ಬಡ್ಡಿ ಹಣಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದನೆ: ಎಲ್‌ಎಲ್‌ಬಿ ವಿದ್ಯಾರ್ಥಿನಿ ನೇಣಿಗೆ ಶರಣು


Team Udayavani, Mar 23, 2024, 8:07 PM IST

ಬಡ್ಡಿ ಹಣಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದನೆ: ಎಲ್‌ಎಲ್‌ಬಿ ವಿದ್ಯಾರ್ಥಿನಿ ನೇಣಿಗೆ ಶರಣು

ಕುಣಿಗಲ್‌: ಸಾಲದ ಬಡ್ಡಿ ಹಣಕ್ಕಾಗಿ, ಅಪಮಾನ ಮಾಡಿದ್ದನ್ನು ಸಹಿಸಲಾರದೇ, ಮನನೊಂದ ಎಲ್‌ಎಲ್‌ಬಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಕೋಡಿ ಹಳ್ಳಿಪಾಳ್ಯ ಗ್ರಾಮದಲ್ಲಿ ಶನಿವಾರ ನಡೆದಿದೆ.

ಕೋಡಿಹಳ್ಳಿಪಾಳ್ಯ ಗ್ರಾಮದ ಎಲ್‌ಎಲ್‌ಬಿ ವಿದ್ಯಾರ್ಥಿನಿ ಕೆ.ಜಿ.ಚೈತ್ರಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ಘಟನೆಗೆ ಸಂಬಂಧಿ ಶಾಂತಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಕೋಡಹಳ್ಳಿಪಾಳ್ಯ ಗ್ರಾಮದ ಶಾಂತಮ್ಮ ಎಂಬುವರ ಬಳಿ, ಕೆ.ಜಿ.ಚೈತ್ರಾ ಅವರ ತಾಯಿ ಲಲಿತಮ್ಮ ಅವರು 18 ಸಾವಿರ ರೂಗಳನ್ನು ಸಾಲವಾಗಿ ಪಡೆದಿದ್ದರು, ವಾರಕ್ಕೆ ಶೇ.10ರೂ. ಬಡ್ಡಿಯಂತೆ 1800 ರೂ ಅನ್ನು ಪ್ರತಿ ವಾರ ಪಾವತಿಸುತ್ತಾ ಬರುತ್ತಿದ್ದರು. ಆದರೆ ಈ ವಾರ ಬಡ್ಡಿಯನ್ನು ಪಾವತಿ ಮಾಡಬೇಕಾಗಿತ್ತು ಊರ ಹಬ್ಬ ಇದ್ದ ಕಾರಣ ಬಡ್ಡಿ ಹಣ ಕೊಡಲು ತಡವಾಗಿತ್ತು.

ಬಡ್ಡಿ ಹಣಕ್ಕೆ ಗಲಾಟೆ : ಮಾ.23 ಶನಿವಾರ ಬೆಳಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಶಾಂತಮ್ಮ ನವರು ಲಲಿತಮ್ಮ ಅವರ ಮನೆ ಹತ್ತಿರ ಬಂದು ಏಕಾಏಕಿ ಬಾಯಿಗೆ ಬಂದಂತೆ ಬೈದು, ಬಡ್ಡಿ ಹಣಕ್ಕೆ ಬೀದಿಯಲ್ಲಿ ಕೂಗಾಡಿದಲ್ಲದೆ, ಈ ದಿನವೇ ಹಣ ಕೊಡುವಂತೆ ಒತ್ತಾಯಿಸಿದರು. ಇನ್ನು ಎರಡು ದಿನ ಸಮಯ ಕೊಡಲು ಲಲಿತಮ್ಮ ಅವರು ಕೇಳಿಕೊಂಡಿದ್ದಾರೆ ಅದಕ್ಕೆ ಒಪ್ಪದ ಶಾಂತಮ್ಮ ಕೋಪಗೊಂಡು ಲಲಿತಮ್ಮ ಅವರ ಮನೆಯ ಬಳಿ ನಿಂತುಕೊಂಡು ಅವಾಚ್ಯವಾದ ಶಬ್ದಗಳಿಂದ ನಿಂದಿಸಿ, ನಿನ್ನಿಂದ ದುಡ್ಡು ಕೊಡಲು ಆಗದಿದ್ದರೇ ಏಕೆ ಬದುಕಿದ್ದೀರ ನೇಣು ಹಾಕಿಕೊಂಡು ಸಾಯಿರಿ ಎಂದು ಬೈದರು ಎಂದು ಲಲಿತಮ್ಮ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಪಮಾನ ತಾಳದೆ ನೇಣಿಗೆ ಶರಣು : ಮನೆಯಲ್ಲಿ ಇದ್ದು ಗಲಾಟೆಯನ್ನು ನೋಡಿ ಮನನೊಂದ ಲಲಿತಮ್ಮಳ ಮಗಳು ದ್ವಿತೀಯ ಎಲ್‌ಎಲ್‌ಬಿ ವಿದ್ಯಾರ್ಥಿನಿ ಕೆ.ಜಿ.ಚೈತ್ರಾ ಶಾಂತಮ್ಮಳ ಬೈಗುಳದಿಂದ ಮನನೊಂದು ಅವರ ಮನೆಯ ಮುಂದೆ ಇರುವ ಸ್ನಾನದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಸೀರೆಯಿಂದ ಚಾವಣಿಯ ಕಂಬಿಗೆ ನೇಣು ಹಾಕಿ ಕೊಂಡಿದ್ದಾಳೆ. ಸ್ನಾನದ ಮನೆಗೆ ಹೋದವಳು ಎಷ್ಟು ಹೊತ್ತಾದರೂ ಬರಲಿಲ್ಲ ಎಂದು ಭಯಗೊಂಡ ಚೈತ್ರಾಳ ತಾಯಿ ಲಲಿತಮ್ಮ ಕೂಗಾಡಿದ್ದಾರೆ. ಲಲಿತಮ್ಮಳ ಸಂಬಂಧಿ ಮನೋಜ ಬಾಗಿಲನ್ನು ಹೊಡೆದು ನೋಡುವಾಗ ಚೈತ್ರಾ ನೇಣು ಬಿಗಿದುಕೊಂಡಿದ್ದಳು ಬಳಿಕ ಸೀರೆಯನ್ನು ಚಾಕುವಿನಿಂದ ಕತ್ತರಿಸಿ ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆದರೆ ವೈದ್ಯರು ತಪಾಸಣೆಗೆ ಒಳಪಡಿಸಿದ್ದಾಗ ಚೈತ್ರಾ ಮೃತಪಟ್ಟಿದ್ದಾಳೆ. ಲಲಿತಮ್ಮ ನೀಡಿರುವ ದೂರಿನ ಅನ್ವಯ ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.