ಹಳ್ಳಿಕಾರ್‌ ಸಂವರ್ಧನ ಕೇಂದ್ರದ ಫ‌ಲವತ್ತಾದ ಮಣ್ಣು ಅಕ್ರಮ ಸಾಗಣೆ?

Team Udayavani, Jul 16, 2023, 5:14 PM IST

ಹಳ್ಳಿಕಾರ್‌ ಸಂವರ್ಧನ ಕೇಂದ್ರದ ಫ‌ಲವತ್ತಾದ ಮಣ್ಣು ಅಕ್ರಮ ಸಾಗಣೆ?

ತುರುವೇಕೆರೆ: ತಾಲೂಕಿನ ಬಾಣಸಂದ್ರ ಸಮೀಪದಲ್ಲಿರುವ ಹಳ್ಳಿಕಾರ್‌ ತಳಿ ಸಂವರ್ಧನ ಕೇಂದ್ರಕ್ಕೆ ಸೇರಿದ ಜಮೀನಿನಲ್ಲಿ ಫ‌ಲವತ್ತಾದ ಮಣ್ಣನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಾಣಸಂದ್ರ ಹಳ್ಳಿಕಾರ್‌ ತಳಿ ಸಂವರ್ಧನ ಕೇಂದ್ರದ ಕಾವಲ್‌ 926 ಎಕರೆ ವಿಸ್ತೀರ್ಣ ಹೊಂದಿದೆ. ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ಹಳ್ಳಿಕಾರ್‌ ತಳಿ ಉಳಿಸಿ ಬೆಳೆಸುವುದೇ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಅಮೃತ್‌ ಸಿರಿ ಯೋಜನೆಯಲ್ಲಿ ಕೆಲವು ಉತ್ತಮ ಹಳ್ಳಿಕಾರ್‌ ರಾಸುಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ 260 ರಾಸುಗಳಿದ್ದು, ಮೇವಿಗಾಗಿ ಈ ಪ್ರದೇಶವನ್ನು ಮೀಸಲಿಡಲಾಗಿದೆ. ಸರ್ವೆ ನಂ.40ರ ದುಂಡ ಹೊರಮನೆ ಕಾವಲ್‌ ಹಾಗೂ 141 ರಸ್ತೆ ಆಚೆಯ ಕುಣಿಕೇನಹಳ್ಳಿ ಕಾವಲ್‌ನಲ್ಲಿ ಹಳ್ಳಿಕಾರ್‌ ರಾಸುಗಳ ಮೇವು ಬೆಳೆಯಲು ಮೀಸಲಿಟ್ಟಿರುವ ಭೂಮಿಯಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರಗಳನ್ನು ಬಳಸಿ ದೊಡ್ಡ ಕಂದಕ ಮಾಡಿ, ಬೇರೆ ಕಡೆಗೆ ಮಣ್ಣು ಸಾಗಾಟ ಮಾಡಲಾಗಿದೆ.

ಹಳ್ಳಿಕಾರ್‌ ಸಂವರ್ಧನ ಕೇಂದ್ರದ ಪ್ರದೇಶದಲ್ಲಿ ಗೋ ಕಟ್ಟೆ ಅಭಿವೃದ್ಧಿ ನೆಪದಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಬೇರೆಡೆಗೆ ಸಾಗಿಸಲಾಗಿದೆ ಎಂದು ಆರೋಪಗಳು ಕೇಳಿ ಬಂದಿವೆ. ಆದರೆ, ಇದುವರೆಗೂ ಮಣ್ಣನ್ನು ಬೇರೆ ಕಡೆಗೆ ಸಾಗಾಟ ಮಾಡಿದ್ದಾರೆ ಎಂಬುದರ ಬಗ್ಗೆ ಲಿಖೀತವಾಗಿ ದೂರು ನೀಡಿಲ್ಲ. ದೂರು ನೀಡಿದರೆ ಸೂಕ್ತ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇನೆ. ●ವೈ.ಎಂ.ರೇಣುಕುಮಾರ್‌, ತಹಶೀಲ್ದಾರ್‌

ಈ ಹಿಂದಿನ ಸಹಾಯಕ ನಿರ್ದೇಶಕರು 2 ಗೋ ಕಟ್ಟೆ ಮಾಡಿದ್ದಾರೆ. ಅವರು ಇಲ್ಲಿನ ಮಣ್ಣನ್ನು ಕೇಂದ್ರದಲ್ಲಿನ ಅಭಿವೃದ್ಧಿಗೆ ಬಳಸಿದ್ದಾರೆ. ವರ್ಗಾವಣೆಯಾದ ನಂತರ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಹಳ್ಳಿಕಾರ್‌ ಸಂವರ್ಧನ ಕೇಂದ್ರಕ್ಕೆ ಪ್ರಭಾರ ಸಹಾಯಕ ನಿರ್ದೇಶಕರಾಗಿದ್ದಾರೆ. ಗೋ ಕಟ್ಟೆ ನಿರ್ಮಾಣದ ಹೆಸರಿನಲ್ಲಿ ಫ‌ಲವತ್ತಾದ ಮಣ್ಣನ್ನು ಅಭಿವೃದ್ಧಿಗೆ ಬಳಸದೆ ಹಣದ ಆಸೆಗೆ 1 ಸಾವಿರ ಲಾರಿ ಲೋಡ್‌ ಮಣ್ಣು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಪಶು ಸಚಿವರಿಗೂ, ಇಲಾಖಾ ಆಯುಕ್ತರಿಗೂ ಫೋಟೋ, ವಿಡಿಯೋ ಸಮೇತ ದಾಖಲೆಯೊಂದಿಗೆ ದೂರು ನೀಡಲಾಗಿದೆ. ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ● ಹರೀಶ್‌, ಸ್ಥಳೀಯ ರೈತ, ಹರಿದಾಸನಹಳ್ಳಿ

ಗ್ರಾಪಂನಿಂದ ನರೇಗಾ ಯೋಜನೆಯಲ್ಲಿ ಗೋಕಟ್ಟೆ ಮಾಡಲಾಗುತ್ತಿದೆ. ಗೋ ಕಟ್ಟೆ ನಿರ್ಮಾಣದ ಮಣ್ಣನ್ನು ಸ್ಥಳೀಯವಾಗಿ ಅಲ್ಲಿಯೇ ಬಳಸುವಂತೆ ಸೂಚಿಸಿದ್ದೇನೆ. ನಾನು ಮಣ್ಣು ಮಾರಾಟ ಮಾಡಿಲ್ಲ, ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಾಟ ಮಾಡಿರಬಹುದು ಎಂಬ ಅನುಮಾನ ಇದೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ●ಸದಾಶಿವಮೂರ್ತಿ, ಪಶು ಇಲಾಖೆ ಸಹಾಯಕ ನಿರ್ದೇಶಕ, ಪ್ರಭಾರ ನಿರ್ದೇಶಕರು, ಹಳ್ಳಿಕಾರ್‌ ಸಂವರ್ಧನ ಕೇಂದ್ರ

ಟಾಪ್ ನ್ಯೂಸ್

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.