ಮೂಲ್ಕಿಗೆ ಇನ್ನೂ ಮಂಜೂರಾಗದ ಅಗ್ನಿಶಾಮಕ ಠಾಣೆ; ಪ್ರಸ್ತಾವನೆ ಹಂತದಲ್ಲೇ ಬಾಕಿ

Team Udayavani, May 24, 2024, 9:55 AM IST

ಮೂಲ್ಕಿಗೆ ಇನ್ನೂ ಮಂಜೂರಾಗದ ಅಗ್ನಿಶಾಮಕ ಠಾಣೆ; ಪ್ರಸ್ತಾವನೆ ಹಂತದಲ್ಲೇ ಬಾಕಿ

ಮೂಲ್ಕಿ: ಮೂಲ್ಕಿಗೆ ಅಗ್ನಿಶಾಮಕ ಠಾಣೆ ಅಗತ್ಯವಾಗಿ ಬೇಕು ಎಂಬ ಬೇಡಿಕೆ ಇಂದು ನಿನ್ನೆಯದಲ್ಲ. ಸುಮಾರು ಮೂರುವರೆ ದಶಕಗಳಿಂದ ಸರಕಾರದ ಮುಂದೆ ಇರುವ ಜನರ ಬಹಳ ಮುಖ್ಯವಾದ ಹಲವು ಬೇಡಿಕೆಗಳಲ್ಲಿ ಇದೂ ಒಂದು. ಮೂಲ್ಕಿ ತಾಲೂಕು ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾದರೆ ಎಲ್ಲವೂ ಸರಿದೂಗಬಹುದು ಎಂಬ ನಂಬಿಕೆ ಜನರಲ್ಲಿದೆ. ಈ ಹಿಂದೆ ಅಗ್ನಿಶಾಮಕ ಠಾಣೆ ಮಂಜೂರಾತಿ ಬಗೆಗಿನ ಪ್ರಕ್ರಿಯೆ ಸ್ವಲ್ಪ ಮಟ್ಟಿಗೆ ಚುರುಕು ಪಡೆದಿತ್ತು.

ಆದರೆ ಸರಕಾರದಿಂದ ಮಂಜೂರಾತಿಗೊಂಡಿ ರುವ ಬಗ್ಗೆ ಯಾವುದೇ ಮಾಹಿತಿ ಇನ್ನೂ ಸಿಕ್ಕಿಲ್ಲ. ಒಂದೆರಡು ವರ್ಷ ಹಿಂದೆ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಕಾರ್ನಾಡು ಕೈಗಾರಿಕೆ ಪ್ರದೇಶ ಬಳಿಯ ಹೆದ್ದಾರಿಯ ಪೆಟ್ರೋಲ್‌ ಬಂಕ್‌ ಹಿಂಬದಿಯಲ್ಲಿರುವ ಎತ್ತರದ ಪ್ರದೇಶದ ಸುಮಾರು ಒಂದು ಎಕ್ರೆ ಭೂಮಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಸರಕಾರದ ಮುಂದೆ ಪ್ರಸ್ತಾವನೆಯನ್ನು ಶಾಸಕರ ಅನುಮೋದನೆಯೊಂದಿಗೆ ಸಲ್ಲಿಸಿದ್ದರು. ಕಾರ್ಯಾಚರಣೆಗೆ ವಿಳಂಬ ಮೂಲ್ಕಿಯ ಸುತ್ತುಮುತ್ತ ಅಗ್ನಿ ಅವಘಡ ಸಂಭವಿಸಿದರೆ ದೂರದ ಮಂಗಳೂರಿ ನಿಂದ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆ ನಡೆಸಬೇಕಿದೆ.

ಇದರಿಂದ ಫಲಶ್ರುತಿಯಾದ ಘಟನೆಗಳು ಬಹಳ ವಿರಳ. ಘಟನೆ ಸಂಭವಿಸಿದ ಪ್ರದೇಶದಿಂದ ಸುಮಾರು 30 ಕಿ.ಮೀ.
ದೂರದಿಂದ ಅಗ್ನಿಶಾಮಕ ದಳದ ವಾಹನ ಬರುವಾಗ ಸಹಜವಾಗಿ ಕಾರ್ಯಾಚರಣೆಗೆ ವಿಳಂಬವಾಗುತ್ತದೆ. ಆದ್ದರಿಂದ ಮೂಲ್ಕಿ
ತಾಲೂಕು ಕೇಂದ್ರದಲ್ಲಿ ಒಂದು ಘಟಕ ಬೇಕು ಎಂಬುದು ಸಾರ್ವಜನಿಕರ ಆಗ್ರಹ. ಇಲಾಖೆಯ ಮೇಲಧಿಕಾರಿಗಳು ತಿಳಿಸಿದಂತೆ ಇಲ್ಲಿ ಇರುವ ಒಂದು ಎಕ್ರೆ ಭೂಯಿಯಲ್ಲಿ ಅಗ್ನಿಶಾಮಕ ದಳ ಸ್ಥಾಪನೆ ಸಾಧ್ಯವಾಗದು ಕನಿಷ್ಠ ಮೂರು ಎಕ್ರೆ ಪ್ರದೇಶ ಬೇಕು ಎಂಬುದು ಅವರ ಅಭಿಮತ.

ಅಗ್ನಿಶಾಮಕ ದಳದ ಕೇಂದ್ರ ಕಡಿಮೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿದರ್ಶನಗಳು ಮಂಗಳೂರಿನ ಕದ್ರಿ,
ಪಾಂಡೇಶ್ವರದಲ್ಲಿ ಇದೆ. ಆದ್ದರಿಂದ ಒಂದೆ ರಡು ವಾಹನದ ಘಟಕ ಸ್ಥಾಪಿಸ ಬಹುದು ಎನ್ನುತ್ತಾರೆ ಸ್ಥಳೀಯ ನಾಗರಿಕರು.
ಸಾರ್ವಜನಿಕರ ಅಸಮಧಾನ ಜನರ ಅತೀ ಅಗತ್ಯದ ಬೇಡಿಕೆಗಳಲ್ಲಿ ಇದು ಪ್ರಮುಖವಾದ ಕಾರಣ ಇದನ್ನು ಪೂರೈಸುವುದು ಸರಕಾರದ ಆದ್ಯ ಕರ್ತವ್ಯ. ಈ ಬಗ್ಗೆ ಇಲಾಖೆ ಸ್ಪಂದಿಸದಿರುವ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಏನಿದ್ದರೂ ಅಗ್ನಿಶಾಮಕ ದಳದ ಸ್ಥಾಪನೆಗೆ ಜನ ಪ್ರತಿನಿಧಿಗಳ ಪ್ರಯತ್ನ ನಡೆಯಲೇಬೇಕು ಎಂಬುದು ಜನರ ಒಕ್ಕೊರಳ ಕೂಗು.

ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಶತಪ್ರಯತ್ನ
ಜನರ ಬೇಡಿಕೆಯಂತೆ ನಾನು ಮೇಲಧಿಕಾರಿಗಳ ಜತೆಗೆ ಸಾಕಷ್ಟುಬಾರಿ ಮಾತನಾಡಿದ್ದೇನೆ. ಇಲ್ಲಿಯ ಕೈಗಾರಿಕೆ ಪ್ರದೇಶದ ಬಳಿ ಅಗ್ನಿಶಾಮಕ ದಳದ ಮೇಲಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಸರಕಾರದ ಮುಂದೆ ಪ್ರಸ್ತಾವನೆ ಇರುವಾಗಲೇ ಘಟಕ ಸ್ಥಾಪನೆಗೆ ಕನಿಷ್ಠ ಮೂರು ಎಕ್ರೆ ನಿವೇಶನ ಬೇಕು ಎಂಬ ಉತ್ತರ ಅಧಿಕಾರಿಗಳಿಂದ ಬಂದಿದೆ. ಆದರೆ ನಾನು ಈಗ ಎರಡು ವಾಹನಳ ಸೇವೆಯಾದರೂ ಅಗತ್ಯ ಇದೆ. ಯೋಜನೆ ಆರಂಭಗೊಳಿಸುವಂತೆ ಪತ್ರ ಬರೆದಿದ್ದೇನೆ. ಪ್ರಸ್ತಾವನೆ ಸರಕಾರದಲ್ಲಿ ಕೈಯಲ್ಲಿದೆ. ನಾನು ಶತಪ್ರಯತ್ನ ಮಾಡಿ ಮೂಲ್ಕಿಗೆ ಈ ಸವಲತ್ತು ದೊರೆಯುವಂತೆ ಶ್ರಮಿಸುವೆ.
*ಉಮಾನಾಥ ಕೋಟ್ಯಾನ್‌, ಶಾಸಕರು, ಮೂಡುಬಿದಿರೆ

ಸರ್ವೋತ್ತಮ ಅಂಚನ್‌

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura ಮೂರು ಕಡಲಾಮೆ ರಕ್ಷಣೆ

Kundapura ಮೂರು ಕಡಲಾಮೆ ರಕ್ಷಣೆ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.