ಮಾವಿನ‌ ಬೆಳೆಯೂ ಇಲ್ಲ, ಬೆಲೆಯೂ ಇಲ್ಲ: ನಷ್ಟ ಭೀತಿ

Team Udayavani, May 13, 2019, 4:26 PM IST

ಚೇಳೂರು: ಈ ವರ್ಷ ಮಾವಿನ‌ ಬೆಳೆಯೂ ಇಲ್ಲ, ಬಂದಂತಹ ಬೆಳೆಗೆ ಸರಿಯಾದ ಬೆಲೆಯೂ ಇಲ್ಲದೇ ಮಾವು ಬೆಳೆಗಾರರು ಹಾಗೂ ವರ್ತಕರು ಕಂಗೆಟ್ಟಿರುವುದು ಕಂಡುಬರುತ್ತಿದೆ.

ಗುಬ್ಬಿ ತಾಲೂಕಿನ ಚೇಳೂರು ರಾಜ್ಯದಲ್ಲಿಯೇ ಮಾವು ಮತ್ತು ಹಲಸಿಗೆ ಹೆಸರುವಾಸಿಯಾದ ಮಾರುಕಟ್ಟೆ. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಹಣ್ಣುಗಳು ಈ ಮಾರುಕಟ್ಟೆಗೆ ಬರುತ್ತಿವೆ. ಕಳೆದ ವರ್ಷಉತ್ತಮ ಮಳೆಯಾಗಿ ಉತ್ತಮ ಬೆಳೆಯೂ ಬಂದಿತ್ತು. ಆದರೆ, ಈ ಬಾರಿ ಮಾವಿನ ಗಿಡದಲ್ಲಿ ಕಾಯಿ ಬಂದಾಗ ಸರಿಯಾದ ಸಮಯಕ್ಕೆ ಮಳೆಯಾಗದೇ ಫ‌ಲವತ್ತಾಗಿ ಬರ ಬೇಕಾಗಿದ್ದ ಮಾವಿನಕಾಯಿಗಳ ಇಳುವರಿ ಕಡಿಮೆಯಾಗಿ ಸಣ್ಣ ಗಾತ್ರದಲ್ಲಿಯೇ ನಿಂತುಕೊಂಡಿವೆ.

ಶೇ.25ಭಾಗ ಫ‌ಸಲು: ಕೆಲವು ಮರಗಳಲ್ಲಿ ಗಾಳಿಗೂ ಸಹ ಸಣ್ಣ ಗಾತ್ರದಲ್ಲೆಯೇ ಇದ್ದಾಗಲೇ ಮಾವಿನಕಾಯಿಗಳು ಬಿದ್ದಿವೆ. ಜೊತೆಗೆ ಇರುವ ಫ‌ಸಲು ಸಹ ಉತ್ತಮವಾಗಿ ಬಂದಿಲ್ಲ. ಅದು ಸಹ ಶೇ.25ಭಾಗದಷ್ಟು ಫ‌ಸಲು ಮಾತ್ರ ಈ ವರ್ಷ ಬಂದಿದೆ ಎಂದು ರೈತರು ಹಾಗೂ ವರ್ತಕರು ಹೇಳುತ್ತಿದ್ದಾರೆ.

ನಷ್ಟದ ಭೀತಿ: ಬಂದಂತಹ ಮಾವಿನಕಾಯಿಗಳನ್ನು ತೆಗೆದುಕೊಳ್ಳುಲು ಮಂಡಿ ವರ್ತಕರು ಯೋಚನೆ ಮಾಡುತ್ತಿದ್ದಾರೆ. ಇದಕ್ಕೆ ಸೂಕ್ತ ಬೆಲೆ ಸಿಗುತ್ತದೋ ಇಲ್ಲವೋಎಂಬ ಚಿಂತೆಯಾಗಿದೆ. ಉತ್ತಮ ಬೆಲೆ ಇಲ್ಲದಿದ್ದರೆ ರೈತರಷ್ಟೇ ನಮಗೂ ನಷ್ಟವಾಗಬಹುದು ಎಂಬ ಯೋಚನೆ ಮಾಡುವ ಪರಿಸ್ಥಿತಿ ವರ್ತಕರಿಗೆ ಎದುರಾಗಿದೆ.

ದಿನಕ್ಕೆ 5ರಿಂದ 10ಲೋಡ್‌ ರವಾನೆ: ಕಳೆದ ವರ್ಷ ಈ ವೇಳೆ ಪ್ರತಿದಿನ ಮಾರುಕಟ್ಟೆಯಿಂದ 30ಕ್ಕೂ ಹೆಚ್ಚು ಲೋಡ್‌ ಮಾವಿನಕಾಯಿ ಬೆಂಗಳೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಪೂನಾ, ದೆಹಲಿ, ಮಹಾರಾಷ್ಟ್ರದ ನಗರ ಪ್ರದೇಶಗಳಿಗೆ ಹಾಗೂ ಅನೇಕ ದೂರದೂರುಗಳಿಗೆ, ರಾಜ್ಯಗಳಿಗೆ ಇಲ್ಲಿಂದ ಹೋಗುತ್ತಿತ್ತು. ಆದರೆ, ಈ ವರ್ಷ ದಿನಕ್ಕೆ 5ರಿಂದ 10ಲೋಡ್‌ ಹಣ್ಣು ಹೋಗುವುದೇ ಕಷ್ಟವಾಗಿದೆ ಎಂದು ಇಲ್ಲಿನ ವರ್ತಕರು ಅಳಲು ತೋಡಿಕೊಂಡಿದ್ದಾರೆ.

ಈ ವರ್ಷ ತೋತಪುರಿ ಕೆ.ಜಿ.ಗೆ 8-12ರೂ., ಮಲಗೊಬಾ 20-30 ರೂ., ರಸಪುರಿ 15-20ರೂ., ಸೆಂಧೂರ 10-15 ರೂ., ಬೆನೀಷ್‌ 15-20ರೂ., ಬಾದಾಮಿ 20-30 ರೂ. ಬೆಲೆ ಪಡೆದುಕೊಂಡಿವೆ. ಇತರೆ ಜಾತಿಯ ಹಣ್ಣುಗಳಿಗೂ ಉತ್ತಮ ಬೆಲೆಯಿಲ್ಲ. ಇಂತಹ ಬೆಲೆಯಲ್ಲಿ ಮಾವಿನಕಾಯಿ ಕೀಳುವ ಕೂಲಿ ಯೂ ಸಿಗುವುದು ಕಷ್ಟವಾಗಿದೆ. ಸರಿಯಾದ ಬೆಳೆಯಿಲ್ಲದೇ ಕಂಗೆಟ್ಟ ಕೆಲವು ರೈತರು, ಮಾವಿನಗಿಡಗಳನ್ನೇ ತೆಗೆಯುವ ಯೋಚನೆ ಮಾಡುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಮಾವು ಅಭಿವೃದ್ಧಿ ಮಂಡಳಿ ಸೂಕ್ತ ಸಲಹೆ ಹಾಗೂ ಸಹಕಾರವನ್ನು ರೈತರಿಗೆ ನೀಡಬೇಕಾಗಿದೆ ಎಂದು ರೈತರ ಅಭಿಪ್ರಾಯವಾಗಿದೆ.

● ಸಿ.ಟಿ.ಮೋಹನ್‌ರಾವ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ತುಮಕೂರು: ಸರಿ ತಪ್ಪುಗಳ ವಿವೇಚನೆಯಿಂದ ಜಾಗೃತ ಮನಸ್ಸಿನಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ...

  • ತುಮಕೂರು: ಗಂಗಸಂದ್ರ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೀರಾವರಿ ಡಿಜಿಟಲ್‌ ಹೈಟೆಕ್‌ ಗ್ರಂಥಾಲಯ ಹಾಗೂ ಕರ್ನಾಟಕದ ಸಮಗ್ರ ನೀರಾವರಿ ಅಭಿವೃದ್ಧಿ ಯೋಜನೆಗಳ...

  • ತುಮಕೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಆದಿಯಾಗಿ ಪೀಠಾಧಿಗಳಾಗಿದ್ದವರು ಕರಿಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದ ಬಗ್ಗೆ ಮಠದ ಇತಿಹಾಸದಲ್ಲಿ...

  • ಮಧುಗಿರಿ: ಪಾವಗಡದಿಂದ ಮಳವಳ್ಳಿವರೆಗಿನ ಕೆಶಿಫ್ ರಸ್ತೆ ಸುಮಾರು 525 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರಾಯೋಜಕತ್ವದ ಹಾಗೂ ವಿಶ್ವ ಬ್ಯಾಂಕಿನ ಕಾರ್ಯಕ್ರಮ. ಇದು ಜನರ...

  • ಕೊರಟಗೆರೆ: ಪಾವಗಡ, ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರದಿಂದ ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಅನಧಿಕೃತ ಮತ್ತು ಅವೈಜ್ಞಾನಿಕವಾಗಿ...

ಹೊಸ ಸೇರ್ಪಡೆ