ಬೆಳೆ ಕುಸಿತದಿಂದ ಗಗನಕ್ಕೇರಿದೆ ತರಕಾರಿ ಬೆಲೆ

Team Udayavani, May 16, 2019, 12:21 PM IST

ಹುಳಿಯಾರು: ಜನರಿಗೆ ಈಗ ತರಕಾರಿ ಬೆಲೆಯ ತಲೆ ಬಿಸಿ ಹೆಚ್ಚಾಗುತ್ತಿದೆ. ವಾರದಿಂದ ವಾರಕ್ಕೆ ತರಕಾರಿ ಬೆಲೆ ಏರಿತ್ತಿದ್ದು, ಜನ ತರಕಾರಿ ಕೊಳ್ಳಲು ಹಿಂದು ಮುಂದು ನೋಡುವಂತ್ತಾಗಿದೆ. ಹೋಟೆಲ್ಗಳಲ್ಲಂತಲೂ ತರ ಕಾರಿ ಸಾರು ಸಿಗದಾಂತಾಗಿದೆ.

ಮದುವೆ ಸೇರಿದಂತೆ ಶುಭ ಕಾರ್ಯ ಮಾಡುವವರು ತರಕಾರಿ ಬೆಲೆ ಕೇಳಿ ಬೆಚ್ಚಿ ಬೀಳುತ್ತಿದ್ದಾರೆ. ಹುಳಿಯಾರು ಮಾರುಕಟ್ಟೆಗೆ ಹಾಸನದಿಂದ ತರಕಾರಿ ಬರುತ್ತದೆ. ಆದರೆ, ಹಾಸನ ದಲ್ಲೇ ತರಕಾರಿ ಬೆಳೆ ಕುಸಿದಿದ್ದು, ಬೆಲೆ ಹೆಚ್ಚಳವಾಗಿದೆ. ಇದರ ಪರಿಣಾಮ ಹುಳಿಯಾರಿನಲ್ಲೂ ಬೆಲೆ ಗಗನ ಮುಖೀಯಾಗಿದೆ. ಇದಕ್ಕೆ ಮಳೆ ಕೊರತೆ, ಬಿಸಿಲಿನ ಝಳ ಹೆಚ್ಚಳ ಹಾಗೂ ಅಂತರ್ಜಲ ಕುಸಿತದಿಂದ ಕೃಷಿಗೆ ನೀರಿನ ಕೊರತೆ ಎದುರಾಗಿ ಸದ್ಯ ತರಕಾರಿ ಬೆಳೆಯು ವವರ ಸಂಖ್ಯೆ ಕಡಿಮೆಂಯಾಗಿರುವುದು ಕಾರಣ ಎನ್ನಲಾಗಿದೆ.

ತರಕಾರಿಗೆ ಅಧಿಕ ಬೇಡಿಕೆ: ಮದುವೆ ಮತ್ತಿತರ ಶುಭ ಕಾರ್ಯಗಳ ಹೆಚ್ಚಳ ಮತ್ತು ರಂಜಾನ್‌ ಮಾಸದ ಕಾರಣಕ್ಕೆ ತರಕಾರಿಗಳಿಗೆ ಬೇಡಿಕೆ ಸಹ ಹೆಚ್ಚಿದೆ. ಆದರೆ, ಪೂರೈಕೆಯ ಪ್ರಮಾಣ ಕಡಿಮೆ ಇದೆ. ಇದರಿಂದ ಸಹಜವಾಗಿ ಬೆಲೆ ಹೆಚ್ಚಳವಾಗಿದೆ. ವಾರದಿಂದ ವಾರಕ್ಕೆ ತರಕಾರಿ ಬೆಲೆ ಗಗನಕ್ಕೇರುತ್ತಿದೆ.

ಕೆ.ಜಿ ಹುರಳಿಕಾಯಿಗೆ 80 ರೂ.: ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದೆ. ಜನಪ್ರಿಯ ತರಕಾರಿಗಳಲ್ಲಿ ಒಂದಾದ ಹುರಳಿಕಾಯಿ (ಬೀನ್ಸ್‌) ಕಳೆದ ವಾರ ಕೆ.ಜಿ.ಗೆ 40 ರೂ. ಇತ್ತು. ಈ ವಾರ 80 ರೂ.ಗೆ ಜಿಗಿದಿದೆ. ಹಸಿರು ಮೆಣಸಿಕಾಯಿ 60-70 ರೂ. ಆಗಿದೆ. ಕ್ಯಾರೆಟ್ 40 ರೂ. ಆಗಿದೆ. ಟೊಮೊಟೋ ಅಂತೂ ದಾಖಲೆಯ ಬೆಲೆ ಅಂದರೆ 50-60 ರೂ. ಆಗಿದೆ. ಉಳಿದಂತೆ ಬೆಂಡೆಕಾಯಿ, ಹೂ ಕೋಸು, ಮೂಲಂಗಿ, ಆಲೂಗಡ್ಡೆ, ಉಳ್ಳಾಗಡ್ಡಿ ಬೆಲೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಿದೆ.

ಸೊಪ್ಪಿನ ಬೆಲೆ ಸ್ವಲ್ಪ ಕಡಿಮೆ: ಹುಳಿಯಾರು ಸುತ್ತಮುತ್ತ ಸೊಪ್ಪು ಬೆಳೆಗಾರರು ಹೆಚ್ಚಾಗಿದ್ದ ಕಾರಣ ಕೊತ್ತಂಬರಿ, ಪಾಲಕ್‌, ಮೆಂತ್ಯೆ, ದಂಟು ಹೀಗೆ ವಿವಿಧ ಸೊಪ್ಪುಗಳು ಕಡಿಮೆ ದರದಲ್ಲಿ ಸಿಗುತ್ತಿತ್ತು. ಆದರೆ, ಅಂತರ್ಜಲ ಕುಸಿತವಾಗಿ ಕೊಳವೆ ಬಾವಿಯಲ್ಲಿ ನೀರು ಬಾರದಾಗಿ ಸೊಪ್ಪು ಬೆಳೆಯುವವರು ಸಹ ಕಡಿಮೆಯಾಗಿದ್ದಾರೆ. ಪರಿಣಾಮ ಸೊಪ್ಪಿನ ಬೆಲೆ ಸಹ ಹೆಚ್ಚಳವಾಗಿದೆ. ಕೆಲವೊಂದು ಸಂದರ್ಭದಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ಹತ್ತದಿನೈದು ರೂ.ಗಳಿಗೂ ಹೆಚ್ಚಾದ ನಿದರ್ಶನವಿದೆ.

ವ್ಯಾಪಾರಗಳಿಗೆ ನಷ್ಟವಾಗುವ ಸಾಧ್ಯತೆ: ತರಕಾರಿ ಬೆಲೆ ಜಾಸ್ತಿಯಾಗಿರುವ ಕಾರಣ ಹಿಂದೆಲ್ಲ ಕೆ.ಜಿಗಟ್ಟಲೇ ಖರೀದಿಸುತ್ತಿದ್ದವರು ಈಗ ಅರ್ಧ, ಕಾಲು ಕೆ.ಜಿ ಸಾಕೆನ್ನುತ್ತಿದ್ದಾರೆ. ಅಲ್ಲದೆ, ಬೆಲೆಗಳು ಹೆಚ್ಚಾದ ಪರಿಣಾಮ ತರಕಾರಿ ಕೊಳ್ಳುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಮಾಂಸಹಾರಿಗಳಂತೂ ಕೆ.ಜಿ.ತರಕಾರಿಗೆ ಕೆ.ಜಿ.ಕೋಳಿ ಬರುತ್ತದೆ ಎಂದು ಗೇಲಿ ಮಾಡುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರು ಬೀನ್ಸ್‌, ಮೆಣಸಿನ ಕಾಯಿ, ಟೊಮೊಟೋ ಖರೀದಿಸಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮ್ಮ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ ಎಂದು ತರಕಾರಿ ವ್ಯಾಪಾರಿ ಖಾಜಾಪೀರ್‌ ಹೇಳುತ್ತಾರೆ.

ಒಟ್ಟಾರೆ ಬೆಲೆ ಏರಿಕೆಯ ಬಿಸಿ ಮಧ್ಯಮ ಮತ್ತು ಬಡ ವರ್ಗದ ಮೇಲೆ ತಟ್ಟುತ್ತಿದೆ. ಅಲ್ಲದೆ, ಹೋಟೆಲ್ ಉದ್ಯಮದ ಮೇಲೂ ತರಕಾರಿ ಏರಿಕೆಯ ಬಿಸಿ ತಟ್ಟಿದೆ. ಈಗ ಮಳೆ ಬಂದು ರೈತರು ತರಕಾರಿ ಬೆಳೆಯಲು ಮುಂದಾದರೂ ಅವು ಮಾರುಕಟ್ಟೆಗೆ ಬರುವುದು ಕನಿಷ್ಠ ಎಂದರೂ ಎರಡು- ಮೂರು ತಿಂಗಳು ಬೇಕಾ ಗುತ್ತದೆ. ಅಲ್ಲಿಯವರೆವಿಗೂ ತರಕಾರಿ ಬೆಲೆ ಎಲ್ಲಿಗೆ ಹೋಗಿ ಮುಟ್ಟುತ್ತದೋ ಊಹಿಸಲಾಗದಾಗಿದೆ.

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು, ಈಗ ನಿತ್ಯ ಬಳಕೆಯ ತರಕಾರಿ ಬೆಲೆಯೂ ಗಗನಕ್ಕೇರುತ್ತಿ ರುವ
ಕಾರಣ ಹೈರಾಣಾಗಿ ದ್ದಾರೆ. ಮುಂಗಾರು ಪೂರ್ವ ಮಳೆ ಕೈಕೊಟ್ಟಿರುವ ಕಾರಣ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎನ್ನಲಾಗುತ್ತಿದ್ದು, ಮಹಿಳೆ ಯರಂತೂ ದಿನನಿತ್ಯ ಯಾವ ಅಡುಗೆ ಮಾಡು ವುದು ಎಂಬ ಚಿಂತೆಗೀಡಾಗಿ ಹೆಚ್ಚಾಗಿ ಸೊಪ್ಪಿನ ಸಾರು ಮಾಡಲು ಮುಂದಾಗುತ್ತಿದ್ದಾರೆ.
●ಪುಟ್ಟರಾಜು, ಗ್ರಾಹಕ, ಹುಳಿಯಾರು

● ಎಚ್.ಬಿ.ಕಿರಣ್‌ಕುಮಾರ್‌


ಈ ವಿಭಾಗದಿಂದ ಇನ್ನಷ್ಟು

  • ತುಮಕೂರು: ಜಿಲ್ಲಾ ವ್ಯಾಪ್ತಿಯಲ್ಲಿರುವ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಲೋಕೋಪ ಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ...

  • ತುಮಕೂರು: ಲೋಕ ಸಮರ ಮುಗಿಯಿತು. ಫ‌ಲಿತಾಂಶವೂ ಬಂದಿದ್ದು, ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ.ಎಸ್‌.ಬಸವರಾಜ್‌ ಗೆಲುವಿನ ನಗೆ ಬೀರಿದ್ದಾರೆ....

  • ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿ ಸಂಸತ್‌ಗೆ ಪ್ರವೇಶ ಮಾಡುತ್ತಿರುವ ಸಂಸದ ಜಿ.ಎಸ್‌.ಬಸವರಾಜ್‌ ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ...

  • ಕೊರಟಗೆರೆ: ತುಮಕೂರು ಜಿಲ್ಲೆಯಲ್ಲಿ ಬರದ ತಾಲೂಕುಗಳ ಪಟ್ಟಿಯಲ್ಲಿರುವ ಕೊರಟಗೆರೆ ತಾಲೂಕು ಕುಡಿಯುವ ನೀರಿನ ಮೂಲ ಶೇ.99ರಷ್ಟು ಭಾಗ ಕೊಳವೆ ಬಾವಿಗಳನ್ನೇ ನಂಬಿ...

  • ತುಮಕೂರು: ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದ ದಲಿತ ಕುಟುಂಬಕ್ಕೆ ಮೇಲ್ವರ್ಗಕ್ಕೆ ಸೇರಿದಂತೆ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿರುವು ದರಿಂದ ಬೇಸತ್ತು,...

ಹೊಸ ಸೇರ್ಪಡೆ