ಅಭಿವೃದ್ಧಿ ಕಾಮಗಾರಿಗೆ ಜನರ ಸಹಕಾರ ಅಗತ್ಯ

Team Udayavani, Oct 2, 2020, 2:44 PM IST

ಅಭಿವೃದ್ಧಿ ಕಾಮಗಾರಿಗೆ ಜನರ ಸಹಕಾರ ಅಗತ್ಯ

ತುಮಕೂರು: ನಗರದ ವಿವಿಧೆಡೆಗಳಲ್ಲಿ ಸರ್ಕಾರ ನೀಡಿದ್ದ 25 ಕೋಟಿ ರೂ. ವಿಶೇಷ ಅನುದಾನದಲ್ಲಿ ಸಿ.ಸಿ.ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿ ಸಂದರ್ಭ ದಲ್ಲಿ ಕೆಲವು ಸಣ್ಣ, ಪುಟ್ಟ ತೊಂದರೆಗಳಾಗುವುದು ಸಹಜ, ಇದಕ್ಕೆ ಜನರು ಸಹಕಾರ ನೀಡಬೇಕು ಎಂದು ಶಾಸಕ ಜಿ.ಬಿ.ಜೋತಿಗಣೇಶ್‌ ಹೇಳಿದರು.

ನಗರದ ಎಸ್‌.ಐ.ಟಿ. ಬಡಾವಣೆಯ 1 ರಿಂದ 3 ಅ ಅಡ್ಡ ರಸ್ತೆ ಹಾಗೂ 31ರಿಂದ 35ನೇ ಅಡ್ಡ ರ‌ಸ್ತೆಯಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿ.ಸಿ.ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಶೇ.90ರಷ್ಟು ತೆರಿಗೆದಾರರಿರುವ ಈ ಬಡಾವಣೆಗೆ ಅತಿ ಹೆಚ್ಚಿನ ರೀತಿಯಲ್ಲಿಯೇ ಅನುದಾನ ಒದಗಿಸಲಾಗಿದೆ ಎಂದರು.

ಹಂತ ಹಂತವಾಗಿ ಅಭಿವೃದ್ಧಿ: ಕೋವಿಡ್ ಸಂಕಷ್ಟದಲ್ಲಿಯೂ ಯಡಿಯೂರಪ್ಪನವರು ಪಾಲಿಕೆಗೆ 25 ಕೋಟಿ ರೂ.ಗಳ ವಿಶೇಷ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಅದರಲ್ಲಿ ಸಿಂಹಪಾಲು ಅಂದರೆ 5.50 ಕೋಟಿ ಅನುದಾನವನ್ನು ನಗರದಲ್ಲಿ ದೊಡ್ಡ ವಾರ್ಡುಗಳಲ್ಲಿ ಒಂದಾಗಿರುವ 26ನೇ ವಾರ್ಡಿಗೆ ನೀಡಲಾಗಿದೆ. ಆದರೂ ನಾಗರಿಕರಿಂದ ಸಾಕಷ್ಟು ಬೇಡಿಕೆಗಳು ಬರುತ್ತಿವೆ. ಹಂತ ಹಂತವಾಗಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನುಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಧಿಕಾರಿಗಳೊಂದಿಗೆ ಸಹಕರಿಸಿ: ಪ್ರಸ್ತುತ 80 ಲಕ್ಷ ರೂ. ಅನುದಾನದಲ್ಲಿ ಸುಮಾರು3ಕಿ.ಮೀ. ಉದ್ದದ ಸಿ.ಸಿ.ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ30ಅಡಿಗಳಿಗಿಂತಲೂಕಡಿಮೆಅಗಲವಾದ ರಸ್ತೆಗಳಿವೆ. ಅಂಥ ಕಡೆಗಳಲ್ಲಿ ಚರಂಡಿಗೆ ಅಗೆದಾಗ ವಾಹನಗಳ ತೆಗೆಯಲು ತೊಂದರೆಯಾಗಬಹುದು. ಒಮ್ಮೆ ಸಿ.ಸಿ.ಚರಂಡಿ ನಿರ್ಮಾಣವಾದರೆ ಶಾಶ್ವತವಾಗಿ ಸಮಸ್ಯೆ ಬಗೆಹರಿಯುವುದರಿಂದ ನಾಗರಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಎಲ್ಲಾ ವಾರ್ಡ್‌ಗಳಿಗೂ ಸೌಲಭ್ಯ: ಮೇಯರ್‌ ಫ‌ರೀದಾ ಬೇಗಂ ಮಾತನಾಡಿ, ನಗರಪಾಲಿಕೆಗೆ ಅನುದಾನದ ಕೊರತೆ ಇದ್ದಾಗ್ಯೂ ಅಭಿವೃದ್ಧಿಕಾರ್ಯಗಳಿಗೆ ಹಿಂದೇಟು ಹಾಕಿಲ್ಲ. ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಇರುವ ಅನುದಾನವನ್ನು ಎಲ್ಲಾ ವಾರ್ಡು ಗಳಿಗೂ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ನಾಗರಿಕರು ಒತ್ತಡ ಹಾಕದೇ, ಹಂತ ಹಂತವಾಗಿ ತಮ್ಮ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಹಕರಿಸಬೇಕು ಎಂದರು.

ವಾರ್ಡ್‌ ಸ್ವಚ್ಛತೆಗೆ ಒತ್ತು: ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಎಸ್‌.ಎಫ್.ಸಿ ವಿಶೇಷ ಅನುದಾನದಲ್ಲಿ ಸಿ.ಸಿ.ಚರಂಡಿ ನಿರ್ಮಾಣ ಮಾಡ ಲಾಗಿದೆ. ಶೇ.90ರಷ್ಟು ತೆರಿಗೆ ಕಟ್ಟುವ ಈ ವಾರ್ಡಿನ ಜನತೆ ಸ್ವತ್ಛತೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ನಾನು ಗಮನಿಸಿದ್ದೇನೆ. ಕೆಲವೇ ದಿನಗಳಲ್ಲಿ ಸ್ವತ್ಛ ಸರ್ವೇಕ್ಷಣ ಸಮೀಕ್ಷೆ ಆರಂಭವಾಗಲಿದ್ದು, ನಗರದ ನಾಗರಿಕರು ಹೆಚ್ಚಿನ ಅಂಕಗಳನ್ನು ನೀಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.

ಪಾಲಿಕೆಯಅಧೀಕ್ಷಕ ಎಂಜಿನಿಯರ್‌ಮಹೇಶ್‌, ಮುಖಂಡರಾದ ಮಂಜುನಾಥ್‌, ಕೊಪ್ಪಲ ನಾಗ ರಾಜು, ಚಂದ್ರಪ್ಪ, ವಿನಯ್‌, ರಮೇಶ್‌ಇದ್ದರು.

ಟಾಪ್ ನ್ಯೂಸ್

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

1-sadasdsad

G7 Summit; ಮೆಲೋನಿ-ಬ್ರಿಟನ್‌ ಪಿಎಂ ಸುನಕ್‌ ಆಲಿಂಗನಕ್ಕೆ ನೆಟ್ಟಿಗರಿಂದ ಭಾರೀ ವ್ಯಂಗ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

1-sadasd

Tumakuru ಕ್ಷೇತ್ರ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ: ಕೇಂದ್ರ ಸಚಿವ ವಿ.ಸೋಮಣ್ಣ

5-

ಕೇಂದ್ರ ಮಂತ್ರಿಯಾಗಿ ಕ್ಷೇತ್ರಕ್ಕೆ ಬಂದ ಮೊದಲ ದಿನವೇ ಸೋಮಣ್ಣ ಡಿಸಿ, ಅಧಿಕಾರಿಗಳಿಗೆ ತರಾಟೆ

1-aaa

Kunigal; ಕಾರಿನಿಂದ ಬೈಕ್‌ಗೆ ಗುದ್ದಿ ಯುವಕನ ಕೊಲೆ: ಐವರ ಬಂಧನ

2-tumkur

Tumkur: ಕಲುಷಿತ ನೀರು ಕುಡಿದು ಮತ್ತಿಬ್ಬರು ಸಾವು; ಮೃತರ ಸಂಖ್ಯೆ ಮೂರಕ್ಕೆ ಏರಿಕೆ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.