್ಥೆಗೆ ಆಹಾರ ಇಲಾಖೆ ನೀಡಿದ್ದ ಸಗಟು ವಿತರಣಾ ಪರವಾ ನಗಿಯನ್ನು ರದ್ದುಪಡಿಸಿದ್ದು, ಚನ್ನಪಟ್ಟಣ ತಾಲೂಕಿಗೆ ಸರ್ಕಾರದ ಉಗ್ರಾಣ ನಿಗಮದಿಂದಲೇ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಡಿಸೆಂ ಬರ್‌ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಸಮಸ್ಯೆ ಯಾಗದಂತೆ ಹೆಚ್ಚುವರಿ ದಾಸ್ತಾನಿರುವ ಆಹಾರ ಧಾನ್ಯ ವನ್ನು ನ್ಯಾಯ ಬೆಲೆ ಅಂಗಡಿಗಳಿಗೆ ವಿತರಣೆ ಮಾಡಲು ಆಹಾರ ಇಲಾಖೆ ಮುಂದಾಗಿದೆ. ಇದರೊಂದಿಗೆ ಆಹಾರ ಇಲಾಖೆ ಅಧಿಕಾರಿಗಳು ಜಿಲ್ಲೆಯ ವಿವಿಧ ಗೋದಾ ಮು ಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ್ದು, ಕೆಲ ಗೋದಾಮುಗಳಿಗೆ ಖುದ್ದು ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರಮ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಲ್ಲಾ ಗೋದಾಮುಗಳಿಗೆ, ನ್ಯಾಯಬೆಲೆ ಅಂಗಡಿ ಗಳಿಗೆ, ಸಾಗಾಣಿಕೆದಾರರಿಗೆ ಕೈಗೊಳ್ಳಬೇಕಾದ ಮುನ್ನೆ ಚ್ಚರಿಕೆ ಕ್ರಮ ಕುರಿತು ನೋ ಟೀಸ್‌ ಜಾರಿ ಮಾಡಲಾಗಿದೆ. ಇದರೊಂದಿಗೆ ಕಳವಾಗಿ ರುವ ಅಕ್ಕಿಯ ಮೌಲ್ಯವನ್ನು ಸರ್ಕಾರಕ್ಕೆ ಕಟ್ಟಿಸುವ ಬಗ್ಗೆ ಸಹ ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಾಪ್ಟ್ವೇರ್‌ ಪರಿಶೀಲನೆ: ಆಹಾರ ಇಲಾಖೆಯ ಸಂಪೂರ್ಣ ವ್ಯವಹಾರವನ್ನು ಆನ್‌ಲೈನ್‌ ತಂತ್ರಾಂಶದ ಮೂಲಕ ನಿರ್ವಹಣೆ ಮಾಡುತ್ತಿದ್ದು, ತಂತ್ರಾಂಶದ ನಿರ್ವಹಣೆಯನ್ನು ಗೋದಾಮಿನ ವ್ಯವಸ್ಥಾಪಕರೇ ನಿರ್ವಹಿಸುತ್ತಿದ್ದರು. ತಂತ್ರಾಂಶದಲ್ಲಿ ದಾಸ್ತಾನು ನಮೂ ದಾಗಲು, ಮತ್ತು ಇನ್‌ವಾಯ್ಸ ಪ್ರಿಂಟ್‌ ತೆಗೆಯಬೇಕಿದ್ದಲ್ಲಿ ಇವರ ಮೊಬೈಲ್‌ಗೆ ಬರುತ್ತಿದ್ದ ಓಟಿಪಿ ಮತ್ತು ಬಯೋ ಮೆಟ್ರಿಕ್‌ ಯಂತ್ರದಲ್ಲಿ ಇವರ ಬೆರ ಳಚ್ಚು ನೀಡ ಬೇಕಿತ್ತು. ತಂತ್ರಾಂಶವನ್ನು ಹ್ಯಾಕ್‌ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರಾ ಎಂಬ ಅಂಶದ ಬಗ್ಗೆ ಯೂ ಇಲಾಖೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

ಪಿಸಿಎಂಎಸ್‌ ಆಡಳಿತ ಮಂಡಳಿ ವಜಾ?: ಅಕ್ಕಿ ಹಗರಣದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಟಿಎಪಿಸಿಎಂಎಸ್‌ ಆಡಳಿತ ಮಂಡಳಿಯನ್ನು ಹೊಣೆಗಾರಿಕೆ ಮಾಡಿ, ಆಡಳಿತ ಮಂಡಳಿಯನ್ನು ಅಮಾನತ್ತು ಮಾಡಲು ಸಿದ್ದತೆ ನಡೆಸಿದೆ ಎಂಬ ಮಾಹಿತಿ ಸಹಕಾರ ಇಲಾಖೆಯ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಈಗಾಗಲೇ ಸಹಕಾರ ಇಲಾಖೆ ಜಿಲ್ಲಾ ಉಪನಿಬಂಧಕರು ಗೋದಾಮಿನಲ್ಲಿ ನಡೆದಿರುವ ಅಕ್ಕಿ ಗೋಲ್‌ಮಾಲ್‌ಗೆ ಸಂಬಂಧಿಸಿದಂತೆ ಟಿಎಪಿಸಿಎಂಎಸ್‌ನ 10 ಮಂದಿ ನಿರ್ದೇಶಕರಿಗೆ ಸಹಕಾರ ಕಾಯಿದೆ 29-ಸಿ ಅಡಿಯಲ್ಲಿ ನೋಟೀಸ್‌ ನೀಡಿದ್ದು, ಡಿ.1ರಂದು ಬೆಳಗ್ಗೆ 11.30ಕ್ಕೆ ಕಚೇರಿಗೆ ಹಾಜರಾಗಿ ಈಬಗ್ಗೆ ವಿವರಣೆ ನೀಡುವಂತೆ ತಿಳಿಸಿದ್ದಾರೆ.

ಸಮಂಜಸ ಉತ್ತರ ನೀಡದಿದ್ದಲ್ಲಿ ಆಡಳಿತ ಮಂಡಳಿ ನಷ್ಟವನ್ನು ತಪ್ಪಿಸುವಲ್ಲಿ ನಿಗಾವಹಿಸಿಲ್ಲ, ಬೇಜವಾಬ್ದಾರಿಯಿಂದ ವರ್ತಿಸಿದೆ ಎಂದು ಆಡಳಿತ ಮಂಡಳಿಯನ್ನು ಸೂಪರ್‌ಸೀಡ್‌ ಮಾಡುವ ಅಧಿಕಾರ ಸಹಕಾರ ಇಲಾಖೆ ಇದೆ. ಈ ಕಾಯಿದೆಯಡಿಯಲ್ಲಿ ಲೋಪ ಸಾಭೀತಾದಲ್ಲಿ ಕನಿಷ್ಠ 1 ವರ್ಷದಿಂದ 6 ವರ್ಷದವರೆಗೆ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಯಾವುದೇ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧೆ ಮಾಡದಂತೆ ನಿಷೇಧ ವಿಧಿಸುವ ಸಾಧ್ಯತೆ ಇದ್ದು, ಟಿಎಪಿಸಿಎಂಎಸ್‌ ಆಡಳಿತ ಮಂಡಳಿಯ ನಿರ್ದೇಶಕರ ತಲೆಯ ಮೇಲೆ ಅಮಾನತ್ತಿನ ತೂಗುಗತ್ತಿ ತೂಗುತ್ತಿದೆ.

ಇದೀಗ ಟಿಎಪಿಸಿಎಂಎಸ್‌ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿದ್ದು ಡಿ.3ರಂದು ಟಿಎಪಿಸಿಎಂಎಸ್‌ ಚುನಾವಣೆ ನಡೆಯಲಿದೆ. ಸಾಕಷ್ಟು ಹುರಿಯಾಳುಗಳು ಕಣದಲ್ಲಿದ್ದು ಚುನಾವಣೆ ಮೇಲೂ ಹಗರಣದ ಕರಿನೆರಳು ಬೀರಿದೆ.

ಅಕ್ಕಿ ಹಗರಣದ ಆರೋಪಿಗೆ ಜಾಮೀನು :

ರಾಮನಗರ: ಚನ್ನಪಟ್ಟಣ ಟಿಎಪಿಸಿಎಂಎಸ್‌ ಗೋದಾಮಿನಲ್ಲಿ 1600 ಕ್ವಿಂಟಲ್‌ ಅಕ್ಕಿ ನಾಪತ್ತೆ ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರ್‌ಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ಅಕ್ಕಿ ಕಳವು ಪ್ರಕರಣ ಬಯಲಾಗುತ್ತಿದ್ದಂತೆ ನ.22 ರಂದು ಗೋದಾಮಿನ ವ್ಯವಸ್ಥಾಪಕ ಚಂದ್ರಶೇಖರ್‌ ನನ್ನು ಬಂಧಿಸಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಸೋಮವಾರ ಆರೋಪಿ ಪರ ವಕೀಲರು ಮಂಡಿಸಿದ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ ಚನ್ನಪಟ್ಟಣ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಮಹೇಂದ್ರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ವಕೀಲರ ಟಿ.ವಿ.ಗಿರೀಶ್‌ ವಾದ ಮಂಡಿಸಿದ್ದರು.

ಸಂಬಂಧಿಸಿದ ಆಹಾರ ಇಲಾಖೆ ಸಿಬ್ಬಂದಿಗೆ ಕಾರಣ ಕೇಳಿ ನೋಟೀಸ್‌ ಜಾರಿ ಮಾಡ ಲಾಗಿದೆ. ಸರ್ಕಾರಕ್ಕೆ ಆಗಿರುವ ನಷ್ಟವನ್ನು ಬರಿಸಲು ಇಲಾಖೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ಮತ್ತೆ ಮರು ಕಳಿಸದಂತೆ ಕೈಗೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ಈಗಾಗಲೇ ಕೈಗೊಂಡಿದೆ.

ಟಿಎಪಿಸಿಎಂಎಸ್‌ಗೆ ನೀಡಿದ್ದ ಆಹಾರ ಸಗಟು ವಿತರಣೆಯ ಪರವಾನಗಿಯನ್ನು ರದ್ದುಪಡಿಸಲಾಗಿದೆ. ● ರಮ್ಯಾ, ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕಿ

ಟಿಎಪಿಸಿಎಂಎಸ್‌ ಗೋದಾಮಿನಲ್ಲಿ ಅಕ್ಕಿ ಕಾಣೆಯಾಗಿರುವ ಬಗ್ಗೆ ಸಹಕಾರ ಇಲಾಖೆ ಆಡಳಿತಾತ್ಮಕ ಸಂಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ನಾನು ಟಿಎಪಿಸಿಎಂಎಸ್‌ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. -ರಘು ಎಆರ್‌, ಸಹಕಾರ ಇಲಾಖೆ

ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.