ಕೊಲೆಗೆ ಯತಿಸಿದ ಆರೋಪಿ ಬಂಧಿಸಿ

ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ | ಸಚಿವರ ವಜಾಕೆ ಒತ್ತಾಯ.

Team Udayavani, Oct 6, 2021, 6:32 PM IST

ದೂರು ಸಲ್ಲಿಕೆ- ದೆಹಲಿ ಕೊಲೆ ಪ್ರಕರಣ

ತುಮಕೂರು: ಉತ್ತರ ಪ್ರದೇಶದ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯವನ್ನು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಿ, ಮಂತ್ರಿಗಳನ್ನು ವಜಾ ಮಾಡಿ ಎಂದು ಒತ್ತಾಯಿಸಿ ಮಂಗಳವಾರ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರ ನಿಯೋಗದಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಡೀಸಿ ಕಚೇರಿ ಮುಂದೆ ಸಮಾವೇಶಗೊಂಡ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕರಾದ ಸಿ.ಯತಿರಾಜು, ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷತೆ ಎ.ಗೋವಿಂದರಾಜು, ರವೀಶ್‌, ಪ್ರಾಂತ ರೈತ ಸಂಘದ ಬಿ.ಉಮೇಶ್‌, ಅರ್‌.ಕೆ.ಎಸ್‌ ಎಸ್‌.ಎನ್‌. ಸ್ವಾಮಿ, ಸಿಐಟಿಯು ಸೈಯದ್‌ ಮುಜೀಬ್‌, ಕಟ್ಟಡ ಕಾರ್ಮಿಕರ ಸಂಘದ ಬೆಟ್ಟಪ್ಪ ಸೇರಿದಂತೆ ವಿವಿಧ ರೈತ ಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಎಸ್‌.ಎಸ್‌. ಪಾಟಿಲ್‌ ಅವರೊಂದಿಗೆ ಮಾತುಕತೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರ ಪತಿಗಳಿಗಳಿಗೆ ಮನವಿ ಸಲ್ಲಿಸಿದರು.

ಕೃತ್ಯಯಿಂದ ಆತಂಕ: ಈ ವೇಳೆ ಮಾತನಾಡಿದ ಮುಖಂಡರು, ದೇಶದಾದ್ಯಂತ ಬೆಳೆಯುತ್ತಿರುವ ಚಳವಳಿಯನ್ನು ಮುರಿಯುವ ಸಂಚಿನ ಭಾಗವಾಗಿ ಸಚಿವರ ಬೆಂಗಾವಲಿನ ವಾಹನಗಳನ್ನು ಚಲಾಯಿಸಿ, ಎಂಟು ಜನರ ಹತ್ಯೆ ನಡೆಸಲಾದ ಕುಕೃತ್ಯವು ಆತಂಕ ಮತ್ತು ತಲ್ಲಣವನ್ನುಂಟು ಮಾಡಿದೆ. ಒಕ್ಕೂಟ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವರಾದಅಜಯ್‌ ಮಿಶ್ರ ಹಾಗೂ ಆತನ ಮಗ ಮತ್ತು ಸಂಬಂಧಿಗಳು ಈ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ.  ಈ ಘಟನೆಯನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಜಿಲ್ಲಾಧಿಕಾರಿ ಎಸ್‌.ಎಸ್‌. ಪಾಟಿಲ್‌ ಮೂಲಕ ರಾಷ್ಟ್ರ ಪತಿಗಳಿಗೆ ಮನವಿಯನ್ನು ಕಳಹಿಸಲಾಯಿತು ಎಂದರು.

ಘಟನೆ ಖಂಡಿಸದ ಪ್ರಧಾನಿ: ಮನವಿಯಲ್ಲಿ ಹರ್ಯಾಣದ ಸಿಎಂ ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ರೈತ ಚಳವಳಿಯನ್ನು ಮುರಿಯಲು ಲಾಠಿ ಮುಂತಾದ ಆಯುಧಗಳ ಮೂಲಕ ದಾಳಿ ನಡೆಸಲು ಬಹಿರಂಗವಾಗಿ ಕರೆ ನೀಡುವ ಮೂಲಕ ಸಂವಿಧಾನಾತ್ಮಕ ಅಧಿಕಾರವನ್ನುಸಂವಿಧಾನ ವಿರೋಧಿಯಾಗಿ ದುರ್ಬಳಕೆ ಮಾಡಿದ್ದಾರೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಒಕ್ಕೂಟ ಸರ್ಕಾರದ ಸಚಿವರು ರೈತ ಚಳವಳಿಯನ್ನು ನಿಂದಿಸುವ ಅಪರಾಧ ಮಾಡಿದ್ದಾರೆ. ಇಂತಹ ಅಮಾನುಷ ಮತ್ತು ತೀವ್ರ ಸ್ವರೂಪದ ಅಧಿಕಾರ ದುರುಪಯೋಗದ ಘಟನೆಗಳನ್ನು ಪ್ರಧಾನ ಮಂತ್ರಿಗಳು ಖಂಡಿಸದೇ ಇರುವುದು ಸಂಚಿನ ವಾಸನೆಯನ್ನು ಬಹಿರಂಗ ಪಡಿಸುತ್ತದೆ ಎಂದು ಆರೋಪಿಸಲಾಗಿದೆ.

ರೈತ ಚಳವಳಿ ಮುರಿಯಲು ಅಸಾಧ್ಯ: ಸಂಘಟನೆಗಳು ಕಾರ್ಪೊàರೇಟ್‌ ಕಂಪನಿಗಳ ನೇತೃತ್ವದ ಬರ್ಬರ ಘಟನೆಗಳನ್ನು ಬಲವಾಗಿ ಮತ್ತು ದೊಡ್ಡ ಧ್ವನಿಯಲ್ಲಿ ಖಂಡಿಸುತ್ತದೆ. ಇಂತಹ ಯಾವುದೇ ದೌರ್ಜನ್ಯ ಹಾಗೂ ಅಧಿಕಾರದ ದುರುಪಯೋಗದ ಮೂಲಕ ರೈತ ಚಳವಳಿಯನ್ನು ಮುರಿಯಲಾಗದೆಂಬುದು ಕಳೆದೆರೆಡು ವರ್ಷಗಳಿಂದ ದೇಶದಾದ್ಯಂತ ಮತ್ತು ದೆಹಲಿ ಗಡಿಗಳ ಸುತ್ತಮುತ್ತ ಕಳೆದ ಹತ್ತು ತಿಂಗಳಿಂದ ದಶ ಲಕ್ಷಾಂತರ ಕುಟುಂಬಗಳು ನಡೆಸುತ್ತಿರುವ ಐತಿಹಾಸಿಕ ಚಳವಳಿಯೆ ಸಾಕ್ಷಿಯಾಗಿದೆ ಎಂದು ಎಚ್ಚರಿಸಿದೆ.

ಮಂತ್ರಿ ಸ್ಥಾನದಿಂದ ವಜಾ ಮಾಡಿ: ತಕ್ಷಣವೇ ರಾಷ್ಟ್ರಪತಿಗಳು ತಾವು ಮಧ್ಯ ಪ್ರವೇಶಿಸಿ ಒಕ್ಕೂಟ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ ಮಿಶ್ರ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು.

ಸಚಿವ ಅಜಯ ಮಿಶ್ರ ಹಾಗೂ ಆತನ ಮಗ ಆಶಿಶ್‌ ಮಿಶ್ರ ಮೋನು ಆತನ ಗುಂಡಾ ಪಡೆಯನ್ನು ಬಂಧಿಸಬೇಕು ಮತ್ತು ಕೊಲೆ ಪಾತಕ ಪ್ರಕರಣವೆಂದು ಮೊಕದ್ದಮೆಗಳನ್ನು ಹೂಡಬೇಕು. ಈ ಒಟ್ಟು ಪ್ರಕರಣವನ್ನು ಸುಪ್ರಿಂ ಕೋರ್ಟ್‌ನಲ್ಲಿ ಉನ್ನತ ನ್ಯಾಯಾಂಗ ತನಿಖೆಗೆ ಕ್ರಮವಹಿಸಬೇಕು. ಹರ್ಯಾಣ ಮುಖ್ಯಮಂತ್ರಿಯನ್ನು, ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಲು ಅಗತ್ಯ ಕ್ರಮವಹಿಸಬೇಕು.

ಈ ಕೊಲೆಪಾತಕ ದುಷ್ಕೃತ್ಯದಲ್ಲಿಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಗಳ ಪರಿಹಾರ ನೀಡಬೇಕು ಮತ್ತು ತೀವ್ರವಾಗಿ ಗಾಯಗೊಂಡವರಿಗೂ ಅಗತ್ಯ ಉಚಿತ ಚಿಕಿತ್ಸೆ ಹಾಗೂ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾ ಸಮಸ್ಯೆಗಳ ಬಗ್ಗೆ ಜಂಟಿ ಸಭೆ ಕರೆಯಿರಿ-

ಮನವಿ ಸ್ವಿಕರಿಸಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಅವರಿಗೆ ಸಂಘದ ಪ್ರತಿನಿಧಿಗಳು ಜಿಲ್ಲಾ ಹಂತದ ಸಮಸ್ಯೆಗಳನ್ನು ಪರಿಹಾರ ಕಾಣಲು ರೈತ ಸಂಘಟನೆಗಳ ಜೊತೆ ಜಂಟಿ ಸಭೆಯನ್ನು ನಡೆಸಲು ರೈತ ಸಂಘದ ಪ್ರತಿನಿಧಿಗಳು ಕೋರಿದರು. ನೀರಾವರಿ ಪ್ರಶ್ನೆಗಳು, ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯದ ಕುರಿತು ಸಹ ಸಭೆಯ ಅಗತ್ಯ ಇದೆ ಎಂದು ನಿಯೋಗದಲ್ಲಿದ್ದ ಸದಸ್ಯರು ಮನವಿ ಮಾಡಿದರು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.