ಸಾಗರದಲ್ಲಿ ದಾಖಲೆ ಸಿದ್ಧಪಡಿಸಿ ನಗರಸಭೆ ಅಧಿಕಾರಿಗಳೇ ಜನರಿಗೆ ಕಾಯಬೇಕಾದ ಸ್ಥಿತಿ!


Team Udayavani, Feb 22, 2022, 5:00 PM IST

ಸಾಗರದಲ್ಲಿ ದಾಖಲೆ ಸಿದ್ಧಪಡಿಸಿ ನಗರಸಭೆ ಅಧಿಕಾರಿಗಳೇ ಜನರಿಗೆ ಕಾಯಬೇಕಾದ ಸ್ಥಿತಿ!

ಸಾಗರ: ವಿಶೇಷವಾಗಿ ಮಂಗಳವಾರ ಪೂರ್ಣ ದಿನ ದಾಖಲೆ ನೀಡುವ ಕಾರ‍್ಯಕ್ಕಾಗಿ ಸಾಗರ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸಮಯ ಮೀಸಲಿಟ್ಟಿದ್ದಾರೆ.

ನಗರಸಭೆಯಿಂದ ಇದುವರೆಗೆ 1100 ಇ ಸ್ವತ್ತು ಅಧಿಕೃತಗೊಂಡು ನೀಡಲಾಗಿದೆ. ದಾಖಲೆ ಸಿದ್ದ ಮಾಡಿಕೊಂಡು, ನಾಲ್ಕಾರು ಬಾರಿ ಪೋನ್ ಮಾಡಿದರೂ ಅರ್ಜಿದಾರರು ಬಾರದಿರುವುದು ನಡೆಯುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹಾಗೂ ಉಪಾಧ್ಯಕ್ಷ ವಿ.ಮಹೇಶ್ ಅಳಲು ತೊಡಿಕೊಂಡಿದ್ದಾರೆ.

ನಗರಸಭೆಯಲ್ಲಿ ಸುಶಾಸನ ಆರಂಭಿಸಿ ಎರಡು ತಿಂಗಳಾಗಿದೆ. ಅದಕ್ಕೆ ಇನ್ನಷ್ಟು ವೇಗ ನೀಡುವುದಕ್ಕೆ ಜನ ಸಹಕರಿಸಬೇಕಿದೆ. ಸುಶಾಸನದ ಅಡಿಯಲ್ಲಿ ನಗರಸಭೆ ವ್ಯವಸ್ಥಿತವಾಗಿ ದಾಖಲೆಗಳನ್ನು ಅಧಿಕೃತಗೊಳಿಸುತ್ತಿರುವುದಲ್ಲದೆ ನಗರದ ಜನತೆಗೆ ಅನುಕೂಲಕರವಾಗುವ ರೀತಿಯಲ್ಲಿ ಮನೆ, ವ್ಯಾಪಾರ ಮತ್ತು ಜನನ-ಮರಣ ದಾಖಲೆಗಳನ್ನು ಏಕಗವಾಕ್ಷಿಯಲ್ಲಿ ಕಲ್ಪಿಸಿಕೊಡುವ ಕಾರ‍್ಯವನ್ನು ಕಳೆದ ಎರಡು ತಿಂಗಳಿಂದಲೂ ಮಾಡುತ್ತಿದೆ. ಆರಂಭದಲ್ಲಿ ಜನ ಇದರ ಉಪಯೋಗವನ್ನು ಚೆನ್ನಾಗಿ ಪಡೆದುಕೊಂಡರೂ ಇದೀಗ ದಾಖಲೆ ಸಿದ್ದವಾಗಿರುವ ಮಾಹಿತಿ ನೀಡಿದರೂ ಬರುವುದಕ್ಕೆ ವಿಳಂಬ ಮಾಡುತ್ತಿದ್ದಾರೆ. ಇದು ಅಚ್ಚರಿ ಮೂಡಿಸಿದೆ ಎಂದು ಗಾಂಧಿ ಮೈದಾನದ ಸಭಾಂಗಣದಲ್ಲಿ ಮಂಗಳವಾರ ಸುಶಾಸನ  ಯೋಜನೆ ಅನ್ವಯ ಏಕಗಾವಕ್ಷಿಯಲ್ಲಿ ಇ ಸ್ವತ್ತು  ದಾಖಲೆ ಪತ್ರ ಮಾಲೀಕರಿಗೆ ನೀಡಿದ ಮಧುರಾ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ಕೂಡ ಇದರ ವೇಗ ಹೆಚ್ಚಿಸಬೇಕು. ನಗರ ವ್ಯಾಪ್ತಿಯಲ್ಲಿರುವ ಎಲ್ಲರಿಗೂ ಇದರ ಅನುಕೂಲವಾಗಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ ಕೆಲವರು ಮೂಲ ದಾಖಲೆಯ ಮಾಹಿತಿ ಕೊಡುವುದಕ್ಕೂ ಬಾರದಿರುವುದು, ಇನ್ನು ಮಾಹಿತಿ ನೀಡಿದವರು, ತಮ್ಮ ಅಧಿಕೃತ ದಾಖಲೆ ಪಡೆದು ಹೋಗುವುದಕ್ಕೆ ಬಾರದಿರುವುದು ಈ ಕಾರ‍್ಯ ವಿಳಂಬವಾಗುವುದಕ್ಕೆ ಕಾರಣವಾಗುತ್ತಿದೆ. ಇನ್ನಾದರೂ ಜನತೆ ಸ್ಪಂದಿಸಬೇಕಿದೆ ಎಂದರು.

ಉಪಾಧ್ಯಕ್ಷ ವಿ. ಮಹೇಶ್ ಮಾತನಾಡಿ, ಸಿಬ್ಬಂದಿ ಕಾದು ಸುಮ್ಮನೆ ಕುಳಿತುಕೊಳ್ಳುವುದು ಕ್ರಮವಲ್ಲ. ಹಾಗಾಗಿ ಜನತೆ ಇದನ್ನು ಗಮನಿಸಬೇಕು ಎಂದರು.

ಆಯುಕ್ತ ರಾಜು ಡಿ. ಬಣಕರ್, ಸದಸ್ಯರಾದ ಅರವಿಂದ ರಾಯ್ಕರ್, ಮೈತ್ರಿ ಪಾಟೀಲ್, ಕುಸುಮಾ ಸುಬ್ಬಣ್ಣ, ಲಿಂಗರಾಜು, ನಾದಿರಾ, ನಗರ ಸಭೆಯ ಎಂಜಿನಿಯರ್ ಎಚ್.ಕೆ. ನಾಗಪ್ಪ, ಮದನ್, ಸಂತೋಷ್ ಕುಮಾರ್, ರಚನಾ ಮತ್ತಿತರರು ಇದ್ದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.