ಪ್ರವಾಸಿಗರ ಲಗ್ಗೆ: ಆತಂಕ-ಆಕ್ಷೇಪ

ಕಾಡು ಪ್ರಾಣಿಗಳಿಂದ ತೊಂದರೆ•ಪ್ರವೇಶಕ್ಕೆ ಅನುಮತಿ ಕಡ್ಡಾಯ

Team Udayavani, Jul 31, 2019, 1:15 PM IST

31-JUly-29

ಸಾಗರ: ಶರಾವತಿ ಹಿನ್ನೀರಿನ ಗುಡ್ಡಕ್ಕೆ ಅನುಮತಿ ಇಲ್ಲದೆ ಚಾರಣ ಹೊರಟ ಪ್ರವಾಸಿಗರನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ.

ಸಾಗರ: ಮಲೆನಾಡಿನ ದಟ್ಟ ಅರಣ್ಯ ಹಾಗೂ ಗುಡ್ಡಗಳಲ್ಲಿ ಚಾರಣ ಹಾಗೂ ಪ್ರವಾಸಕ್ಕೆ ಜನ ಲಗ್ಗೆ ಇಡುತ್ತಿರುವುದಕ್ಕೆ ಆಕ್ಷೇಪ ಹಾಗೂ ಆತಂಕ ವ್ಯಕ್ತವಾಗುತ್ತಿದೆ. ಹೀಗೆ ಪ್ರವಾಸಕ್ಕೆ ಬಂದವರನ್ನು ಕೆಲ ಗ್ರಾಮಸ್ಥರು ತಡೆದ ಪ್ರಸಂಗವೂ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಕಾಡು ಗುಡ್ಡಗಳಲ್ಲದೆ ಹಳ್ಳಿಗಳ ಸಮೀಪವೇ ಕಾಡೆಮ್ಮೆ, ಕಾಳಿಂಗ ಸರ್ಪ ಮೊದಲಾದ ಕಾಡುಪ್ರಾಣಿಗಳು ನಿರಂತರವಾಗಿ ಸಂಚರಿಸಿದ್ದು, ಈ ಪ್ರದೇಶಗಳಿಗೆ ಸೂಕ್ತ ರಕ್ಷಣೆ, ಪರವಾನಗಿ ಅಥವಾ ಮಾರ್ಗದರ್ಶನ ಇಲ್ಲದೆ ಪ್ರವಾಸಿಗರು ಬರುತ್ತಿದ್ದು, ಪ್ರಾಣಾಪಾಯ ಆಗಬಹುದು ಎಂದು ತಾಲೂಕಿನ ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹಂಸಗಾರು, ಗೋಟಗಾರು ವ್ಯಾಪ್ತಿಯಲ್ಲಿನ ಶರಾವತಿ ಹಿನ್ನೀರಿನ ಗುಡ್ಡಕ್ಕೆ ಎರಡು ಐಷಾರಾಮಿ ಬಸ್‌ಗಳಲ್ಲಿ ದಿಢೀರನೆ ಸುಮಾರು 70 ಜನರು ಪ್ರವಾಸಿಗರು ಆಗಮಿಸಿ ಚಾರಣಕ್ಕೆ ಮುಂದಾಗಿದ್ದಾರೆ. ಬೆಳಗಿನ ಹೊತ್ತು ಈ ಭಾಗದಲ್ಲಿ ಕಾಡುಕೋಣಗಳು ಗುಂಪುಗುಂಪಾಗಿ ಸಂಚರಿಸುವ ಕಾರಣ ಯಾವುದೇ ಕ್ಷಣದಲ್ಲಿ ಅಪಾಯವಾಗಬಹುದು ಎಂಬ ಹಿನ್ನೆಲೆಯಲ್ಲಿ ಪ್ರಕೃತಿ ವೀಕ್ಷಣೆ ನಡೆಸಲು ಬಂದವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೂಕ್ತ ಮಾಗದರ್ಶಕರು, ರಕ್ಷಣಾ ವ್ಯವಸ್ಥೆ ಮತ್ತು ಪರವಾನಗಿ ಇಲ್ಲದ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ವಾಪಸ್‌ ಕಳುಹಿಸಿದ್ದಾರೆ.

ಚಾರಣಕ್ಕೆ ಬರುವುದು ಫ್ಯಾಶನ್‌ ಆಗಬಾರದು. ಅದರ ಹಿಂದೆ ಪರಿಸರದ ಕಾಳಜಿ ಇರಬೇಕು. ಪ್ಲಾಸ್ಟಿಕ್‌, ಬಾಟಲಿ ಇನ್ನಿತರ ತ್ಯಾಜ್ಯಗಳಿಂದ ಸ್ಥಳೀಯ ಪರಿಸರವನ್ನು ಹಾಳು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗೆ ತಾಲೂಕಿನ ಹಿಪ್ಲಿ ಎಂಬಲ್ಲಿನ ಕಿರು ಜಲಾಶಯದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದ್ದಂತೆ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿ ಪರಿಸರ ಸಂಪೂರ್ಣವಾಗಿ ಹದಗೆಡಿಸಲಾಗಿದೆ. ಅಪಾಯದ ಮಾಹಿತಿ ಇಲ್ಲದೆ, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಚಾರಣದ ಫೋಟೋ ಹಾಕುವ ಪ್ರವಾಸಿಗರು ಸ್ಥಳೀಯ ಪರಿಸರದ ಚಾರಣ ಆಕಾಂಕ್ಷಿಗಳನ್ನು ಹೆಚ್ಚಿಸುತ್ತಾರೆ. ಯಾವುದೋ ಒಂದು ಹಂತದಲ್ಲಿ ಈ ಭಾಗದ ಪರಿಸರವೂ ಹಾಳಾಗುವಂತಾಗುತ್ತದೆ ಎಂದು ಸ್ಥಳೀಯ ಪರಿಸರ ಕಾರ್ಯಕರ್ತರಾದ ಹಿಂಡೂಮನೆ ಜಿತೇಂದ್ರ, ಹರ್ಷ ಹೊಸಳ್ಳಿ, ಅರುಣ ಗೋಟಗಾರು, ಶ್ರೀಧರ ಗ್ರಾಫಿಕ್ಸ್‌ ನಟರಾಜ್‌ ಮುಂತಾದವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಾಲತಾಣಗಳಲ್ಲಿ ದೊಡ್ಡ ಚರ್ಚೆ: ಹಂಸಗಾರು ಹೊಸಳ್ಳಿ ಗುಡ್ಡಕ್ಕೆ ಚಾರಣ ಬಂದವರಿಗೆ ಸ್ಥಳೀಯರು ಆಕ್ಷೇಪಿಸಿ ವಾಪಸ್‌ ಕಳುಹಿಸಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ತಾಲೂಕು ಅಭಿವೃದ್ಧಿಯಾಗಬೇಕು ಎನ್ನುವವರು ಪ್ರವಾಸಿ ತಾಣ, ಚಾರಣಗಳು ಪ್ರವಾಸಿಗರಿಗೆ ಅಲಭ್ಯ ಎನ್ನುವುದು ಎಷ್ಟು ಸರಿ, ಇದರ ಬದಲು ಸ್ವಚ್ಛತೆ, ಹಾನಿ ಎಂಬ ವಿಷಯ ಇಟ್ಟುಕೊಂಡು ಎಲ್ಲ ಪ್ರವಾಸಿ ಸ್ಥಳಗಳನ್ನು ಬಂದ್‌ ಮಾಡಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಸ ತಾಣಗಳ ವಿಚಾರದಲ್ಲಿ ಹಲವು ನಿಯಮಗಳಿವೆ. ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿತ ಸ್ಥಳಕ್ಕೆ ಪ್ರವಾಸದ ಹೆಸರಿನಲ್ಲಿ ಏಕಾಏಕಿ ಚಾರಣಿಗಳು ನುಗ್ಗುವುದು ಸರಿಯಲ್ಲ. ಮಲೆನಾಡಿನ ಸೂಕ್ಷ್ಮ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಿದೆ. ಯಾವುದೇ ವೈಜ್ಞಾನಿಕ ಅಧ್ಯಯನ ಮಾದರಿಯ ನಿರೀಕ್ಷೆಗಳಿಲ್ಲದೆ ಕೇವಲ ಮೋಜು ಮಸ್ತಿಗಾಗಿ ಕಾಡಿಗೆ ನುಗ್ಗುವವರನ್ನು ವಿರೋಧಿಸುತ್ತೇವೆ ಎಂದು ಪರಿಸರ ಪ್ರೇಮಿ ಜಿತೇಂದ್ರ ಹಿಂಡೂಮನೆ ವಿವಾದದ ಕುರಿತು ಸ್ಪಷ್ಟಪಡಿಸಿದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.