ಪಪಂ ಚುನಾವಣಾ ಕಣದಿಂದ ಹಿಂದಕ್ಕೆ: ಸುಧಾ ಸುರೇಶ್
Team Udayavani, Apr 5, 2021, 9:09 PM IST
ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ, ಸಿದ್ಧಾಂತಕ್ಕೆ ಬದ್ಧರಾಗಿ ಹಿಂದೆ ಸರಿದಿದ್ದೇವೆ ಎಂದು ಸುಧಾ ಸುರೇಶ್ ತಿಳಿಸಿದ್ದಾರೆ. ಪಪಂ ಚುನಾವಣೆ ಏ.27 ನಡೆಯಲಿದ್ದು ವಾರ್ಡ್ ನಂ. 14ರ ಸಾಮಾನ್ಯ ಮಹಿಳಾ ಮೀಸಲಾತಿ ಪ್ರಕಟವಾಗಿದೆ.
ಬಿಜೆಪಿಯಲ್ಲಿ ಹಿಂದಿನ ಪಪಂ ಸದಸ್ಯರಾಗಿ ಅತ್ಯಂತ ಯಶಸ್ವಿಯಾಗಿ ಅನೇಕ ಉತ್ತಮ ಕೆಲಸ ಮಾಡಿ ವಾರ್ಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದು ಒಂದಷ್ಟು ಬಡವರಿಗೆ , ಕೂಲಿ ಕಾರ್ಮಿಕರಿಗೆ, ಆಶ್ರಯ ಯೋಜನೆಯಲ್ಲಿ ಮನೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಕಲ್ಪಿಸಿದ ತೃಪ್ತಿಯಿದೆ. ಸುರೇಶ್ ಪ್ರಭು ಅವರ ಪತ್ನಿ ಬಿಜೆಪಿ ಮಹಿಳಾ ಕಾರ್ಯಕರ್ತೆ ಸುಧಾ ಸುರೇಶ್ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಸಮಾಜ ಸೇವಕ,ಯುವನಾಯಕ ಕುರುವಳ್ಳಿ ಪ್ರಮೋದ್ ಅವರ ಪತ್ನಿ ನಿಶಾ ಪ್ರಮೋದ್ ಅವರು ಸಹಜವಾಗಿಯೇ ಚುನಾವಣಾ ಸ್ಪರ್ಧಾಕಾಂಕ್ಷಿಗಳಾಗಿದ್ದರು.
ಪಕ್ಷದ ಬಿಜೆಪಿ ತಾಲೂಕು ಅಧ್ಯಕ್ಷ ಬಾಳೆಬೈಲು ರಾಘವೇಂದ್ರ ನಾಯಕ್, ಪಕ್ಷದ ಹಿರಿಯ ನಾಯಕರಾದ ಸಂದೇಶ್ ಜವಳಿ, ವಾರ್ಡ್‌ನ ಅಧ್ಯಕ್ಷ ವೈ. ಗಣಪತಿ ಅವರ ಕೋರಿಕೆ ಮೇರೆಗೆ ಮತ್ತು ಪಕ್ಷದ,ಸಿ ದ್ಧಾಂತಕ್ಕೆ ಬದ್ಧರಾಗಿ, ಸಂಘಟನೆಯ ಹಿತದೃಷ್ಟಿಯಿಂದ ಪ್ರಮೋದ್ ಅವರ ಪತ್ನಿ, ನಿಶಾ ಅವರಿಗೆ ನಮ್ಮ ವಾರ್ಡ್ ನಂಬರ್ ಹದಿನಾಲ್ಕನೇ ಪಪಂ ಚುನಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ನಾವುಚುನಾವಣೆಯಿಂದ ಹಿಂದೆ ಸರಿದಿದ್ದೇವೆ ಎಂದು ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ
ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ
ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು
ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ
ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಗೆ 19 ಕೋ ರೂ ಲಾಭ : ತೇಲ್ಕೂರ