ಬೆಳೆವಿಮೆ ಹೆಸರಲ್ಲಿ ರೈತರಿಗೆ ಅನ್ಯಾಯ


Team Udayavani, Jul 6, 2018, 5:29 PM IST

KCR-Chopper-600.jpg

ಸಾಗರ: ಬೆಳೆವಿಮೆ ಹೆಸರಿನಲ್ಲಿ ತಾಲೂಕಿನ ರೈತರಿಗೆ ದೊಡ್ಡಮಟ್ಟದ ಅನ್ಯಾಯವಾಗಿದೆ. ವಿಮೆ ಹೆಸರಿನಲ್ಲಿ ಕೇಂದ್ರ ಸರ್ಕಾರದಿಂದ 90 ಲಕ್ಷ ರೂ., ರಾಜ್ಯ ಸರ್ಕಾರದಿಂದ 90 ಲಕ್ಷ ರೂ. ಹಾಗೂ ರೈತರಿಂದ 90 ಲಕ್ಷ ರೂ. ಪಾವತಿಸಿಕೊಳ್ಳಲಾಗಿದೆ. ಆದರೆ ತಾಲೂಕಿನ 10 ಗ್ರಾಪಂನ 1662 ರೈತರಿಗೆ ಸುಮಾರು 62 ಲಕ್ಷ ರೂ. ಪರಿಹಾರ ಮಾತ್ರ ನೀಡಲಾಗಿದೆ ಎಂದು ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ ದೂರಿದರು.

ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಬಂಧಪಟ್ಟ ವಿಮೆ ಕಂಪನಿ ಎಲ್ಲಿದೆ, ಪರಿಹಾರಕ್ಕೆ ಯಾರನ್ನು ಕೇಳಬೇಕು ಎನ್ನುವ ಸಮರ್ಪಕ ಮಾಹಿತಿ ರೈತರಿಗೂ ಇಲ್ಲ. ಜನಪ್ರತಿನಿಧಿಗಳಿಗೂ ಇಲ್ಲವಾಗಿದೆ . ರೈತರನ್ನು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಕತ್ತಲಿನಲ್ಲಿಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಕೆಲವು ಅಧಿಕಾರಿಗಳಿಗೆ ಈ ಕುರಿತು ವಿಚಾರಿಸಿದರೆ ಡಿಸಿಸಿ ಬ್ಯಾಂಕ್‌ ಕಡೆ ಬೊಟ್ಟು ಮಾಡುತ್ತಿದ್ದಾರೆ. ಯಾರನ್ನು ನಂಬಬೇಕು ಎನ್ನುವುದೇ ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಡಿಸಿಸಿ ಬ್ಯಾಂಕ್‌, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಭೆ ಕರೆದು ವಿಮೆ ಅವ್ಯವಸ್ಥೆ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.

ಆರೋಗ್ಯ ಇಲಾಖೆ ವತಿಯಿಂದ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಬಿಡಲಾಗಿರುವ ಮೊಬೈಲ್‌ ವಾಹನ ಸರಿಯಾದ ಸೇವೆ ನೀಡುತ್ತಿಲ್ಲ. ಸರ್ಕಾರದಿಂದ ಪ್ರತಿ ತಿಂಗಳು 1.25 ಲಕ್ಷ ರೂ. ನೀಡಲಾಗುತ್ತಿದ್ದು, ಸೇವೆ ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಏಜೆನ್ಸಿಗೆ ಸೂಚನೆ ನೀಡಿದರೂ ತಿದ್ದಿಕೊಂಡಿಲ್ಲ. ಹಾಲಿ ಮೊಬೈಲ್‌ ಯೂನಿಟ್‌ನಲ್ಲಿ ವೃದ್ಧ ವೈದ್ಯರೊಬ್ಬರನ್ನು ನೇಮಕ ಮಾಡಿದ್ದಾರೆ. ಜೊತೆಗೆ ಮೊಬೈಲ್‌ ಯೂನಿಟ್‌ ಸಿಬ್ಬಂದಿಗಳು ಜಗಳ ಮಾಡಿಕೊಳ್ಳುತ್ತಾರೆ ಎಂದು ದೂರುಗಳಿವೆ. ತಕ್ಷಣ ಏಜೆನ್ಸಿ ವಿರುದ್ಧ ಕ್ರಮ ಜರುಗಿಸಿ ಎಂದು ಆರೋಗ್ಯಾ ಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನಲ್ಲಿ ವಿದ್ಯುತ್‌ ಸರಬರಾಜುದಾರರ ಸೌಹಾರ್ದ ಸಹಕಾರ ಸಂಘ ಸ್ಥಾಪಿಸುವ ಚರ್ಚೆ ನಡೆಯುತ್ತಿದೆ. ವಿದ್ಯುತ್‌
ಸರಬರಾಜು ಮಾಡಲು ಮಧ್ಯವರ್ತಿಗಳ ಅಗತ್ಯ ಇದೆಯೇ ಎಂದು ಪ್ರಶ್ನಿಸಿದ ಹಕ್ರೆ, ಇದರ ಸಾಧಕ ಬಾಧಕಗಳ ಕುರಿತು ಚರ್ಚೆ ಅಗತ್ಯ. ಈಗಾಗಲೇ ಹಿಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರು ಜೋಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಗರ ಮತ್ತು ಹೊಸನಗರ ಭಾಗಕ್ಕೆ ದಿನದ 24 ಗಂಟೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡಲು ಮನವಿ ಸಲ್ಲಿಸಲಾಗಿದೆ. ಈ ಕುರಿತು ಮತ್ತೂಮ್ಮೆ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು. ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಮಂಜುನಾಥಸ್ವಾಮಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsadas

Government ಭೂಮಿ ಮಣ್ಣು ವ್ಯಾಪಾರಕ್ಕೆ ಅವಕಾಶವಿಲ್ಲ; ಬೇಳೂರು ಎಚ್ಚರಿಕೆ

4–sagara-dengue

Sagaraದಲ್ಲಿ ಡೆಂಗ್ಯೂಗೆ ಮೊದಲ ಬಲಿ; ಆರೋಗ್ಯ ಇಲಾಖೆ ಸಿಬ್ಬಂದಿ ಮೃತ್ಯು

Davanagere: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ

Davanagere: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ

9

Sagara: ಹೊಸ ಲೇಔಟ್‌ಗೆ ಅವಕಾಶ ಬೇಡ; ಬೇಳೂರು ತಾಕೀತು

6-Thirthahalli

ಅಡಿಕೆ ತೋಟದಲ್ಲಿ ಗಾಂಜಾ ಬೆಳೆ; ಪೊಲೀಸರ ಖಡಕ್ ಕಾರ್ಯಾಚರಣೆ; ಲಕ್ಷಾಂತರ ಮೌಲ್ಯದ ಗಾಂಜಾ ಗಿಡ ವಶ

MUST WATCH

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

ಹೊಸ ಸೇರ್ಪಡೆ

1-asdsadas

Government ಭೂಮಿ ಮಣ್ಣು ವ್ಯಾಪಾರಕ್ಕೆ ಅವಕಾಶವಿಲ್ಲ; ಬೇಳೂರು ಎಚ್ಚರಿಕೆ

4

ಬಂಟ್ವಾಳ ಸರಕಾರಿ ಆಸ್ಪತ್ರೆ ಬಳಿಯಿಂದ ಬೈಕ್‌ ಕಳವು

court

Illegal mining case; ಬಿಜೆಪಿ ಮುಖಂಡರಾದ ಶಶಿರಾಜ್ ಶೆಟ್ಟಿ, ಪ್ರಮೋದ್ ಗೆ ಜಾಮೀನು

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.