ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಒತ್ತಾಯ

Team Udayavani, May 17, 2019, 4:25 PM IST

ತಿಪಟೂರು: ನಗರದ ಹಳೆ ಖಾಸಗಿ ಬಸ್‌ ನಿಲ್ದಾಣದ ಪಕ್ಕದಲ್ಲಿನ ಆಟೋ ನಿಲ್ದಾಣದಲ್ಲಿ ಮಳೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಅಥವಾ ತಾಲೂಕು ಆಡಳಿತ ಕೂಡಲೇ ಈ ಸಮಸ್ಯೆ ಪರಿಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪ್ರಯಾಣಿಕರು ಹಾಗೂ ಆಟೋ ಚಾಲಕರು ಒತ್ತಾಯಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ 206 ಹೆದ್ದಾರಿ ರಸ್ತೆ ಪಕ್ಕದಲ್ಲಿರುವ ಆಟೋ ನಿಲ್ದಾಣದಲ್ಲಿ ಸೋನೆ ಮಳೆ ಬಂದರೂ ಸಾಕು, ಕೆಸರು ಗದ್ದೆಯಾಗುತ್ತದೆ. ಗ್ರಾಮೀಣ ಭಾಗಕ್ಕೆ ಸಂಚರಿಸುವ ನೂರಾರು ಆಟೋಗಳು ಕೆಸರಲ್ಲೇ ನಿಂತುಕೊಳ್ಳುವಂತಾಗಿದೆ. ಅಲ್ಲದೆ, ನಿಲ್ದಾಣದ ಸುತ್ತಮುತ್ತ‌ಲಿನ ಅಂಗಡಿಗಳ ಕಸ, ತ್ಯಾಜ್ಯ ವಸ್ತುಗಳನ್ನು ಇಲ್ಲೇ ಬಿಸಾಡುವುದರಿಂದ ದುರ್ವಾಸನೆ ಹೆಚ್ಚಾಗಿದೆ. ಹಸುಗಳು, ಹಂದಿ, ನಾಯಿಗಳು ತ್ಯಾಜ್ಯ ವಸ್ತುಗಳಿಗೆ ಮುತ್ತಿಕೊಳ್ಳುವುದಲ್ಲದೇ ಕೆಸರಲ್ಲಿಯೇ ಬಿದ್ದು ಒದ್ದಾಡುತ್ತವೆ. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಕ್ಕೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ.

ಈ ಕೆಸರು ಗದ್ದೆಯ ಪಕ್ಕದಲ್ಲಿಯೇ ಇಂದಿರಾ ಕ್ಯಾಂಟೀನ್‌ ಇದ್ದು, ವಿಧಿ ಇಲ್ಲದೆ ದುರ್ವಾಸನೆಯಲ್ಲಿಯೇ ಊಟ-ತಿಂಡಿ ಸೇವಿಸಬೇಕಾಗಿದೆ. ಆಟೋ ನಿಲ್ದಾಣದಿಂದ ಹೊನ್ನೇನಹಳ್ಳಿ, ಬೆಣ್ಣೇನಹಳ್ಳಿ, ಗುರುಗದಹಳ್ಳಿ, ಶಿವರ, ಮಡೇನೂರು, ಬಿದಿರೇಗುಡಿ ಭಾಗಕ್ಕೆ ಹೋಗುವ ನೂರಾರು ಜನ ಪ್ರಯಾಣಿಕರು ಇಲ್ಲಿನ ಆಟೋ ನಿಲ್ದಾಣದಲ್ಲಿಯೇ ಕಾಯಬೇಕು. ಪಕ್ಕದಲ್ಲಿಯೇ ಇರುವ ಸಾರ್ವಜನಿಕ ಶೌಚಾಲಯದಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಅಲ್ಲಿಯೂ ದುರ್ವಾಸನೆ ಬೀರುತ್ತಿದೆ. ನಿಲ್ದಾಣದಲ್ಲಿ ಕಸದ ಬುಟ್ಟಿಗಳಿಲ್ಲದೆ ವಾರಗಟ್ಟಲೆ ಕಸದ ರಾಶಿ ಬಿದ್ದಲ್ಲಿಯೇ ಕೊಳೆಯುತ್ತಿದೆ. ಮಳೆಯ ನೀರು ಕಸದ ಜೊತೆ ಸೇರಿ ಮತ್ತಷ್ಟು ನಿಲ್ದಾಣ ಕೊಳಚೆ ಪ್ರದೇಶದಂತಾಗಿ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು ಪ್ರಯಾಣಿಕರಂತೂ ನರಕಯಾತನೆ ಅನುಭವಿಸುವಂತಾಗಿದ್ದರೂ ಕೂಗಳತೆಯ ದೂರದಲ್ಲಿರುವ ನಗರಸಭೆ ಅಧಿಕಾರಿಗಳು ಕಂಡರೂ ಕಾಣದಂತಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹುಳಿಯಾರು: ಜಿಲ್ಲೆಯಲ್ಲೆ ಅತೀ ಹೆಚ್ಚು ರಾಗಿ ಬೆಳೆಯುವ ಪ್ರದೇಶವೆಂದು ಹೆಸರಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ...

  • ತುರುವೇಕೆರೆ: ರಾಜ್ಯದ ವಿವಿಧ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೂಡಲೇ ಕಾಯಂಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು...

  • ಕೊರಟಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಬಿಕ್ಕೆಗುಟ್ಟೆ ಅಂಗನವಾಡಿ ಕಟ್ಟಡದ ಉನ್ನತೀಕರಣಕ್ಕೆ ಬಿಡುಗಡೆಯಾದ 2ಲಕ್ಷ ಅನುದಾನನವನ್ನು...

  • ಕುಣಿಗಲ್‌: ಸರ್ಕಾರಿ ರಸ್ತೆ ಹಾಗೂ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗ ತೆರವುಗೊಳಿಸದ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರ ವಿರುದ್ಧ ಕ್ರಿಮಿನಲ್‌ ಪ್ರಕರಣ...

  • ತುಮಕೂರು: ಸರಿ ತಪ್ಪುಗಳ ವಿವೇಚನೆಯಿಂದ ಜಾಗೃತ ಮನಸ್ಸಿನಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ...

ಹೊಸ ಸೇರ್ಪಡೆ