ಆಡಿಯೋ ವೈರಲ್: ಸೂಕ್ತ ತನಿಖೆ ಮಾಡಲು ಆಗ್ರಹ

ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಕಾಂಗ್ರೆಸ್‌ ಒತ್ತಾಯ ,ಆಡಿಯೋದ ಸಂಪೂರ್ಣ ತನಿಖೆಯಾಗಬೇಕು: ರಾಮಕೃಷ್ಣ

Team Udayavani, Apr 30, 2019, 4:19 PM IST

tumkur-3-tdy..

ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌. ರಾಮಕೃಷ್ಣ ಮಾತನಾಡಿದರು. ಈ ವೇಳೆ ಮಾಜಿ ಶಾಸಕ ಎಸ್‌.ಷಪಿ ಅಹಮದ್‌ ಮತ್ತಿತರಿದ್ದರು

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ನಾಮಪತ್ರ ವಾಪಸು ಪಡೆಯಲು ತಲಾ 3.5 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮಾಜಿ ಸಂಚಾಲಕ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಬೆಂಬಲಿಗ ಎಚ್.ಡಿ.ದರ್ಶನ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತ ಹಾಗೂ ಪತ್ರಕರ್ತ ಎಂದು ಹೇಳಿಕೊಳ್ಳುವ ನೃಪತುಂಗ ಅವರ ನಡುವೆ ನಡೆದಿರುವ ಆಡಿಯೋ ವೈರಲ್ ಬಗ್ಗೆ ಕೂಡಲೇ ಸೂಕ್ತ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌. ರಾಮಕೃಷ್ಣ ಒತ್ತಾಯಿಸಿದ್ದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವೈರಲ್ ಆದ ಆಡಿಯೋ ಎಡಿಟ್ ಮಾಡಿದಂಥ ಆಡಿಯೋವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ಆಡಿಯೋದ ಸಂಪೂರ್ಣ ತನಿಖೆಯಾಗಬೇಕು. ಈ ಸಂಬಂಧ ಎಸ್‌ಪಿ ಅವರಿಗೆ ದೂರು ಸಲ್ಲಿಸುತ್ತೇವೆ ಎಂದು ನುಡಿದರು.

ತೇಜೋವಧೆಗೆ ಯತ್ನ: ದರ್ಶನ್‌ ನಡೆಸಿರುವ ಆಡಿಯೋ ಸಂಭಾಷಣೆಯು ವೈರಲ್ ಆಗಿದ್ದು, ನಾಮಪತ್ರ ವಾಪಸ್‌ ಪಡೆಯಲು ಪಕ್ಷದ ಹಿರಿಯ ನಾಯಕರು ಹಣ ಪಡೆದಿದ್ದಾರೆ ಎನ್ನುವ ವಿಚಾರ ಪಕ್ಷದ ಹಿರಿಯ ನಾಯಕರಿಗೆ ತೇಜೋವಧೆ ಮಾಡಿದಂತಾಗಿದೆ ಎಂದರು.

ಆಗ್ರಹ: ಆಡಿಯೋವನ್ನು ದುರುದ್ದೇಶದಿಂದ ಮಾಡಲಾಗಿದ್ದು ಅಲ್ಲಲ್ಲಿ ಕಟ್ ಮಾಡಿ ಅಗತ್ಯಕ್ಕೆ ತಕ್ಕಂತೆ ಬಳಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ ಸಂಪೂರ್ಣ ಆಡಿಯೋದ ತನಿಖೆಯಾಗಬೇಕು. ಇದರ ಹಿಂದೆ ಕಾಣದ ವ್ಯಕ್ತಿಗಳ ಕುತಂತ್ರವೂ ಇದ್ದು, ಸೂಕ್ತ ತನಿಖೆ ಮೂಲಕ ಇವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್‌. ಷಪಿ ಅಹಮದ್‌, ಕಾಂಗ್ರೆಸ್‌ ಮುಖಂಡರಾದ ಶಿವಮೂರ್ತಿ, ನರಸಿಯಪ್ಪ, ವಿಜಯಕುಮಾರ್‌, ಮಲ್ಲೇಶ್‌, ಮಾಜಿ ಮೇಯರ್‌ ಗೀತಾರುದ್ರೇಶ್‌ ಸೇರಿದಂತೆ ಇನ್ನಿತರರಿದ್ದರು.

ಪತ್ರಿಕಾಗೋಷ್ಠಿಯ ನಂತರ ಕಾಂಗ್ರೆಸ್‌ ಮುಖಂಡರಾದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ಮುಖಂಡತ್ವದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಸಾಮಾಜಿಕ ಜಾಲತಾಣದ ಮಾಜಿ ಸಂಚಾಲಕ ಹಾಗೂ ಡಿಸಿಎಂ ಬೆಂಬಲಿಗ ಎಚ್.ಡಿ. ದರ್ಶನ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತ ಹಾಗೂ ಪತ್ರಕರ್ತ ಎಂದು ಹೇಳಿಕೊಳ್ಳುವ ನೃಪತುಂಗ ಅವರ ನಡುವೆ ನಡೆದಿರುವ ಆಡಿಯೋ ವೈರಲ್ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಹೆಚ್ಚುವರಿ ಎಸ್ಪಿ ಡಾ. ಶೋಭಾರಾಣಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಟಾಪ್ ನ್ಯೂಸ್

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Modi Interview

Modi 3ನೇ ಸಲ ಪ್ರಧಾನಿಯಾದ ಬಳಿಕ ನಾಳೆ ಮೊದಲ ಬಾರಿ ಸ್ವಕ್ಷೇತ್ರಕ್ಕೆ

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

Rain ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

1-sadsad

NCRT ಪಠ್ಯದಿಂದ ಬಾಬರಿ ಮಸೀದಿ ಹೆಸರು ಕೈಬಿಟ್ಟ ಸರಕಾರ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

1-sadasd

Tumakuru ಕ್ಷೇತ್ರ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ: ಕೇಂದ್ರ ಸಚಿವ ವಿ.ಸೋಮಣ್ಣ

5-

ಕೇಂದ್ರ ಮಂತ್ರಿಯಾಗಿ ಕ್ಷೇತ್ರಕ್ಕೆ ಬಂದ ಮೊದಲ ದಿನವೇ ಸೋಮಣ್ಣ ಡಿಸಿ, ಅಧಿಕಾರಿಗಳಿಗೆ ತರಾಟೆ

1-aaa

Kunigal; ಕಾರಿನಿಂದ ಬೈಕ್‌ಗೆ ಗುದ್ದಿ ಯುವಕನ ಕೊಲೆ: ಐವರ ಬಂಧನ

2-tumkur

Tumkur: ಕಲುಷಿತ ನೀರು ಕುಡಿದು ಮತ್ತಿಬ್ಬರು ಸಾವು; ಮೃತರ ಸಂಖ್ಯೆ ಮೂರಕ್ಕೆ ಏರಿಕೆ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Modi Interview

Modi 3ನೇ ಸಲ ಪ್ರಧಾನಿಯಾದ ಬಳಿಕ ನಾಳೆ ಮೊದಲ ಬಾರಿ ಸ್ವಕ್ಷೇತ್ರಕ್ಕೆ

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

canada

G7 ಶೃಂಗಕ್ಕೆ ಮೋದಿಗೆ ಆಹ್ವಾನ: ಸ್ಪಷ್ಟ ಉತ್ತರ ನೀಡದ ಕೆನಡಾ!

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.